ದೇಶ-ವಿದೇಶ

“ಭಾರತೀಯ ಸೇನೆ”ಗೆ ಶೀಘ್ರವೇ ಬರಲಿದೆ “ಸ್ವದೇಶಿ ಬುಲೆಟ್‌ ಪ್ರೂಫ್‌ ಜಾಕೆಟ್‌”………

321

ಹೌದು, ಪತ್ರಿಕೆಯೊಂದು ವರದಿ ಮಾಡಿರುವಂತೆ, ಪ್ರಸ್ತುತ ಭಾರತೀಯ ಸೇನೆಗೆ ಅಮೆರಿಕದಿಂದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಇದೀಗ ಈ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಇನ್ನು ಮುಂದೆ ಭಾರತದಲ್ಲೇ ತಯಾರಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್‌ ಇನ್‌ ಇಂಡಿಯಾ’ ಮಂತ್ರ ಜಪಿಸುತ್ತಿರುವಾಗಲೇ ಬಂಗಾಳಿ ವಿಜ್ಞಾನಿಯೊಬ್ಬರು ಕಡಿಮೆ ಬೆಲೆಯ, ಅತ್ಯಂತ ಕಡಿಮೆ ತೂಕದ ಸ್ವದೇಶಿ ‘ಬುಲೆಟ್‌ಪ್ರೂಫ್‌’ ಜಾಕೆಟ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

 

ಇದರ ಬಳಕೆಗೆ ರಕ್ಷಣಾ ಸಚಿವಾಲಯದ ಉನ್ನತಾಧಿಕಾರ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯೋಧರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಬುಲೆಟ್‌ಪ್ರೂಫ್‌ ಜಾಕೆಟ್‌ ಅನ್ನು ಧರಿಸಲು ದಾರಿ ಸುಗಮವಾಗಿದೆ.

ಕೇಂದ್ರ ಸರ್ಕಾರಕ್ಕೆ ಹೇಗೆ ಉಳಿತಾಯ ?

ಇನ್ನು ಈ ಬುಲೆಟ್ ಪ್ರೂಫ್ ಜಾಕೆಟ್ ಗಳು ಕಡಿಮೆ ವೆಚ್ಚದ್ದಾಗಿದ್ದು, ಒಂದು ಜಾಕೆಟ್ ನಿರ್ಮಾಣಕ್ಕೆ ಕೇವಲ 50 ಸಾವಿರ ರು. ವೆಚ್ಚ ತಗುಲುತ್ತದೆ. ಆದರೆ ಅಮೆರಿಕದ ಜಾಕೆಟ್ ಗಳಿಗೆ 1.50 ಲಕ್ಷ ರು. ವೆಚ್ಚವಾಗುತ್ತಿದೆ. ಜತೆಗೆ ಒಂದು ಕವಚ 15ರಿಂದ 18 ಕೆ.ಜಿ.ವರೆಗೂ ತೂಕವಿದೆ. ಇಷ್ಟು ಮಣ ಭಾರದ ಜಾಕೆಟ್‌ ಧರಿಸಿ ಉಗ್ರರ ಜತೆ ಕಾದಾಡಬೇಕಾದ ಪರಿಸ್ಥಿತಿ ಯೋಧರಿಗಿದೆ.

ಇದನ್ನು ಮನಗಂಡ ಬಂಗಾಳಿ ವಿಜ್ಞಾನಿ ಪ್ರೊ| ಶಂತನು ಭೌಮಿಕ್‌ ಅತ್ಯಂತ ಕಡಿಮೆ ತೂಕದ, ಥರ್ಮೋ ಪ್ಲಾಸ್ಟಿಕ್‌ ಜಾಕೆಟ್‌ ಅನ್ನು ಅಭಿವೃದ್ಧಿಪಡಿ ಸಿದ್ದಾರೆ. ಈ ಜಾಕೆಟ್‌ ಬೆಲೆ 50 ಸಾವಿರ ವಿರಲಿದ್ದು, ತೂಕ 1.5 ಕೆ.ಜಿ.ಯಿರಲಿದೆ.

ಇದರಿಂದಾಗಿ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯೋಧರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಬುಲೆಟ್‌ ಪ್ರೂಫ್‌  ಜಾಕೆಟ್‌ ಅನ್ನು ಧರಿಸಲು ಹಾದಿ ಸುಗಮವಾದಂತಾಗಿದೆ. ಜತೆಗೆ ರಕ್ಷಣಾ ಇಲಾಖೆಯ ಬೊಕ್ಕಸಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ರು. ಉಳಿತಾಯವಾಗಲಿದೆ.

ಯಾರೂ ಗೊತ್ತಾ ವಿಜ್ಞಾನಿ ಶಾಂತನು ಭೌಮಿಕ್ ?

ಪ್ರಸ್ತುತ ಭಾರತೀಯ ಯೋಧರಿಗೆ ಅಗ್ಗದ ಮತ್ತು ಕಡಿಮೆ ತೂಕದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಸಂಶೋಧಿಸಿರುವ, ವಿಜ್ಞಾನಿ ಶಾಂತನು ಭೌಮಿಕ್ ಮೂಲತಃ ಬಂಗಾಳ ಮೂಲದವರಾಗಿದ್ದು, ಪ್ರಸ್ತುತ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಲಯದಲ್ಲಿ ಏರೇಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.  ತಮ್ಮ ವಿನೂತನ ಸಂಶೋಧನೆಯನ್ನು ವಿಜ್ಞಾನಿ ಶಾಂತನು ಭೌಮಿಕ್ ಅವರು ನೇತಾಜಿ ಸುಭಾಷ್ ಚಂದ್ರಬೋಸ್ ಅವರಿಗೆ ಸಮರ್ಪಿಸಿದ್ದಾರೆ.

 

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕಾನೂನು

    ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಭಾರತದ ಸಂಸತ್‌ಗಿಲ್ಲ.!ಈ ರಾಜ್ಯದವರು ತೆರಿಗೆ ಕಟ್ಟೋ ಆಗಿಲ್ಲ!ಯಾಕೆ ಗೊತ್ತಾ?ಮುಂದೆ ಓದಿ ಎಲ್ಲರಿಗೂ ಶೇರ್ ಮಾಡಿ…

    ಕಾಶ್ಮೀರಿ ದ೦ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ೦ತ್ಯದ ಮೇಲೆ ನಿತ೦ತ್ರಣವನ್ನು ಹೊ೦ದಲು ಹವಣಿಸುತ್ತಿದೆ.ಅ೦ತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು 1947 ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ೦ತೆಯು,ಕೆಲವು ಕಾಶ್ಮೀರಿಗಳೂ ತಾವೇ ಸ್ವತ೦ತ್ರರಾಗಲು ಹವಣೀಸುತ್ತಿದ್ದಾರೆ. ಆದ ಕಾರಣ ಭಾರತ ಸರ್ಕಾರ ಕಾಶ್ಮೀರದ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿಯೇ ಹಲವು ಕಾನೂನು ನಿಯಮಗಳನ್ನು ಜಾರಿಗೆ ತ೦ದಿದೆ. ಭಾರತದ ರಾಜ್ಯವಾಗಿ ಕಾಶ್ಮೀರ ಗುರುತಿಸಿಕೊಂಡಿದ್ದರೂ, ಈ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನವಿದೆ. ಭಾರತದ ಬೇರೆ ರಾಜ್ಯಗಳಿರುವ ಕಾನೂನು ಈ…

  • ಉಪಯುಕ್ತ ಮಾಹಿತಿ

    ‘ನೋಕಿಯಾ ಸ್ಮಾರ್ಟ್‌ಫೋನ್’ ಈಗ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ..! ತಿಳಿಯಲು ಈ ಲೇಖನ ಓದಿ ..

    ನೋಕಿಯಾ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ. ಈಗಾಗಲೇ ನೋಕಿಯಾ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಅಮೆಜಾನ್ ಆನ್‌ಲೈನ್‌ ಶಾಪಿಂಗ್ ತಾಣ ಸೇರಿದಂದೆ ಆಫ್‌ಲೈನ್‌ ಮಾರುಕಟ್ಟೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಲಭ್ಯವಿದೆ.

  • ಸುದ್ದಿ

    30 ಕಿ ಮೀ ದೂರದಲ್ಲಿರುವಆಸ್ಪತ್ರೆಗೆ ಕೇವಲ 18 ನಿಮಿಷಗಳಲ್ಲಿ ರಕ್ತ ರವಾನೆ : ಯಶಶ್ವಿಯಾಗಿ ನಡೆದ ಡ್ರೋನ್ ಪ್ರಯೋಗ……..

    ಡ್ರೋನ್ ಮೂಲಕ ಕೇವಲ 18 ನಿಮಿಷದಲ್ಲಿ 30 ಕಿ.ಮೀ ಸಂಚರಿಸಿ ರಕ್ತದ ಮಾದರಿಯನ್ನು ನೀಡಿದ ಘಟನೆ ಮೊದಲ ಬಾರಿಗೆ ಉತ್ತರಾಖಂಡದಲ್ಲಿ ನಡೆದಿದೆ.ನಂದಗೋನ್‍ನ ಜಿಲ್ಲಾಸ್ಪತ್ರೆಯಿಂದ ರಕ್ತದ ಮಾದರಿಯನ್ನು ಡ್ರೋನ್ ಮೂಲಕ ತೇರಿಯಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೊದಲ ಪ್ರಯತ್ನದಲ್ಲೇ ಇದು ಸಫಲವಾಗಿದ್ದು, ಇದು ಭಾರತದ ಆರೋಗ್ಯದ ಸೇವೆಯಲ್ಲಿ ಇದೊಂದು ದೊಡ್ಡ ಹೆಜ್ಜೆ ಆಗಲಿದೆ. ಡ್ರೋನ್ ನಂದಗೋನದಿಂದ ತೇರಿ ನಡುವಿನ 30 ಕಿ.ಮೀ ದೂರವನ್ನು 18 ನಿಮಿಷದಲ್ಲಿ ಡ್ರೋನ್ ಕ್ರಮಿಸಿದೆ. ಡ್ರೋನ್ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮಥ್ರ್ಯ…

  • ಸುದ್ದಿ

    ಮೊಟ್ಟೆ ತಿನ್ನುವವರು ಇದನ್ನು ತಪ್ಪದೇ ಓದಲೇಬೇಕು,.!

    ಬೆಳಿಗ್ಗೆ ಉಪಹಾರದ ಜೊತೆ ಮೊಟ್ಟೆ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆ ಶಕ್ತಿಯನ್ನು ಹೆಚ್ಚು ಮಾಡುತ್ತೆ. ಹಾಗಾಗಿಯೇ ಅನೇಕರು ಬೆಳಿಗ್ಗೆ, ಸಂಜೆ ಮೊಟ್ಟೆ ಸೇವಿಸ್ತಾರೆ. ಆದ್ರೆ ನೀವು ಸೇವಿಸುವ ಮೊಟ್ಟೆಯಲ್ಲಿ ಶಕ್ತಿ ನೀಡುವಂತ ಅಂಶ ಇರಬೇಕೆಂದೇನೂ ಇಲ್ಲ. ಯಾಕೆಂದ್ರೆ ಮಾರುಕಟ್ಟೆಯಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗ್ತಾ ಇದ್ದಂತೆ ಕೃತಕವಾಗಿ ಮೊಟ್ಟೆ ತಯಾರಿಸಲಾಗ್ತಾ ಇದೆ. ಈ ಮೊಟ್ಟೆಯನ್ನು ಹೇಗೆ ತಯಾರಿಸಲಾಗುತ್ತೆ ಎನ್ನುವ ವಿಷಯ ಗೊತ್ತಾದ್ರೆ ಕೆಲವರು ಇಂದಿನಿಂದಲೇ ಮೊಟ್ಟೆ ಸೇವನೆಯನ್ನು ನಿಲ್ಲಿಸಿದ್ರೂ ಸಂಶಯವಿಲ್ಲ. ಈಗ ಒಂದು ಕೋಳಿಗೆ ಮೊಟ್ಟೆ ಉತ್ಪಾದಿಸಲು ಸುಮಾರು…

  • ಸುದ್ದಿ

    ಕಣ್ಣಿಗೆ ನೀಲಿ ಟ್ಯಾಟೂ ಹಾಕಿಸಿಕೊಂಡ ಮಾಡೆಲ್ ನಂತರ ಏನಾಯ್ತು ಗೊತ್ತಾ,?ಇದನ್ನೊಮ್ಮೆ ಓದಿ,.!

    ಟ್ಯಾಟೂ ಎಂದರೆ  ಯಾರಿಗೆ  ತಾನೇ ಇಷ್ಟ ಇರಲ್ಲ  ಹೇಳಿ, ಈಗಿನ  ಕಾಲದಲ್ಲಿ ಎಲ್ಲರಿಗೂ  ಟ್ಯಾಟೂ ಹುಚ್ಚು ಹಾಗೆಯೇ ಇಲ್ಲೊಬ್ಬ  ಮಾಡೆಲ್. ದೇಹವನ್ನು ಬಗೆಬಗೆಯಾಗಿ ಮಾರ್ಪಾಡು ಮಾಡಿ ಮಿಂಚುವುದೆಂದರೆ ಈಕೆಗೆ ಬಲು ಇಷ್ಟವಂತೆ. ಇದಕ್ಕಾಗಿಯೇ ಸಾಕಷ್ಟು ಹಣವನ್ನು  ಖರ್ಚು ಮಾಡುತ್ತಿದ್ದಳು . ಆದರೆ, ಇದೀಗ ಇದೇ ಹುಚ್ಚು ಇವಳನ್ನು ಮೂರು ವಾರಗಳ ಕಾಲ ದೃಷ್ಟಿಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ನ್ಯೂ ಸೌತ್ ವೇಲ್ಸ್‌ನ ಬಾಡಿ ಮಾಡಿಫಯರ್ ಅಂಬೇರ್ ಲೂಕ್ 24 ಎಂಬಾಕೆ ಈ ಸಂಕಷ್ಟ ಅನುಭವಿಸಿದ್ದವಳು. ಈಕೆ ತನ್ನ ದೇಹವನ್ನು…