ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೇ ಒಂದು ದಿನ ಸ್ನಾನ ಮಾಡದಿದ್ದರೂ ಕೆಟ್ಟ ವಾಸನೆ ಬರುತ್ತದೆ. ಇನ್ನು 60 ವರ್ಷಗಳು ಎಂದರೆ ಹೇಗಿರುತ್ತದೆ!? ಇಷ್ಟಕ್ಕೂ ಅಷ್ಟು ವರ್ಷಗಳ ಕಾಲ ಸ್ನಾನ ಮಾಡದೆ ಯಾರಾದರೂ ಇರುತ್ತಾರಾ…? ನಿಜವಾಗಿಯೂ ಅಂತಹವರು ಇದ್ದರೆ ಅವರ ಬಳಿ ಹೋಗಬೇಕೆಂದರೇನೇ ಸಾಹಸ ಮಾಡಬೇಕು.

ಯಾಕೆಂದರೆ ಕೋಟ್ಯಂತರ ಬ್ಯಾಕ್ಟೀರಿಯಾ ಆ ವ್ಯಕ್ತಿಯ ಸುತ್ತಲೂ ಇರುತ್ತವೆ. ಇದರಿಂದ ಆ ವಾತಾವರಣದಲ್ಲಿ ಇರುವ ಗಾಳಿ ಉಸಿರಾಡಿದರೂ ಸಾಕು, ರೋಗಗಳು ಬರುತ್ತವೆ. ಆದರೂ…ಅಷ್ಟೆಲ್ಲಾ ವರ್ಷಗಳ ಕಾಲ ಸ್ನಾನ ಮಾಡದ ವ್ಯಕ್ತಿ ಇದ್ದಾರಾ..? ಹೌದು. ಆದರೆ ನಮ್ಮ ದೇಶದಲ್ಲಿ ಅಲ್ಲ . ಇರಾನ್ನಲ್ಲಿ.

ಆತನ ಹೆಸರು ಅಮೌ ಹಾಜಿ. ಇರುವುದು ಇರಾನ್ನಲ್ಲಿ. ಬಹಳ ನಿರ್ಜನ ಪ್ರದೇಶದಲ್ಲಿ ಒಬ್ಬನೇ ಗುಹೆಯಲ್ಲಿ ಇರುತ್ತಾನೆ. ಈತ ಕಳೆದ 60 ವರ್ಷಗಳಿಂದ ಸ್ನಾನ ಮಾಡಲಿಲ್ಲವಂತೆ. ಇದರಿಂದಾಗಿ ದೇಹವೆಲ್ಲಾ ಸುಟ್ಟ ಇದ್ದಲಿನಂತಿರುತ್ತದೆ. ಧೂಳಿನಿಂದ ಕೂಡಿರುತ್ತಾನೆ. ತಲೆಕೂದಲು ಗಟ್ಟಿಯಾಗಿ ಅಂಟಿಕೊಂಡಿರುತ್ತದೆ.

ಆದರೆ ಈತ ಏನು ತಿನ್ನುತ್ತಾನೋ ಏನು ತಿನ್ನಲ್ಲವೋ ಗೊತ್ತಿಲ್ಲ. ಆದರೂ ಧೂಮಪಾನವನ್ನಂತೂ ಮಾಡುತ್ತಾನೆ. ಅದೂ ಸಹ ಪ್ರಾಣಿಗಳ ಮಲವನ್ನು ಒಣಗಿಸಿ ಪುಡಿ ಮಾಡಿ ಅದನ್ನು ಪೈಪ್ನಲ್ಲಿ ಹಾಕಿಕೊಂಡು ಹೊಗೆ ಸೇದುತ್ತಾನೆ.

ಸುತ್ತಲೂ ನಿರ್ಜನ ಪ್ರದೇಶ. ಒಬ್ಬನೇ ಇರುತ್ತಾನೆ. ಒಂದು ಚಿಕ್ಕ ಗುಹೆಯಲ್ಲಿ ವಾಸ. ಅದರಲ್ಲಿ ಬೋರ್ ಆದರೆ ಹೊರಗೆ ಬರುತ್ತಾನೆ. ಆಗಾಗ ಆ ದಾರಿಯಲ್ಲಿ ಜನ ಹೋಗುತ್ತಾರೆ. ಆದರೂ ಆತ ಯಾರು, ಹಾಗೇಕಿದ್ದಾನೆ ಎಂದು ಯಾರೂ ತಲೆಕೆಡಿಸಿಕೊಳ್ಳಲ್ಲ.

ಇತ್ತೀಚೆಗೆ ಯಾರೋ ಈತನ ಫೋಟೋ ತೆಗೆದ ಬಳಿಕ ಆತನ ವಿವರಗಳು ಬಾಹ್ಯ ಜಗತ್ತಿಗೆ ಗೊತ್ತಾದವು. ಇದರಿಂದ ಇಷ್ಟಕ್ಕೂ ಈತ ಯಾರು..? ಎಂಬ ಬಗ್ಗೆ ಅಲ್ಲಿನವರು ಕೇಳಲು ಶುರುಮಾಡಿದರು. ಅವರಿಗೆ ಉತ್ತರ ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ .

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ. 1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು…
ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ 6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ. ರಿಜಿಸ್ಟ್ರಾರ್ ಆಫ್ ಕಂಪನೀಸ್ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ…
ಪೊಲೀಸ್ ಮಹಿಳಾ ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡಲು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗರ್ಭಿಣಿಯರಿಗೆ ಪೊಲೀಸ್ ಠಾಣೆಯಲ್ಲಿ ಸೀಮಂತ ಮಾಡಿದ್ದಾರೆ. ಪೊಲೀಸರು ಗರ್ಭಿಣಿ ಸಿಬ್ಬಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ್ದು, ಠಾಣೆಯ ಎಲ್ಲಾ ಸಿಬ್ಬಂದಿ ಸೇರಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿದ್ದಾರೆ. ಠಾಣೆಯ ಮಹಿಳಾ ಪೊಲೀಸ್ ಪೇದೆಯಾಗಿದ್ದ ಲಕ್ಷ್ಮೀ ಹಾಗೂ ಮತ್ತೊಬ್ಬ ಮಹಿಳಾ ಪೇದೆ ವೀರಮ್ಮ ಅವರಿಗೆ ಸೀಮಂತ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಕೆಲಸದ ಒತ್ತಡ, ಮಾನಸಿಕ…
ಇದು ಸೆಲ್ಫಿ ಯುಗ. ಒಂದು ಸ್ಮಾರ್ಟ್ ಫೋನ್ ಕೈ ನಲ್ಲಿದ್ದರೆ ಸಾಕು ಎಲ್ಲೆಂದ ರಲ್ಲೇ ಸೆಲ್ಫಿ ತೆಗೆದುಕೊಳ್ಳುವವರೇ ಜಾಸ್ತಿ. ಒಂದು ರೀತಿ ಸೆಲ್ಫಿ ಹುಚ್ಚರ ಸಂತೆಯಾಗಿಬಿಟ್ಟಿದೆ ಈ ದುನಿಯಾ. ಸಿಕ್ಕಿದ ಕಡೆಯೆಲ್ಲಾ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾ ತಾ ಮುಂದು ಫೋಟೋಗಳನ್ನು ಪೋಸ್ಟ್ ಮಾಡುವ ಗೀಳು ಯುವಕ ಯುವತಿಯರು ಸೇರಿದಂತೆ ವಯಸ್ಸಿನ ಅಂತರವಿಲ್ಲದಂತೆ ಎಲ್ಲಾರಲ್ಲೂ ಈ ಗೀಳು ಹೆಚ್ಚಾಗಿಬಿಟ್ಟಿದೆ. ಆದರೆ ಸೆಲ್ಫಿ ಗೀಳು ಅಂಟಿಸಿಕೊಂದವರಿಗೆ ಇಲ್ಲೊಂದು ಕಹಿ ಸುದ್ದಿ ಇದೆ… ಹೌದು,…
ಬೆಂಗಳೂರಿನ ಜನರಿಗೆ ದಿನದಿಂದ ದಿನಕ್ಕೆ ಆಪ್ತವಾಗುತ್ತಿರುವ ನಮ್ಮ ಮೆಟ್ರೋ ಇನ್ನು ಮುಂದೆ ಇನ್ನಷ್ಟು ಹತ್ತಿರವಾಗಲಿದೆ. ಡಿಸೆಂಬರ್ ವೇಳೆಗೆ ನಮ್ಮ ಮೆಟ್ರೋದಲ್ಲಿ ಮಹಿಳಾ ಬೋಗಿ ಸಹ ಆರಂಭವಾಗಲಿದೆ.
ಮೊಳಕೆ ಬಂದ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಾಗಿ ಡಯೆಟ್ ಮಾಡುವವರು ಮೊಳಕೆ ಬಂದ ಕಾಳುಗಳನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಹೆಸರು, ಕಡಲೆಯನ್ನು ಮೊಳಕೆ ಬರಿಸಿ ಸೇವಿಸುತ್ತಾರೆ.