ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಂಟೆಕ್ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ ಜೂನ್‌ನಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದು ತಮ್ಮ ಸಮಸ್ಯೆ ವಿವರಿಸಿದ್ದರು.

ಅಲ್ಲದೇ 2018ರ ಸೆ.15ರಂದು ಪಿಎಂ ಟ್ವಿಟರ್ ಖಾತೆಗೆ ಸಮಸ್ಯೆ ಬರೆದು ಟ್ಯಾಗ್ ಮಾಡಿದ್ದರು. ಅದರ ಪ್ರತಿಫಲವಾಗಿ 2018ರ ಅ.1ರಂದು ರೂರಲ್ ಎಲೆಕ್ಟ್ರಿಕಲ್ ಕಾರ್ಪೊರೇಶನ್ ಲಿಮಿಟೆಡ್ ವತಿಯಿಂದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಮರೇಶಗೆ ಉತ್ತರ ಬಂತು. ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯಡಿ ಆಯ್ದ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ವಿಷಯವನ್ನು ಪತ್ರದಲ್ಲಿ ಉಲ್ಲೇಖೀಸಲಾಗಿತ್ತು.

ವಿದ್ಯುತ್ ಇಲ್ಲದೇ ಚಿಮಣಿ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದ ದೊಡ್ಡಿಗಳಿಗೆ ಈಗ ಬೆಳಕಿನ ಸೌಭಾಗ್ಯ ಬಂದಂತಾಗಿದೆ. ಜೆಸ್ಕಾಂ ವಿಭಾಗೀಯ ಕಚೇರಿ ಸಹಾಯಕ ಎಂಜಿನಿಯರ್ ಹಳ್ಳಿಗಳಿಗೆ ತೆರಳಿ ಸಮೀಕ್ಷೆ ನಡೆಸಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಈಗಾಗಲೇ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಿದ್ದು, ಬಹುತೇಕ ಮನೆಗಳಿಗೆ ಮೀಟರ್ ಅಳವಡಿಸಲಾಗಿದೆ.ಜತೆಗೆ, ಟ್ರಾನ್ಸ್‌ಫಾರ್ಮರ್ ತರಲಾಗಿದ್ದು, ಒಂದೆರಡು ದಿನಗಳಲ್ಲಿ ಅಳವಡಿಸುವ ಸಾಧ್ಯತೆಯಿದೆ. ಇದು ಕೇವಲ ಮೂರು ದೊಡ್ಡಿಗಳಿಗೆ ಮಾತ್ರವಲ್ಲದೇ ಇನ್ನುಳಿದ ಹತ್ತಾರು ದೊಡ್ಡಿಗಳ ಭಾಗ್ಯದ ಬಾಗಿಲು ತೆರೆಸಿದೆ. ಜೆಸ್ಕಾಂ ಅಧಿಕಾರಿಗಳ ಮಾಹಿತಿ ಪ್ರಕಾರ 1,400 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.

ತಮ್ಮ ದೊಡ್ಡಿಗಳಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಇಲ್ಲದ ಕಾರಣ ಮಾವನ ಮನೆಯಲ್ಲಿದ್ದು ಓದಿದ ಅಮರೇಶ, ಎಂಟೆಕ್ ಪದವಿ ಪಡೆದಿದ್ದಾರೆ. ಬಳಿಕ ಮುಂಬೈನಲ್ಲಿ ಕೆಲ ಕಾಲ ಉದ್ಯೋಗ ಮಾಡಿ ಈಗ ಪುನಃ ಊರು ಸೇರಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ತಮ್ಮ ದೊಡ್ಡಿಗಳ ಸಮಸ್ಯೆ ನೀಗದ ಕಾರಣ ಪ್ರಧಾನಿ ಕಚೇರಿಯ ಮೊರೆ ಹೋಗಿದ್ದಾರೆ. ಅವರ ಸಣ್ಣ ನಡೆ ಈಗ ದೊಡ್ಡಮಟ್ಟದ ಪ್ರತಿಫಲವನ್ನೇ ನೀಡಿದೆ.
ಅನೇಕ ದೊಡ್ಡಿಗಳಿಗೆ ತೆರಳಿ ಶುಲ್ಕ ಪಾವತಿಸಿದರೆ ವಿದ್ಯುತ್ ನೀಡುವುದಾಗಿ ನಾವು ಈ ಮೊದಲೂ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಜನರು ಶುಲ್ಕ ಕಟ್ಟಲು ಮುಂದಾಗುತ್ತಿರಲಿಲ್ಲ. ಸೌಭಾಗ್ಯ ಯೋಜನೆಯಡಿ ವಿದ್ಯುತ್ ನೀಡುವಂತೆ ನಮಗೆ ನಿರ್ದೇಶನ ಬಂದ ಕಾರಣ ಆ ಮೂರು ದೊಡ್ಡಿಗಳ ಜತೆ ಇನ್ನೂ ಅನೇಕ ಕಡೆ ವಿದ್ಯುತ್ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ವಿದ್ಯುತ್ ಸರಬರಾಜು ಆರಂಭಿಸಲಾಗುವುದು. ಅಲ್ಲಿನ ನಿವಾಸಿಗಳು ಇನ್ನು ಮುಂದೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿಸಿದರೆ ಸಾಕು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಮನಸ್ಸಿನ ನೆಮ್ಮದಿಗಾಗಿ, ನಮ್ಮ ಕೋರಿಕೆಗಳನ್ನು ಈಡೇರಿಸಕೊಳ್ಳುವ ಸಲುವಾಗಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ.ಆದರೆ ನಾವು ದೇವಾಲಯ ಪ್ರವೇಶ ಮಾಡುವ ಸಂದರ್ಭದಲ್ಲಿ ಹಾಗೂ ದೇವಾಲಯದಲ್ಲಿ ನಮಗೆ ಗೊತ್ತಿದ್ದೂ/ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ.. ಸುದರ್ಶನ್ ಆಚಾರ್ಯ : ಆಧ್ಯಾತ್ಮಿಕ ಚಿಂತಕರು ಹಾಗೂ ದೈವಜ್ಞ ಜ್ಯೋತಿಷ್ಯರು ನಿಮ್ಮ ಜೀವನದ ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ಮುಂತಾದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಕರೆ ಮಾಡಿ ಅಥವಾ ಇ-ಸಂದೇಶ ಕಳಿಸಿ…
ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.
ಪ್ರಧಾನಿ ನರೆಂದ್ರ ಮೋದಿಯವರ 1೦೦ ಅಡಿ ಎತ್ತರದ ಪ್ರತಿಮೆ ಮತ್ತು 3೦ ಕೋಟಿ ರೂಪಾಯಿ ವೆಚ್ಚದ ಮಂದಿರ ನಿರ್ಮಿಸಲು ಉತ್ತರ ಪ್ರದೇಶದ ಮೀರತ್ನಲ್ಲಿ ನಿವೃತ್ತ ಅಧಿಕಾರಿಯೋರ್ವರು ಮುಂದಾಗಿದ್ದಾರೆ.
ಬಿಗ್ ಬಾಸ್ ಸೀಸನ್-13 ಹಿಂದಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಬ್ಬರು ಎಲ್ಲರ ಮುಂದೆಯೇ ರೊಮ್ಯಾನ್ಸ್ ಮಾಡಿದ್ದು, ಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ ಹಾಗೂ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಯಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಇವರ ರೊಮ್ಯಾನ್ಸ್ ದೃಶ್ಯವನ್ನು ಮತ್ತೊಬ್ಬ ಸ್ಪರ್ಧಿ ಶೆಹ್ನಾಜ್ ಗಿಲ್ ಮೊಬೈಲಿನಲ್ಲಿ ಚಿತ್ರಿಕರಿಸಿದ್ದು, ಇದು ಟಾಸ್ಕ್ ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಶೆಹ್ನಾಜ್ ನಿರ್ದೇಶಕರಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಅವರಿಗೆ ರೊಮ್ಯಾನ್ಸ್ ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದಾರೆ.ಪ್ರೋಮೋದಲ್ಲಿ ಧಾರವಾಹಿಗಾಗಿ ಕೆಲವು…
ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಅವಲಂಬಿಸಿರುವ ಸೋಸಿಯಲ್ ಮೀಡಿಯಗಳಾದ ಪೇಸ್ಬುಕ್, ವಾಟ್ಸಪ್, ಟ್ವಿಟರ್ ಮುಂತಾದವುಗಳಲ್ಲಿ ಕೆಲವರು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವುದು ಸಾಮಾನ್ಯವಾಗಿದೆ.
ಭಾರೀ ಮಳೆ ಪ್ರವಾಹ ಮತ್ತು ಭೂ ಕುಸಿತಗಳಿಂದ ನಲುಗಿರುವ ಕೇರಳಾದಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿದ್ದು, ಜನರು ಮಮ್ಮಲ ಮರಗುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ ಕೊಟ್ಟುಕುಣ್ನು ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗುವಿನ ಶವ ಬಿಗಿದಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹೃದಯವಿದ್ರಾವಕ ದೃಶ್ಯ ಕಂಡು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಕಣ್ಣುಗಳು ಒದ್ದೆಯಾದವು. ಗೀತು(21) ಮತ್ತು ಆಕೆಯ ಒಂದೂವರೆ ವರ್ಷದ ಮಗು (ದೃವ)ವಿನ ಶವ ಭೂ…