ಆರೋಗ್ಯ

ಹಾರ್ಟ್ ಅಟ್ಯಾಕ್ ಆಗೋ ಮುಂಚೆ ಏನಾಗುತ್ತೆ ಗೊತ್ತಾ?ತಿಳಿಯಲು ಈ ಲೇಖನಿ ಓದಿ….

4973

ಈಗಿನ ಕಾಲದ ಜೀವನ ಕ್ರಮ, ಮತ್ತು ಆಹಾರ ಪದ್ದತಿಗಳು, ಮನುಷ್ಯನ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಯಾವಾಗ ಏನು ಪರಿಣಾಮ ಆಗುತ್ತದೋ ಗೊತ್ತಿರುವುದಿಲ್ಲ…

ಅದರಲ್ಲೂ ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಆಗುತ್ತೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟ ಎಂದು ಹೇಳುವ ಮಾತನ್ನ ಕೇಳಿರುತ್ತೇವೆ. ಹಾರ್ಟ್ ಅಟ್ಯಾಕ್ ಆಗುವುದೇ ಹಾಗೆ.

ಇದ್ದಕ್ಕಿದ್ದಂತೆ ಸಂಭವಿಸುವ ಈ ಹಾರ್ಟ್ ಅಟ್ಯಾಕ್ ನ  ಲಕ್ಷಣಗಳು ಏನು..? ಮುಂದೆ ಓದಿ ಹಾರ್ಟ್ ಅಟ್ಯಾಕ್ ನ  ಲಕ್ಷಣಗಳನ್ನು ತಿಳಿದುಕೊಳ್ಳಿ….

  • ಎದೆಯಲ್ಲಿ ತೀವ್ರ ಉರಿ ಕಾಣಿಸಿಕೊಳ್ಳುತ್ತದೆ.
  • ಮೆದುಳಿನಲ್ಲಿ ಒತ್ತಡ, ನೋವಿದ್ದಂತೆ ಭಾಸವಾಗುತ್ತದೆ.
  •  ಅತಿಯಾಗಿ ಬೆವರುವುದು.

ಎಲ್ಲರಲ್ಲೂ ಈ ಲಕ್ಷಣಗಳು ಬರುತ್ತವಯೇ?

ಕೆಲವರಲ್ಲಿ ಇಂಥ ಲಕ್ಷಣಗಳು ಕಾಣಿಸಿಕೊಳ್ಳದೆಯೂ ಇರಬಹುದು. ಅನೇಕರಿಗೆ ವಾಂತಿ, ವಾಕರಿಕೆ ಆಗಬಹುದು. ಹೀಗಾದಾಗ ರೋಗಿ ಗೊಂದಲಕ್ಕೆ ಬೀಳಬಹುದು. ತನಗಾಗಿರುವುದು ಪುಟ್ಟ ಸಮಸ್ಯೆ, ಹೃದಯಕ್ಕೆ ಸಂಬಂಧಿಸಿದ್ದಲ್ಲ ಎಂದು ತಣ್ಣನೆ ಕುಳಿತುಕೊಳ್ಳಬಹುದು.

ಆದರೆ, ಈ ಲಕ್ಷಣಗಳೊಟ್ಟಿಗೆ ಎದೆಯುರಿ ಖಂಡಿತಾ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಡಯಾಬಿಟೀಸ್ ಇದ್ದವರು, ಕೊಲೆಸ್ಟೆರಾಲ್ ಹೊಂದಿದವರು, ಧೂಮಪಾನ- ಮದ್ಯಪಾನದಂಥ ಚಟವುಳ್ಳವರಿಗೆ ಇಂಥ ಲಕ್ಷಣ ಕಂಡಕೂಡಲೇ ಹೃದಯ ಕೈಕೊಡಬಹುದು. ಎದೆಯ ಎಡಭಾಗದಲ್ಲಿ ಯಾವುದೇ ಅಸಹಜ ನೋವು ಕಾಣಿಸಿಕೊಂಡರೂ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ