ವಿಚಿತ್ರ ಆದರೂ ಸತ್ಯ

14ರ ಬಾಲಕ ವಿಡಿಯೋ ಗೇಮ್ ಆಡಿ ಬ್ಯಾಂಕ್ ‘ನಲ್ಲಿ ಹಣ ಖಾಲಿ ಮಾಡಿದ್ದಾನೆ..!ತಿಳಿಯಲು ಈ ಲೇಖನ ಓದಿ…

758

ಐರ್ಲೆಂಡಿನ ಕಾರ್ಕ್ ನಿವಾಸಿಯಾದ ಮಹಿಳೆ ಹಣ ವಿತ್‍ಡ್ರಾ ಮಾಡಲು ಹೋದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿ ಶಾಕ್ ಆಗಿದ್ದರು. ತನ್ನ ಇಡೀ ಸಂಬಳ ಹಾಗೂ ಕ್ರಿಸ್‍ಮಸ್‍ಗಾಗಿ ನೀಡಲಾಗಿದ್ದ ಬೋನಸ್ ಹಣವೆಲ್ಲಾ ಖರ್ಚಾಗಿತ್ತು.

4 ವರ್ಷದ ಬಾಲಕನೊಬ್ಬ ವಿಡಿಯೋ ಗೇಮ್ ಆಡಿ ತನಗೆ ಗೊತ್ತಿಲ್ಲದೆ ಅಮ್ಮನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನ ಖಾಲಿ ಮಾಡಿರೋ ಘಟನೆ ಐರ್ಲೆಂಡಿನಲ್ಲಿ ನಡೆದಿದೆ.

ಮಹಿಳೆ ಮಗನಿಗಾಗಿ ತನ್ನ ಡೆಬಿಟ್ ಕಾರ್ಡ್ ಬಳಸಿ ಪ್ಲೇಸ್ಟೇಷನ್ ನ ಫೀಫಾ 18 ಗೇಮ್ ಖರೀದಿಸಿದ್ದರು. ಗೇಮ್ ಆಡುವಾಗ ಬಾಲಕ ಪರ್ಚೇಸಿಂಗ್ ಪಾಯಿಂಟ್ಸ್ ಖರೀದಿಸಿದ್ದು, ಇದಕ್ಕೆ ಹಣ ಕಟ್ ಆಗುತ್ತದೆ ಎಂಬುದು ಆತನಿಗೆ ತಿಳಿದಿರಲಿಲ್ಲ.

ಆತನಿಗೆ ಇದು ಅರ್ಥವಾಗಿರಲಿಲ್ಲ. ಪ್ರತಿ 10 ಪಾಯಿಂಟ್‍ಗೆ ಹೆಚ್ಚಿನ ಹಣ ಕಟ್ ಆಗ್ತಿತ್ತು. ಗೇಮ್ ಖರೀದಿ ಮಾಡುವಾಗ ಅಥವಾ ಆಡುವಾಗ ಇದರಲ್ಲಿ ಹಣ ಕಡಿತವಾಗೋ ಅಂಶ ಇರುತ್ತದೆ ಎಂದು ಅವರು ಹೇಳಲ್ಲ. ನನ್ನ ಕಾರ್ಡ್ ಆ್ಯಕ್ಟಿವೇಟ್ ಮಾಡಲು ಆತ ಏನೂ ಮಾಡಬೇಕಿರಲಿಲ್ಲ ಅಥವಾ ಏನನ್ನೂ ಕ್ಲಿಕ್ ಮಾಡಬೇಕಿರಲಿಲ್ಲ. ಅದಾಗಲೇ ಕಾರ್ಡ್ ರೆಜಿಸ್ಟರ್ ಆಗಿದ್ದರಿಂದ ಅದರ ವಿವರ ಹಾಕುವ ಅಗತ್ಯವಿರಲಿಲ್ಲ. ಆತ ಗೇಮ್ ಆಡುವಾಗ ನನ್ನ ಖಾತೆಯಿಂದ ಹಣ ಕಡಿತಗೊಳ್ಳುತ್ತಿದೆ ಎಂದು ಗೊತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ನಾನು ಪ್ಲೇಸ್ಟೇಷನ್ ಸಂಪರ್ಕ ಮಾಡಿದಾಗ ಇದು ವಯಸ್ಕರ ಗೇಮ್ ಎಂದು ಹೇಳಿದ್ರು. ನನ್ನ ಮಗ 14 ವರ್ಷದವನು. ಆತನಿಗೆ ತಾನು ಹಣದೊಂದಿಗೆ ಆಟವಾಡ್ತಿದ್ದೇನೆಂದು ಅರ್ಥವಾಗಿರಲಿಲ್ಲ ಎಂದು ವಿವರಿಸಿದೆ ಎಂದು ಆಕೆ ಹೇಳಿದ್ದಾರೆ.

ಆದರೂ ಪ್ಲೇಸ್ಟೇಷನ್ ಹಿಂದಿರೋ ಸೋನಿ ಸಂಸ್ಥೆ, ಗೇಮ್‍ಗಾಗಿ ಖರ್ಚು ಮಾಡಲಾಗಿರೋ ಹಣವನ್ನ ಹಿಂದಿರುಗಿಸಲು ನಿರಾಕರಿಸಿದೆ.ಇದರಿಂದ ಮಹಿಳೆಯ ಮಗ ಕೂಡ ಪಶ್ಚಾತ್ತಾಪ ಪಡುತ್ತಿದ್ದು, ಮನೆಯಿಂದ ಹೊರಹೋಗಿಲ್ಲ ಎಂದು ವರದಿಯಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? ಚರಕ ಸಂಹಿತೆಯ ಉತ್ತರ..

    ಚರಕ ಸಂಹಿತೆ ಇಂದಿಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಗ್ರಂಥ ಎಂದು ಎಲ್ಲ ವೈದ್ಯರು ಒಕ್ಕೊರಲಿನಿಂದ ಒಪ್ಪುತ್ತಾರೆ , ಹೊಸ ಆರೋಗ್ಯ ಸಮಸ್ಯೆಗಳು , ಜಟಿಲ ಕಾಯಿಲೆಗಳು ಉತ್ಪತ್ತಿ ಆದಾಗ ವೈಜ್ಞಾನಿಕ ಪ್ರಪಂಚ ಆಸೆ ಭರವಸೆಗಳಿಂದ  ನೋಡುವುದು ಈ 2ನೇ ಶತಮಾನದ ಗ್ರಂಥದೆಡೆಗೆ , ಚರಕ ಸಂಹಿತೆಯಲ್ಲಿ ಅಗ್ನಿವೇಶ ಎಂಬ ವಿದ್ಯಾರ್ಥಿಯು ಗುರುವಾದ ಅತ್ರೇಯರಲ್ಲಿ ನಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳಿದ್ದಾನೆ -ಹಿತಕರವಾದ ಅಥವಾ ಅಹಿತಕರವಾದ ಆಹಾರ ಸೇವಿಸುವ ಎರಡು ತರಹದ ಜನರಲ್ಲಿ ಕೂಡ ಕೆಲವರು ಆರೋಗ್ಯದಿಂದ ಇರುತ್ತಾರೆ ,ಕೆಲವರು…

  • ಸುದ್ದಿ

    ನಿಶ್ಚಿತಾರ್ಥದಲ್ಲಿ ನಿಖಿಲ್​ ಮೊದಲ ಬಾರಿಗೆ ರೇವತಿಯ ಬಗ್ಗೆ ಹೇಳಿದ್ದೇನು?

    ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್​ ಎಂಡ್​ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ನಿಖಿಲ್ ಮತ್ತು ರೇವತಿ ಕಂಗೊಳಿಸಿದರು. ಪಿಂಕ್ ಕಲರ್ ಸೀರೆಯಲ್ಲಿ ರೇವತಿ ಕಂಗೊಳಿಸಿದರೆ, ಕ್ರೀಮ್ ಕಲರ್ ಕುರ್ತಾದಲ್ಲಿ ನಿಖಿಲ್ ಮಿಂಚುತ್ತಿದ್ದರು. ನಿಖಿಲ್ ಕುಮಾರ್ ಅವರ ಫೇಸ್​ಬುಕ್ ಪೇಜ್​ನಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮದ ಲೈವ್ ಪ್ರಸಾರ ಮಾಡಲಾಗುತ್ತಿದೆ. ಮಾಜಿ ಪ್ರಧಾನಿ ಮತ್ತು ಅಜ್ಜ ದೇವೇಗೌಡರ ದಂಪತಿ ಸಮಕ್ಷಮದಲ್ಲಿ ವಜ್ರದುಂಗುರ ಬದಲಾಯಿಸಿಕೊಂಡರು. ದೇವೇಗೌಡರ ಅಳಿಯ ಡಾ. ಮಂಜುನಾಥ್ ಸೇರಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ನಿಖಿಲ್​ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥಕ್ಕೆ ಪವರ್…

  • ದೇಗುಲ ದರ್ಶನ, ಸುದ್ದಿ

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರತಿಯೊಬ್ಬರಿಗೂ ಇನ್ಮುಂದೆ ಸಿಗಲಿದೆ ಫ್ರೀ ಲಡ್ಡು.

    ವೈಕುಂಠ ಏಕಾದಶಿ ಪ್ರಯುಕ್ತ 1.70 ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈದರ್ಶನಕ್ಕೆ 1 ಲಕ್ಷದ 80 ಸಾವಿರ ಭಕ್ತರಿಗೆ ಮಾತ್ರ ವೈಕುಂಠ ದರ್ಶನ ಕಲ್ಪಿಸಲಾಗಿದೆ. ತಿರುಪತಿ -ತಿರುಮಲದ ದೇಗುಲದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ತಿಮ್ಮಪ್ಪನ ಸಾನಿಧ್ಯದಲ್ಲಿ ಜನವರಿ 6 ಮತ್ತು 7ರಂದು 2 ದಿನಗಳ ಕಾಲ ವೈಕುಂಠ ಏಕಾದಶಿ – ದ್ವಾದಶಿ ಪ್ರಯುಕ್ತ ಭಕ್ತಾಧಿಗಳಿಗೆ ವೈಕುಂಠ ದ್ವಾರ ದರ್ಶನ ಕಲ್ಪಿಸಲಾಗಿದೆ. ಜನವರಿಯಂದು 21,28 ರಂದು ದಿವ್ಯಾಂಗರಿಗೆ, ಮಾರ್ಚ್ 22 ಮತ್ತು 29 ರಂದು ಹಸುಗೂಸು ಹೊಂದಿರುವ ತಂದೆ…

  • ಉಪಯುಕ್ತ ಮಾಹಿತಿ

    ನಿಮ್ಮ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ

    ಬೊಜ್ಜು ಸದ್ಯ ಎಲ್ಲರ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕು, ಹೊಟ್ಟೆ ಕರಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಈ ಕಸರತ್ತು ಫಲ ನೀಡಿದ್ರೆ ಹೆಚ್ಚು ಬಾರಿ ವಿಫಲವಾಗೋದೇ ಹೆಚ್ಚು. ನಾವು ಹೇಳುವ ಸುಲಭ ಉಪಾಯ ಮೂರೇ ದಿನದಲ್ಲಿ ತೂಕ ಇಳಿಸಿಕೊಳ್ಳಲು ನೆರವಾಗುತ್ತೆ. ಒಮ್ಮೆ ಪ್ರಯತ್ನಿಸಿ ನೋಡಿ ಎನ್ನುತ್ತಾರೆ ತಜ್ಞರು. ಬೇಕಾಗುವ ಸಾಮಗ್ರಿ : ಒಂದು ಇಂಚು ತುರಿದ ಶುಂಠಿ, ಕತ್ತರಿಸಿದ ನಿಂಬೆ ಹೋಳು,ಒಂದು ಕಪ್ ನೀರು,ಒಂದು ಚಮಚ ಜೇನುತುಪ್ಪ ಮಾಡುವ ವಿಧಾನ : ಒಂದು ಪಾತ್ರೆಗೆ ನೀರನ್ನು…

  • ಪ್ರೇಮ, ಸಂಬಂಧ

    100 ವರ್ಷ ಪೂರೈಸಿದ ತಾಯಿಗೆ ಋಣ ತೀರಿಸಲು ಬೆಳ್ಳಿ ಕಿರೀಟ ತೊಡಿಸಿದ ಮಗ.

    ಸಾಮ್ರಾಜ್ಯ ಗೆದ್ದ ಮಕ್ಕಳಿಗೆ ತಾಯಿಯೇ ಎದುರು ನಿಂತು ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿರುವುದು ಚರಿತ್ರೆಯ ಪುಟಗಳಲ್ಲಿ ನಾವು ಓದಿದ್ದೇವೆ. ಆದರೆ ಧಾರವಾಡದಲ್ಲಿ ರೈತರೊಬ್ಬರು ತಮ್ಮ ತಾಯಿಯ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತೊಡಿಸಿ ಸಾವಿರಾರು ಜನರ ಮಧ್ಯೆ ಅಭಿನಂದಿಸಿದ್ದಾರೆ. ಡಾಕ್ಟರ್, ಇಂಜಿನಿಯರ್ ಓದಿ ಕೆಲಸ ಸಿಕ್ಕ ಬಳಿಕ ವಿದೇಶದಲ್ಲಿ ಸುಖ ಜೀವನ ನಡೆಸುವ ಕೆಲ ಮಕ್ಕಳು ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ ಸೇರಿಸುವ ಕಾಲವಿದು. ಇಂಥಹ ಕಾಲದಲ್ಲಿ ಧಾರವಾಡ ಜಿಲ್ಲೆಯ ಹೊಲ್ತಿಕೋಟಿ ಗ್ರಾಮದ ರೈತ ಮಹದೇವಪ್ಪ ಕೋರಿ…