ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿ 50 ಕೆಜಿಯ ಒಂದು ಮೂಟೆ ಸಿಮೆಂಟ್’ಗೆ, ಅಮ್ಮಮ್ಮಾ ಅಂದ್ರೆ 300 ರಿಂದ 400ರೂ ವರೆಗೆ ಕೊಡಬಹುದು.ಆದ್ರೆ ಈ ಊರಿನ ಜನ ಒಂದು ಮೂಟೆ ಸಿಮೆಂಟ್’ಗೆ 8000ರೂ ವರೆಗೆ ಕೊಡ್ತಾರೆ.
ಹೌದು, ನೀವು ಕೇಳಿದ್ದು ನಿಜ.ಅರುಣಾಚಲ ಪ್ರದೇಶದ ಗ್ರಾಮವೊಂದರ ಜನ 50 ಕೆಜಿಯ ಒಂದು ಮೂಟೆ ಸಿಮೆಂಟ್’ಗೆ ಬರೋಬ್ಬರಿ 8 ಸಾವಿರ ರೂ ಕೊಡುವುದು ಕಂಡು ಬರುತ್ತದೆ.
ಅಲ್ಲಿ ಸಿಮೆಂಟ್ ಅಭಾವವೇನು ಉದ್ಭವಿಸಿಲ್ಲ. ಸಿಮೆಂಟ್ಗೆ ಇಷ್ಟೊಂದು ದುಬಾರಿ ದರ ವಿಧಿಸಲು ಕಾರಣ, ಚೀನಾ ಗಡಿಯಲ್ಲಿ ಇರುವ ಚಾಂಗ್ಲಾಂಗ್ ಜಿಲ್ಲೆಯ ವಿಜೋಯ್ ನಗರ ಎಂಬ ಈ ಗ್ರಾಮಕ್ಕೆ ಯಾವುದೇ ವಸ್ತು ತರಬೇಕಾದರೂ ಅದನ್ನು 156 ಕಿ.ಮೀ ಹಾದಿಯಲ್ಲಿ ನಡೆದುಕೊಂಡೇ ಹೊತ್ತು ತರಬೇಕು.
ಹೀಗಾಗಿ ಈ ಊರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸ ಮಾಡುವ ಚಕ್ಮಾ ಜನಾಂಗ ಪ್ರತಿ 1 ಸಿಮೆಂಟ್ ಮೂಟೆ ಸಾಗಿಸಲು 8 ಸಾವಿರ ರು. ದರ ವಿಧಿಸುತ್ತಿದೆ. ಸಾರಿಗೆ ವ್ಯವಸ್ಥೆ ಸರಿ ಇಲ್ಲ ಅಂದರೆ ಹೇಗೆಲ್ಲ ಸರಕು ಸಾಗಣೆ ಮೇಲೆ ದುಬಾರಿ ಬೆಲೆ ತೆರಬೇಕಾದೀತು ಅನ್ನೋದಕ್ಕೆ ಇದೆ ಉದಾಹರಣೆ ಅನ್ನಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಓದು ಮುಗಿಸಿದ ನಂತರ ಉದ್ಯೋಗ ಹುಡುಕುವುದು, ಒಂದು ಜಾಬ್ನಲ್ಲಿ ಇದ್ದು ಮೊತ್ತೊಂದು ಉದ್ಯೋಗ ಸರ್ಚ್ ಮಾಡುವುದು ಹಲವರಿಗೆ ತುಂಬಾ ಕಷ್ಟದ ಕೆಲಸ.ಇದನ್ನು ಸರಳಗೊಳಿಸುವುದು, ಎಲ್ಲರೂ ಬೆಳೆಸಿಕೊಂಡ ವೃತ್ತಿಪರ ಸಂಪರ್ಕಗಳು ಮಾತ್ರ ಎಂಬುದನ್ನು ಮರೆಯುವ ಹಾಗಿಲ್ಲ. ಉತ್ತಮ ಸಂವಹನ ಬೆಳವಣಿಗೆಗಾಗಿ ಇರುವ ಹಲವು ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ಖಾಸಗಿ ಕ್ಷೇತ್ರಗಳಲ್ಲಿ ಆಗಲಿ, ಸರ್ಕಾರಿ ಇಲಾಖೆಗಳ ಖಾಯಂ ಮತ್ತು ಗುತ್ತಿಗೆ ಆಧಾರದ ಕೆಲಸಗಳೇ ಆಗಲಿ, ಯಾವುದೇ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ವೃತ್ತಿ ಪರ ಸಂಪರ್ಕಗಳು ಮತ್ತು ಅವರೊಂದಿಗಿನ ಉತ್ತಮ ಸಂವಹನ ಮಾತ್ರ…
ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ.
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯತಮನಿಗೆ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಚೆವೆಲ್ಲಾದಲ್ಲಿ ನಡೆದಿದೆ. ಗಂಡ ರವಿ, ಪತ್ನಿ ಭಾಗ್ಯಲಕ್ಷ್ಮಿ ಮತ್ತು ಆಕೆಯ ಪ್ರಿಯತಮನನ್ನು ರೂಮಿನಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸದ್ಯಕ್ಕೆ ಇಬ್ಬರ ಸ್ಥಿತಿ ಗಂಭೀರಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ವರ್ಷಗಳ ಹಿಂದೆ ಭಾಗ್ಯಲಕ್ಷ್ಮಿ ಮತ್ತು ರವಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ಸಂಸಾರಿಕ ಜೀವನ ಚೆನ್ನಾಗಿ ನಡೆಯುತ್ತಿತ್ತು. ಆದರೆ ಕೆಲವು ತಿಂಗಳ…
ತಮಿಳುನಾಡಿಗೆ ನೀರು ಬಿಡುವಂತೆ ಕೇಂದ್ರ ಜಲ ಆಯೋಗ ಆದೇಶಿಸಿರುವ ಬೆನ್ನಲ್ಲೇ, ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಆದೇಶ ಹೊರಬೀಳುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ರೈತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರೈತಸಂಘ, ಕನ್ನಡಸೇನೆ ಕಾರ್ಯಕರ್ತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ನಾಲೆಗಳಿಗೆ ನೀರು ಬಿಡದೆ ಬೆಳೆದ ಬೆಳೆಗಳು ಒಣಗುತ್ತಿವೆ. ಬೆಂಗಳೂರಿಗೆ ಕುಡಿಯುವ ನೀರು ಹರಿಸಲು ಸಹ ಇರುವ ಸಂಗ್ರಹದಲ್ಲಿರುವ ನೀರು ಸಾಲುವುದಿಲ್ಲ. ಪರಿಸ್ಥಿತಿ…
ಗರ್ಭಾವಸ್ಥೆಯಲ್ಲಿ ಅಪೌಷ್ಠಿಕತೆಯಿಂದಾಗಿ ಗರ್ಭಿಣಿಯ ಆರೋಗ್ಯ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬೆಳವಣಿಗೆಯಲ್ಲಿ ಹಲಾವಾರು ತೊಂದರೆಗಳು ಉಂಟಾಗಿ ಜನಿಸುವ ಮಗುವಿನ ತೂಕ ಕಡಿಮೆ ಇರುವುದು, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಮಾತೃಪೂರ್ಣ ಯೋಜನೆಯು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಮಾತೃಪೂರ್ಣ ಯೋಜನೆಯ ಪ್ರಮುಖ ಅಂಶಗಳು :- ತಾಯಿ ಮತ್ತು ಮಗುವಿನ ಅಪೌಷ್ಟಿಕತೆ ನಿವಾರಿಸಿ, ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಾರಿಗೆ ತರಲಾಗುತ್ತಿರುವ…
ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ. ಪ್ರಸ್ತುತ, ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ. ದೆಹಲಿ ಹಾಗೂ ಜೈಪುರ ಹೊರತುಪಡಿಸಿ ಮಥುರಾ, ವಾರಣಾಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಗಳನ್ನು ಜೈಸಿಂಗನು ನಿರ್ಮಿಸಿದ್ದು ಸುಮಾರು 1724 ರಿಂದ 1735…