inspirational

ಹವಾ ಮಹಲ್

45

  ಇದು ಭಾರತದ ಜೈಪುರ್‌ನಲ್ಲಿರುವ ಒಂದು ಅರಮನೆ. ಇದನ್ನು 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಕಟ್ಟಿಸಿದ್ದರು, ಮತ್ತು ಲಾಲ್ ಛಂದ್ ಉಸ್ತಾರವರು ಹಿಂದೂ ದೇವರಾದ ಕೃಷ್ಣ ನ ಕಿರೀಟದ ಆಕಾರದಲ್ಲಿ ಇದರ ವಿನ್ಯಾಸಗೊಳಿಸಿದ್ದರು. ಜಟಿಲ ಜಾಲರಿ ಕಾಮಗಾರಿಯಿಂದ ಅಲಂಕೃತ ಝರೊಕಾ ಎಂದು ಕರೆಯಲಾದ 953 ಚಿಕ್ಕ ಕಿಟಕಿಗಳು ಒಳಗೊಂಡ
ಇದರ ಅದ್ವಿತೀವಾದ ಐದು-ಅಂತಸ್ತಿನ ಹೊರರೂಪ ಜೇನುಗೂಡಿನ ಜೇನುಹಟ್ಟಿಗೆ ಕೂಡ ಸದೃಶ್ಯವಾಗಿದೆ. ಈ ಜಲರಿಯ ಮುಖ್ಯ ಉದ್ದೇಶವೆಂದರೆ ರಾಜ ಮನೆತನದ ಮಹಿಳೆಯರಿಗೆ ಅವರು ಕಾಣದಂತೆ ಕೆಳಗಿನ ರಸ್ತೆಯ ದಿನನಿತ್ಯದ ಜೀವನವನ್ನು ನೋಡಲು ಸಾಧ್ಯವಾಗಬೇಕೆಂದು, ಕಾರಣ ಅಂದು ಅವರು ಕಟ್ಟುನಿಟ್ಟಾಗಿ “ಪರಧಾ” ಅನ್ನು (ಮುಖದ ಹೊದಿಕೆ) ಪಾಲಿಸಬೇಕಿತ್ತು

ಕೆಂಪು ಹಾಗೂ ಗುಲಾಬಿ ಮರಳುಗಲ್ಲಿನಿಂದ ಕಟ್ಟಲಾದ, ಈ ಅರಮನೆ ಜೈಪುರ್‌ನ ವ್ಯಾಪಾರ ಕೇಂದ್ರದ ಮುಖ್ಯ ಸಾರ್ವಜನಿಕ ರಸ್ತೆಯ ಹೃದಯ ಸ್ಥಾನದಲ್ಲಿದೆ. ಇದು ನಗರದ ಅರಮನೆಯ ಭಾಗವಾಗಿದ್ದು, ಜೆನೇನ ಅಥವಾ ಮಹಿಳೆಯರ ಕೋಣೆಗಳಿಗೆ ವಿಸ್ತರಿಸಿದೆ, ಜನಾನರ ಕೋಣೆಗಳು. ವಿಶೇಷವಾಗಿ ನಸುಕಿನಲ್ಲಿ ನೋಡಿದಾಗ ಇದು ಸೂರ್ಯೋದಯದ ಹೊಂಗಿರಣಗಳಿಂದ ಬೆಳಗಿ ಗಮನಾರ್ಹವಾಗಿ ಕಾಣುತ್ತದೆ

ಕಛ್‌ವಾಹ ವಂಶದ ಮಹಾರಾಜ ಸವಾಯಿ ಜೈ ಸಿಂಗ್, ರಾಜಸ್ಥಾನದ ಅರಸ ಮೂಲತಹ ಜೈಪುರ್ ನಗರವನ್ನು 1727ರಲ್ಲಿ ಯೋಜಸಿ ನಿರ್ಮಿಸಿದರು. ಹೇಗಿದ್ದರು, ಅವರ ಮೊಮ್ಮಗ ಹಾಗೂ ಮಹಾರಾಜ ಸವಾಯಿ ಮಾಧೊಸಿಂಗ್ I ರ ಮಗನಾದ, ಸವಾಯಿ ಪ್ರತಾಪ್ ಸಿಂಗ್‌ರವರು 1799ರಲ್ಲಿ ರಾಜಯೋಗ್ಯ ನಗರದ ಅರಮನೆಯ ಮುಂದುವರಿಕೆಯಾಗಿ ಹವಾ ಮಹಲ್ ಅನ್ನು ಕಟ್ಟಿದರು. ಹಿಂದೂ ದೇವರಾದ ಕೃಷ್ಣನ ಪ್ರತಿವಿದ್ದ ಆಳವಾದ ಭಕ್ತಿ ಪ್ರತಾಪ್ ಸಿಂಗ್‌ರನ್ನು ಭಗವಂತನ ಮುಕುಟ ಅಥವಾ ರುಮಾಲಾಗಿ ಅಲಂಕರಿಸಿದ ಭಂಗಿಯ ಈ ನಿರ್ಮಾಣದ ಸಮರ್ಪಣೆಗೆ ಪ್ರೇರಿಸಿತು ಎಂದು ಅನುಮಾನಿಸಲಾಗಿದೆ.ಇದರ ನಿಖರ ಇತಿಹಾಸಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲದಿದ್ದರು, ಕಟ್ಟುನಿಟ್ಟಾದ ಪರಧಾ (ಮಹಿಳೆಯರನ್ನು ಪುರುಷರು ನೋಡಲು ತಡೆಯುವ ರೂಢಿ) ಸಂಪ್ರದಾಯದ ಅಡಿಯಲ್ಲಿದ್ದ ರಾಜ ಮನೆತನದ ಮಹಿಳೆಯರು ಮಾರುಕಟ್ಟೆಯ ಕೇಂದ್ರದ ನಡಾವಳಿ ಹಾಗೂ ರಾಜಯೋಗ್ಯ ಮೆರವಣಿಗೆ ಹಾಗೂ ಉತ್ಸವಗಳನ್ನು ಕಲ್ಲಿನಿಂದ ಕೊರೆದ ಪರದೆಯ ಹಿಂದೆ ಕುಳಿತು ವೀಕ್ಷಿಸಲು ಅವಕಾಶ ಕಲ್ಪಿಸಿದ್ದರು ಎಂದು ಊಹಿಸಲಾಗಿದೆ. ಹೊರ ಜನರು ನೋಡದಂತೆ, ಸುಖಸಾಧನಗಳ ಸೌಕರ್ಯಗಳ ಹಾಗೂ ಕಟ್ಟುನಿಟ್ಟಾದ ಪರದೆಯ ಹಿಂದಿನ ಅನನ್ಯತೆಯ ಮಧ್ಯದಲ್ಲಿ, ಇದನ್ನೆ ಹವಾ ಮಹಲ್ ವೈಖರಿಯಲ್ಲಿ ಮಾಡಿತು


ಇದರ ಅಸಾಮಾನ್ಯ ವಿನ್ಯಾಸದ ಕಿಟಕಿ ಪರದೆಗಳು ಬೇಕಿರುವ ತಂಪು ತಂಗಾಳಿಯನ್ನು ಒದಗಿಸುವ ಕಾರಣ, ಹಲವು ವರ್ಷಗಳವರೆಗೆ ಜೈಪುರ್‌ನ ರಾಜ ಮನೆತನದ ಆಳ್ವಿಕೆಯಲ್ಲಿ ಈ ಮಹಲ್ ಅನ್ನು ಬೇಸಿಗೆ ಕಾಲದ ಉಸಿರುಕಟ್ಟುವ ಬಿಸಿ ವಾತಾವರಣದಲ್ಲಿ ಆಶ್ರಯಧಾಮವೆಂದು ಕೂಡ ಬಳಸುತ್ತಿದ್ದರು. ಇದೊಂದು ಐತಿಹಾಸಿಕ ಅದ್ಭುತ ಅರಮನೆ.
ಈ ಅದ್ವಿತೀಯ ನಿರ್ಮಾಣದ ವಾಸ್ತುಶಿಲ್ಪಿ ಅಂದಿನ ಕಾಲದಲ್ಲಿ ಭಾರತದ ಅತ್ಯುತ್ತಮ-ಯೋಜಿತ ನಗರದಲ್ಲೊಂದಾದ ಜೈಪುರ್ ನಗರದ ಯೋಜನೆಯನ್ನು ಸಾಕಾರಿಸಿದ ಲಾಲ್ ಛಂಧ್ ಉಸ್ತಾ. ನಗರದ ಇತರ ಸ್ಮಾರಕಗಳ ರಂಗಸಜ್ಜಿಕೆಯ ಹೋಲಿಕೆಯಂತೆ ಇದನ್ನು ಕೆಂಪು ಹಾಗೂ ಗುಲಾಬಿ ಬಣ್ಣದ ಮರಲುಗಲ್ಲಿನಿಂದ ಕಟ್ಟಲಾಗಿದೆ, ಇದರ ಬಣ್ಣ ಜೈಪುರ್‌ಗೆ ನೀಡಿದ “ಪಿನ್ಕ್ ಸಿಟಿ” ಎಂಬ ಬಿರುದಿನ ವಿಶೇಷಣವನ್ನು ಪೂರ್ತಿಯಾಗಿ ಪ್ರಮಾಣಿಸುತ್ತದೆ. ಇದರ ಮುಂಭಾಗ ಕಠಿಣವಾಗಿ ಕೊರೆದ 953 ಗೂಡುಗಳ ಝರೋಕಗಳನ್ನು ಚಿತ್ರಿಸುತ್ತದೆ (ಕೆಲವನ್ನು ಮರದಿಂದ ಮಾಡಲಾಗಿವೆ), ಇದು ನಿರ್ಮಾಣದ ಹಿಂಭಾಗದ ನಿರಾಡಂಬರವಾಗಿ ಕಾಣುವ ಭಾಗಕ್ಕೆ ಬಲವಾದ ವಿಭಿನ್ನತೆಯನ್ನು ತೋರಿಸುತ್ತದೆ. ಇದರ ಸಾಂಪ್ರದಾಯಿಕ ಹಾಗೂ ವಾಸ್ತುಶಿಲ್ಪದ ಪರಂಪರೆ ಹಿಂದೂ ರಾಜಪುತರ ವಾಸ್ತುಶಿಲ್ಪ ಹಾಗೂ ಇಸ್ಲಾಮರವಾಸ್ತುಶಿಲ್ಪ ದ ಸಮ್ಮಿಲನದ ನಿಜವಾದ ಪ್ರತಿಬಿಂಬ; ಗುಮ್ಮಟದ ಮೇಲ್ಛಾವಣಿಗಳು, ಕೊಳವೆಯಾಕಾರದ ಸ್ಥಂಬಗಳು, ಕಮಲ ಹಾಗೂ ಹೂವಿನ ಚಿತ್ರಾಕೃತಿಗಳು ರಾಜಪುತರ ಶೈಲಿಯಲ್ಲಿ ಕಂಡು ಬರುತ್ತದೆ, ಮತ್ತು ಇದರ ಕಲ್ಲುಗಳ ಮೇಲೆ ಬಳ್ಳಿಗೆಲಸದ ಅಲಂಕಾರ ಮಾಡಿ ಖಚಿತಗೊಳಿಸಿದ ಕೃತಿ ಹಾಗೂ ಕಮಾನುಗಳು ಇಸ್ಲಾಮಿಕ್ ಶೈಲಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ

ಹವಾ ಮಹಲ್ ಮಹಾರಾಜ ಜೈ ಸಿಂಗ್‌ರ chef-d’œuvre ಎಂದು ಕೂಡ ಪ್ರಚಲಿತವಾಗಿತ್ತು, ಇದರ ಸೊಬಗು ಹಾಗೂ ಮಹಲಿನಲ್ಲಿ ಒಳಗೊಂಡ ಒಳಭಾಗದ ಕಾರಣ ಇದು ಅವರ ಅತ್ಯಂತ ಪ್ರಿಯ ವಿಶ್ರಾಂತಿಧಾಮವಾಗಿತ್ತು. ಮುಂಭಾಗದ ಸಣ್ಣ ಕಿಟಕಿಗಳ ಮೂಲಕ ಹಾದು ಸಾಗುವ ತಂಗಾಳಿಯಿಂದ ಕೋಣೆಗಳಲ್ಲಾಗುವ ತಂಪು ಪ್ರಭಾವವನ್ನು, ಪ್ರತಿ ಕೋಣೆಯ ಮಧ್ಯದಲ್ಲಿ ಕಟ್ಟಲಾದ ಕಾರಂಜಿಗಳು ಹೆಚ್ಚಿಸುತ್ತವೆ.

ಮಹಲಿನ ಮೇಲ್ಛಾವಣಿಯಿಂದ ನೋಡಿದ ದೃಶ್ಯಾವಳಿ ಸ್ತಬ್ಧಗೊಳಿಸುವಂತಿದೆ.. ಹಸಿರು ಕಂದರಗಳು ಹಾಗೂ ಗುಡ್ಡಗಳು ಹಾಗೂ ಆಮೆರ್ ಕೊಟೆ ಪಶ್ಚಿಮ ಹಾಗೂ ಉತ್ತರದ ದೃಶ್ಯವಿವರವನ್ನು ನಿರ್ಮಿಸುತ್ತದೆ. ಥಾರ್‌ ಮರುಭೂಮಿಯ, ತೀರಾ ಸಡಿಲವಾದ ಮರಳು ಹೊಂದಿರುವ ಪ್ರದೇಶವು ದಕ್ಷಿಣ ಮತ್ತು ಪೂರ್ವಕ್ಕೆ ಹೊಂದಿದೆ. ಹಿಂದಿನ ಕಠಿಣವಾದ ಹಾಗೂ ನಿರ್ಜನ ಪ್ರದೇಶವಾದ ಈ ಭೂ ಪ್ರದೇಶದ ಎಲ್ಲ ಪರಿವರ್ತನೆಯು ಜೈಪುರ್‌ನ ಮಹಾರಾಜರ ಐಕ್ಯ ಪ್ರಯಾಸದ ಕಾರಣದಿಂದಾಗಿ ಸಂಭವಿಸಿತು.ಎಷ್ಟು ಮಟ್ಟಿಗೆ ಅಂದರೆ ಈ ಮಹಲ್ ಅನ್ನು ವರ್ಸೆಲಿಸ್‌ನ ಪ್ರತಿರೂಪ ಎಂದು ಹೇಳಲಾಗಿದೆ.ಸ್ಮಾರಕದ ಮೇಲಿನ ಅಂತಸ್ತಿನಿಂದ ಜಂತರ್ ಮಂತರ್ ಹಾಗೂ ಸಿಟಿ ಪ್ಯಾಲೆಸ್‌ನ ದೃಶ್ಯಗಳನ್ನು ಕೂಡ ವೀಕ್ಷಿಸಬಹುದು.

ಹವಾ ಮಹಲ್‌ನ ಮೇಲಿನ ಎರಡು ಅಂತಸ್ತುಗಳ ಪ್ರವೇಶದ್ವಾರವನ್ನು ಬರಿ ಇಳಿವೋರೆ ಮೂಲಕ ತಯಾರಿಸಲಾಗಿದೆ. ರಾಜಸ್ಥಾನ ಸರ್ಕಾರದ ಪುರಾತತ್ವ ಶಾಸ್ತ್ರ ಇಲಾಖೆಯು ಮಹಲಿನ ಊಸ್ತುವಾರಿಯನ್ನು ನೋಡಿಕೊಳ್ಳುತ್ತದೆ

Source internet

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆಯನ್ನು ಬಗೆಹರಿಸಿ ಅಂತೀರಾ… ಆಕ್ರೋಶದಿಂದ ಸಿಎಂ !

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು…

  • inspirational

    ಮಗನ ಟಿಕ್‌ಟಾಕ್ ಹುಚ್ಚು – ಸಾಸ್ ಚೆಲ್ಲಿ ಅಮ್ಮನಿಗೆ ಕಣ್ಣೀರು ಬರುವಂತೆ ಮಾಡಿದ ಪುತ್ರ..!

    ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ…

  • ಜ್ಯೋತಿಷ್ಯ

    ಶುಕ್ರವಾರದ ಶುಭದಿನದೊಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ನಿಮ್ಮವರಿಗೂ ಶೇರ್ ಮಾಡಿ…

    ಶುಕ್ರವಾರ, 23/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಹೆತ್ತವರನ್ನು ತೀರ್ಥಯಾತ್ರೆಗೆ ಕಳುಹಿಸುವ ಸಂಕಲ್ಪ ಮಾಡಲಿದ್ದೀರಿ. ಹಿರಿಯರಿಗೆ ಆಗಾಗ ದೇಹಾರೋಗ್ಯ ಏರುಪೇರಾಗಲಿದೆ. ಸಾಮಾಜಿಕ ರಂಗದಲ್ಲಿ ಆಗಾಗ ಸಮಾರಂಭಕ್ಕಾಗಿ ಓಡಾಟ ವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಂತಸ ತರಲಿದೆ. ರಾಜಕೀಯ ಧುರೀಣರೊಬ್ಬರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಮಾಡಿಸಿಕೊಳ್ಳಲಿದ್ದೀರಿ. ವ್ಯಾಪಾರದಿಂದ ಅಧಿಕ ಲಾಭ. ವೃಷಭ:- ಮಕ್ಕಳ ಬಗ್ಗೆ ಗಮನ ಹರಿಸಬೇಕು. ಉನ್ನತ ಅಧಿಕಾರಿಗಳ ಬೆಂಬಲದಿಂದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿದ್ದೀರಿ. ಮೇಲ್ದರ್ಜೆ ಗುತ್ತಿಗೆದಾರರಿಗೆ ಉತ್ತಮ ಕಾಮಗಾರಿಗಳು ದೊರಯುವ ಲಕ್ಷಣಗಳು…

  • ಸುದ್ದಿ

    ಹಾಸನದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಪಕ್ಷದವರಿಂದಲೇ ಷಡ್ಯಂತ್ರ ನಡೆದಿದೆಯಾ? ವೈರಲ್ ಆಗಿರುವ ಆಡಿಯೋನಲ್ಲಿ ಏನಿದೆ ಗೊತ್ತಾ?

    ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿಜೆಪಿ ಶಾಸಕ ಪ್ರೀತಂಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಬಿಜೆಪಿಯಲ್ಲಿ ಪುಕ್ಸಟ್ಟೆ ನಾಯಕನಾಗಲು ಮಂಜು ಹೊರಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಬಗ್ಗೆ ಕಾರ್ಯಕರ್ತನ ಬಳಿ ಪ್ರೀತಂ ಗೌಡ ಮಾತನಾಡಿದ್ದಾರೆನ್ನಲಾಗಿದೆ. ಹಾಸನದಲ್ಲಿ ಬಳ್ಳಾರಿ ಚುನಾವಣೆಯ ಫಲಿತಾಂಶ ಮರುಕಳಿಸುತ್ತದೆ. 10…

  • ಜೀವನಶೈಲಿ

    ಈ 5 ತಿಂಡಿ ತಿನಿಸುಗಳನ್ನು ತಿಂದರೆ ಏನಾಗುತ್ತೆ ಗೊತ್ತಾ..?

    ನಾವು ದಿನಾಲೂ ಬಳಸುವ ಕೆಲವು ತಿಂಡಿ ತಿನಿಸುಗಳಿಂದ, ನಮಗೆ ಅರಿವಿಲ್ಲದಂತಯೇ ಕೆಲವೊಂದು ಪ್ರಭಾವಗಳು ನಮ್ಮ ದೇಹದ ಮೇಲೆ ಆಗುತ್ತವೆ.ಅದರಲ್ಲಿ ನಿದ್ದೆಯೂ ಒಂದು. ಹೌದು, ಕೆಲವೊಂದು ತಿಂಡಿಗಳು ನಮಗೆ ಗೊತ್ತಿಲ್ಲದೇ ನಿದ್ದೆ ಬರಿಸುತ್ತವೆ.

  • ಸುದ್ದಿ

    ಉಡುಪಿಯ ಅರಬ್ಬೀ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ…..ಕಾರಣ?

    ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ. ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ…