ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಸಂಸ್ಕೃತಿಯಲ್ಲಿ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವಂತಿಲ್ಲ. ಇದಕ್ಕೆ ಸಾಕಷ್ಟು ಬಾರಿ ವಿರೋಧವೂ ವ್ಯಕ್ತವಾಗುತ್ತದೆ. ತಲೆ-ಬುಡವಿಲ್ಲದೆ ಶಾಸ್ತ್ರಗಳನ್ನು ಮಾಡ್ತಾರೆಂದು ಕೆಲವರು ಆರೋಪ ಮಾಡ್ತಾರೆ. ಆದ್ರೆ ಹಿಂದೂ ಸಂಸ್ಕೃತಿಯಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನೂ ಹೇಳಲಾಗಿದೆ. ಮಹಿಳೆಯರು ಮಾಡಬಾರದ ಕೆಲಸಗಳಲ್ಲಿ ತೆಂಗಿನಕಾಯಿ ಒಡೆಯುವುದು ಒಂದು.

ಹೌದು, ಹಿಂದೂ ಸಂಸ್ಕೃತಿ ಪ್ರಕಾರ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದು. ಹಿಂದೂ ಧರ್ಮದ ಪ್ರಕಾರ ತೆಂಗಿನ ಕಾಯಿ ಪವಿತ್ರವೆಂದು ಪರಿಗಣಿಸಲಾಗಿದೆ. ಶುಭ ಸಮಾರಂಭಗಳಲ್ಲಿ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಯಾವುದೇ ಹೊಸ ಕೆಲಸ ಆರಂಭಿಸುವಾಗ ತೆಂಗಿನ ಕಾಯಿಯನ್ನು ಒಡೆಯಲಾಗುತ್ತದೆ.

ತೆಂಗಿನ ಕಾಯಿಯಿಲ್ಲದೆ ಮಾಡುವ ಪೂಜೆ ಪೂಜೆಯೇ ಅಲ್ಲ. ಆದ್ರೆ ಪುರುಷರು ಮಾತ್ರ ಯಾಕೆ ತೆಂಗಿನಕಾಯಿ ಒಡೆಯಬೇಕೆಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಇದಕ್ಕೆ ಉತ್ತರ ಪೌರಾಣಿಕ ಕಥೆಯಲ್ಲಡಗಿದೆ. ವಿಶ್ವವನ್ನು ಸೃಷ್ಟಿ ಮಾಡುವ ಮೊದಲು ಬ್ರಹ್ಮ ತೆಂಗಿನ ಕಾಯಿ ಸೃಷ್ಟಿ ಮಾಡಿದನಂತೆ. ತೆಂಗಿನ ಕಾಯಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಿದ್ದಾರೆಂದು ನಂಬಲಾಗಿದೆ. ಹಾಗಾಗಿ ಮಹಿಳೆಯರನ್ನು ತೆಂಗಿನ ಕಾಯಿಯಿಂದ ದೂರವಿರಿಸಲಾಗಿದೆ.

ಇನ್ನೊಂದು ಕಾರಣವನ್ನೂ ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ತೆಂಗಿನ ಕಾಯಿಯನ್ನು ಬೀಜವೆಂದು ಪರಿಗಣಿಸಲಾಗಿದೆ. ಮಹಿಳೆ ಮಗುವಿಗೆ ಜನ್ಮ ನೀಡಿ ಕುಟುಂಬ ಬೆಳೆಸುತ್ತಾಳೆ. ಆಕೆಯೇ ಇನ್ನೊಂದು ಬೀಜವನ್ನು ಒಡೆಯೋದು ಎಷ್ಟು ಸರಿ. ಹಾಗಾಗಿ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದೆಂದು ಧರ್ಮದಲ್ಲಿ ಹೇಳಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ “ಸುದೀಪ್”ರವರು ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರು ಸದಾ ಸುದ್ದಿಯೇಲ್ಲಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಅವರು ಹೆಚ್ಚಾಗಿ ಬಳುಸುವ ಸಾಮಾಜಿಕ ಜಾಲತಾಣ ಟ್ವಿಟ್ಟರ್. ಕನ್ನಡದ ಬೇರೆಲ್ಲಾ ನಟರಿಗಿಂತ ಸುದೀಪ್ರವರು ಟ್ವಿಟ್ಟರ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ರಾಜಕಾರಣಿಗಳಾಯಿತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವಿರುವ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕೋಮು ಗಲಭೆ ತಡೆಯಲು ಈ ಪ್ರಯತ್ನ ಮಾಡಲಾಗಿದ್ದು, ಅವರಿಗಾಗಿ ಶಾಲೆಯಲ್ಲಿ ಬೆಡ್, ಬೆಡ್ ಶೀಟ್, ಇನ್ನಿತರ ವಸ್ತುಗಳ ಸಿದ್ಧತೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ…
ಐಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 4ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಒಬ್ಬಳಿಗೆ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಡಿಸಿಪಿ ಆಗುವ ಯೋಗ ಒದಗಿ ಬಂದಿದೆ. ಈ ಸಾಧನೆ ಮಾಡಿರುವ ವಿಧ್ಯಾರ್ಥಿನಿಯ ಹೆಸರು ರೀಚಾ ಸಿಂಗ್ ಎಂದು. ಈ ಪ್ರತಿಭಾನ್ವಿತ ವಿಧ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸುವ ಸಲುವಾಗಿ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಉಪ ಪೊಲೀಸ್ ಕಮಿಷನರ್ ಆಗುವ ಅವಕಾಶ ನೀಡಲಾಗಿತ್ತು. ಕೊಲ್ಕತ್ತಾದ ಜಿ.ಡಿ. ಬಿರ್ಲಾ ಸೆಂಟರ್ ಫಾರ್ ಎಜುಕೇಷನ್ನಲ್ಲಿ ವಿಧ್ಯಾಭ್ಯಾಸ ಮಾಡಿರೋ ರಿಚಾ, ಪ್ಲಸ್ 2 ಪರೀಕ್ಷೆಯಲ್ಲಿ ಶೇ. 99.25…
ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣಕ್ಕಾಗಿ ಮುತ್ತು ಅವರ ವೃದ್ಯಾಪ್ಯ ವೇತನದ ಭದ್ರತೆಗಾಗಿ ಭಾರತ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರನ್ನು ಸ್ವಪ್ರೇರಣೆಯಿಂದ ತಮ್ಮ ನಿವೃತ್ತಿಗಾಗಿ ಉಳಿಸಲು ಪ್ರೋತ್ಸಾಹಿಸುತ್ತದೆ. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ. ಏನಿದು ಅಟಲ್ ಪಿಂಚಣಿ ಯೋಜನೆ..? ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಬ್ಯಾಂಕ್ ಗೆ ಕಟ್ಟಿದರೆ.. ನಾವು ಎಷ್ಟು ಹಣ…
ಮಳೆಯ ಸಿಂಚನ ಇಳೆಯನ್ನು ಸ್ಪರ್ಶಿಸುತ್ತಿದ್ದಂತೆ, ಭೂಗರ್ಭದಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸುವ ಬೆಳೆ ಎಂದರೆ ಅಣಬೆ. ಇದು ನಿಸರ್ಗದ ಚಮತ್ಕಾರವಾದರೂ ಈ ಪೈಕಿ ಬಹಳಷ್ಟು ಅಣಬೆಗಳು ವಿಷಪೂರಕವಾದವು. ಆದರೆ ಮನೆ ಬಳಕೆಗೆ ಉಪಯೋಗ ಆಗುವಂತಹ ಅಣಬೆಯನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆದು ಅದರಿಂದ ಲಾಭ ಗಳಿಸಬಹುದು.
ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ನಾಯಕರಿಂದ ಭರವಸೆ ಮಹಾಪೂರವೇ ಹರಿದು ಬರ್ತಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. 2019ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಪರೀಕ್ಷೆ ಹಾಗೂ ಸರ್ಕಾರಿ ಹುದ್ದೆಗಳ ಪರೀಕ್ಷೆಗೆ ವಿಧಿಸುವ ಅರ್ಜಿ ಶುಲ್ಕವನ್ನು ರದ್ದು ಮಾಡುವುದಾಗಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಯಾವುದೇ ಅಭ್ಯರ್ಥಿಯಿಂದ ಸರ್ಕಾರಿ ಪರೀಕ್ಷೆಗೆ ಅರ್ಜಿ…