ರಾಜಕೀಯ

ಬಳ್ಳಾರಿ ಬ್ರದರ್ಸ್ಗೆ ಕೊಟ್ಟ ಮಾತಿನಂತೆ, ನಡೆಯದ ಸುಷ್ಮಾ ಸ್ವರಾಜ್..!ಏನು ಗೊತ್ತಾ…

754

ಶ್ರಾವಣ ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಬಳ್ಳಾರಿಗೆ ಬರುತ್ತಿದ್ದ ಭಾರತ ಸರಕಾರದ ಸಚಿವೆಯಾಗಿರುವ ಸುಷ್ಮಾ ಸ್ವರಾಜ್’ರವರು ಈ ವರ್ಷವಾದರೂ ಬಳ್ಳಾರಿಗೆ ಬರುತ್ತಾರೆಯೇ?

ಯಾಕೆಂದರೆ 1999ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದಲೇ ಕಾಂಗ್ರೆಸ್‌ನ  ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಅವರು, ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭ ನಗರದ ವೈದ್ಯ ಡಾ.ಮೂರ್ತಿ ಅವರ ನಿವಾಸದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದರಲ್ಲದೆ, “ನಾನು ಬಳ್ಳಾರಿಯ ಮಗಳು” ಎಂದು ತಿಳಿಸಿ, ಸೋಲಲಿ, ಗೆಲ್ಲಲಿ ಪ್ರತಿ ವರ್ಷ ಬಳ್ಳಾರಿಗೆ ಬಂದು ಈ ಪೂಜೆಯಲ್ಲಿ ಪಾಲ್ಗೊಂಡು ಹೋಗುವೆ ಎಂದು ಘೋಷಿಸಿದ್ದರು.

ಅವರ ಕೊಟ್ಟ ಮಾತಿನಂತೆ ಪ್ರತೀ ವರ್ಷವೂ ವರಮಹಾಲಕ್ಷ್ಮಿ ಪೂಜೆಯ ದಿನ ಬಳ್ಳಾರಿಗೆ ಬಂದು, ಡಾ.ಮೂರ್ತಿ ಅವರ ನಿವಾಸದಲ್ಲಿ ಪೂಜೆ ಮಾಡಿ, ನಂತರ ಬಿ.ಶ್ರೀರಾಮುಲು ಅವರು ಹಮ್ಮಿಕೊಳ್ಳುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುತ್ತಿದ್ದರು.

ಸುಷ್ಮಾ ಸ್ವರಾಜ್’ರವರಿಗೆ ಪ್ರತಿ ವರ್ಷವೂ ಪೂಜೆಯಲ್ಲಿ ಭಾಗವಹಿಸುವಂತೆ ಡಾ. ಬಿ.ಕೆ. ಶ್ರೀನಿವಾಸಮೂರ್ತಿ  ಎರಡು ವಾರ ಮೊದಲೇ ಅಧಿಕೃತ ಆಹ್ವಾನ ನೀಡುತ್ತಿದ್ದರು.

 

ರೆಡ್ಡಿ ಸೋದರರಿಂದ ಬಾಯ್ತುಂಬ ‘ಅಮ್ಮಾ’ ಎಂದು ಕರೆಸಿಕೊಳ್ಳುತ್ತಿದ್ದ ಸುಷ್ಮಾ ಸ್ವರಾಜ್’ರವರು ಈಗ ಯಾಕೆ ಬಳ್ಳಾರಿಗೆ ಬರುತ್ತಿಲ್ಲ? ಈಗ ರೆಡ್ಡಿ ಸಹೋದರರು ಬಿಜೆಪಿ ಪಕ್ಷದಲ್ಲಿಲ್ಲ. ಹಾಗಾಗಿ ಸುಷ್ಮಾ ಸ್ವರಾಜ್’ರವರು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಬರುತ್ತಿಲ್ಲವೇ?  ಏನೇ ಆಗಲಿ, ನಾನು ಬಳ್ಳಾರಿಯ ಮಗಳು ಎಂದ ಮೇಲೆ ಅವರಿಗೆ ಬಳ್ಳಾರಿ ತವರಾಯಿತಲ್ಲವೇ. ಆ ದಿನ ತಾನು ಕೊಟ್ಟ ಮಾತಿಗಾದರೂ,ಸುಷ್ಮಾ ಸ್ವರಾಜ್’ರವರು ಬಳ್ಳಾರಿಗೆ ಬರಬೇಕಿತ್ತು,ಅಲ್ಲವೇ???

ಇದಕ್ಕೆ ನಿಮ್ಮ ಅಭಿಪ್ರಾಯ ಏನು?ತಿಳಿಸಿ…

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಬಿಜೆಪಿಯಲ್ಲಿ ಸಂತಸವೋ ಸಂತಸ…ಯಡಿಯೂರಪ್ಪಾ ಗೆ ಬಂಪರ್…!

    ಈಗ ಕರ್ನಾಟಕ ಬಿಜೆಪಿ ಪಾಳಯದಲ್ಲಿ ಸಂತೋಷ ವೋ ಸಂತೋಷ. ಬಿಜೆಪಿಯ ರಾಜ್ಯಾಧ್ಯಕ್ಷ ರಾದ ಯಡಿಯೂರಪ್ಪಾ ಗೆ ತಡೆಯಲಾರದ ಸಂತಸ. ಕಾರಣ ಅವರ ಮೇಲೆ ದಾಖಲಾಗಿದ್ದ ಬರೋಬರಿ ಐದೂ ಕೇಸುಗಳನ್ನು ಮಂಗಳವಾರ ಡಿಸೆಂಬರ್ 4 ರಂದು ಸುಪ್ರೀಂ ಕೋರ್ಟ್ ವಜಾ ಗಳಿಸಿದೆ. ಶಿವಮೊಗ್ಗ ಮೂಲದ ವಕೀಲರಾದ ಸಿರಾಜಿನ್ ಪಾಷಾ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಡಿನೋಟಿಫಿಕೇಷನ್ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದಂತೆ 5 ಕೇಸ್ ಗಳ ನ್ನು ದಾಖಲಿಸಿದ್ದರು. ಹಲವಾರು ವರ್ಷಗಳಿಂದ ಈ ಕೇಸ್ ಗಳ ವಿಚಾರಣೆ…

  • Place, ಸಿನಿಮಾ

    KGF ಈ ದೇಶವನ್ನು ಹೇಗೆ ಉಳಿಸಿದೆ ನೋಡಿ ಅಂದು ನೆಹರೂ ಸರ್ಕಾರವನ್ನು ಮತ್ತು ಭಾರತವನ್ನು ಹೇಗೆ ಕಾಪಾಡಿತು ನೋಡಿ

    ಭಾರತದಲ್ಲೇ ಮೊದಲ ವಿದ್ಯುತ್ ಪಡೆದ ನಗರ
    ಭಾರತದಲ್ಲೇ ಅತಿ ಹೆಚ್ಚು ಚರ್ಚ್ಗಳನ್ನ ಒಂದಿರೊ ನಗರ
    ರೈಲ್ವೆಯನ್ನು ಹೊಂದಿದ ಕರ್ನಾಟಕದ ಮೊದಲ ನಗರ

  • ಸುದ್ದಿ

    ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಸುಮಲತಾರವರು, ಸಿದ್ದರಾಮಯ್ಯನವರ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ರು.!?

    ಮಂಡ್ಯ ಅಖಾಡದಲ್ಲಿ ಚುನಾವಣಾ ಕಾವು ಜೋರಾಗಿದೆ. ಇಂದು ಮಳವಳ್ಳಿಯ ದಳವಾಯಿ ಕೋಡಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‍ ಅಬ್ಬರದ ಪ್ರಚಾರ ನಡೆಸಿದ್ರು. ಮಂಡ್ಯದಲ್ಲಿ ಮೋಸದ ಮತ್ತು ಕುತಂತ್ರದ ರಾಜಕಾರಣ ಮಾಡಲಾಗ್ತಿದೆ ಅಂತಾ ಆತಂಕ ವ್ಯಕ್ತಪಡಿಸಿದ್ರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮನಪೂರ್ವಕವಾಗಿ ಒಪ್ಪಿಕೊಂಡು ಜೆಡಿಎಸ್ ಪ್ರಚಾರಕ್ಕೆ ಬಂದಿಲ್ಲ. ಆದ್ರೆ ಜೆಡಿಎಸ್‍ ನ ಬ್ಲಾಕ್‍ ಮೇಲ್‍ ತಂತ್ರಕ್ಕೆ ಹೆದರಿ ಮಂಡ್ಯದಲ್ಲಿ ಪ್ರಚಾರಕ್ಕೆ ಬಂದಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರು ಪಕ್ಷೇತರ ಅಭ್ಯರ್ಥಿಗೆ ಮತ ಹಾಕಬೇಡಿ ಅಂತಾ ಒಲ್ಲದ…

  • ಸುದ್ದಿ

    ನಟ ಯಶ್ ಕುಟುಂಬದ ವಿರುದ್ಧ ದೂರು ದಾಕಲೆ…ಕಾರಣ?

    ನಟ ರಾಕಿಂಗ್ ಸ್ಟಾರ್ ಯಶ್ 9 ವರ್ಷಗಳಿಂದ ಇದ್ದ ಬಾಡಿಗೆ ಮನೆಯನ್ನು ಖಾಲಿ ಮಾಡುವ ಸಂದರ್ಭದಲ್ಲಿ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಮೋಡ್, ಲೈಟಿಂಗ್ಸ್ ವೈರಿಂಗ್, ಡೋರ್ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂದು ಹೇಳಲಾಗಿದ್ದು, ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮನೆ ಮಾಲೀಕರು ಮುಂದಾಗಿದ್ದಾರೆ. ಬಾಡಿಗೆ ಮನೆ ಡ್ಯಾಮೇಜ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ಗಿರಿನಗರ ಪೊಲೀಸ್…

  • ಶಿಕ್ಷಣ

    ಪಿಯುಸಿ ಬಳಿಕ ಡಿಪ್ಲೊಮಾ 2ನೇ ವರ್ಷಕ್ಕೆ ಸೇರಲು ಅವಕಾಶ…!

    ಬೆಂಗಳೂರು: ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ 2ನೇ ವರ್ಷಕ್ಕೆ ದಾಖಲಾಗಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಬ್ರಿಡ್ಜ್ ಕೋರ್ಸ್‌ ಕೂಡ ಸಿದ್ಧವಾಗುತ್ತಿದೆ. ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್‌ ಎಂಟ್ರಿ ಮೂಲಕ ಎಂಜಿನಿಯರಿಂಗ್‌ ಎರಡನೇ ವರ್ಷಕ್ಕೆ ಸೇರಿಕೊಳ್ಳಲು ಈ ವರೆಗೂ ಅವಕಾಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ದಾಖಲಾಗಲು ಅವಕಾಶ…