ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮನೆ ಮನೆಗೆ ತೆರಳಿ ಪೊಲಿಯೋ ಡ್ರಾಪ್ಸ್ ನೀಡುವ ಕಾರ್ಯಕ್ರಮದ ಭಾಗವಾಗಿ ಅಂಗನವಾಡಿ ಕಾರ್ಯಕರ್ತೆಯರು ಒಂದೂವರೆ ವರ್ಷ ಪ್ರಾಯದ ಬಾಲಕನಿಗೆ ಪೊಲೀಯೋ ಡ್ರಾಪ್ಸ್ ನೀಡಿದ ಅರ್ಧ ತಾಸಿನೊಳಗೆ ಆತನ ಬಾಯಲ್ಲಿ ನೊರೆ ಹೊರಬರಲು ಆರಂಭವಾಯಿತು. ಒಡನೆಯೇ ಬಾಲಕನನ್ನು ಕೃಷ್ಣ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಷ್ಟರೊಳಗಾಗಿಯೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು.

ಬಾಲಕನ ಮನೆಯವರು ಮೂಲತಃ ಆಗ್ರಾದವರು. ಅವರು ತಮ್ಮ ಬಂಧುಗಳನ್ನು ಕಾಣಲು ಫೌಜಿ ಮೊಹಲ್ಲಾಗೆ ಬಂದಿದ್ದರು. ನತದೃಷ್ಟ ಬಾಲಕನು ಮನೆಯಲ್ಲಿ ಮಲಗಿದ್ದಾಗ ಆತನನ್ನು ಎಬ್ಬಿಸಿ ಆತನಿಗೆ ಆಶಾ ಕಾರ್ಯಕರ್ತೆಯರು ಪೊಲೀಯೋ ಡ್ರಾಪ್ಸ್ ನೀಡಿದರು ಎಂದು ವರದಿಗಳು ತಿಳಿಸಿವೆ.
ಜಿಲ್ಲಾ ಪೊಲೀಯೋ ಅಭಿಯಾನದ ಅಧಿಕಾರಿಯಾಗಿರುವ ಡಾ. ಜಸ್ಬೀರ್ ಸಿಂಗ್ ಈ ಬಗ್ಗೆ ಹೇಳಿರುವುದು ಇಷ್ಟು :
ನಾವು ಐದು ದಿನಗಳ ಈ ಪೋಲಿಯೋ ನಿರ್ಮೂಲನ ಅಭಿಯಾನದಲ್ಲಿ 3.75 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಹಾಕಿದ್ದೇವೆ; ಆದರೆ ಯಾವುದೇ ಮಗುವಿಗೆ ಯಾವುದೇ ರೀತಿಯ ಅನಾರೋಗ್ಯ, ತೊಂದರೆ ಕಾಣಿಸಿದ್ದಿಲ್ಲ. ಈ ಪ್ರಕರಣದಲ್ಲಿ ಬಾಲಕನ ಸಾವಿಗೆ ಬೇರೇನೋ ಕಾರಣ ಇರಬೇಕು.

ಪೋಲಿಯೋ ಡ್ರಾಪ್ಸ್ ಹಾಕಿದ ಅರೆ ತಾಸಿನೊಳಗೆ ಬಾಲಕನು ಸತ್ತಿರುವುದು ಏನೋ ಕಾಕತಾಳೀಯವಾಗಿರಬೇಕು. ವೈದ್ಯರ ತಂಡವು ಮೃತ ಬಾಲಕನ ಮರಣೋತ್ತರ ಪರೀಕ್ಷೆಯನ್ನು ನಡೆಸಲಿದ್ದಾರೆ ಮತ್ತು ಆವರ ವರದಿಯಿಂದ ಬಾಲಕನ ಸಾವಿನ ನಿಜವಾದ ಕಾರಣವೇನು ಎಂಬುದು ಗೊತ್ತಾಗಲಿದೆ.

“ಬಾಲಕನ ಸಾವಿಗೂ ಪೋಲಿಯೋ ಡ್ರಾಪ್ಸ್ ಗೂ ಯಾವುದೇ ಸಂಬಂಧವಿಲ್ಲ; 1995ರಿಂದಲೂ ನಾವು ಈ ಅಭಿಯಾನವನ್ನು ಯಾವುದೇ ಚ್ಯುತಿ, ಹುಳಕು, ವ್ಯತಿರಿಕ್ತ ಪರಿಣಾಮವಿಲ್ಲದೇ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಡಾ. ಜಸ್ಬೀರ್ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತ ಹಲವಾರು ದೇವರು ಧರ್ಮಗಳ ನೆಲಬೀಡು. ಆಂಗ್ಲರ ಕಾಲದಿಂದಲೂ ದೇವಾಸ್ಥಾನ ಮಂದಿರಗಳ ಮೇಲೆ ದಾಳಿಗಳು ನಡೆದಿವೆ. ಹಾಗೂ ನಮ್ಮಲ್ಲಿನ ವಿವಿದ ರೀತಿಯ ಆಚರಣೆಗಳು, ಮತ್ತು ಸಂಪ್ರದಾಯಗಳ ಮೇಲೆ ಪರಕೀಯರ ದಾಳಿಯಾಗಿದೆ.ಆದ್ರೆ ಏನೇ ಆಗಿದ್ದರೂ ಭಾರತ ತನ್ನ ಅನಾದಿಕಾಲದಿಂದ ಬಂದ ಸಂಸ್ಕೃತಿಯನ್ನು ಉಳಿಸುಕೊಂಡು ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.ರಾಜಸ್ಥಾನದ ತನೋಟ್ ಮಾತಾ ದೇವಾಲಯ ಇಂತಹ ಅಚ್ಚರಿಗಳ ಸಾಲಿಗೆ ಸೇರುವ ದೇವಾಲಯವಾಗಿದೆ.
ಜೆಡಿಎಸ್ ನ ರೆಬೆಲ್ ಶಾಸಕರಲ್ಲಿ ಗುರುತಿಸಿಕೊಂಡಿರುವ ಮಾಗಡಿ ಶಾಸಕ ಬಾಲಕೃಷ್ಣ ರವರು ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನ ಕಾಲದಲ್ಲಿ ಸಂಜೆಯ ಹೊತ್ತು ಶುಭಂ ಕರೋತಿ ಎನ್ನುವ ಸಂಜೆಯ ಪ್ರಾರ್ಥನೆಯನ್ನ ಮಾಡ್ತಿದ್ರು, ಆದ್ರೆ ಈಗಿನ ಮಕ್ಕಳಿಗೆ ಸಂಜೆಯ ಹೊತ್ತು ಟಿ.ವಿ . ನೋಡುವುದಕ್ಕೆ ಸಮಯವಿರುವುದಿಲ್ಲ. ಎಲ್ಲೋ ಹಿಂದೂಗಳು ನಮ್ಮ ಹಿಂದೂ ಸಂಸ್ಕೃತಿ ಇಂದ ಆಚಾರ ಧರ್ಮಗಳಿಂದ ದೂರ ಸರಿಯುತ್ತಿದೇವೆ ಎನ್ನಿಸುತ್ತಿದೆ. ಆಚಾರಧರ್ಮಗಳನ್ನ ಪಾಲಿಸುವುದೇ ಆಧ್ಯತ್ಮೀಕತೆಗೆ ಅಡಿಪಾಯವಾಗಿದೆ. ಸಂಧ್ಯಾ ಕಾಲ ವೆಂದರೆ ಸೂರ್ಯೋದಯಕ್ಕೂ ಮೊದಲು, ಸೂರ್ಯಾಸ್ತದ ನಂತರ ೪೮ ನಿಮಿಷಗಳ ಸಮಯವನ್ನು ಸಂಧಿಕಾಲವೆಂದು ಅಥವಾ ಪರ್ವಕಾಲವೆಂದು ಕರೆಯಲಾಗುತ್ತದೆ.ಸಂಧ್ಯಾ ಕಾಲ / ಸಂಜೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ಉಚಿತ…
ಬೆಂಗಳೂರು: ನಮ್ಮ ಮೆಟ್ರೋ ಯೋಜನೆಗೆ ಈಗ ಕಾರ್ಪೊರೇಟ್ ಕಂಪನಿಗಳಿಂದ ಭಾರೀ ಆರ್ಥಿಕ ಬಲ ದೊರೆಯುತ್ತಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ನೆರವು ಹರಿದುಬರುತ್ತಿದ್ದು, ಇದು ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಮೇಲೆ ಇರುವ ಆರ್ಥಿಕ ಹೊರೆ ಕಡಿಮೆ ಮಾಡಲು ಪ್ರಮುಖ ಪಾತ್ರವಹಿಸುತ್ತಿದೆ. ಪ್ರಮುಖ ಅಂಶಗಳು (ಸುದ್ದಿಯ ಸಾರಾಂಶ) ಕಾರ್ಪೊರೇಟ್ ಕಂಪನಿಗಳಿಂದ ಸಾವಿರಾರು ಕೋಟಿ ರೂ. CSR ನೆರವು ನಿಲ್ದಾಣ ನಿರ್ಮಾಣ, ಸ್ಕೈವಾಕ್, ಹೆಸರಿನ ಹಕ್ಕು (naming rights)…
ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ನಮ್ಮ ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮಗಳಾಗಿವೆ. ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು. ಬನ್ನಿ, ಈ ಸ್ಥಿತಿ ಎದುರಾದರೆ ಯಾವ ಪರಿಹಾರ ಪಡೆಯಬಹುದು ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು…
ಅಮರಶಿಲ್ಪಿ ರವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ,ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ.