ಸ್ಪೂರ್ತಿ

ಮಗಳ ಜನ್ಮದಿನಕ್ಕೆ ಬೆಂಗಳೂರು ದಂಪತಿಯಿಂದ ಕ್ಯಾನ್ಸರ್ ಆಸ್ಪತ್ರೆ ಗಿಫ್ಟ್..! ತಿಳಿಯಲು ಈ ಲೇಖನ ಓದಿ..

6826

ನ್ಯೂ ಇಂಡಿಯಾ ಎ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿದ ನಟ ಇಮ್ರಾನ್ ಹಶ್ಮಿ.ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅಮೃತಾ ಟಾಟಾ ದಂಪತಿ ನ್ಯೂ ಇಂಡಿಯಾ ಎ ಚಾರಿಟೆಬಲ್ ಟ್ರಸ್ಟ್ ಗೆ 200 ಕೋಟಿ ರು ಹಣ ನೀಡಿದ್ದಾರೆ.ಬೆಂಗಳೂರಿನಲ್ಲಿ ಉಚಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕಾಗಿ ಈ ದಂಪತಿ ಹಣ ನೀಡಿದ್ದು ಬಾಲಿವುಡ್ ನಟ ಇಮ್ರಾನ್ ಹಸ್ಮಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಮ್ರಾನ್ ಹಸ್ಮಿ ಮಗಳ ಹುಟ್ಟುಹಬ್ಬದ ನಿಮಿತ್ತ ಆಸ್ಪತ್ರೆ ನಿರ್ಮಿಸಲು ಹಣ ನೀಡಲು ನಿರ್ಧರಿಸಿದ್ದರು.

 

ನೂರಾರು ಕೋಟಿ ಆಸ್ತಿ, ಒಬ್ಬಳು ರಾಜಕುಮಾರಿಯಂಥ ಮಗಳು… ಆಕೆಯ ಹುಟ್ಟುಹಬ್ಬವನ್ನು ಕೇರಿಗೆಲ್ಲ ಊಟ ಹಾಕಿಸಿ ಆಚರಿಸುವುದಕ್ಕೂ ಕೊರತೆಯಿಲ್ಲದ ಸಿರಿವಂತಿಕೆ… ಇಷ್ಟೆಲ್ಲ ಇದ್ದರೂ ಈ ದಂಪತಿ ಮಾತ್ರ ತಮ್ಮ ಮುದ್ದು ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದು ಅನುಕರಣೀಯವಾಗಿ! ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅವರ ಪತ್ನಿ ಅಮೃತಾ ಟಾಟಾ ತಮ್ಮ ಮಗಳ ಹುಟ್ಟು ಹಬ್ಬದ ಸವಿನೆನಪಿಗಾಗಿ ನ್ಯೂ ಇಂಡಿಯಾ ಎಂಬ ಹೆಸರಿನ ಎನ್ ಜಿಒ ವೊಂದನ್ನು ಆರಂಭಿಸಿ, ಆ ಮೂಲಕ 200 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ!

ಟ್ರಸ್ಟ್ ಗಾಗಿ ಈ ದಂಪತಿ 100 ಕೋಟಿ ರು. ಬೆಲೆಯ 50 ಎಕರೆ ಭೂಮಿಯನ್ನು ಟ್ರಸ್ಟ್ ಗೆ ನೀಡಿದ್ದು, 100 ಕೋಟಿ ರು ಹಣವನ್ನು ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಕೇರ್ ಆಸ್ಪತ್ರೆ ನಿರ್ಮಾಣಕ್ಕೆ ನೀಡಲಾಗುವುದು, ದೇಶಾದ್ಯಂತ ಎಲ್ಲಾ ಕ್ಯಾನ್ಸರ್ ರೋಗಿಗಳು ಬಂದು ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ, ಈ ಆಸ್ಪತ್ರೆಯಲ್ಲಿ 150 ಹಾಸಿಗೆಗಳಿರುತ್ತವೆ. ವಿವಿಧ ಹಂತಗಳಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದ್ದು, ಯುಕೆ ಮೂಲದ ಆರ್ಕಿಟೆಕ್ಟ್ ಮತ್ತು ಎಂಜಿನೀಯರ್ ಗಳು ಈ ಕಟ್ಟಡ ನಿರ್ಮಾಣ ಮಾಡಲಿದ್ದಾರೆ.

ಬಡವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ:-

ಬಡ ಮತ್ತು ಅಶಕ್ತರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶ ಈ ಆಸ್ಪತ್ರೆಯದು. ಇದು ಭಾರತದ ಮೊಟ್ಟಮೊದಲ ಕ್ಯಾಶ್ ಲೆಸ್ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆಯಲಿದೆ. ಈ ಆಸ್ಪತ್ರೆಗೆ ಟಾಟಾ ದಂಪತಿಯೇ ಸ್ವ ಇಚ್ಛೆಯಿಂದ ಹಣ ಹಾಕುತ್ತಿದ್ದು, ಬೇರೆ ಯಾರಿಂದಲೂ ದೇಣಿಗೆ ಪಡೆದಿಲ್ಲ. ಕಿಮೋಥೆರಪಿಯ ಒಂದು ಸಿಟ್ಟಿಂಗ್ ಗೆ ಸುಮಾರು 90,000 ರೂ. ವೆಚ್ಚವಾಗುತ್ತದೆ.

ಇದನ್ನು ಭರಿಸುವುದಕ್ಕೆ ಯಾವ ಬಡವರಿಗೆ ಸಾಧ್ಯ? ಅದಕ್ಕೆಂದೇ ಉಚಿತ ಚಿಕಿತ್ಸೆ ನೀಡುವ ಮಹೋನ್ನತ ಕಾರ್ಯಕ್ಕೆ ಈ ದಂಪತಿ ಕೈಹಾಕಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಮಾರ್ಚ್ 4 ಮಹಾಶಿವರಾತ್ರಿ..ಇಂದು ತಪ್ಪದೆ ಈ ಕೆಲಸ ಮಾಡಿ…

    ಈ ಬಾರಿ ಮಾರ್ಚ್ 4 ರಂದು ಮಹಾಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಶಿವ ಭಕ್ತರಿಗೆ ವಿಶೇಷವಾದ ದಿನವಿದು. ಶಿವ ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನ ಆರಾಧನೆಯಲ್ಲಿ ನಿರತರಾಗ್ತಾರೆ. ಶಿವ ಪೂಜೆ, ಆರಾಧನೆ ಜೊತೆ ಈ ಮೂರು ಕೆಲಸಗಳನ್ನು ಶಿವರಾತ್ರಿ ದಿನ ಮಾಡಿದ್ರೆ ಈಶ್ವರ ಬಹುಬೇಗ ಭಕ್ತರಿಗೆ ಒಲಿಯುತ್ತಾನೆ. ಶೀಘ್ರವೇ ನಿಮ್ಮ ಆಸೆ ಈಡೇರಲಿದೆ. ನಿಮ್ಮೆಲ್ಲ ಆಸೆ ಈಡೇರಬೇಕೆಂದ್ರೆ ಮಹಾಶಿವರಾತ್ರಿ ದಿನ ಶಿವನ ಪೂಜೆ ಜೊತೆ ಓಂ ಮಹಾಶಿವಾಯ ಸೋಮಾಯ ನಮಃ ಮಂತ್ರವನ್ನು ಜಪಿಸಿ. ನೀವು ಶಿವನ ಪೂಜೆ ವೇಳೆ…

  • ಸುದ್ದಿ

    ಭಾರತದೊಂದಿಗೆ ಪಾಕ್ ವ್ಯಾಪಾರ ಬಂದ್…..!

    ಆರ್ಟಿಕಲ್ 370 ರದ್ದು ಪರಿಣಾಮ ಎಂಬಂತೆ ಪಾಕಿಸ್ತಾನ ವರ್ತಿಸತೊಡಗಿದೆ. ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದ್ವಿಪಕ್ಷೀಯವ್ಯಾಪಾರ- ವ್ಯವಹಾರಗಳನ್ನು ಬಂದ್ ಮಾಡುತ್ತೇನೆ ಎಂದಿದೆ.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಕ್ಕೆ ಪಾಕಿಸ್ತಾನ ಮೊದಲು ಕ್ಯಾತೆ ತೆಗೆದಿತ್ತು. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ…

  • ಸುದ್ದಿ

    ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಟ್ರೈಲರ್ ಗೆ ಸ್ಟಾರ್ ನಟರ ಅಭಿಪ್ರಾಯವೇನು ಗೊತ್ತಾ,.!

    ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದು ಎಲ್ಲಾ ಭಾಷೆಯ ಚಿತ್ರಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮತ್ತು ತಂಡ ಸುಮಾರು ಮೂರು ವರ್ಷಗಳಿಂದ ಪಟ್ಟ ಶ್ರಮ ಈ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಒಂದು ವಿಭಿನ್ನ ರೀತಿಯ ಸಿನಿಮಾ ಇದಾಗಿದ್ದು ಚಿತ್ರಾಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಮೆಚ್ಚಿಕೊಂಡಿದ್ದಾರೆ….

  • ಜ್ಯೋತಿಷ್ಯ

    ಶ್ರೀ ಸಾಯಿಬಾಬಾರವರ ಆಶೀರ್ವಾದದೊಂದಿಗೆ ಇಂದಿನ ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆಯನ್ನು ತಿಳಿಯಿರಿ.!

    ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ, ಸಂತಾನ,ಮಂಗಳದೋಷ, ದಾಂಪತ್ಯಕಲಹ, ವಿದ್ಯಾಭ್ಯಾಸ, ಮನಃಶಾಂತಿ, ಮಕ್ಕಳವಿಚಾರ, ರಾಜಕೀಯಬೆಳವಣಿಗೆ, ಆಸ್ತಿವಿಚಾರ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇದಿನಗಳಲ್ಲಿ ಪರಿಹಾರ ಶತಸಿದ್ಧ. ಸಂಪರ್ಕಿಸಿ:-9353957085 ಮೇಷ(31 ಅಕ್ಟೋಬರ್, 2019) : ಇಂದು ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಇಂದು ಸುಮ್ಮನೆ ಕುಳಿತುಕೊಳ್ಳುವ ಬದಲು -ಏಕೆ ಏನನ್ನಾದರೂ ಮಾಡಬಾರದು – ಇದು ನಿಮ್ಮ ಗಳಿಕೆಯ ಶಕ್ತಿಯನ್ನು ಸುಧಾರಿಸುತ್ತದೆ. ಕೌಟುಂಬಿಕ ಸಮಸ್ಯೆಗೆ ಮೊದಲ ಆದ್ಯತೆ ನೀಡಬೇಕು. ನೀವು ವಿಳಂಬವಿಲ್ಲದೇ ಇದನ್ನು ಚರ್ಚಿಸಬೇಕು, ಏಕೆಂದರೆ…

  • ಆರೋಗ್ಯ

    ‘ಮೊಳಕೆ ಬಂದ ಗೋಧಿ’ಯನ್ನು ತಿಂದ್ರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಮೊಳಕೆ ಬಂದ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಾಗಿ ಡಯೆಟ್ ಮಾಡುವವರು ಮೊಳಕೆ ಬಂದ ಕಾಳುಗಳನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಹೆಸರು, ಕಡಲೆಯನ್ನು ಮೊಳಕೆ ಬರಿಸಿ ಸೇವಿಸುತ್ತಾರೆ.