ಉಪಯುಕ್ತ ಮಾಹಿತಿ, ತಂತ್ರಜ್ಞಾನ

ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟದ ಸೀಟುಗಳಿಗೆ ಸಿಇಟಿ ನೋಂದಣಿ ಇನ್ನುಮುಂದೆ ಮೊಬೈಲ್ ನಲ್ಲೇ ಮಾಡಬಹುದಾಗಿದೆ .. !

148

ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟದ ಸೀಟುಗಳಿಗೆ ಆನ್‌ಲೈನ್‌ ನೋಂದಣಿ, ಆಪ್ಶನ್‌ ಎಂಟ್ರಿ, ಶುಲ್ಕಪಾವತಿ ಮಾಡುವ ಅಭ್ಯರ್ಥಿಗಳು ಮುಂದಿನ ಸಾಲಿನಿಂದ ಸೈಬರ್‌ ಕೆಫೆ ಸೇರಿದಂತೆ ಕಂಪ್ಯೂಟರ್‌ ಮೊರೆ ಹೋಗುವ ಅಗತ್ಯವಿಲ್ಲ. ಇದನ್ನೆಲ್ಲಾ ಬೆರಳ ತುದಿಯಲ್ಲೇ ಮಾಡಿ ಮುಗಿಸಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಸಿಇಟಿ ವ್ಯವಸ್ಥೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿಸಲು ಬೇಕಾದ ಸಾಫ್ಟ್ವೇರ್‌ ತಯಾರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. 2018ರ ಏಪ್ರಿಲ್‌ನಲ್ಲಿ ಸಿಇಟಿ ನಡೆಯಲಿದ್ದು, ಇದಾದ ನಂತರದ ಎಲ್ಲಾ ಪ್ರಕ್ರಿಯೆಯನ್ನ ವಿದ್ಯಾರ್ಥಿಗಳು ಮೊಬೈಲ್‌ ಮೂಲಕವೇ ಮಾಡಬಹುದಾಗಿದೆ.


ಎಂಜಿನಿಯರಿಂಗ್‌, ಭಾರತೀಯ ವೈದ್ಯ ಪದ್ಧತಿಯ ಕೋರ್ಸ್‌ಗೆ ಪ್ರತಿ ವರ್ಷ ಸಿಇಟಿ ಫ‌ಲಿತಾಂಶದ ನಂತರ ತೇರ್ಗಡೆಯಾದ ವಿದ್ಯಾರ್ಥಿಗಳ ನೋಂದಣಿ, ದಾಖಲೆ ಪರಿಶೀಲನೆ, ಆಪ್ಶನ್‌ ಎಂಟ್ರಿ, ಎಂಟ್ರಿ ತಿದ್ದುಪಡಿ, ಸೀಟು ಹಂಚಿಕೆ, ಶುಲ್ಕ ಪಾವತಿ ಇತ್ಯಾದಿ ಪ್ರಕ್ರಿಯೆ ನಡೆಯುತ್ತದೆ.ಶುಲ್ಕಪಾವತಿಸಿದ ವಿದ್ಯಾರ್ಥಿಗಳು ಆಯಾ ಕಾಲೇಜಿನಲ್ಲಿ ದಾಖಲಾಗುತ್ತಾರೆ. 2014ರ ನಂತರ ಸಿಇಟಿ ವ್ಯವಸ್ಥೆಗೆ ಆನ್‌ಲೈನ್‌ ರೂಪ ನೀಡಲಾಯಿತು.  ಆರಂಭದಲ್ಲಿ ಕಾಲೇಜುಗಳ ಮೂಲಕವೇ ನೋಂದಣಿ ಮಾಡಿಸಿಕೊಳ್ಳಲಾಗುತಿತ್ತು. ನಂತರ ವಿದ್ಯಾರ್ಥಿಗಳಿಗೆ ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು.

ನಗರದ ಪ್ರದೇಶದ ವಿದ್ಯಾರ್ಥಿಗಳು ಇದನ್ನು ಚೆನ್ನಾಗಿ ಬಳಿಸಿಕೊಂಡಿದ್ದರು.   ಹೀಗಾಗಿಯೇ  ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ಸೈಬರ್‌ ಕೆಫೆ ಮೊರೆ ಹೋಗುತ್ತಿದ್ದರು. ತಮ್ಮ ಎಲ್ಲಾ ದಾಖಲೆಗಳನ್ನು ಸೈಬರ್‌ ಕೆಫೆಯವರಿಗೆ ನೀಡಿ, ಅವರಿಂದಲೇ ಭರ್ತಿ ಮಾಡಿಸುತ್ತಿದ್ದರು. ಇದರಿಂದ ಹತ್ತಾರು ಅನಾಹುತ ಆಗಿರುವ ನಿದರ್ಶನವೂ ಪ್ರಾಧಿಕಾರದ ಮುಂದಿದೆ.  ಇದನ್ನೆಲ್ಲ ಅರಿತ ಪ್ರಾಧಿಕಾರದ ಅಧಿಕಾರಿಗಳು, ಮುಂದಿನ ವರ್ಷದಿಂದ ಸಿಇಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಿಸಿ, ವಿದ್ಯಾರ್ಥಿ ಸ್ನೇಹಿಯಾಗಿಸಲು ಕ್ರಮ ತೆಗೆದುಕೊಂಡಿದ್ದಾರೆ.

ಸಾಫ್ಟ್ವೇರ್‌ ಬದಲಾವಣೆ:-
ಸಿಇಟಿ ಸಾಫ್ಟ್ವೇರ್‌ ಬದಲಾಯಿಸುವ ಕಾರ್ಯ ಆರಂಭವಾಗಿದೆ. ಕೆಇಎ ಕಾರ್ಯನಿರ್ವಹಕ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕೂಡ ನಡೆದಿದೆ.

ಹೊಸ ಸಾಫ್ಟ್ವೇರ ರಚನೆಯ ಜವಾಬ್ದಾರಿಯನ್ನು ಎನ್‌ಐಸಿಗೆ ವಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾಹಿತಿ ಸುಲಭದಲ್ಲಿ ಸಿಗುವು ಮತ್ತು ಅತ್ಯಂತ ಸರಳ ವಿಧಾನದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬಹುದಾಗಿದೆ .

ಮೊಬೈಲ್‌ ಲಿಂಕ್‌ ಮಾಡಲಾಗುತ್ತಿದೆ:-
ಹೊಸ ಸಾಫ್ಟ್ವೇರ್‌ಗೆ ಮೊಬೈಲ್‌ ಲಿಂಕ್‌ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಿಇಟಿಯ ಎಲ್ಲಾ ಪ್ರಕ್ರಿಯೆಯನ್ನು ತಮ್ಮಲ್ಲಿರುವ ಮೊಬೈಲ್‌ ಮೂಲಕವೇ ಪೂರೈಸಬಹುದು. ವೃತ್ತಿಪರ ಕೋರ್ಸ್‌ಗಳ ಆನ್‌ಲೈನ್‌ ನೋಂದಣಿ, ಆಪ್ಶನ್‌ ಎಂಟ್ರಿ, ಅರ್ಜಿ ತಿದ್ದುಪಡಿ, ಶುಲ್ಕ ಪಾವತಿ ಕೂಡ ಮೊಬೈಲ್‌ನಲ್ಲೇ ಮಾಡಬಹುದು ಮತ್ತು  ಸೀಟು ಹಂಚಿಕೆಯ ಫ‌ಲಿತಾಂಶವನ್ನು ಮೊಬೈಲ್‌ ಮೂಲಕವೇ ತಿಳಿದುಕೊಳ್ಳಬಹುದು.

ಲಾಗಿನ್‌ ಐಡಿಯಲ್ಲೂ ಕೆಲವೊಂದು ಬದಲಾವಣೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಲ್ಲಿ ಅಥವಾ ಅವರ ಪಾಲಕ, ಪೋಷಕರಲ್ಲಿ ಮೊಬೈಲ್‌ ಫೋನ್‌ ಇರುವುದರಿಂದ ಸಿಇಟಿ ಪ್ರಕ್ರಿಯೆ ಮುಂದಿನ ವರ್ಷದಿಂದ ಸುಲಭವಾಗಲಿದೆ. ಸರ್ವರ್‌ ಸಮಸ್ಯೆ ಬಾರದ ರೀತಿಯಲ್ಲಿ ಸಾಫ್ಟ್ವೇರ್‌ಗೆ ಮೊಬೈಲ್‌ ಲಿಂಕ್‌ ಮಾಡುತ್ತಿದ್ದಾರೆ.

ಹೊಸ ಅಭ್ಯರ್ಥಿಗಳು :-
ಸಿಇಟಿಗೆ ಪ್ರತಿ ವರ್ಷ ಹೊಸ ಅಭ್ಯರ್ಥಿಗಳು ಬರುವುದರಿಂದ ಯಾವುದೇ ರೀತಿಯ ಸುಧಾರಣೆ ತಂದರೂ, ಒಂದಲ್ಲೊಂದು ತಪ್ಪು ನಡೆಯುತ್ತಲೇ ಇರುತ್ತದೆ. ವಿದ್ಯಾರ್ಥಿಗಳು ಸಿಇಟಿ ಪ್ರಕ್ರಿಯೆಯಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬುದರ ಬಗ್ಗೆ ಪ್ರತಿ ವರ್ಷ ಪ್ರಾಧಿಕಾರದಿಂದಲೇ ಕಾಲೇಜುಗಳಲ್ಲಿ ಮತ್ತು ಪ್ರಾಧಿಕಾರದ ಕಚೇರಿಯಲ್ಲಿ ಒರಿಯಂಟೇಷನ್‌ ಕಾರ್ಯಕ್ರಮ ನಡೆಸಲಾಗುತ್ತದೆ.

ಮಾರ್ಗಸೂಚಿ, ವೇಳಾಪಟ್ಟಿ ಹೊಂದಿರುವ ಬೊÅಷರ್‌ ಕೂಡ ನೀಡಲಾಗುತ್ತದೆ.ಹೀಗಾಗಿ ವಿದ್ಯಾರ್ಥಿಗಳು ಪಾಲಕರ ಜತೆ ಕುಳಿತು ಮೊಬೈಲ್‌ನಲ್ಲಿ ಸಾವಕಾಶದಿಂದ ಎಲ್ಲಾ ಪ್ರಕ್ರಿಯೆ ಮುಗಿಸಲು ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಸರ್ಕಾರಿ ಯೋಜನೆಗಳು

    ಇಂದಿರಾ ಕ್ಯಾಂಟೀನ್ ಆಯ್ತು. ಈಗ “ಇಂದಿರಾ ಕ್ಲಿನಿಕ್” ಶುರು!ಇಲ್ಲಿ ಏನೆಲ್ಲಾ ಉಚಿತ ಸೇವೆ ಸಿಗಲಿದೆ ಗೂತ್ತಾ..?

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು, ಇಂದು ಜನಸಾಮಾನ್ಯರನ್ನು ಆಕರ್ಷಿಸುತ್ತಿವೆ. ಇಂದಿರಾ ಕ್ಯಾಂಟೀನ್ ಪ್ರಸಿದ್ದಿಯ ಬಳಿಕ, ಗಾರ್ಮೆಂಟ್ಸ್ ಮಹಿಳೆಯರಿಗೆ, ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಇಂದಿರಾ ಪಾಸ್ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಘೋಷಿಸಿದ್ದರು. ಈ ಬಳಿಕ ಇದೀಗ, ಇಂದಿರಾ ಕ್ಲಿನಿಕ್ ಆರಂಭಗೊಂಡಿದೆ. ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ, ಇಂದಿನಿಂದ ರಾಜ್ಯದ ರಾಜಧಾನಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿವೆ.

  • Archive

    RRR ಚಲನಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಇತಿಹಾಸ ಸೃಷ್ಟಿಸಿದ RRR  ಚಿತ್ರ ದಕ್ಷಿಣ ಭಾರತ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್​ ಹಾಡುಗಳು ರೇಸ್​​ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕರ‍್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ…

  • ಸುದ್ದಿ

    ಪ್ರಧಾನಿ ನರೇಂದ್ರ ಮೋದಿಗೋಸ್ಕರ ಸಮೋಸ, ಮಾವಿನ ಚಟ್ನಿ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ.

    ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ದಿನೇ ದಿನೇ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಈಗ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪ್ರಧಾನಿ ನರೇಂದ್ರ ಮೋದಿಗಾಗಿ ಸಮೋಸ ಮತ್ತು ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿದ್ದಾರೆ. ಜೂನ್‌ 4ರಂದು ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಮಾರಿಸನ್‌ ಉತ್ಸುಕರಾಗಿದ್ದಾರೆ. ಜೂನ್‌ 4ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಉತ್ಸುಕರಾಗಿರಾಗುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, ಪ್ರಧಾನಿ ಮೋದಿಗಾಗಿ ಸಮೋಸ ಮತ್ತು ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ….

  • ಸುದ್ದಿ

    ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ….

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಶ್ರೀಗಳನ್ನೂ ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ…

  • ಸರ್ಕಾರದ ಯೋಜನೆಗಳು

    ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ :ಹೊಸ ಕಾರು ಭಾಗ್ಯ ಯೋಜನೆ ..!ತಿಳಿಯಲು ಈ ಲೇಖನ ಓದಿ ..

    ರಾಜ್ಯ ಸರ್ಕಾರ 3500 ಮಂದಿ ಪರಿಶಿಷ್ಟ ಜಾತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.