ಸುದ್ದಿ

‘ಮೈ ಲವ್ ಲೆಟರ್ ಟು ಶ್ರೀದೇವಿ ಫ್ಯಾನ್ಸ್‌’ಈ ಲೆಟರ್’ನಲ್ಲಿ ಏನಿದೆ ಗೊತ್ತಾ..?ವರ್ಮಾ ಬಿಚ್ಚಿಟ್ಟ ಶ್ರೀದೇವಿ ನಿಜ ಜೀವನದ ರಹಸ್ಯ ಏನು.?ತಿಳಿಯಲು ಈ ಲೇಖನ ಓದಿ…

612

ಭಾರತೀಯ ಚಿತ್ರರಂಗದ ಬಹುಭಾಷಾ ನಟಿ ಶ್ರೀದೇವಿ ದುಬೈನಲ್ಲಿ ತೀರಿಕೊಂಡಾಗಿನಿಂದ,ಅವರ ಸಾವಿನ ಬಗ್ಗೆ ಮತ್ತು ಹಿಂದಿನ ಅವರ ಜೀವನದ ಬಗ್ಗೆ ಒಂದಾದ ಒಂದರಂತೆ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ.

ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ‘ಮೈ ಲವ್ ಲೆಟರ್‌ ಟು ಶ್ರೀದೇವೀಸ್ ಫ್ಯಾನ್ಸ್‌’ ಎಂಬ ಹೆಸರಿನಲ್ಲಿ,ತಮ್ಮ ಫೇಸ್‌ಬುಕ್ ವಾಲ್’ನಲ್ಲಿ ಬಹುಭಾಷಾ ನಟಿ ಶ್ರೀದೇವಿ ಬದುಕಿನ ಬಗ್ಗೆ ಕೆಲವು ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ.

ರಾಮ್ ಗೋಪಾಲ್ ವರ್ಮಾರವರು ನಟಿ ಶ್ರೀದೇವಿ ತೃಪ್ತಿ ಇಲ್ಲದ ‘ಅಸಂತೃಪ್ತ’ ಮಹಿಳೆ ಎಂದು ಬರೆದುಕೊಂಡಿದ್ದಾರೆ. ಶ್ರೀದೇವಿ ತಮ್ಮ ಬದುಕಿನಲ್ಲಿ ನಿಜಕ್ಕೂ ಸಂತೋಷವಾಗಿ ಇದ್ದಾರೆ,ಸಂತೋಷವಾಗಿ ಜೀವನ ನಡೆಸಿದ್ದರೆ ಎಂಬುದು ವರ್ಮಾರವರ ಅಭಿಪ್ರಾಯವಾಗಿದೆ.

ರಾಮ್ ಗೋಪಾಲ್ ವರ್ಮಾರವರ ಈ ಅಭಿಪ್ರಾಯಕ್ಕೆ ಕಾರಣಗಳೇನು ಗೊತ್ತಾ..?

ಭಾರತೀಯ ಚಿತ್ರರಂಗದ ಎಲ್ಲಾ ಸೂಪರ್ಸ್ಟಾರ್’ಗಳೊಂದಿಗೆ ನಟಿಸಿದ್ದ, ಅತ್ಯುದ್ಭುತವಾದ ಪ್ರತಿಭೆ ಜೊತೆಗೆ ಇಬ್ಬರು ಸುಂದರಿ ಪುತ್ರಿಯರನ್ನೊಳಗೊಂಡ ಕುಟುಂಬವಾಗಿದ್ದ ಶ್ರಿದೇವಿಗೆ ಏನೂ ಕಷ್ಟ ಇರಲಿಕ್ಕೆ ಸಾಧ್ಯ ಇಲ್ಲ ಎಂಬುದು ಅನೇಕರ ಅಭಿಪ್ರಾಯ.ಆದರೆ ಸಿನಿಮಾ ಬಿಟ್ಟು ಅವರ ರಿಯಲ್ ಜೀವನಕ್ಕೆ ಬಂದರೆ ಅವರ ಬದುಕು ಸಂತೃಪ್ತಿಯಿಂದ ಕೂಡಿರಲಿಲ್ಲ ಎನ್ನೋದನ್ನ ಎತ್ತಿ ತೋರಿಸುತ್ತೆ.

ಶ್ರೀದೇವಿ ತನ್ನ ತಂದೆಯನ್ನು ಕಳೆದುಕೊಂಡ ನಂತರ, ಬೋನಿ ಕಪೂರ್ ಜತೆಗಿನ ಅವರ ಮದುವೆ ಅವರ ಬದುಕಿಗೆ ಅಕ್ಷರಶಃ ಪಂಜರದೊಳಗಿರುವ ಹಕ್ಕಿಯಂತಾಗಿತ್ತು.ನಟಿಯರಿಗೆ ಆಗೆಲ್ಲಾ ಸಂಬಾವನೆ ಕಪ್ಪು ಹಣದ ರೂಪದಲ್ಲಿ ಸಂದಾಯವಾಗುತ್ತಿದ್ದು,ಶ್ರೀದೇವಿ ತಾವು ದುಡಿದ ಸಂಪಾದನೆಯ ಹಣವನ್ನೆಲ್ಲಾ, ತಮ್ಮ ಪರಿಚಯಸ್ತರು ಹಾಗೂ  ಬಂದು ಬಳಗದವರ ಬಳಿ ಇರಿಸಿದ್ದರು.

 

ಆದರೆ ಅವರ ತಂದೆ ತೀರಿಕೊಂಡ ನಂತರ ಹಣ ಹಿಂತಿರುಗಿಸದೇ ಅವರೆಲ್ಲಾ ಶ್ರಿದೇವಿಗೆ ಮೋಸ ಮಾಡಿದರು.ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿದ್ದ ಪತಿ ಬೋನಿ ಕಪೂರ್ ಅವರ ಕಷ್ಟಕ್ಕೆ ಹೆಗಲು ಕೊಡಲಾಗದೆ ಸುಮ್ಮನಿದ್ದರು. ಮತ್ತೊಂದು ಕಡೆ ಮಿದುಳಿನ ಶಸ್ತ್ರಚಿಕಿತ್ಸೆ ಸರಿಯಾಗದೇ ತಾಯಿ ಮಾನಸಿಕ ರೋಗಿಯಾಗಿದ್ದರು.

ಇದು ಸಾಲದೆಂಬಂತೆ ಶ್ರೀದೇವಿ ತಂಗಿ ಪಕ್ಕದ ಮನೆಯವನ ಜೊತೆ ಓಡಿ ಹೋಗಿ ವಿವಾಹವಾಗಿದ್ದರು.ಇದೆಲ್ಲಾ ಸಾಲದೆಂಬಂತೆ ಮಾನಸಿಕ ರೋಗಿಯಾಗಿರುವ ತಾಯಿಯಿಂದ ಸಹಿ ಹಾಕಿಸಿಕೊಂಡು ಆಸ್ತಿಯಲ್ಲಿ ಮೋಸ ಮಾಡಿದ್ದಾಳೆ ಎಂದು ಶ್ರೀದೇವಿ ತಂಗಿ ಶ್ರೀಲತಾ ಆರೋಪಿಸಿದ್ದು, ಇವೆಲ್ಲಾ ಅವರ ಜೀವನದ ಸಂತೋಷವನ್ನೇ ಕಿತ್ತುಕೊಂಡಿತ್ತು.

ಈಡೀ ತನ್ನ ಬದುಕಿನಲ್ಲಿ ಸಂತೋಷವನ್ನೇ ಕಾಣದ ಶ್ರೀದೇವಿ ಸಾವಿನ ನಂತರವಾದರೂ, ಶ್ರೀದೇವಿಯ ಆತ್ಮ  ಚಿರಶಾಂತಿಯಿಂದಿರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ