ಆರೋಗ್ಯ

ಕೊಲೆಸ್ಟ್ರಾಲ್ ನಿಯಂತ್ರಿಸಲು ನೆಲ್ಲಿಕಾಯಿ ಉಪಯೋಗ ತಿಳಿಯಲು ಈ ಲೇಖನಿ ಓದಿ…

393

ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ. ಇಲ್ಲಿ ಕೊಲೆಸ್ಟ್ರಾಲ್ ಇದೆ ಎಂದರೆ ಮೂರೂ ಅಂಶಗಳ ಒಟ್ಟು ಪ್ರಮಾಣದಲ್ಲಿ ಎಲ್‌ಡಿಎಲ್ ಪ್ರಮಾಣ ಶೇಖಡಾವಾರು ಹೆಚ್ಚಿದ್ದು ವೈದ್ಯರು ಸೂಕ್ತ ಔಷಧಿ ಮತ್ತು ಆಹಾರದಲ್ಲಿ ಕಟ್ಟುಟ್ಟು ಸಾಧಿಸಲು ಸಲಹೆ ಮಾಡುತ್ತಾರೆ.

ಕೊಲೆಸ್ಟ್ರಾಲ್  ಪ್ರಮಾಣ ಹೆಚ್ಚಿದಷ್ಟು ಹೃದಯ ಸಂಬಂಧಿ ರೋಗಗಳಿಗೆ ಮುಕ್ತ ಆಹ್ವಾನ ನೀಡಿದಂತೆ. ಒಂದು ವೇಳೆ ಇದು ಗರಿಷ್ಠ ಮಟ್ಟವನ್ನು ದಾಟಿದರೆ ವೈದ್ಯರು ಅನಿವಾರ್ಯವಾಗಿ ಪ್ರಬಲ ಔಷಧಿ ಗಳನ್ನೂ ಕಟ್ಟುನಿಟ್ಟಿನ ಅಹಾರ ನಿಯಂತ್ರಣ ಮತ್ತು ಕಡ್ಡಾಯ ವ್ಯಾಯಾಮವನ್ನೂ ಸೂಚಿಸುತ್ತಾರೆ. ಸುಖಮಯ ಜೀವನ ನಡೆಸುತ್ತಾ ಬಂದಿರುವವರಿಗೆ ಇವು ಕಬ್ಬಿಣದ ಕಡಲೆಗಳಾಗಿ ಪರಿಣಮಿಸುತ್ತವೆ. ಈ ಕಬ್ಬಿಣದ ಕಡಲೆ ಜಗಿಯುವ ಬದಲು ನಿಸರ್ಗ ನಮಗೆ ಮೆತ್ತಗಿರುವುದನ್ನು ಜಗಿಯಲು ನೀಡಿದೆ. ಅದೇ ತಿನ್ನಲು ಕೊಂಚ ಒಗರಾಗಿರುವ, ಆದರೆ ಬಳಿಕ ನೀರು ಕುಡಿದರೆ ಸಿಹಿಯಾಗಿರುವ ನೆಲ್ಲಿಕಾಯಿ.

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು, ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್ ಕಡೆಮೆಗೊಳಿಸಲು ನೆಲ್ಲಿಕಾಯಿಯ ಪೋಷಕಾಂಶಗಳು ಅತ್ಯುತ್ತಮವಾಗಿವೆ. ಇದರ ಆರೋಗ್ಯಕರ ಗುಣಗಳನ್ನು ಕಂಡುಕೊಂಡ ಆಯುರ್ವೇದ ನೂರಾರು ನೂರಾರು ವರ್ಷಗಳಿಂದ ಔಷಧಿ ರೂಪದಲ್ಲಿ ಬಳಸುತ್ತಾ ಬಂದಿದೆ.ಇದರಲ್ಲಿರುವ ವಿಟಮಿನ್ ಸಿ, ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಖನಿಜಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ.

ಆದರೆ ಇದರ ನಿಜವಾದ ಶಕ್ತಿ ಇರುವುದು ಕೊಲೆಸ್ಟ್ರಾಲ್ ಸಂಗ್ರಹವಾಗಲು ನೆರವಾಗುವ ಹೆಚ್.ಎಂ.ಜಿ. ಸಿಆರ್ ಕಿಣ್ವದ ಪ್ರಬಲತೆಯನ್ನು ತಗ್ಗಿಸುವುದರಲ್ಲಿ. ಅಲ್ಲದೇ ಆಹಾರದಿಂದ ಕೆಟ್ಟ ಕೊಲೆಸ್ಟ್ರಾಲ್ ಹೀರಿಕೊಳ್ಳದೇ ಇರಲು ನೆರವಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣದ ಹೊರತಾಗಿ ನೆಲ್ಲಿಕಾಯಿ ಮಧುಮೇಹಿಗಳಿಗೂ ಉತ್ತಮ ಔಷಧೀಯ ಆಹಾರವಾಗಿದೆ. ಇದರಲ್ಲಿರುವ ಮಧುಮೇಹಿ ವಿರೋಧಿ ಗುಣಗಳು ಅಧಿಕ ರಕ್ತದೊತ್ತಡವನ್ನುನಿಯಂತ್ರಿಸಲೂ ನೆರವಾಗುತ್ತವೆ.

ನೆಲ್ಲಿಕಾಯಿಯನ್ನು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಳಸುವ ಬಗೆ: ನೆಲ್ಲಿಕಾಯಿಯ ಅತ್ಯುತ್ತಮ ಬಳಕೆ ಎಂದರೆ ಈಗ ತಾನೇ ಹಿಂಡಿ ತೆಗೆದ ರಸವನ್ನು ಕುಡಿಯುವುದು. ಪ್ರತಿದಿನ ಸುಮಾರು ಅರ್ಧ ಲೋಟದಷ್ಟು ನಲ್ಲಿಕಾಯಿ ಜ್ಯೂಸ್ ಕುಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ನಲ್ಲಿಕಾಯಿ ಜ್ಯೂಸ್ ತಯಾರಿಸುವ ವಿಧಾನ:-

* ಎರಡು ದೊಡ್ಡ ಗಾತ್ರದ ಅಥವಾ ನಾಲ್ಕು ಚಿಕ್ಕಗಾತ್ರದ ನೆಲ್ಲಿಕಾಯಿಗಳನ್ನು ಚಿಕ್ಕದಾಗಿ ಕತ್ತರಿಸಿ ಬೀಜವನ್ನು ನಿವಾರಿಸಿ.

* ಬ್ಲೆಂಡರ್‌ನಲ್ಲಿ ಕೊಂಚ ನೀರಿನೊಂದಿಗೆ ತಿರುಳನ್ನು ಸೇರಿಸಿಅರೆಯಿರಿ.

* ಈ ನೀರನ್ನು ತೆಳ್ಳನೆಯ ಮಸ್ಲಿನ್ ಬಟ್ಟೆ ಅಥವಾ ಸೋಸುಕ ಬಳಸಿ ನೀರುಸಂಗ್ರಹಿಸಿ.

* ಈ ನೀರಿಗೆ ಕೊಂಚ ಕಪ್ಪು ಉಪ್ಪು ಅಥವಾ ಕಲ್ಲುಪ್ಪು ಸೇರಿಸಿ ಕುಡಿಯಬಹುದು.

*ರುಚಿ ಇಷ್ಟವಾಗದಿದ್ದರೆ ಕೊಂಚ ಜೇನನ್ನು ಸೇರಿಸಿ ಕುಡಿಯಬಹುದು.

” ಮಧುಮೇಹಿಗಳಿಗೆ ಜೇನು ಸಲ್ಲದು. ಆದ್ದರಿಂದ ಮಧುಮೇಹಿಗಳು.

* ಉಪ್ಪು, ಜೇನು ಸೇರಿಸದ ರಸ ಕುಡಿಯುವುದು ಉತ್ತಮ”

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    300 ವರ್ಷ ನಮ್ಮ ದೇಶ ಅಳಿದ ಕುಟುಂಬದ ಕೊನೆಯ ರಾಣಿ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತಾ?

    ಭಾರತವನ್ನು ಸುಮಾರು ಮುನ್ನೂರು ವರ್ಷ ಆಳಿದ ರಾಜರ ಕುಟುಂಬದ ಕೊನೆಯ ರಾಣಿ ಈಗ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ..? ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ. ಭಾರತ ದೇಶವನ್ನು ಆಳಿದವರಲ್ಲಿ ಮೊಘಲರ ಪಾತ್ರ ಬಹು ದೊಡ್ಡದು. ಬಾಬರ್ ನಿಂದ ಹಿಡಿದು ಅಕ್ಬರ್, ಔರಂಗಜೇಬ್ ವರೆಗೂ ಅವರ ಆಳ್ವಿಕೆ ಇತ್ತು. 1526 ರಿಂದ 1857 ರವರೆಗೂ ನಮ್ಮ ದೇಶವನ್ನು ಆಳಿದರು. ಮೊಗಲ್ ರಾಜ್ಯ ಪತನದ ನಂತರ ಅವರ ವಂಶಸ್ಥರು ಎಲ್ಲಿಗೆ ಹೋದರು ಎಂದು ಗೊತ್ತಾಗಲಿಲ್ಲ. ಆದರೆ ಈಗ ಮೊಘಲ್ ವಂಶದ…

  • ಸುದ್ದಿ

    ಇಂದು 3 ರಾಜ್ಯಗಳಿಗೆ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ..!

    ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಕರೆಯಲಾಗಿದ್ದು, ಈ ಸಂದರ್ಭದಲ್ಲಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲಾಗುತ್ತದೆ ಎನ್ನಲಾಗಿದೆ. ಮಹಾರಾಷ್ಟ್ರ ವಿಧಾನಸಭಾ ಅವಧಿ ಮುಂದಿನ ತಿಂಗಳು ಅಂತ್ಯವಾಗಲಿದ್ದು, ಹರಿಯಾಣ ವಿಧಾನಸಭಾ ಅವಧಿ ನವಂಬರ್ 2 ಕ್ಕೆ ಕೊನೆಗೊಳ್ಳಲಿದೆ. ಇನ್ನು ಜಾರ್ಖಂಡ್ ವಿಧಾನಸಭಾ ಅವಧಿ ಡಿಸೆಂಬರ್ 27ಕ್ಕೆ ಅಂತ್ಯವಾಗಲಿದ್ದು, ದೀಪಾವಳಿಗೂ ಮುನ್ನ…

  • ಸುದ್ದಿ

    ಇದೊಂದು ಭಯಾನಕ ಸುದ್ದಿ ; ನೀವು ಶೌಚಾಲಯಕ್ಕೆ ಹೋಗುವ ಮುನ್ನ ಇದನ್ನೊಮ್ಮೆ ಓದಿ…!

    ಇದೊಂದು ಭಯಾನಕ ಸುದ್ದಿ.  ಎಲ್ಲರೂ ಭಹಯಬೀಳುವಂತಹ  ಸುದ್ದಿಯೇ. ಹೆಬ್ಬಾವೊಂದು ಮನೆಯೊಳಗಿನ ಶೌಚಾಲಯದಲ್ಲಿ ಇಲಿ ಬೇಟೆಯಾಡಿದಂತಹ ದಿಗಿಲುಗೊಳ್ಳುವಂತಹ ಸಂಗತಿ. ಇದು ನಡೆದಿರುವುದು ಆಸ್ಟ್ರೇಲಿಯಾದ ಕೈನ್ಸ್‌ನಲ್ಲಿ. ಇಲ್ಲಿನ ಜನ್ನಾ ಎಂಗ್ಲರ್ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಇವರಿಗೆ ಶೌಚಾಲಯದೊಳಗೆ ಏನೋ ಶಬ್ದ ಆದಂತೆ  ಕಂಡಿತು. ತಕ್ಷಣ ಏನದು ಎಂದು ನೋಡಿದಾಗ ಅಲ್ಲಿನ  ದೃಶ್ಯವನ್ನು ಕಂಡು ಇವರು ಒಂದು ಕ್ಷಣ ಭಯಬೀತರಾಗಿದ್ದರು. ಯಾಕೆಂದರೆ, ಶೌಚಾಲಯದೊಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಇಲಿ ಬೇಟೆಯಲ್ಲಿ ತೊಡಗಿತ್ತು….

  • KOLAR NEWS PAPER

    ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-2023

    ಕೋಲಾರ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಮೇಳ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಚಾಲನೆ ನೀಡಿದರು. ಶುಕ್ರವಾರ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೩ ಸಚಿವ ಮುನಿರತ್ನ ಉದ್ಘಾಟಿಸಿದರು. ಮೇಳದಲ್ಲಿ ಹೂ ಮತ್ತು ತರಕಾರಿಗಳಿಂದ…

  • ಜ್ಯೋತಿಷ್ಯ

    ಮನೆಯಲ್ಲಿ ಈ ಶಂಖ ಇದ್ದರೆ ಏನಾಗುತ್ತೆ ಗೊತ್ತಾ.!?

    ಶಂಖದ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಇದನ್ನು ಬಳಸ್ತಾರೆ. ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಶಂಖವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ನೀವು ಇಚ್ಛಿಸಿದಷ್ಟು ಪ್ರೀತಿ ಜೊತೆಗೆ ಹಣ ಸಿಗಲಿದೆ ಎಂಬ ವಿಷ್ಯ ನಿಮಗೆ ಗೊತ್ತಾ? ತಾಯಿ ಲಕ್ಷ್ಮಿ ಕೈನಲ್ಲಿ ಹಿಡಿದಿರುವ ಶಂಖ ದಕ್ಷಿಣಾವರ್ತಿ. ಇದನ್ನು ಲಕ್ಷ್ಮಿ ಶಂಖವೆಂದೂ ಕರೆಯುತ್ತಾರೆ. ಇದು ಬಲಮುರಿ ಶಂಖವಾಗಿದೆ. ಸಾಮಾನ್ಯವಾಗಿ ಸಿಗುವ ಶಂಖಗಳು ಎಡಮುರಿ ಶಂಖಗಳಾಗಿರುತ್ತವೆ. ದಕ್ಷಿಣಾವರ್ತಿ ಶಂಖವನ್ನು ತಾಯಿ ಲಕ್ಷ್ಮಿ ಎದುರು ಕೆಂಪು ಬಟ್ಟೆಯಲ್ಲಿಟ್ಟು…