ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ರಾಜ್ಯದ ಮುಖ್ಯಮಂತ್ರಿ ಇದುವರೆಗೂ ಅಧಿಕಾರ ಕಳೆದುಕೊಂಡಿಲ್ಲ , ತಿಂಗಳಿಗೆ 5 ಸಾವಿರ ಪಡಿಯುವ ಭಾರತದ ಅತ್ಯಂತ ಭರವಸೆ ಮೂಡಿಸಿದ ಮುಖ್ಯಮಂತ್ರಿ ಇವರೇ ಮಾಣಿಕ್ ಸರ್ಕಾರ್.
“ಸೆವೆನ್ ಸಿಸ್ಟರ್ಸ್” ಎಂದೇ ಹೆಸರಾಗಿರುವ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪುಟ್ಟ ಮತ್ತು ಕೊನೆಯ ರಾಜ್ಯ ತ್ರಿಪುರ. ಉತ್ತರ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬಾಂಗ್ಲಾದೇಶದಿಂದ ಸುತ್ತುವರಿಯಲ್ಪಟ್ಟಿರುವ ತ್ರಿಪುರದ ಪೂರ್ವಕ್ಕೆ ಅಸ್ಸಾಂ ಮತ್ತು ಮಿಝೊರಾಮ್‌ಗಳಿವೆ.
ಮಾಣಿಕ್ ಸರ್ಕಾರ್ ಇವರು 1998 ರಿಂದ ಇಲ್ಲಿಯ ವರೆಗೂ ಸೋತಿದ್ದೆ ಇಲ್ಲ ಮತ್ತು ಅಧಿಕಾರದಿಂದ ಕೆಳಗೆ ಇಳಿದೇಯಿಲ್ಲ ತನಗೆ ಬರುವ ಸಂಭಳವನ್ನು ಪಕ್ಷಕ್ಕೆ ನೀಡಿ ಪಕ್ಷದಿಂದ ಕೊಡುವ 5 ಸಾವಿರ ರೂಪಾಯಿಗಳಿಂದ ಜೀವನ ನಡೆಸುತ್ತಿರುವ ಇವರು ಭಾರತ ದೇಶದ 3ನೇ ಸಣ್ಣ ರಾಜ್ಯ ತ್ರಿಪುರಾದ ಮುಖ್ಯಮಂತ್ರಿ.
ಇವರು ಕಮ್ಯುನಿಸ್ಟ್ (Marxist) ಪಾರ್ಟಿಯವರು, 2013 ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು 4ನೇ ಭಾರಿಗೆ ಮುಖ್ಯಮಂತ್ರಿ ಆದರು.
ಮಾಣಿಕ್ ಸರ್ಕಾರ್ ರವರ ವೈಯಕ್ತಿಕ ಜೀವನ:-
ಮಾಣಿಕ್ ಸರ್ಕಾರ್ 1949 ಜನವರಿ 22 ರಂದು, ರಾಧಕಿಶೋರ್ ಪುರದಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಅಮೂಲ್ಯ ಸರ್ಕಾರ್ ಒಬ್ಬ ಟೈಲರ್. ತಾಯಿ ಅಂಜಲಿ ಸರ್ಕಾರ್ ರಾಜ್ಯ ಸರ್ಕಾರದ ನೌಕರಿಯಲ್ಲಿದ್ದರು. ಮಾಣಿಕ್ ಸರ್ಕಾರ್ ಎಮ್ ಬಿ ಬಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಅವರು ವಿದ್ಯಾರ್ಥಿ ಜೀವನದಲ್ಲಿ ವಿಧ್ಯಾರ್ಥಿ ಸಂಘಟನೆಯ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದರು. ಎಮ್ ಬಿ ಬಿ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಎಸ್ ಎಪ್ ಐ (ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ) ಸಂಘಟನೆಯ ಅಖಿಲ ಭಾರತ ಉಪಾದ್ಯಕ್ಷರಾಗಿದ್ದರು.
ತನ್ನ 19 ನೇ ವಯಸ್ಸಿನಲ್ಲೇ ಅಂದರೆ 1968 ರಲ್ಲಿ ಸಿಪಿಐ(ಎಂ) ಪಕ್ಷದ ಸದಸ್ಯರಾದರು. 1972 ರಲ್ಲಿ ತನ್ನ 23ನೇ ವಯಸ್ಸಿನಲ್ಲಿ, ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಸದಸ್ಯರಾದರು. ರಾಜ್ಯ ಸಮಿತಿ ಸದಸ್ಯರಾದ 6 ವರ್ಷಗಳ ನಂತರ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದರು. ತಮ್ಮ 31 ನೇ ವಯಸ್ಸಿನಲ್ಲಿ ಅಂದರೆ, 1980 ರಲ್ಲಿ, ಅಗರ್ತಲಾ ಕ್ಷೇತ್ರದಿಂದ ವಿದಾನ ಸಭೆಗೆ ಆಯ್ಕೆಯಾದರು. 1993 ರಲ್ಲಿ ರಾಜ್ಯದಲ್ಲಿ ಎಡರಂಗ ಸರ್ಕಾರ ಅಧಿಕಾರದಲ್ಲಿದ್ದಾಗ, ಸರ್ಕಾರ್, ಪಕ್ಷದ ರಾಜ್ಯ ಕಾರ್ಯದರ್ಶಿಯಾದರು. 1998 ರಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ ಮಾಣಿಕ್ ಸರ್ಕಾರ್ ತ್ರಿಪುರಾ ರಾಜ್ಯದ ಮುಖ್ಯಮಂತ್ರಿಯಾದರು. ಆಗ ಅವರ ವಯಸ್ಸು 49 ವರ್ಷ. ಅದೇ ವರ್ಷದಲ್ಲಿ ಅವರು ಸಿಪಿಐ(ಎಂ) ಪಕ್ಷದ ಪೊಲಿಟ್ ಭ್ಯೂರೋ ಸದಸ್ಯರಾದರು.
ಸರಳ ಜೀವನ:-
ಮಾಣಿಕ್ ಸರ್ಕಾರ್ ರವರ ವೈಯಕ್ತಿಕ ಜೀವನವನ್ನು ನೋಡಿದರೆ ಮತ್ತಷ್ಟು ಅಚ್ಚರಿಗೊಳಗಾಗುತ್ತೇವೆ! ಭಾರತದ ಪರಿಶುದ್ಧ ಮತ್ತು ಅತಿ ಬಡ ಮುಖ್ಯಮಂತ್ರಿ (ಬಹುಶಃ ಬಡ ರಾಜಕಾರಣಿ!) ಮಾಣಿಕ್ ಸರ್ಕಾರ್! ಅವರು ಘೋಷಿಸಿಕೊಂಡಿರುವ ಆಸ್ತಿಯ ಒಟ್ಟು ಮೌಲ್ಯ ಎರಡೂವರೆ ಲಕ್ಷಕ್ಕಿಂತಲೂ ಕಡಿಮೆ. ಅದರಲ್ಲಿ ಅವರ ತಾಯಿಯಿಂದ ಬಂದ ಒಂದು ಮನೆ ಕೂಡ ಸೇರಿದೆ. 2013ರ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಅವರ ಬಳಿಇದ್ದ ಹಣ 1080 ಮಾತ್ರ, ಬ್ಯಾಂಕಿನಲ್ಲಿದ್ದ ಠೇವಣಿ 9720/-! ದೇಶದಲ್ಲಿ ಅತಿ ಕಡಿಮೆ ಸಂಬಳ (9200/-) ಪಡೆಯುತ್ತಿರುವ ಮಾಣಿಕ್ ಸರ್ಕಾರ್ ಆ ಸಂಬಳವನ್ನೂ ಪಕ್ಷಕ್ಕೆ ನೀಡಿ ಪಕ್ಷದ ಇತರೆ ಕಾರ್ಯಕರ್ತರಂತೆ ಐದು ಸಾವಿರ ರುಪಾಯಿಗಳನ್ನು ಪಡೆಯುತ್ತಿದ್ದಾರೆ.
ಇನ್ನು ಮುಖ್ಯಮಂತ್ರಿಯ ಜೀವನ ನಿರ್ವಹಣೆ ನಡೆಯುತ್ತಿರುವುದು ಸರಕಾರಿ ಕೆಲಸದಲ್ಲಿದ್ದ ಅವರ ಮಡದಿ ನಿವೃತ್ತರಾದಾಗ ಬಂದ ಪಿಎಫ್ ಮತ್ತಿತರ ಹಣವನ್ನು (24 ಲಕ್ಷ) ಬ್ಯಾಂಕಿನಲ್ಲಿ ಠೇವಣಿರೂಪದಲ್ಲಿಟ್ಟು ಅದರಿಂದ ಬರುವ ಬಡ್ಡಿಯಿಂದ!
ಈ ರಾಜ್ಯದ ಅಧಿಕಾರ ಅವಧಿ 2018ಕ್ಕೆ ಮುಗಿಯುವುದರಿಂದ ಕರ್ನಾಟಕದ ಜೊತೆಯಲ್ಲಿಯೇ ಚುನಾವಣೆ ಬರಬಹುದು. ಮಾಣಿಕ್ ಸರ್ಕಾರ್ ಅವರ ಸರ್ಕಾರವನ್ನು ಸೋಲಿಸುವ ಪ್ರಯತ್ನ ಅಲ್ಲಿನ ಪ್ರತಿಪಕ್ಷಗಳಿಗೆ ಬಾರಿ ಕಷ್ಟದ ಕೆಲಸವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜುಲೈ 2, 2019ರಂದು ಸಂಪೂರ್ಣ ಸೂರ್ಯ ಗ್ರಹಣ ಆಗಲಿದೆ. ಈ ಸೂರ್ಯ ಗ್ರಹಣವು ರಾತ್ರಿ 10.25ಕ್ಕೆ (ಭಾರತೀಯ ಕಾಲಮಾನ) ಸಂಭವಿಸಲಿದೆ. ಈ ಗ್ರಹಣವು 4.33 ನಿಮಿಷಗಳ ಕಾಲ ಸಂಭವಿಸಲಿದೆ. ಆ ಸಂದರ್ಭದಲ್ಲಿ ಸೂರ್ಯ ಸಂಪೂರ್ಣವಾಗಿ ಚಂದ್ರನ ನೆರಳಲ್ಲಿ ಮರೆಯಾಗುತ್ತದೆ. ಈ ಗ್ರಹಣವು ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಪೆಸಿಫಿಕ್ ಸಾಗರದಿಂದ ಗೋಚರವಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣದ ವೇಳೆ ಭೂಮಿಯಲ್ಲಿ ವಾತಾವರಣ ಕಲುಷಿತ ಆಗುತ್ತದೆ. ಆದ್ದರಿಂದ ಯಾವುದೇ ನಕಾರಾತ್ಮಕ ಅಡ್ಡ ಪರಿಣಾಮಗಳು ಸಂಭವಿಸಬಾರದು ಅಂದರೆ ಕೆಲವು…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(23 ಏಪ್ರಿಲ್, 2019) ನೀವು ಮನಸ್ಸಿನ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ, ಜಾಣತನ ಮತ್ತು ಸಭ್ಯತೆಯನ್ನು ಬಳಸಬೇಕಾಗುತ್ತದೆ. ದೀರ್ಘ…
‘ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ’ ಎಂದು ಸಿಎಂ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದಲ್ಲಿ ನಿನ್ನೆ ಪ್ರವಾಹದಿಂದಾದ ನಷ್ಟದ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಹಾಗೂ ನೀಡಬೇಕಿರುವ ಪರಿಹಾರದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದಾಗ ಅವರು ಮೇಲಿನಂತೆ ಉತ್ತರ ನೀಡಿದ್ದಾರೆ. ‘ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ, 8-10…
ತುಂಬಾ ಜನರತಲೇಲಿರೋದೇನಂದ್ರೆ, ಶ್ರೀಗಂಧ ಹಾಕಿದರೆ ಕಳ್ಳರ ಕಾಟ, ಮಾರುಕಟ್ಟೆಗ್ಯಾರಂಟಿ ಇಲ್ಲ ಹಾಗೂ 15-20 ವರ್ಷದನಂತರವೇ ಅದರಿಂದ ಆದಾಯ ಸಿಗುವುದು, ಅಲ್ಲಿವರೆಗೆ ಬರೀ ನಾವ್ ಹಾಕ್ತಾ ಇರಬೇಕು… ಆದರೆ ವಾಸ್ತವವೇಬೇರೆ, ಶ್ರೀಗಂಧ ನೆಟ್ಟಮೂರೇ ವರ್ಷದಿಂದ ಆದಾಯ ಪಡೆಯಬಹುದು. ಶ್ರೀಗಂಧ ತನ್ನ ಬೀಜಗಳ ಮೂಲಕ ನಿಮಗೆ ಹಣ ತಂದುಕೊಡುತ್ತದೆ. ಏನಿಲ್ಲವೆಂದರೂ ಒಂದು ಎಕರೆಯಲ್ಲಿ ಹಾಕಿದ ಶ್ರೀಗಂಧದಿಂದ ಪ್ರತಿವರ್ಷ ಬೀಜ ಮಾರಾಟದಿಂದಲೇ ಅಂದಾಜು ಎರಡು ಲಕ್ಷ ಆದಾಯ ಇದೆ. ಎಲ್.ಐ.ಸಿ ಯ ಮನಿ ಬ್ಯಾಕ್ ಪಾಲಿಸಿಯ ಹಾಗೆ ಪ್ರತಿ ವರ್ಷ ಬೀಜದ…
ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮದೇ ಆದ ಭಾವನಾಲೋಕದಲ್ಲಿರುವ ನಿಮಗೆ ವ್ಯವಹಾರ, ವಹಿವಾಟುಗಳು ಕೆಲವು ರೀತಿಯಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಪರಾಕ್ರಮದ ಕೆಲಸ ಅಥವಾ ಸಂವಹನ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸಬೇಕಾಗುವುದು..ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ…
ಶ್ರೀ ರಾಮ ಭಕ್ತ ಹನುಮಂತ ದೇವರಿಗೆ ಸಂಭಂದಿಸಿದ ಕೆಲವು ಮಂತ್ರಗಳು ಇಂತಿವೆ