ಉಪಯುಕ್ತ ಮಾಹಿತಿ

ಸದ್ಯದಲ್ಲೇ “ಗೋವು ” ಆನ್ಲೈನ್ ಮಾರುಕಟ್ಟೆ ..!ತಿಳಿಯಲು ಈ ಲೇಖನ ಓದಿ ..

257

ಹಳೆಯ ವಸ್ತುಗಳು ಇದ್ದರೆ “ಮಾರಿ ಬಿಡಿ’ ಎನ್ನುವುದು ವೆಬ್ ಸೈಟ್ ಒಂದರ ಜಾಹೀರಾತು. ಅದೇ ರೀತಿ ಗೋವುಗಳ ಮಾರಾಟಕ್ಕೆ ಪ್ರತ್ಯೇಕವಾದ ವೆಬ್ಸೈಟ್ ಇದ್ದರೆ ಹೇಗಿರುತ್ತದೆ. ಇನ್ನು ಆರು ತಿಂಗಳು ಕಾದು ಕುಳಿತರೆ ಅದೂ ಸಿದ್ಧವಾಗಿ ಬಿಡುತ್ತದೆ. ಅದೂ ಓಎಲ್‌ಎಕ್ಸ್, ಕ್ವಿಕರ್ ಮಾದರಿಯಲ್ಲಿಯೇ.

ಅಂದ ಹಾಗೆ ಈ ವೆಬ್ಸೈಟ್ ದೇಶಾದ್ಯಂತ ಅಲ್ಲ, ಬಿಜೆಪಿ ಆಡಳಿತ ಇರುವ ರಾಜಸ್ಥಾನದಲ್ಲಿ ಸರ್ಕಾರದ ವತಿಯಿಂದಲೇ ಇಂಥ ಒಂದು ವಿನೂತನ ಪ್ರಯತ್ನ ನಡೆಯಲಿದೆ. ಹಳೆಯ ವಸ್ತುಗಳು ಇದ್ದರೆ “ಮಾರಿ ಬಿಡಿ’ ಎನ್ನುವುದು ವೆಬ್ ಸೈಟ್ ಒಂದರ ಜಾಹೀರಾತು. ಅದೇ ರೀತಿ ಗೋವುಗಳ ಮಾರಾಟಕ್ಕೆ ಪ್ರತ್ಯೇಕ.

ಗೋವುಗಳ ಮಾರಾಟ ಆನ್ ಲೈನ್:-

ಕರ್ನಾಟಕ, ರಾಜಸ್ಥಾನ ಸೇರಿದಂತೆ ಗೋವುಗಳ ಮಾರಾಟ ತಡೆಯಲು ಗೋರಕ್ಷಕರೆಂಬ ಗುಂಪು ದಾಂಧಲೆ ನಡೆಸುವುದನ್ನು ತಪ್ಪಿಸಲೂ ಈ ವೆಬ್ಸೈಟ್ ನೆರವಾಗುತ್ತದೆ ಎನ್ನುವುದು ಸಿಎಂ ವಸುಂಧರಾ ರಾಜೇ ಸರ್ಕಾರದ ವಿಶ್ವಾಸ. ಓಎಲ್‌ಎಕ್ಸ್, ಕ್ವಿಕರ್ನಲ್ಲಿ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಫೋನ್ನ ಉತ್ಪಾದಕರ ವಿವರ, ಎಷ್ಟು ವರ್ಷ ಬಳಕೆಯಾಗಿದೆ, ಅದರ ಮಾಲೀಕರಿಗೆ ಎಷ್ಟು ದುಡ್ಡು ನೀಡಬೇಕು ಎಂಬ ವಿವರಗಳು ಇರುತ್ತವೆ.

ಅದೇ ರೀತಿ ಸರ್ಕಾರ ರೂಪಿಸಲು ಮುಂದಾಗಿರುವ ವೆಬ್ಸೈಟ್ನಲ್ಲಿ ದನದ ಫೋಟೋ, ಮಾಲೀಕ, ದೂರವಾಣಿ ಸಂಖ್ಯೆ, ಎಷ್ಟು ಲೀಟರ್ ಹಾಲು ನೀಡುತ್ತದೆ, ಮೊದಲನೇ ಕರು, ಎರಡನೇ ಕರು, ಸಿಗಬೇಕಾಗಿರುವ ದುಡ್ಡು ಇತ್ಯಾದಿ ಮಾಹಿತಿಗಳು ಇರುತ್ತವೆ. ಹೊಸ ಆಲೋಚನೆ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಸ್ಥಾನದ ಗೋ ಕಲ್ಯಾಣ ಸಚಿವ ಒತರಾಮ್ ದೇವರ್ಶಿ “ಇಂಥ ಕ್ರಮದ ಮೂಲಕ ರೈತರ ಆದಾಯ ಹೆಚ್ಚಿಸಲಾಗುತ್ತದೆ. ಜತೆಗೆ ಯಾವುದೇ ಒಂದು ದನ ಬಿಟ್ಟು ಹೋದಂತೆ ಆಗುವುದಿಲ್ಲ.

ಉಪಯೋಗಗಳು:-

ಮಧ್ಯವರ್ತಿಗಳ ಕಾಟ ಇಲ್ಲದೆಯೇ ದನಗಳನ್ನು ಮಾರಲು ಅನುಕೂಲವಾಗುತ್ತದೆ’ ಎಂದು ಹೇಳಿದ್ದಾರೆ.ಈ ಉದ್ದೇಶಕ್ಕಾಗಿ ರಾಜಸ್ಥಾನ ಸರ್ಕಾರ ರೈತ ಸಂಘಟನೆಗಳ ನೆರವು ಕೋರಿದೆ. ಇದರ ಜತೆಗೆ ಸಾಂಪ್ರದಾಯಿಕ ಗೋ ತಳಿಗಳಾದ
ಗಿರ್, ತಾರ್ಪಾರ್ಕರ್ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಬಳಿಕ ಸಾಯ್ವಾಲ್, ಕಾಂಕ್ರೆಜ್, ಮತ್ತು ಹರ್ಯಾನ್ವಿ ತಳಿ ಅಭಿವೃದ್ಧಿಯತ್ತ ಗಮನ ಹರಿಸಲು ರಾಜಸ್ಥಾನ ಸರ್ಕಾರ ಮುಂದಾಗಿದೆ.

(Staff Photos by Rob Mattson/Samuel Roberts Noble Foundation) Integrity Beef Alliance calves are auctioned during the calf sale at the OKC West Livestock Market in El Reno, Okla., Wednesday morning, December 2, 2015.

ಆ ರಾಜ್ಯದಲ್ಲಿ 2,327 ಗೋ ಶಾಲೆಗಳಿದ್ದು, 6,60,000 ಗೋವುಗಳಿವೆ. 2012ರಲ್ಲಿ ನಡೆಸಿದ ಗಣತಿ ಪ್ರಕಾರ ರಾಜಸ್ಥಾನದಲ್ಲಿ 1.33 ಕೋಟಿ ಸಾಕು ಪ್ರಾಣಿಗಳಿವೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಗೋ ರಕ್ಷಣೆಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿವೆ. ಕಳೆದ ತಿಂಗಳು ರಾಜಸ್ಥಾನದ ಗೋ ಕಲ್ಯಾಣ ಸಚಿವಾಲಯ 5,50,000 ಗೋವುಗಳಿಗೆ ವಿಶೇಷ ಗುರುತಿನ ಚೀಟಿ ನೀಡಿ, ಗೋವುಗಳಿಗೆ ಏನಾದರೂ ಸಮಸ್ಯೆ ಉಂಟಾದರೆ ಅದಕ್ಕೆ ಆಯಾ ಗೋ ಶಾಲೆಯ ನಿರ್ವಾಹಕರೇ ಹೊಣೆ ಎಂದು ಆದೇಶಿಸಿತ್ತು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ʼಜಿಮ್ʼ ಗೆ ಹೋದವರಿಗೆ ಶಾಕಿಂಗ್‌ ಸುದ್ದಿ….ಆರೋಗ್ಯಕ್ಕೆ ತಪ್ಪಿದಲ್ಲ ಕಂಟಕ..ಇದನ್ನೊಮ್ಮೆ ಓದಿ…..!

    ಬೆಂಗಳೂರಿನಲ್ಲಿ ಜಿಮ್ ಗೆ ಬರುವವರಿಗೆ ಹಾನಿಕಾರಕ ಔಷಧ ಕೊಡುತ್ತಿದ್ದ ಜಿಮ್ ಟ್ರೈನರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಜಿಮ್ ನಲ್ಲಿ ಫಿಟ್ನೆಸ್ ಗಾಗಿ ಬರುತ್ತಿದ್ದವರಿಗೆ ದೇಹ ಹುರಿಗೊಳಿಸಲು ಮತ್ತು ತೆಳ್ಳಗಾಗಲು ಜಿಮ್ ಟ್ರೈನರ್ ನಿಷೇಧಿತ ಔಷಧ ಕೊಡುತ್ತಿದ್ದ. ನಿಷೇಧಿತ ಡ್ರಗ್ಸ್ ಗಳನ್ನು ಬೇರೆ ಕಡೆಯಿಂದ ತರಿಸಿ ಕೊಡುತ್ತಿದ್ದ. ಜಿಮ್ ಗೆ ಬರುತ್ತಿದ್ದ ಕೆಲವರಿಗೆ ಈ ನಿಷೇಧಿತ ಔಷಧ ಸೇವಿಸಿದ್ದರಿಂದ ಆರೋಗ್ಯದ ಸಮಸ್ಯೆ ಎದುರಾಗಿದೆ. ಕೆಲವರಿಗೆ ಪುರುಷತ್ವ ಕಡಿಮೆಯಾಗಿದೆ ಎನ್ನಲಾಗಿದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡವರಿಗೆ…

  • ಕಾನೂನು

    ನಿಮ್ಮ ಜಮೀನು ವ್ಯವಹಾರಕ್ಕೆ ಇದು ಕಡ್ಡಾಯವಲ್ಲ..?ಇದು ಕೇವಲ ವದಂತಿ ಎಂದ ಕೇಂದ್ರ ಸರ್ಕಾರ..!

    ಆಸ್ತಿ ವಹಿವಾಟಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

  • ಉದ್ಯೋಗ

    ರೈಲ್ವೆ ಐಸಿಎಫ್ ನೇಮಕಾತಿ 2020:

     ರೈಲ್ವೆ ಸಚಿವಾಲಯದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ತನ್ನ ವೆಬ್‌ಸೈಟ್ https://icf.indianrailways.gov.in/ ನಲ್ಲಿ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಷಿನಿಸ್ಟ್, ಪೇಂಟರ್, ವೆಲ್ಡರ್, ಎಂಎಲ್ಟಿ ರೇಡಿಯಾಲಜಿ, ಎಂಎಲ್ಟಿ ಪ್ಯಾಥಾಲಜಿ ಮತ್ತು ಪಾಸಾ ಮುಂತಾದ ವಿವಿಧ ವಹಿವಾಟುಗಳ ವಿರುದ್ಧ ಒಟ್ಟು 1000 ಖಾಲಿ ಹುದ್ದೆಗಳು ಲಭ್ಯವಿದೆ. ಅರ್ಹ ಅಭ್ಯರ್ಥಿಗಳು icf.indianrailways.gov.in ನಲ್ಲಿ ಐಸಿಎಫ್‌ನ ಅಧಿಕೃತ ಸೈಟ್ ಮೂಲಕ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ರೆಂಟಿಸ್ ಆಕ್ಟ್- 1961 ರ ಅಡಿಯಲ್ಲಿ ತರಬೇತಿ…

  • ಗ್ಯಾಜೆಟ್

    ನಿಮ್ಮ ಮೊಬೈಲ್’ನಲ್ಲೇ ಆಧಾರ್ ಲಿಂಕ್ ಮಾಡಿ..!ಈ ಲೇಖನ ಓದಿ…

    ನಕಲಿ ಸಿಮ್ ಕಾರ್ಡ್ ಬಳಸಿ ಕೆಲವರು ಪಾತಕ ಕೃತ್ಯಗಳನ್ನು ನಡೆಸುತ್ತಿರುವುದು ಅಗಾಗ ವರದಿಯಾಗುತ್ತಲೇ ಇದೆ. ಮೊಬೈಲ್ ಸಿಮ್ ಕಾರ್ಡ್ ಗಳ ದುರ್ಬಳಕೆ ತಪ್ಪಿಸಲು ಆಧಾರ್ ಲಿಂಕ್ ಮಾಡುವುದನ್ನು ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ.

  • ಸುದ್ದಿ

    ಅಪಘಾತದಲ್ಲಿ ಮೃತಪಟ್ಟವರು ದೆವ್ವಗಳಾಗುತ್ತಾರಾ ಎನ್ನುವುದಕ್ಕೆ ಇಲ್ಲಿದೆ ನೋಡಿ ಉತ್ತರ,.!ನೋಡಿದ್ರೆ ಬೆಚ್ಚಿ ಬೀಳ್ತಿರಾ,..!!

    ಮಂಡ್ಯ: ಗುತ್ತಲು ರಸ್ತೆಯಲ್ಲಿ 2018ರ ಅ.2ರ ಸಂಜೆ ಸಂಭವಿಸಿದ್ದ ಲಾರಿ ಅಪಘಾತದಲ್ಲಿ ಮೃತಪಟ್ಟವರು ದೆವ್ವಗಳಾಗಿದ್ದಾರೆ. ಆ ದೆವ್ವಗಳ ಚಿತ್ರಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂಬ ಚಿತ್ರಸಹಿತ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿವೆ. ಇತ್ತೀಚೆಗೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಬಳಿ ಬಿಳಿ ಬಟ್ಟೆ ತೊಟ್ಟಿದ್ದ ಮಹಿಳೆಯಂತೆ ನಿಂತು ಡ್ರಾಪ್ ಕೇಳುವ ವಿಡಿಯೋ ವೈರಲ್ ಆಗಿ. ಅದು ದೆವ್ವವೇ ಇರಬೇಕು ಎಂಬ ಚರ್ಚೆಗಳು ನಡೆದಿದ್ದವು. ಅದರ ಬೆನ್ನಲ್ಲೇ ನಗರದ ಗುತ್ತಲು ರಸ್ತೆ ಬದಿಯಲ್ಲಿ ಮತ್ತು ಬೇಕರಿಯೊಂದರ ಪಕ್ಕ ದೆವ್ವಗಳು…

  • ಸುದ್ದಿ

    ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರೂ ಸಹ ನೀಡಬೇಕಂತೆ ಸಚಿವ ಸ್ಥಾನ..!ಏಕೆ ಗೊತ್ತಾ..?

    ರಾಜ್ಯದಲ್ಲಿ ಚುನಾವಣೆ ಕಾವು ಮುಗಿದಿದೆ. ಆದ್ರೆ ಮೇ 23ರ ಫಲಿತಾಂಶದ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಉಸಿರು ಬಿಗಿ ಹಿಡಿದು ಕಾಯುತ್ತಿವೆ. ಅದ್ರಲ್ಲೂ ಈ ಬಾರಿ ಹೈವೋಲ್ಟೇಜ್‍ ಕ್ಷೇತ್ರವಾಗಿದ್ದ ಮಂಡ್ಯದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್‍ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಜೆಡಿಎಸ್‍ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಒಂದು ವೇಳೆ ಚುನಾವಣೆ ಫಲಿತಾಂಶ ಜೆಡಿಎಸ್‍ಗೆ ವ್ಯತಿರಿಕ್ತವಾಗಿ ಬಂದ್ರೆ ನಿಖಿಲ್‍ ಅವರನ್ನು ಸಚಿವರನ್ನಾಗಿ ಮಾಡಲೇಬೇಕು ಎಂಬ ಒತ್ತಾಯ ಕೇಳಿ ಬಂದಿದೆ….