ಉಪಯುಕ್ತ ಮಾಹಿತಿ

ಸ್ಮಾರ್ಟ್‌ಫೋನ್‌ಗಳನ್ನು ದೇಹಕ್ಕೆ ತಾಕುವಂತೆ ಪ್ಯಾಂಟ್ ಜೇಬಿನಲ್ಲಿ, ವಕ್ಷೋಜಗಳಲ್ಲಿ ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

166

ಸ್ಮಾರ್ಟ್‌ಫೋನ್ಸ್ ಇಂದು ನಮ್ಮ ಜೀವನವನ್ನು ಯಾವುದೋ ಒಂದು ವಿಧದಲ್ಲಿ ಪ್ರಭಾವಿಸುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವುದೇ. ಅಂಗೈಯಲ್ಲಿ ಜಗತ್ತನ್ನು ತೋರಿಸುವ ಹೈಸ್ಪೀಡ್ ಇಂಟರ್ನೆಟ್, ಸಾಮಾಜಿಕ ನೆಟ್‌ವರ್ಕಿಂಗ್, ಮ್ಯಾಪ್ಸ್, ಗೇಮ್ಸ್, ಎಂಟರ್ ಟೇನ್‌ಮೆಂಟ್…ಹೀಗೆ ಸಾಕಷ್ಟು ರೀತಿಯಲ್ಲಿ ಸ್ಮಾರ್ಟ್‍ಫೋನ್ಸ್‌ನ್ನು ನಾವು ಬಳಸುತ್ತಿದ್ದೇವೆ.

ಅತ್ಯಂತ ಕಡಿಮೆ ಬೆಲೆಗೆ ಇವು ಈಗ ನಮಗೆ ಲಭ್ಯವಾಗುತ್ತಿವೆ. ಆದರೆ ಇವನ್ನು ದೇಹಕ್ಕೆ ಅತ್ಯಂತ ಸಮೀಪವಾಗಿ ಇಟ್ಟುಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.

ಗಂಡಸರಾದರೆ ಇವನ್ನು ತಮ್ಮ ಪ್ಯಾಂಟ್ ಜೇಬಿನಲ್ಲಿ, ಕೆಲವು ಮಹಿಳೆಯರು ಇದನ್ನು ತಮ್ಮ ವಕ್ಷೋಜಗಳಿಗೆ ತಾಕುವಂತೆ ಇಟ್ಟುಕೊಂಡು ಹೊರಡುತ್ತಾರೆ. ಈ ರೀತಿ ಆಯಾ ಜಾಗಗಳಲ್ಲಿ ಸ್ಮಾರ್ಟ್‍ಫೋನ್ ಇಟ್ಟುಕೊಳ್ಳುವುದು ಅಪಾಯಕಾರಿ.

1.ಗಂಡಸರು ತಮ್ಮ ಪ್ಯಾಂಟ್ ಜೇಬಿನಲ್ಲಿ ಫೋನ್‌ಗಳನ್ನು ಇಟ್ಟುಕೊಂಡರೆ ಅದರಿಂದ ಬರುವ ರೇಡಿಯೇಷನ್ ಕಾರಣ ವೀರ್ಯ ಸರಿಯಾಗಿ ಉತ್ಪತ್ತಿಯಾಗಲ್ಲ. ಇದರಿಂದ ಸಂತಾನ ಭಾಗ್ಯ ಅವಕಾಶಗಳು ಕಡಿಮೆ ಇರುತ್ತವೆ.

2.ಮಹಿಳೆಯರು ತಮ್ಮ ವಕ್ಷೋಜಗಳಿಗೆ ತಾಕುವಂತೆ ಫೋನ್‌ಗಳನ್ನು ಇಟ್ಟುಕೊಂಡರೆ ಬ್ರೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದರ ಜತೆಗೆ ಬೇರೆ ಕ್ಯಾನ್ಸರ್ ಸಹ ಬರಬಹುದು.

3.ಕೆಲವರು ತಮ್ಮ ಪ್ಯಾಂಟ್ ಹಿಂದಿನ ಜೇಬಿನಲ್ಲಿ ಫೋನ್‌ಗಳನ್ನು ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ಬೆನ್ನುಮೂಳೆ, ನಿತಂಭಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ನರಗಳು ಬಲಹೀನವಾಗುವ ಸಾಧ್ಯತೆಗಳೂ ಇವೆ. ಮುಖ್ಯವಾಗಿ ಸಯಾಟಿಕ ಎಂಬ ಒಂದು ನರ ತೊಂದರೆಗೆ ಗುರಿಯಾಗುತ್ತದೆ.

4.ಜೇಬಿನಲ್ಲಿ ಫೋನ್ ಇಟ್ಟುಕೊಂಡರೆ ಅದರಿಂದ ಬಿಡುಗಡೆಯಾಗುವ ಹೀಟ್ ನಿಂದ ಒಮ್ಮೊಮ್ಮೆ ಫೋನ್ ಸ್ಪೋಟಗೊಳ್ಳುವ ಅಪಾಯ ಇರುತ್ತದೆ. ಇದರಿಂದ ನಮಗೆ ಸೆಕೆಂಡ್ ಡಿಗ್ರಿ ಸುಟ್ಟ ಗಾಯಗಳು ಆಗುವ ಸಾಧ್ಯತೆ ಇದೆ.

5.ಫೋನ್‌ಗಳಿಂದ ಬರುವ ರೇಡಿಯೇಷನ್ ಕಾರಣ ನಮ್ಮ ದೇಹದ ಮೆಟಬಾಲಿಸಮ್ ಪ್ರಕ್ರಿಯೆ ಕುಂದುತ್ತದೆ. ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ, ಮಿದುಳಿನ ಮೇಲೆ ಪ್ರಭಾವ ತೋರುತ್ತದೆ.

6.ಫೋನ್‌ನಿಂದ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆಂದು ಮೇಲೆ ತಿಳಿಸಿದೆವು ಅಲ್ಲವೇ. ಈ ಹಿನ್ನೆಲೆಯಲಿ ಹಲವರು ಫೋನ್ ಬಳಕೆದಾರರು ಡಿಪ್ರೆಷನ್‌ಗೆ ಸಹ ಒಳಗಾಗುತ್ತಾರೆ.

7.ನಿದ್ರಾಹೀನತೆ, ನಿದ್ದೆ ಸರಿಯಾಗಿ ಬಾರದಿರುವಂತಹ ಸಮಸ್ಯೆಗಳು ತಲೆಯೆತ್ತುತ್ತವೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ