ಸುದ್ದಿ

ಹೆತ್ತ ತಾಯಿಗೆ ಈ ಮಗ ಮಾಡಿರುವ ಕೆಲಸ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತೀರಾ..

301

ಹೆತ್ತು ಹೊತ್ತು ಸಾಕಿ.. ಮಕ್ಕಳನ್ನು ದೊಡ್ಡವರನ್ನಾಗಿ ಮಾಡುತ್ತಾರೆ.. ಮಕ್ಕಳು ದೊಡ್ಡ ದೊಡ್ಡ ಮನೆಯಲ್ಲಿ ಇರಬೇಕು.. ದೊಡ್ಡ ಮನುಷ್ಯರಾಗಿ ಬದುಕಬೇಕು ಎಂದೆಲ್ಲಾ ಆಸೆ ಪಡುತ್ತಾರೆ.. ಆದರೆ ಅದ್ಯಾಕೊ ಕೆಲವು ಪಾಪಿ ಹೃದಯಗಳು ಅಷ್ಟೆಲ್ಲಾ ಆಸೆ ಪಟ್ಟ ಹೆತ್ತವರನ್ನು ಅಯ್ಯೋ ಎನಿಸಿ ನರಕದ ದಾರಿಯನ್ನು ಸುಗಮ ಮಾಡಿಕೊಳ್ಳುತ್ತಾರೆ..

ಇಂತಹ ಮನಕಲುಕುವ ಘಟನೆ ನಡೆದಿದ್ದು ಮಗ ತನ್ನ ಪತ್ನಿಯ ಜತೆಗೂಡಿ ಹೆತ್ತತಾಯಿಯನ್ನೇ 3 ತಿಂಗಳಿಂದ ಗೃಹಬಂಧನದಲ್ಲಿರಿಸಿದ್ದ ಘಟನೆ, ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಬಿಸನಹಳ್ಳಿಯಲ್ಲಿ ನಡೆದಿದ್ದು, ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ತಾಯಿಯನ್ನು ರಕ್ಷಿಸಿದ್ದಾರೆ. 

ಕಾಡಬಿಸನಹಳ್ಳಿಯ ಮುನಿಯಮ್ಮ ನರಕಯಾತನೆಯಿಂದ ಮುಕ್ತಿಗೊಂಡ ತಾಯಿ. ವೆಂಕಟಸ್ವಾಮಿ ಹಾಗೂ ಆಕೆಯ ಪತ್ನಿ ಸುಜಾತ, ಮುನಿಯಮ್ಮರನ್ನು ಕೂಡಿಹಾಕಿದ ಆರೋಪಕ್ಕೆ ಗುರಿಯಾಗಿರುವವರು. ಹೀಗೆ ಮಹಿಳೆಯೊಬ್ಬರನ್ನು ಗೃಹಬಂಧನದಲ್ಲಿರಿಸಿ ಆಕೆಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಸ್ಥಳೀಯ ಯುವತಿಯೊಬ್ಬಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಳು. 

ಈ ಕುರಿತು ಟಿವಿ ಮಾಧ್ಯಮವೊಂದು ವರದಿ ಪ್ರಸಾರ ಮಾಡಲಾಗಿ ಮಾರತಹಳ್ಳಿ ಪೋಲೀಸರು ಎಚ್ಚೆತ್ತುಕೊಂಡು ಮುನಿಯಮ್ಮನನ್ನು ಬಂಧನ ಮುಕ್ತಗೊಳಿಸಿದ್ದಾರೆ.. ಮಗನಿಗೂ ಎಚ್ಚರಿಕೆ ನೀಡಿದ್ದಾರೆ‌..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ!ಈ ಆಚರಣೆ ಮಾಡಿದ್ರೆ ಏನಾಗುತ್ತೆ ಗೊತ್ತಾ..?

    ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

  • ಸುದ್ದಿ

    ಔಟ್ ಡೇಟೆಡ್ ನೂಡಲ್ಸ್ ನಿಂದ ಮನೆ ಕಟ್ಟಿ ಮಲಗಿದ ಭೂಪ..!

    ನೂಡಲ್ಸ್ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ನೂಡಲ್ಸ್ ತಿನ್ನಲು ಇಷ್ಟಪಡ್ತಾರೆ. ತಿನ್ನುವ ಈ ನೂಡಲ್ಸನ್ನು ವ್ಯಕ್ತಿಯೊಬ್ಬ ಮನೆ ಕಟ್ಟಲು ಬಳಸಿದ್ದಾನೆ. ಯಸ್, ಇದು ಸತ್ಯ. ಚೀನಾದ ಜಾಂಗ್ ಎಂಬ ವ್ಯಕ್ತಿ ನೂಡಲ್ಸ್ ನಿಂದ ಮನೆ ನಿರ್ಮಾಣ ಮಾಡಿದ್ದಾನೆ. ಶೀಘ್ರವೇ ತಂದೆಯಾಗಲಿರುವ ಜಾಂಗ್, ಹುಟ್ಟುವ ಮಗುವಿಗಾಗಿ ಈ ಮನೆ ನಿರ್ಮಾಣ ಮಾಡಿದ್ದಾನೆ. ಅವಧಿ ಮೀರಿದ 2000 ನೂಡಲ್ಸ್ ಪ್ಯಾಕ್ ನಿಂದ ಈ ಮನೆ ನಿರ್ಮಾಣವಾಗಿದೆಯಂತೆ. ಜಾಂಗ್, ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆತನ ಕೆಲಸಕ್ಕೆ…

  • ಸುದ್ದಿ

    ಹೆಚ್ಚರಿಕೆ : ಮುಖಕ್ಕೆ ಕೇಕ್ ಹಚ್ಚಿದರೆ ಜೈಲೇ ಗತಿ…!

    ಇತ್ತೀಚಿನ ದಿನಗಳಲ್ಲಿ ಯಾವುದೆ ಹುಟ್ಟುಹಬ್ಬ,ಅನ್ನಿವೆರ್ಸೆರಿ ಅಥವಾ ಯಾವುಧೆ ಶುಭ ಸಮಾರಂಭಗಳಲ್ಲಿ ಕೇಕ್ಅನ್ನು ಕತ್ತರಿಸುವ ಮತ್ತು ಮುಕಕ್ಕೆ ಹಚ್ಚಿಕೊಳ್ಳುವ ಹೊಸ ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದಾರೆ. ಇತ್ತೀಚಿನ ದಿನದಲ್ಲಿ ದೇಶದಲ್ಲಿ ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ಕೇಕ್ ಹಚ್ಚುವುದು, ಗಲಾಟೆ ಮಾಡುವುದನ್ನು ನೋಡಿರುವ‌ ಗುಜರಾತ್ ಪೊಲೀಸರು ಹೊಸ‌ ಕಾನೂನು ಜಾರಿಗೆ ತಂದಿದ್ದಾರೆ. ಹೌದು, ಸೂರತ್ ಪೊಲೀಸರು ಪಬ್ ಜೀ ಬ್ಯಾನ್ ಬಳಿಕ ಇದೀಗ ಸಾರ್ವಜನಿಕ ವಲಯದಲ್ಲಿ ಬರ್ತ್‌ ಡೇ ಕೇಕ್ ಕತ್ತರಿಸಿ ಮುಖಕ್ಕೆ ಮೆತ್ತುವುದನ್ನು ಬ್ಯಾನ್ ಮಾಡಿದೆ. ಒಂದು ವೇಳೆ ಈ ನಿಯಮ…

  • ಸುದ್ದಿ

    ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು- ಸಚಿವರಿಗೆ ತಿರುಗೇಟು ಹರ್ಷಿಕಾ ಪೂನಚ್ಚ….!

    ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಎಂಬುವುದು ನನ್ನ ಪರಿಸ್ಥತಿ. ನಾನು ಯಾರನ್ನು ದೋಷಿಸಿಲ್ಲ. ಕೊಡಗು ಸಂತ್ರಸ್ಥರಿಗೆ ಸರ್ಕಾರ ಚೆನ್ನಾಗಿರುವ ಮನೆ ನಿರ್ಮಿಸಿ ಕೊಡಲಿ ಎಂದು ಮನವಿ ಮಾಡಿದ್ದು ಎಂದು ಸಚಿವ ಸಾರಾ ಮಹೇಶ್‍ಗೆ ನಟಿ ಹರ್ಷಿಕಾ ಪೂಣಚ್ಚ ತಿರುಗೇಟು ನೀಡಿದ್ದಾರೆ.ವಿಡಿಯೋ ಮೂಲಕ ಶನಿವಾರ ತಾವು ಕೊಡಗು ಸಂಸ್ರಸ್ಥರ ಬಗ್ಗೆ ನೀಡಿದ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ನನ್ನ…

  • ಸಿನಿಮಾ

    ರಜನಿಕಾಂತ್ ಅಭಿಮಾನಿಗಳು ಅರೆಸ್ಟ್ !!!

    ರಜನೀಕಾಂತ್ ರಾಜಕೀಯ ಪ್ರವೇಶ ವಿಚಾರದಲ್ಲಿ ತಮಿಳುನಾಡಲ್ಲಿ ಭಾರೀ ಜಟಾಪಟಿ ಸಾಗಿದೆ. ಅದೂ ಕೂಡಾ ರಜನಿ ವಿಚಾರದಲ್ಲಿ ತಮಿಳು ಭಾಷಿಗರ ನಡುವೆಯೇ ಜಟಾಪಟಿ ನಡೆಯುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಕ್ಕೆ ತಮಿಳು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಜನಿ ಅಭಿಮಾನಿಗಳು ತಲೈವಾ ಪರ ನಿಂತಿದ್ದಾರೆ. ಯಾರು ಏನೇ ಹೇಳಲಿ, ನೀವು ರಾಜಕೀಯಕ್ಕೆ ಎಂಟ್ರಿ ಕೊಡಿ ಅಂತ ಇದ್ದಾರೆ ಅವರ ಅಭಿಮಾನಿಗಳು.