ಆರೋಗ್ಯ, ಉಪಯುಕ್ತ ಮಾಹಿತಿ

ಹೊಟ್ಟೆ ತೊಳಸಿಂದಂತೆ ಆಗುವುದು, ವಾಂತಿಯಂತಹ ಕಾಯಿಲೆಗಳಿಗೆ ತಕ್ಷಣದ ಪರಿಹಾರ…

181

ಕೆಲವೊಮ್ಮೆ ನಮ್ಮ ದೇಹದ ಒಳಗೆ ಆಹಾರ ಅಥವಾ ನೀರಿನ ಮೂಲಕ ಸೇರಿಕೊಂಡ ಕಲ್ಮಶಗಳು ನಮಗೆ ಹೊಟ್ಟೆ, ತೊಳಸುವುದ, ವಾಂತಿಯಂತಹ ಕಾಯಿಲೆಗಳನ್ನು ತಂದೊಡ್ಡುತ್ತದೆ. ಮತ್ತು ಈ ಸಮಸ್ಯೆಗೆ ತಲೆ ನೋವಿನಂತಹ ಬೇರೆ ಕಾರಣಗಳೂ ಇರಬಹುದು. ಆದರೆ ನೀವು ಕೆಲವು ಉಪಾಯ ಅನುಸರಿಸಿ ಈ ಸಮಸ್ಯೆ ಇಂದ ಪಾರಾಗಬಹುದು…

1. ದೀರ್ಘವಾಗಿ ಉಸಿರಾಡುವುದು.

ವಾಂತಿ ಹೊಟ್ಟೆಯಲ್ಲಿ ತೊಳಸಿದದಂತೆ ಆಗುವುದು ಈ ರೀತಿಯ ಸಮಸ್ಯೆ ಇರುವಾಗ ನೀವು ಮೊದಲು ಮಾಡಬೇಕಾಗಿರುವುದು ದೀರ್ಘವಾದ ಉಸಿರಾಟ. ಮೊದಲು ದೀರ್ಘವಾಗಿ ಒಳ್ಳೆಯ ಗಾಳಿಯನ್ನು( ಆಮ್ಲಜನಕವನ್ನು ) ದೇಹದೊಳಗೆ ತೆಗೆದುಕೊಳ್ಳಬೇಕು. ನಂತರ ನಿಧಾನವಾಗಿ ಉಸಿರನ್ನು ಬಿಡಬೇಕು. ಹೀಗೆ ಸ್ವಲ್ಪ ಸಮಯದವರೆಗೂ ನೀವು ಮಾಡಬೇಕು. ಇದರಿಂದ ದೇಹಕ್ಕೆ ಆಮ್ಲಜನಕ ಪೂರೈಕೆಯಾಗುತ್ತದೆ. ಮತ್ತು ಶ್ವಾಶಕೋಶಕ್ಕೆ ಒಳ್ಳೆಯ ವ್ಯಾಯಾಮ ವಾಗುತ್ತದೆ ಮತ್ತು ಅಲ್ಲಿ ಏನಾದರೂ ವಿಷಮಯ ಅಂಶವಿದ್ದರೆ ಹೊರಗೆ ಬರುತ್ತದೆ.

2. ಬಿಸಿ ನೀರು ನೀವು ಬಿಸಿ ನೀರು ಕುಡಿಯಿರಿ ಈ ರೀತಿಯ ಸಮಸ್ಯೆಗಳಿಗೆ ಇದು ಒಂದು ಪರಿಹಾರವಾಗಿದೆ.ಹೀಗೆ ಮಾಡುವುದರಿಂದ ಸ್ವಲ್ಪ ಆರಾಮು ದೊರೆಯುತ್ತದೆ.

3. ಹಣ್ಣಿನ ರಸ ವಾಂತಿ ಹೊಟ್ಟೆಯಲ್ಲಿ ತೊಳಸಿದಂತೆ ಆಗುವುದು ಈ ರೀತಿಯ ಸಮಸ್ಯೆ ಇರುವಾಗ ಸಾಮಾನ್ಯ ಊಟ ಸೇರುವುದಿಲ್ಲ. ಅದಕ್ಕಾಗಿ ಎಳನೀರು, ಕಿತ್ತಳೆರಸ ಮುಂತಾದ ಜ್ಯೂಸ್ ಸೇವಿಸಿ. ಮತ್ತು ನೀರನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಡಿ ಹೈಡ್ರೇಷನ್ ಆಗದಂತೆ ತಡೆಯಬಹುದು.

4. ನಿಂಬೆ ಹಣ್ಣಿನ ವಾಸನೆ ಸೇವಿಸಿ. ವಾಂತಿ ಹೊಟ್ಟೆಯಲ್ಲಿ ತೊಳಸಿದಂತೆ ಆಗುವುದು ಈ ರೀತಿಯ ಸಮಸ್ಯೆ ಇರುವಾಗ ನಿಂಬೆ ಹಣ್ಣಿನ ಸುವಾಸನೆಯನ್ನು ಸೇವಿಸುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ.

5. ಹಸಿ ಶುಂಠಿ   ಶುಂಠಿ ಕೂಡ ವಾಂತಿ ಹೊಟ್ಟೆಯಲ್ಲಿ ತೊಳಸಿದಂತೆ ಆಗುವುದು ಈ ರೀತಿಯ ಸಮಸ್ಯೆಗಳಿಗೆ ರಾಮಬಾಣ. ಹಸಿ ಶುಂಠಿ ಚೂರನ್ನು ಈ ಸಮಯದಲ್ಲಿ ಸೇವಿಸಿ. ಇಲ್ಲವೇ ಬಿಸಿ ನೀರಿಗೆ ಜೇನು ತುಪ್ಪ ಶುಂಠಿ ಬೆರಸಿ ಸೇವಿಸಿ.

ಈ ಸಮಸ್ಯೆಗೆ ಇನ್ನು ಮುಂತಾದ ಉಪಾಯಗಳಿವೆ. ವೈದ್ಯರ ಹೋಗುವ ಮೊದಲು ನಿಮಗೇನಾದರೂ ತುರ್ತಿನ ಸಮಯದಲ್ಲಿ ಈ ಮೇಲಿನ ಉಪಾಯಗಳನ್ನು ಅನುಸರಿಸಿ ಸಮಸ್ಯೆ ಇಂದ ಪಾರಾಗಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವ್ಯಕ್ತಿ ವಿಶೇಷಣ

    ಬರಗಾಲಕ್ಕೆ ಸೆಡ್ಡು ಹೊಡೆದು ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದ ಮಹಿಳೆ..!ತಿಳಿಯಲು ಈ ಲೇಖನ ಓದಿ..

    ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದ ಮಹಿಳೆಯೊಬ್ಬರು ನಿರೂಪಿಸಿದ್ದಾರೆ. ರಾಂಪುರ ಗ್ರಾಮದ ಕೃಷಿಕ ಕುಟುಂಬದ ಮಹಿಳೆ ರೋಜಾ ಬರಗಾಲಕ್ಕೆ ಸೆಡ್ಡು ಹೊಡೆದು ತಂತ್ರಜ್ಞಾನವನ್ನ ಅಳವಡಿಸಿಕೊಂಡು ಹೈನುಗಾರಿಕೆ ಮಾಡ್ತಿದ್ದಾರೆ. ಇದರಿಂದ ನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಮೂಲಕ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೋಜಾ ಕಾರ್ಯಕ್ಕೆ ಅವರ ಪತಿಯು ಕೂಡ ಬೆಂಬಲವಾಗಿ ನಿಂತಿದ್ದಾರೆ. ನಿತ್ಯ 500 ಲೀಟರ್ ಹಾಲು ಉತ್ಪಾದಿಸಿ ಶಿಮುಲ್ ಡೈರಿಗೆ ಸರಬರಾಜು ಮಾಡುವ ಮೂಲಕ ಅಧಿಕ…

  • ಜ್ಯೋತಿಷ್ಯ

    ಶ್ರೀ ಚಾಮುಂಡೇಶ್ವರಿ ದೇವಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…

  • ಸುದ್ದಿ

    ಅಂದ ಹೆಚ್ಚಿಸಿಕೊಳ್ಳಲು ಹೋದ ವೈದ್ಯೆ ಆಸ್ಪತ್ರೆ ಪಾಲು ….! ಬ್ಯೂಟಿಪಾರ್ಲರ್​ಗೆ ಹೋಗುವ ಹೆಂಗಸರೇ ಎಚ್ಚರ…ಎಚ್ಚರ!!

    ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್​ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್​ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್​ ರಸ್ತೆಯಲ್ಲಿರುವ ಕ್ಲಬ್​ ಸಿಟ್ರಸ್​​ ಸಲೂನ್​ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್​ಗೆ ತೆರಳಿದ್ದರು. ಈ ವೇಳೆ…

  • ಸುದ್ದಿ

    ವಾಟ್ಸಪ್‌ನಲ್ಲಿ ‘ಪ್ರೊಫೈಲ್‌ ಫೋಟೊ ಸೇವ್’ ಆಯ್ಕೆ ಇನ್ನಿಲ್ಲ!

    ಜನಪ್ರಿಯ ಮೆಸೆಜಿಂಗ್‌ ಆಪ್‌ ವಾಟ್ಸಪ್‌ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಇತ್ತೀಚಿಗೆ ಬಳಕೆದಾರರ ಖಾತೆಗಳು ಹ್ಯಾಕ್‌ ಆಗಿ ಭಾರಿ ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ತನ್ನ ಅಪ್‌ಡೇಟ್‌ ವರ್ಷನ್‌ಗಳಲ್ಲಿ ನೂತನ ಫೀಚರ್‌ಗಳನ್ನು ಅಳವಡಿಸುತ್ತಲೇ ಸಾಗಿ ಬಂದಿದ್ದ ಕಂಪನಿ, ಇದೀಗ ಸದ್ಯ ಬಳಕೆಯಲ್ಲಿರುವ ವಾಟ್ಸಪ್‌ನ ಫೀಚರ್ ಒಂದಕ್ಕೆ ಬ್ರೇಕ್‌ ಹಾಕಿದ್ದು, ಇದು ಐಓಎಸ್‌ ಬಳಕೆದಾರರಿಗೆ ಅಚ್ಚರಿ ತಂದಿದೆ. ಹೌದು, ವಾಟ್ಸಪ್‌ ಕಂಪನಿಯು IOS ಬೆಂಬಲಿತ ಐಫೋನ್‌ಗಳಲ್ಲಿ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೇ…

  • ಸುದ್ದಿ

    ಅಧ್ಯಯನ ಮುಂದುವರೆಸಿದ ಇಸ್ರೋ HOPE FOR THE BEST ಎಂದ ಮೋದಿ,..!

    ದೇಶದ ಮಹತ್ವದ ಚಂದ್ರಯಾನ-2 ದ ವಿಕ್ರಂ ಲ್ಯಾಂಡರ್​  ಸಂಪರ್ಕ ಕಡಿತಗೊಂಡಿದ್ದರೂ ನೀರಿಕ್ಷೆಗಳು ಮುಗಿದಿಲ್ಲ. ಹೌದು ಇಸ್ರೋ ಚಂದ್ರಾನ್ವೇಷಣೆ ಯತ್ನದಲ್ಲಿ ಇನ್ನೂ ಕೊನೆಯ ನಿರೀಕ್ಷೆಗಳು ಇದ್ದೇ ಇವೆ. ಕೊನೆ ಹಂತದಲ್ಲಿ ಸಂಪರ್ಕ ಕಡಿದುಕೊಂಡ ವಿಕ್ರಮ್​​ ಲ್ಯಾಂಡರ್​​​ ಬಗ್ಗೆ ಇಸ್ರೋ ಅಧ್ಯಯನ ಮುಂದುವರೆಸಿದ್ದು, ಯಾವುದೇ ಕ್ಷಣದಲ್ಲಾದರೂ ವಿಕ್ರಮ್​ ಲ್ಯಾಂಡರ್​ ಮಾಹಿತಿ ರವಾನಿಸಬಹುದೆಂಬ ನೀರಿಕ್ಷೆಯಲ್ಲಿದೆ ಇಸ್ರೋ. ಚಂದ್ರನ ದಕ್ಷಿಣ ಧ್ರುವಕ್ಕೆ ಸ್ಪರ್ಶ ಮಾಡುವ ಹಂತದಲ್ಲಿ ವಿಕ್ರಂ ಲ್ಯಾಂಡರ್​​​​​​​ ಸಂಪರ್ಕ ಕಡಿತಕೊಂಡಿತ್ತು. 2.1 ಕಿಲೋ ಮೀಟರ್​ ದೂರದಲ್ಲಿ ಇಸ್ರೋ ಹಿಡಿತಕ್ಕೆ ಸಿಗದೇ ಮುಂಜಾನೆ 1.55ರ…