ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗರಾಜನ್ ಗ್ರಾಮದಲ್ಲಿ ಸರ್ಪಂಚ್ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದ್ರೆ, ಅಭ್ಯರ್ಥಿಯಾಗಿದ್ದ ಶಹನಾಜ್ ಖಾನ್, ಎಂಬಿಬಿಎಸ್ ನಾಲ್ಕನೇ ವರ್ಷದ ಪರೀಕ್ಷೆ ಬರೆಯುತ್ತಿದ್ಲು. ಮಾರ್ಚ್ 5ರಂದೇ ಚುನಾವಣೆಯ ಫಲಿತಾಂಶವೂ ಹೊರಬಿದ್ದಿದೆ.
24 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶಹನಾಜ್ ಖಾನ್ ಳನ್ನು ಗ್ರಾಮಸ್ಥರು ತಮ್ಮ ಸರ್ಪಂಚ್ ಆಗಿ ಆಯ್ಕೆ ಮಾಡಿದ್ದಾರೆ. ಶಹನಾಜ್ ಮೊರಾದಾಬಾದ್ ನ ತೀರ್ಥಂಕರ ಮಹಾವೀರ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ಗ್ರಾಮದ ಅತ್ಯಂತ ಕಿರಿಯ ಸರ್ಪಂಚ್ ಎನಿಸಿಕೊಂಡಿದ್ದಾಳೆ ಶಹನಾಜ್.
ಸದ್ಯದಲ್ಲೇ ಗುರ್ಗಾಂವ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಶುರು ಮಾಡಲಿದ್ದಾಳೆ. ಅದರ ಜೊತೆಜೊತೆಗೆ ರಾಜಕೀಯಕ್ಕೂ ಕಾಲಿಟ್ಟಿರೋದು ವಿಶೇಷ. 2015ರಲ್ಲಿ ಶಹನಾಜ್ ಳ ಅಜ್ಜ ಕೂಡ ಸರ್ಪಂಚ್ ಆಗಿ ಆಯ್ಕೆಯಾಗಿದ್ದರು. ಆದ್ರೆ ಶಿಕ್ಷಣ ಪ್ರಮಾಣಪತ್ರ ತಿದ್ದಿದ ಆರೋಪದ ಮೇಲೆ ಹುದ್ದೆ ಕಳೆದುಕೊಂಡಿದ್ದರು. ಇದೀಗ ಶಹನಾಜ್ ಮೇಲೆ ಗ್ರಾಮಸ್ಥರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಅಂಬರೀಶ್ ಅವರ 68ನೇ ಜನ್ಮದಿನವಾಗಿದ್ದು, ಈ ಹಿಂದೆ ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅಂಬಿ ನಿಧನದ ನಂತರ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ತೆರಳಿ ಜನ್ಮದಿನವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಲಾಕ್ಡೌನ್ ಕಾರಣದಿಂದ ಅದು ಸಾಧ್ಯವಾಗಿಲ್ಲ. ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ಅಂಬರೀಶ್ ಅವರು ಇಂದು 68ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ವಿಧಿ…
ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಡಲು ಮೈಸೂರು ದಸರಾ ವೇದಿಕೆಯಲ್ಲೇ ಮುನ್ನುಡಿ ಬರೆದಿದ್ದಾರೆ. ಯುವ ದಸರಾದಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ರಂಗೇರಿದ್ದು ಕಾರ್ಯಕ್ರಮ ಮುಗಿಯುವ ವೇಳೆಯಲ್ಲಿ ಚಂದನ್ ಶೆಟ್ಟಿ ವೇದಿಕೆಯಲ್ಲಿಯೇ ಐ ಲವ್ ಯು ಹೇಳಿದ್ದಾರೆ….
ಪಾಟ್ನಾದ ಯುವಕನೊಬ್ಬ ಫೇಸ್ಬುಕ್ ನಲ್ಲಿ ಸುಂದರ ಹುಡುಗಿಯ ಫೋಟೋ ನೋಡಿದ್ದಾನೆ. ಆಕೆ ಸೌಂದರ್ಯಕ್ಕೆ ಸೋತು ಮೊದಲು ರಿಕ್ವೆಸ್ಟ್ ಕಳುಹಿಸಿದ್ದಾನೆ. ಹುಡುಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ. ನಿಧಾನವಾಗಿ ಇಬ್ಬರ ಮಧ್ಯೆ ಸ್ನೇಹ ಚಿಗುರಿದೆ. ನಂತ್ರ ಪ್ರೀತಿ ಶುರುವಾಗಿದೆ. ಇಬ್ಬರೂ ಹೊಸ ಪ್ರಪಂಚದಲ್ಲಿ ತೇಲಾಡಲು ಶುರು ಮಾಡಿದ್ದಾರೆ. ಗಂಟೆಗಟ್ಟಲೆ ಚಾಟ್ ಮಾಡ್ತಿದ್ದವರು ಹೊಸ ವರ್ಷ ಭೇಟಿಯಾಗಿ, ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾನೆ. ಹೊಸ ವರ್ಷದ ಮೊದಲ ದಿನ ಪಾರ್ಕ್ ಒಂದನ್ನು ನಿಗಧಿ ಮಾಡಿ ಅಲ್ಲಿ ಮೊದಲ ಭೇಟಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ….
ಬೆಂಗಳೂರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಗಳಿಗೆಯೇ ರೈತರು, ಮೀನುಗಾರರು ಮತ್ತು ನೇಕಾರರಿಗೆ ಸಿಹಿಸುದ್ದಿ ನೀಡಿದ್ದ ಸಿಎಂ ಯಡಿಯೂರಪ್ಪ ವಿದ್ಯಾರ್ಥಿಗಳಿಗೂ ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡುತ್ತಿರುವ ವಾರ್ಷಿಕ ವೆಚ್ಚವನ್ನು ಹೆಚ್ಚಳ ಮಾಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಪ್ರಸ್ತುತ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 2438 ಹಾಸ್ಟೆಲ್ಗಳಿದ್ದು, 1,88,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಾರ್ಷಿಕ ವೆಚ್ಚವಾಗಿ ಪ್ರತಿ ವಿದ್ಯಾರ್ಥಿಗೆ 1600 ರೂ. ನೀಡಲಾಗುತ್ತಿದೆ. ಇದೀಗ…
ರಾಜ್ಯ ಸರ್ಕಾರ 3500 ಮಂದಿ ಪರಿಶಿಷ್ಟ ಜಾತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.
ಶಾಪಿಂಗ್ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.