ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯುಕೆ ನಿವಾಸಿಯೊಬ್ಬಳು ಕೆಲ ದಿನಗಳ ಹಿಂದಷ್ಟೆ 21ನೇ ಮಗುವಿಗೆ ಜನ್ಮ ನೀಡಿದ್ದಾಳೆ.ಇಂಗ್ಲೆಂಡಿನ 43 ವರ್ಷದ ಮಹಾತಾಯಿಯೊಬ್ಬರು 21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದು ಹೇಳುವುದರ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಈ ಮಹಾತಾಯಿ ಹೆಸರು ಶು ರೆಡ್ಪೋರ್ಡ್. ಪತಿ ನಿವೋಲ್.
ವರದಿ ಪ್ರಕಾರ ಹಿಂದಿನ ವಾರ 12 ನಿಮಿಷದ ಹೆರಿಗೆ ನೋವು ಅನುಭವಿಸಿ ಶು 21ನೇ ಮಗು ಬೋನಿ ರಾಯೈಗೆ ಜನ್ಮ ನೀಡಿದ್ದಾಳೆ. 21 ಮಕ್ಕಳನ್ನು ಪಡೆದು ರಾಡ್ಫೋರ್ಡ್ ಕುಟುಂಬ ಯುಕೆಯಲ್ಲೇ ಅತಿ ದೊಡ್ಡದಾದ ಕುಟುಂಬ.42 ವರ್ಷದ ಶು ಪ್ರಕಾರ, ಹೊಸ ಮಗುವಿನ ಸ್ವಾಗತಕ್ಕೆ ಮನೆಯವರೆಲ್ಲ ಸಿದ್ಧರಾಗಿದ್ದರಂತೆ. ಬೋನಿ ನಮ್ಮ ಕುಟುಂಬವನ್ನು ಕಂಪ್ಲೀಟ್ ಮಾಡಿದ್ದಾಳೆ ಎಂದು ಹೇಳಿ ಸಂಭ್ರಮಿಸಿದ್ದಾರೆ.
ಶು 14 ವರ್ಷದಲ್ಲಿರುವಾಗ ಮೊದಲ ಮಗುವಿಗೆ ಜನ್ಮ ನೀಡಿದ್ದಳಂತೆ. ಮದುವೆ ನಂತ್ರ ಕೆಲವರು ಮೂರು ಮಕ್ಕಳನ್ನು ಪಡೆಯುವಂತೆ ಸಲಹೆ ನೀಡಿದ್ದರಂತೆ. ನಾವು ಎರಡು ಅಥವಾ ಮೂರು ಮಗುವನ್ನು ಪಡೆಯಲು ಮಾತ್ರ ನಿರ್ಧರಿಸಿದ್ದೇವು. ಆದರೆ ನಾವು ಈಗ 21 ಮಗುವನ್ನು ಪಡೆದಿದ್ದೇವೆ.ಮದುವೆಯಾಗಿ 28 ವರ್ಷಕ್ಕೆ 21 ಮಕ್ಕಳನ್ನು ಹೆತ್ತಿದ್ದಾಳೆ.
ರಾಡ್ಫೋರ್ಡ್ ಹಾಗೂ ಆಕೆಯ ಪತಿ ಮೋರ್ ಕ್ಯಾಂಬೇಯಲ್ಲಿ ಮಕ್ಕಳ ಸಹಾಯದಲ್ಲಿ ಬೇಕರಿ ನಡೆಸುತ್ತಿದ್ದಾರೆ. ನಾನು ಮತ್ತೆ ಗರ್ಭಿಣಿಯಾಗುವುದನ್ನು ಮಿಸ್ ಮಾಡುತ್ತೇನೆ ಎಂದಿದ್ದಾರೆ.ರಾಡ್ಫೋರ್ಡ್ ಹಾಗೂ ಆಕೆಯ ಪತಿ ಮೋರ್ ಕ್ಯಾಂಬೇಯಲ್ಲಿ ಮಕ್ಕಳ ಸಹಾಯದಲ್ಲಿ ಬೇಕರಿ ನಡೆಸುತ್ತಿದ್ದಾರೆ. ನಾನು ಮತ್ತೆ ಗರ್ಭಿಣಿಯಾಗುವುದನ್ನು ಮಿಸ್ ಮಾಡುತ್ತೇನೆ ಎಂದಿದ್ದಾರೆ.ಮೊದಲ ಮಗಳಿಗೆ ಮೂರು ಮಕ್ಕಳಿದ್ದು, ಈಗಾಗಲೇ ಶು ಅಜ್ಜಿಯಾಗಿದ್ದಾಳೆ.
21 ಮಕ್ಕಳು ಸಾಕು. ಇನ್ಮುಂದೆ ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾಳಂತೆ. ಗರ್ಭಿಣಿ ಸಮಯವನ್ನು ಮಿಸ್ ಮಾಡಿಕೊಳ್ತೇನೆ ಎನ್ನುತ್ತಾಳೆ ಶು.
ಈ ಬಾರಿ ಆಸ್ಪತ್ರೆಗೆ ಹೋದಾಗ, ಮುಂದಿನ ವರ್ಷ ಬರ್ತಿರಾ ಎಂದು ಸಿಬ್ಬಂದಿ ಕೇಳಿದ್ದರಂತೆ. ಇದಕ್ಕೆ ಇಲ್ಲವೆಂದು ಶು ಉತ್ತರಿಸಿದ್ದಾಳಂತೆ. ವಿಶೇಷವೆಂದ್ರೆ ಹಿಂದಿನ ವರ್ಷ 20ನೇ ಮಗು ಜನಿಸಿದಾಗ ಕೂಡ ಶು ಇದೇ ಉತ್ತರ ನೀಡಿದ್ದಳಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಸಿಎಂ ಕುಮಾರಸ್ವಾಮಿ ಕಲಾಪದಲ್ಲಿ ಮಾಡಿದ ಭಾಷಣದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ. ಆಕೆ ಪ್ರತಿ ಹಂತದಲ್ಲೂ ನನ್ನ ಜತೆಯಲ್ಲಿದ್ದಾಳೆ ಎಂದು ಹೇಳಿದರು. ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಉಸ್ತುವಾರಿ ಸಿಎಂ ಸದನದಲ್ಲಿ ಕೊಂಡಾಡಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆಗೆ ಉತ್ತರಿಸುವ ವೇಳೆ, ನಾನು ಉದ್ದೇಶ ಪೂರ್ವಕವಾಗಿ ರಾಜಕೀಯಕ್ಕೆ ಬಂದವನಲ್ಲ. ರಾಜಕೀಯದಲ್ಲಿ ಇರುವವರನ್ನು ನಾನು ಮದುವೆಯಾಗುವುದಿಲ್ಲ ಎಂದಿದ್ದಳು ನನ್ನ ಪತ್ನಿ. ಆದರೆ ಈಗ ಅವರೂ ನನ್ನ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ…
ಕಳೆದ ಕೆಲ ವರ್ಷಗಳಿಂದ ಎಪಿಡರ್ಮೋಡೈಸ್ ಪ್ಲಾಸಿಯಾ ವೆರುಸಿಫಾರ್ಮ್ (ಟ್ರೀ ಮ್ಯಾನ್ ರೋಗ) ಎಂಬ ವಿಚಿತ್ರವಾದ ಚರ್ಮದ ಕಾಯಿಲೆಗೆ ತುತ್ತಾಗಿ ಕೈಯ್ಯಾರೆ ಊಟ ಅಥವಾ ಬೇರೆ ಕೆಲಸ ಮಾಡಲು ಕಷ್ಟ ಪಡುತ್ತಿದ್ದ ಬಾಂಗ್ಲಾದೇಶದ 27 ವರ್ಷದ ಅಬುಲ್ ಬಜಂದಾರ್ಗೆ ಬರೋಬ್ಬರಿ 19 ಶಸ್ತ್ರ ಚಿಕಿತ್ಸೆ ಮಾಡಿದ್ರೂ ತೊಂದರೆ ನಿವಾರಣೆ ಆಗಿಲ್ಲ.
ಸಂಯುಕ್ತ ಅರಬ್ ಎಮಿರೇಟ್ಸ್ (UAE) ಸದ್ಯ ಭಾರೀ ಮಳೆ, ಗುಡುಗು ಹಾಗೂ ಸಿಡಿಲುಗಳಿಗೆ ಸಾಕ್ಷಿಯಾಗಿದೆ. ಇದೇ ವೇಳೆ ಒಂದು ವಿಶಿಷ್ಟ ಚಿತ್ರವೊಂದನ್ನು ಸೆರೆಹಿಡಿದಿರುವ ಛಾಯಾಗ್ರಾಕನೊಬ್ಬ ತನ್ನ ಬಹುದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾನೆ. ಜಗತ್ತಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ನೆತ್ತಿ ಮೇಲೆ ಸಿಡಿಲು ಬಡಿದಿದೆ.ಈ ಅದ್ಭುತ ಘಳಿಗೆಯನ್ನು ಸೆರೆ ಹಿಡಿದ ಝೋಹೆಯ್ಬ್ ಅಂಜುಮ್, ಈ ಘಳಿಗೆಗೆಂದು ಸತತ ಏಳು ವರ್ಷಗಳ ಕಾಲ ಈ ಕ್ಷಣಕ್ಕಾಗಿ ಕಾದು ಕುಳಿತಿದ್ದರಂತೆ. ದುಬಾಯ್ನಲ್ಲಿ ಮಳೆ ಆದಾಗಲೆಲ್ಲ ರಾತ್ರಿಗಳನ್ನು ಆಚೆಯೇ ಕಳೆಯುತ್ತಿದ್ದ ಈತನ…
ಹೆಚ್ಚಿನವರ ಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೇ ಇರುವುದಿಲ್ಲ. ಆದರೆ ಉಳಿದ ತಿಂಡಿಗಳನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿ ಹಾಕುವ ಮುನ್ನ ಯೋಚಿಸಿ.
17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.