ಜ್ಯೋತಿಷ್ಯ

ನಿಂಬೆ ಹಣ್ಣು ಮತ್ತು ಹಸಿ ಮೆಣಸಿನಕಾಯಿಯನ್ನು ಮನೆ ಮುಂದೆ ಮತ್ತು ವಾಹನಗಳ ಮುಂದೆ ಕಟ್ಟುವುದು ಏಕೆ ಗೊತ್ತಾ..?

1139

ಶಾಸ್ತ್ರಗಳ ಪ್ರಕಾರ ಜನರು ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಜನರ ದೃಷ್ಠಿಯನ್ನು ಬೇರೆಡೆ ಸೆಳೆಯಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸ್ತಾರೆ. ಮನೆ ಮತ್ತು ಕಚೇರಿಯಲ್ಲಿ ನಿಂಬೆ ಹಣ್ಣು ಹಾಗೂ ಹಸಿ ಮೆಣಸನ್ನು ಕಟ್ಟುವುದು ಕೂಡ ಇದ್ರಲ್ಲಿ ಒಂದು. ನಿಂಬೆ-ಮೆಣಸಿನಲ್ಲಿ ತಂತ್ರ-ಮಂತ್ರದ ಜೊತೆ ಮನೋವಿಜ್ಞಾನದ ಸಂಬಂಧವೂ ಅಡಗಿದೆ.

ನಿಂಬೆ ಹಣ್ಣು ಸೇರಿದಂತೆ ಹಸಿ ಮೆಣಸಿನಕಾಯಿ ಇನ್ನಿತರೇ ಅಡುಗೆಗೆ ಮಾತ್ರ ಮೀಸಲಾಗಿಲ್ಲ.ತಂತ್ರ-ಮಂತ್ರಕ್ಕೂ ಸಂಬಂಧವಿದೆ.ನಿಂಬೆ ಹಣ್ಣಿನ ಹುಳಿ ಹಾಗೂ ಮೆಣಸಿನ ಖಾರದ ರುಚಿ ಕೆಟ್ಟ ದೃಷ್ಟಿಯುಳ್ಳವರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಇದ್ರಿಂದಾಗಿ ಕೆಟ್ಟ ದೃಷ್ಟಿ ತಾಗುವುದಿಲ್ಲ.

ಇವೆರಡನ್ನು ನೋಡ್ತಾ ಇದ್ದಂತೆ ಮನೆ ಹಾಗೂ ಕಚೇರಿಗೆ ಬಂದವರ ಗಮನ ಅದರೆಡೆ ಹೋಗುತ್ತದೆ. ಆಗ ಅವರು ಮನೆಯನ್ನು ಸೂಕ್ಷ್ಮವಾಗಿ ನೋಡಲು ಸಾಧ್ಯವಿಲ್ಲ. ಏಕಾಗ್ರತೆ ಭಂಗವಾಗುವುದರಿಂದ ದೃಷ್ಟಿ ತಾಗುವುದಿಲ್ಲ.

ಯಾವುದೇ ವಸ್ತುವನ್ನು ಸೂಕ್ಷ್ಮವಾಗಿ, ಏಕಾಗ್ರತೆಯಿಂದ ನೋಡಿದಲ್ಲಿ ಮಾತ್ರ ದೃಷ್ಟಿ ತಗಲುತ್ತದೆ. ಆದ್ರೆ ನಿಂಬೆ ಹಣ್ಣು ಹಾಗೂ ಮೆಣಸನ್ನು ನೋಡ್ತಾ ಇದ್ದಂತೆ ಕೆಟ್ಟ ದೃಷ್ಟಿಯವರು ಬೇರೆ ಕಡೆ ಗಮನ ನೀಡುವುದಿಲ್ಲ. ಇದ್ರಿಂದ ಅವರ ಏಕಾಗ್ರತೆ ಭಂಗವಾಗುತ್ತದೆ ಎಂದು ಮನೋವಿಜ್ಞಾನ ಕೂಡ ಹೇಳುತ್ತದೆ.

ಹಾಗೆ ಈವೆರಡಕ್ಕೂ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಧನಾತ್ಮಕ ಶಕ್ತಿಯನ್ನು ಹರಡುವ ಸಾಮರ್ಥ್ಯವಿದೆ ಎಂದು ನಂಬಲಾಗಿದೆ. ನಿಂಬೆ ಮರಗಳು ವಾತಾವರಣವನ್ನು ಶುದ್ಧ ಮಾಡುವ ಜೊತೆಗೆ ಮನೆ ಮುಂದಿರುವ ನಿಂಬೆ ಮರ ವಾಸ್ತು ದೋಷವನ್ನು ಕಡಿಮೆ ಮಾಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಯುಗಾದಿಯ ಹಬ್ಬದ ಮಹತ್ವವೇನು.?ಸಾಂಪ್ರದಾಯಿಕವಾಗಿ ಆಚರಿಸುವುದು ಹೇಗೆ.?ಹಬ್ಬದ ಹಿಂದಿರುವ ಪುರಾಣ ಕತೆ ಏನು.?ತಿಳಿಯಲು ಈ ಲೇಖನಿ ಓದಿ ಮರೆಯದೇ ಶೇರ್ ಮಾಡಿ…

    ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ  ವರಕವಿ ಬೇಂದ್ರೆಯವರ ಈ ಕವನ ಯಾರಿಗೆ ತಾನೇ ಗೊತ್ತಿಲ್ಲ.. ನಮ್ಮ ತಂಡದಿಂದ ಯುಗಾದಿ ಮತ್ತು ಹೊಸವರ್ಷದ ಆರ್ಥಿಕ ಶುಭಾಶಯಗಳು… ಯುಗಾದಿ ಅಂದ್ರೆ ಏನು… ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು….

  • ಸುದ್ದಿ

    ಮನೆಯಲ್ಲಿ ಶನಿದೇವನ ಸ್ಥಾಪನೆ ಯಾವ ಕಾರಣಕ್ಕೆ ಮಾಡಬಾರದು ಗೊತ್ತ..!

    ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಿಯಮಿತ ಪೂಜೆಗೆ ವಿಶೇಷ ಮಹತ್ವವಿದೆ. ದೇವರನ್ನು ಆರಾಧಿಸುವ ಮೂಲಕ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಹಾಗಾಗಿ ಜನರು ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ, ಮಂತ್ರ ಪಠಣ ಮಾಡುತ್ತಾರೆ. ಪ್ರತಿಯೊಬ್ಬರ ದೇವರ ಮನೆಯಲ್ಲೂ ಅನೇಕ ದೇವರುಗಳ ಫೋಟೋಗಳನ್ನು ಇಡಲಾಗುತ್ತದೆ. ಆದ್ರೆ ಕೆಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವಂತಿಲ್ಲ. ಶನಿ ದೇವರ ಫೋಟೋವನ್ನು ಕೂಡ ಮನೆಗೆ ತರಬಾರದು. ಹಿಂದೂ ಧರ್ಮದ ಪ್ರಕಾರ ಶನಿದೇವರ ಫೋಟೋ, ವಿಗ್ರಹವನ್ನು ಮನೆಯಲ್ಲಿ ಇಡಬಾರದು….

  • ಸುದ್ದಿ

    ರೈತರಿಗೆ ಬಂಪರ್ ಸುದ್ದಿ ಕೊಟ್ಟ ಕುಮಾರಣ್ಣ..!

    ಡಿಸೆಂಬರ್ ಒಳಗೆ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ, ಸಾಲಮನ್ನಾ ಫಲಾನುಭವಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದ ಸಿಎಂ, ಡಿಸೆಂಬರ್ ಒಳಗೆ ರೈತರ ಬೆಳೆ ಸಾಲಮನ್ನಾ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಬ್ಯಾಂಕುಗಳಿಗೆ 4 ಕಂತುಗಳಲ್ಲಿ ರೈತರ ಸಾಲ ಮನ್ನಾದ ಮೊತ್ತವನ್ನು ಪಾವತಿಸಲು ಚಿಂತನೆ ನಡೆದಿತ್ತಾದರೂ, 2 ಕಂತುಗಳಲ್ಲಿ ಸಾಲಮನ್ನಾ ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಿ ಡಿಸೆಂಬರ್ ಒಳಗೆ ಸಂಪೂರ್ಣವಾಗಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ರಾಶಿಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(24 ಏಪ್ರಿಲ್, 2019) ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯ ಸಾಧ್ಯತೆಯನ್ನು ಹೊಂದಿದ್ದೀರಿ….

  • ತಂತ್ರಜ್ಞಾನ

    ಪಾಡ್ ಕಾರ್ ಸೇವೆ ಈಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಆರಂಭ..!ತಿಳಿಯಲು ಈ ಲೇಖನಓದಿ…

    ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಹೊಸ ಹೊಸ ಸಾರಿಗೆ ವ್ಯವಸ್ಥೆಗಳನ್ನು ಪರಿಚಯಿಸಿದ್ರು ಟ್ರಾಫಿಕ್ ಸಮಸ್ಯೆ ಮಾತ್ರ ಯಾವುದೇ ಕಾರಣಕ್ಕೂ ಕಡಿಮೆಯಾಗುತ್ತಿಲ್ಲ.