ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನೀಶ್ ಪಾಂಡೆ ಹಾಗೂ ಆಶ್ರಿತಾ ಸುಮಾರು ದಿನಗಳಿಂದ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ಮದುವೆಯಾಗುವ ಮೂಲಕ ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ. ಹೌದು ಈಗ ಭಾರತ ತಂಡದ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್ನಲ್ಲಿ ಮನೀಶ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ. ಹಾಗಾಗಿ ಮನೀಶ್ ಮದುವೆಯ ಫೋಟೋವನ್ನು ಮೊದಲು ಸನ್ರೈಸರ್ಸ್ ಹೈದರಾಬಾದ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಪ್ರಕಾರ ಮದುವೆಯ ಆಚರಣೆ ಇನ್ನೂ ಎರಡು ದಿನಗಳ ಕಾಲ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದಾರೆ.
2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶ್ರಿತಾ ‘ಇಂದ್ರಜಿತ್’, ‘ಒರು ಕಣ್ಣಿಯುನ್ ಮೂನು ಕಲಾವಾನಿಕಲಂ’, ‘ಉದಯಂ ಎನ್.ಎಚ್4’ ಸೇರಿದಂತೆ ಹಲವು ಚಿತಗಳಲ್ಲಿ ನಟಿಸಿದ್ದಾರೆ. ಬ್ಯೂಟಿ ಕಾಂಪಿಟೇಶನ್ ಭಾಗವಹಿಸಿದ ಆಶ್ರಿತಾ ಜಾಹೀರಾತುಗಳಲ್ಲಿಯೂ ಅಭಿನಯಿಸಿದ್ದಾರೆ.
ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ಅವರ ನಾಯಕತ್ವದಲ್ಲಿ ತಮಿಳುನಾಡಿನ ತಂಡದ ವಿರುದ್ಧ ಕರ್ನಾಟಕ ತಂಡ ಜಯಗಳಿಸಿದೆ. ಈ ಪಂದ್ಯದಲ್ಲಿ ಮನೀಶ್ 60 ರನ್ಗಳನ್ನು ಗಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಾಳಿಕೋರರಿಂದ ನೂರಾರು ಕ್ರೈಸ್ತರನ್ನು ರಕ್ಷಿಸಿದ ಮುಸ್ಲಿಂ ಧರ್ಮಗುರುವಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ ಅಮೆರಿಕಾಲಾಗೊಸ್, ನೈಜೀರಿಯಾ, ಜು.19: ಮಧ್ಯ ನೈಜೀರಿಯಾದಲ್ಲಿ ದಾಳಿಯೊಂದರ ಸಂದರ್ಭ ತನ್ನ ನಿವಾಸ ಹಾಗೂ ಮಸೀದಿಯಲ್ಲಿ 262 ಕ್ರೈಸ್ತರಿಗೆ ಆಶ್ರಯವೊದಗಿಸಿದ 83 ವರ್ಷದ ಮುಸ್ಲಿಂ ಧರ್ಮಗುರು ಇಮಾಮ್ ಅಬೂಬಕರ್ ಅಬ್ದುಲ್ಲಾಹಿ ಎಂಬವರನ್ನು ಅಮೆರಿಕಾ ಸರಕಾರ ಗೌರವಿಸಿದೆ. ಅಬ್ದುಲ್ಲಾಹಿ ಅವರ ಜತೆ ಸುಡಾನ್, ಇರಾಕ್, ಬ್ರೆಝಿಲ್ ಹಾಗೂ ಸೈಪ್ರಸ್ ದೇಶಗಳ ನಾಲ್ಕು ಮಂದಿ ಇತರ ಧಾರ್ಮಿಕ ನಾಯಕರಿಗೆ 2019ನೇ ವರ್ಷದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿ (ಇಂಟರ್…
ರಾತ್ರಿ ಮಾಡಿದ ಅನ್ನ ಹಾಗೆಯೇ ಉಳಿದು ಬಿಟ್ಟದೆ, ಸುಮ್ಮನೆ ವ್ಯರ್ಥ ಆಯಿತು ಎಂದು ಚಿಂತಿಸಬೇಡಿ. ಉಳಿದ ಅನ್ನದಲ್ಲಿ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಕೆಲವು ಅಂಶಗಳಿವೆ. ಇಲ್ಲಿದೆ ನೋಡಿ ಉಳಿದ ಅನ್ನದಲ್ಲಿನ ನಿಮ್ಮ ಆರೋಗ್ಯದ ಗುಟ್ಟು. ಎಲ್ಲಾದಕ್ಕೂ ನೀಲಿ ಪ್ಯಾಕೆಟ್ಟೇ ಸರಿಯಲ್ಲಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟ್ಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗ್ತವೆ. ಯಾವ ಉಪಯೋಗಕ್ಕೆ…
ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು…
ವಿಜ್ಞಾನಿಗಳು ಆಧುನಿಕ ಉಪಕರಣಗಳಿಂದ ಕಂಡುಹಿಡಿಯುತ್ತಿರುವ ಎಷ್ಟೋ ಸಂಶೋಧನೆಗಳನ್ನು, ನಮ್ಮ ಋಷಿ ಮುನಿಗಳು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ.
ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.
ಟೈಟಾನಿಕ್ ಸಿನಿಮಾವನ್ನ ಯಾರು ತಾನೇ ನೋಡಿಲ್ಲ ಹೇಳಿ, ಭಾರಿ ಗಾತ್ರದ ಈ ಹಡಗು ಪ್ರಯಾಣಿಸಿದ ರೀತಿ ಹಾಗು ಹೇಗೆ ಮುಳುಗಿತು ಎನ್ನುವುದನ್ನು ವಿವರವಾಗಿ ಹೇಳಿಕೊಟ್ಟ ಈ ಚಿತ್ರ ಇಂದಿಗೂ ದಾಖಲೆಯನ್ನು ಬರೆದಿದೆ. ಹಾಲಿವುಡ್ ನ ಸಿನಿಮಾ ನಿರ್ಮಾಣದ ರೂಪುರೇಷೆಯನ್ನೇ ಬದಲಿಸಿದ್ದ ಈ ಚಿತ್ರ ಅಂದಿನ ಕಾಲದ ಬಿಗ್ ಬಜೆಟ್ ಮೂವಿ ಆಗಿತ್ತು, ಚಿತ್ರ ನೋಡಿದವರು ಕೂಡ ಒಂದು ಕ್ಷಣ ದಂಗಾಗಿದ್ದರು, ಅಷ್ಟು ಎಫೆಕ್ಟ್ ನೀಡಿ ಇಡೀ ಚಿತ್ರ ತಂಡ ಇದೊಂದು ಘಟನೆಯನ್ನು ಜನರ ಮುಂದೆ ಇಡಲು ಪ್ರಯತ್ನಿಸಿದ್ದರು….