ಸುದ್ದಿ

ನಗರಸಭೆ ಚುನಾವಣೆಗೂ ಮುಂಚಿತವಾಗಿಯೇ ಖಾತೆಯನ್ನು ತೆರೆದ ಜೆಡಿಎಸ್ ಶಾಸಕರು!

42

ಚುನಾವಣೆಗೂ ಮುನ್ನವೇ ಹಿರಿಯೂರು ನಗರಸಭೆಯಲ್ಲಿ ಜೆಡಿಎಸ್ ಖಾತೆ ತೆರೆದಿದ್ದು, ಜೆಡಿಎಸ್ ಅಭ್ಯರ್ಥಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಏಳನೇ ವಾರ್ಡಿನ ಪಾಂಡುರಂಗ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 29 ರಂದು ನಗರಸಭೆ ಚುನಾವಣೆ ನಡೆಯಬೇಕಿತ್ತು. ಈ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಪಾಂಡುರಂಗ ಅವರು ನಾಮಪತ್ರ ಸಲ್ಲಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಈರಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದರು.

ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾವಾಗಿತ್ತು. ಈರಲಿಂಗೆಗೌಡ ಚುನಾವಣೆಯಲ್ಲಿ ನನಗೆ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಹೇಳಿ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಪಾಂಡುರಂಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಬ್ಬರೇ ಅಭ್ಯರ್ಥಿ ಇರುವ ಕಾರಣ ಮೇ 29 ರಂದು ನಡೆಯಬೇಕಿದ್ದ ನಗರಸಭೆ ಚುನಾವಣೆ ರದ್ದಾಗಿದೆ. ನಗರಸಭಾ ಸದಸ್ಯನಾಗಿ ಆಯ್ಕೆಯಾಗಿರುವುದಕ್ಕೆ ಪಾಂಡುರಂಗ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ, ದೇವರು-ಧರ್ಮ

    ರಾಯರು ಇನ್ನೂ ಬದುಕಿದ್ದಾರೆ ಎನ್ನುವುದಕ್ಕೆ ಇಲ್ಲಿವೆ ಸಾಕ್ಷಿಗಳು ಮತ್ತು ರಾಯರ ಪವಾಡಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ವ್ರತಾಯಚ ! ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೆ !! ಗುರುರಾಯರು ಪ್ರತಿಯೊಬ್ಬ ಭಕ್ತರ ಮನದಲ್ಲಿ ಇಂದಿಗೂ ಬದುಕಿದ್ದಾರೆ. ಪ್ರಹ್ಲಾದರಾಗಿ – ವ್ಯಾಸರಾಜರಾಗಿ ನಂತರ ರಾಘವೇಂದ್ರ ಯತಿರಾಜರಾದ ಕಲಿಯುಗದ ಕಾಮಧೇನು ಶ್ರೀಗುರುರಾಯರು… ಗುರು ರಾಘವೇಂದ್ರರಾಯರ ಅವತಾರವಾಗಿದ್ದು ಹೇಗೆ..? ಮಂತ್ರಾಲಯದ ಗುರು ರಾಘವೇಂದ್ರರಾಯರೇ ನರಸಿಂಹಾವತಾರಕ್ಕೆ ಸಹಕಾರಿಯಾದ ಪ್ರಹ್ಲಾದರು.ಪೂರ್ವದಲ್ಲಿ ಸೃಷ್ಟಿಕರ್ತ ಬ್ರಹ್ಮದೇವನ ದೇವಗಣಗಳಲ್ಲಿ ಶಂಕು ಕರ್ಣರಾಗಿದ್ದ ರಾಯರು ಬ್ರಹ್ಮದೇವನ ಶಾಪದಿಂದ ಭಕ್ತ ಪ್ರಹ್ಲಾದರಾಗಿ ಭೂಲೋಕದಲ್ಲಿ ಹುಟ್ಟಿ, ಲೋಕಕಲ್ಯಾಣದ ಬಳಿಕ ತಮ್ಮ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಜನಿಸಿದರು. ವ್ಯಾಸರ…

  • ಸುದ್ದಿ

    ವೇಶ್ಯೆಯರನ್ನೂ ಬಿಡದ ಕಾಮುಕರು, ಮೂವರ ಮೇಲೆ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ…!

    ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಮೂವರು ವೇಶ್ಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿರುವ ವಿದ್ರಾವಕ ಘಟನೆ ನಡೆದಿದೆ. ದೆಹಲಿಯ ಲಜಪತ್ ನಗರದ ಮೆಟ್ರೋ ನಿಲ್ದಾಣದ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ಓಲಾ ಕ್ಯಾಬ್ ನ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಇಬ್ಬರು ಗಿರಾಕಿಗಳ ಸೋಗಿನಲ್ಲಿ ಮಹಿಳೆಯರನ್ನು ಸಂಪರ್ಕಿಸಿದ್ದಾರೆ. 3000 ಸಾವಿರ ರೂಗಳಿಗೆ ಡೀಲ್ ಮಾಡಿಕೊಂಡ ದುಷ್ಕರ್ಮಿಗಳು ಮಹಿಳೆಯರನ್ನು ನೊಯ್ಡಾದ ಸೆಕ್ಟರ್ 18ಗೆ ಬರುವಂತೆ ಹೇಳಿ 3600 ರೂ ಮುಂಗಡ ಹಣವನ್ನೂ ನೀಡಿದ್ದಾರೆ. ಬಳಿಕ ಮಹಿಳೆಯರನ್ನು…

  • ಸುದ್ದಿ

    ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ತಲೆ ಕೂದಲನ್ನೇ ಬೋಳಿಸಿಕೊಂಡ ಪೊಲೀಸ್ ಅಧಿಕಾರಿ,.!!

    ಅಪರ್ಣಾ ಲವಕುಮಾರ್ ಈ ಹೆಸರು ನೀವೆಂದಾದರೂ ಕೇಳಿದ್ದೀರಾ? ಬಹುಶಃ ಕ್ಯಾನ್ಸರ್ ಪೀಡಿತರಿಗೆ ನೈಸರ್ಗಿಕ ಕೂದಲಿನ ವಿಗ್ ಮಾಡಿಸುವ ಸಲುವಾಗಿ ಈ ಪೊಲೀಸ್ ಹಿರಿಯ ಅಧಿಕಾರಿ ತಮ್ಮ  ತಲೆ ಬೋಳಿಸಿಕೊಂಡಿದ್ದಾರೆ. ಸದ್ಯ ಇವರ ಈ ಮನವೀಯ ನಡೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಕೇರಳ ತ್ರಿಶೂರ್ ಜಿಲ್ಲೆಯ ಇರಿಂಜಲಕೂಡಾದ ನಿವಾಸಿಯಾಗಿರುವ ಅಪರ್ಣಾ ತಮ್ಮ ಮೊಣಕಾಲುದ್ದದ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ಬೋಳಿಸಿಕೊಂಡಿರುವುದು ನೆಟ್ಟಿಗರ ಮನ ಗೆದ್ದಿದೆ ಇನ್ನು ತಮ್ಮ ತಲೆ ಕೂದಲು ಬೋಳಿಸುವ ಮೊದಲು ಇವರು ಈ ಬಗ್ಗೆ…

  • corona, Health

    ರಾಜ್ಯಾದ್ಯಂತ 4ಲಕ್ಷ ಮಕ್ಕಳಿಗೆ ಉಚಿತ ಲಸಿಕೆ

    ಮೊದಲದಿನ 4 ಲಕ್ಷ ಮಕ್ಕಳಿಗೆ ಉಚಿತ ಲಸಿಕೆ  ರಾಜ್ಯದಲ್ಲಿ 15-18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದೆ.ಮೊದಲದಿನ 4.03 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.ಆ ಮೂಲಕ ಶೇ.63 ಗುರಿ ಸಾಧನೆ ಮಾಡಲಾಗಿದೆ. ಸೋಮವಾರ ರಾಜ್ಯಾದ್ಯಂತ ನಡೆದ ಲಸಿಕೆ ಅಭಿಯಾನದಲ್ಲಿ 6,38,891 ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.ಈ ಪೈಕಿ (ಸಂಜೆ 7:30ರವೆರಗೂ) 4,03,928 ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.ಈ ವಯೋಮಾನದ ಎಲ್ಲ ಮಕ್ಕಳಿಗೂ ಕೋವ್ಯಾಕ್ಸೀನ್ ಹಾಕಿರುವುದರಿಂದ 28ದಿನಗಳ ನಂತರ 2ನೇ ಡೋಸ್…

    Loading

  • ಸುದ್ದಿ

    ವರುಣನ ಆರ್ಭಟ- ‘ಮಹಾ’ ಮಳೆಗೆ ಸೇತುವೆಗಳು ಮುಳುಗಡೆ

    ಇಷ್ಟು ದಿನ ಮಳೆಯ ಅಭಾವದಿಂದ ಸೋರಗಿ ಹೋಗಿದ್ದ ಮಲೆನಾಡಿನ ನದಿಗಳಿಗೆ ಜೀವಕಳೆ ಬಂದಿದೆ. ಪಶ್ಚಿಮಘಟ್ಟ ಸಾಲಿನ ಆರಿದ್ರಾ ಮಳೆಯ ಆರ್ಭಟಕ್ಕೆ ನದಿಗಳು ತುಂಬಿ ಹರಿಯುತ್ತಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 4-5 ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ಅದರಲ್ಲೂ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.. ಶೃಂಗೇರಿಯ ಕಪ್ಪೆ ಶಂಕರ ದೇಗುಲ…

  • ಸುದ್ದಿ

    ಕರ್ತವ್ಯಕ್ಕೆ ತೆರಳಿದ ಪತಿಗಾಗಿ 19 ವರ್ಷ ಶಬರಿಯಂತೆ ಕಾಯ್ದ ಪತ್ನಿ…….!

    ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ. 1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು…