ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ದೇಶದಲ್ಲಿ ಪ್ಲಾಸ್ಟಿಕ್ ನಿಷೇದಕ್ಕೆ ಇರುವ ಶಿಕ್ಷೆ ನಮ್ಮ ಭಾರತಕ್ಕೂ ಬಂದ್ರೆ ಸ್ವಚ್ಛ ಭಾರತ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆ ಗೊತ್ತಾ ಅಲ್ಲಿನ ಶಿಕ್ಷೆ ತುಂಬ ಕಠಿಣವಾಗಿದೆ.ಭಾರತದಲ್ಲಿ ಪ್ಲಾಸ್ಟಿಕ್ ನಿಷೇಧವಾಗಿದ್ದರೂ ಇದರ ಬಳಕೆ ಮಾತ್ರ ನಿಂತಿಲ್ಲ. ಆಗಾಗ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಆಫ್ರಿಕಾ ಖಂಡದಲ್ಲಿರುವ ಕೀನ್ಯಾ ದೇಶ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಕಾನೂನು ಜಾರಿಗೆ ತಂದಿದೆ.

ಪ್ಲಾಸ್ಟಿಕ್ ಉತ್ಪಾದನೆ, ಮಾರಾಟ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಯಾರಾದರೂ ಬಳಸಿದರೆ ಅವರಿಗೆ ನಾಲ್ಕು ವರ್ಷ ಕಠಿಣ ಜೈಲು ಶಿಕ್ಷೆ ಅಥವಾ 40 ಸಾವಿರ ಡಾಲರ್ (ಅಂದಾಜು 25.60 ಲಕ್ಷ ರೂ.) ದಂಡ ವಿಧಿಸುವ ಹೊಸ ಕಾನೂನನ್ನು ಕೀನ್ಯಾ ಸರ್ಕಾರ ಸೋಮವಾರದಿಂದಲೇ ಜಾರಿಗೆ ತಂದಿದೆ. ಇದು ಪ್ಲಾಸ್ಟಿಕ್ ತಡೆಗಟ್ಟಲು ದೇಶವೊಂದು ಜಾರಿಗೆ ತಂದಿರುವ ವಿಶ್ವದ ಕಠಿಣ ಕಾನೂನು ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.

ಕೀನ್ಯಾದ ಹೊಸ ಕಾನೂನು ಹೇಗಿದೆ ಎಂದರೆ ನೇರವಾಗಿ ಪೊಲೀಸರು ಯಾವುದೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬಹುದು, ಪ್ಲಾಸ್ಟಿಕ್ ಜನರ ಕೈಯಲ್ಲಿ ಇದ್ದರೂ ದಂಡ ಹಾಕಬಹುದಾಗಿದೆ.ಸಮುದ್ರದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಜಲಚರಗಳ ಆಹಾರಕ್ಕೆ ಕಷ್ಟವಾಗುತ್ತಿದೆ. ಡಾಲ್ಫಿನ್ ಮತ್ತು ತಿಮಿಂಗಿಲಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‍ಗಳು ಸೇರಿ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಈ ಕಠಿಣ ಕಾನೂನು ಜಾರಿಗೆ ತರಲಾಗಿದೆ.

“ಇದೇ ರೀತಿ ಮುಂದುವರೆದರೆ 2050ರ ವೇಳೆಗೆ ನಾವು ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಗಳನ್ನು ನೋಡಬಹುದು. ಪ್ಲಾಸ್ಟಿಕ್ ಬಳಕೆಗೆ ಈಗಲೇ ನಾವು ನಿರ್ಬಂಧ ಹೇರದಿದ್ದರೆ, ಭವಿಷ್ಯದಲ್ಲಿ ಮಾನವನ ಆಹಾರಕ್ಕೆ ಸಮಸ್ಯೆ ಆಗಬಹುದು” ಎಂದು ಕೀನ್ಯಾದ ಸಮುದ್ರ ಕಸದ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಬೀಬ್ ಉಲ್ ಹಬ್ರ್ ತಿಳಿಸಿದ್ದಾರೆ.

ಕೀನ್ಯಾ ತಯಾರಕ ಸಂಘದ ವಕ್ತಾರರು ಪ್ರತಿಕ್ರಿಯಿಸಿ, ಸರ್ಕಾರದ ಹೊಸ ಕಾನೂನಿನಿಂದ 60 ಸಾವಿರ ಮಂದಿಯ ಉದ್ಯೋಗಕ್ಕೆ ಹೊಡೆತ ಬೀಳುತ್ತದೆ ಅಷ್ಟೇ ಅಲ್ಲದೇ 176 ಉತ್ಪಾದನಾ ಘಟಕಗಳನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
– MAYOON N ಮೆದುಳಿನ ಕ್ಯಾನ್ಸರ್ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು. ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.ಮೆದುಳು ಅಲ್ಲದೇ (ನ್ಯುರಾನ್ಗಳು, ಗ್ಲಿಯಾಲ್ ಕೋಶಗಳು(ಅಸ್ಟ್ರಿಸೈಟ್ಗಳು, ಒಲಿಗೊದೆಂಡ್ರೊಸೈಟ್ಗಳು, ಎಪೆಂಡಿಮಲ್ ಕೋಶಗಳು , ಮೈಲಿನ್-ಉತ್ಪಾದನೆಯ ಸ್ಕಾನ್ ಕೋಶಗಳು), ಲಿಂಫ್ಅಟಿಕ್ ಅಂಗಾಂಶ, ರಕ್ತ ನಾಳಗಳು ), ಕ್ರೇನಿಯಲ್ ನರಗಳಲ್ಲಿರುವವಗಳು , ಮೆದುಳಿನಲ್ಲಿ ಆವರಿಸಿದ (ಮೆನಿಂಗ್ಸ್), ಬುರುಡೆ, ಪಿಟ್ಯುಟರಿ ಮತ್ತು ಪೈನಿಯಲ್ ಗ್ಲಾಂಡ್, ಅಥವಾ ಕ್ಯಾನ್ಸರ್ಗಳ ಮೂಲಕ ಹರಡಿದ್ದು (ಮೆಟಾಸ್ಟಿಕ್ ಗೆಡೈಗಳು).ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ…
ಮಾಡೆಲ್ ಮತ್ತು ನಟಿ ಆಮಿ ಜಾಕ್ಸನ್ ಅವರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿರುವ ‘ದಿ ವಿಲನ್’ ಚಿತ್ರದ ನಾಯಕಿ ಆಮಿ ಜಾಕ್ಸನ್ ಈ ವಿಚಾರ ಬಹಿರಂಗಗೊಳಿಸುತ್ತಿದ್ದಂತೆಯೇ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ. ಆದರೆ, ಮದುವೆಯ ಮೊದಲೇ ಆಕೆ ಗರ್ಭಿಣಿಯಾಗಿರುವುದು ಅಭಿಮಾನಿಗಳ ತಲೆ ಸುತ್ತುವಂತೆ ಮಾಡಿದೆ.ನಟಿ ಆಮಿ ಜಾಕ್ಸನ್ ಅವರು ತಾವು ಮಗುವಿಗಾಗಿ ಕಾಯುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.ತಾಯಂದಿರ…
ಪ್ರತಿನಿತ್ಯ ಎದುರಿಸುವ ಆಧುನಿಕ ಬದುಕಿನ ಗೋಜಲು ಗದ್ದಲಗಳಿಗೂ ಹುಟ್ಟಿದ ಜನ್ಮರಾಶಿಗಳಿಗೂ ಒಂದು ನಿಕಟ ಸಂಬಂಧ ಇದೆ ಎಂಬುದು ಲಕ್ಷಾಂತರ ಜನರ ನಂಬಿಕೆ. ಪ್ರಪಂಚದಾದ್ಯಂತ ನಿತ್ಯ ರಾಶಿಗಳ ಆಧಾರದ ಮೇಲೆ ದಿನವನ್ನು ಎದುರುಗೊಳ್ಳುವ ಸಂಪ್ರದಾಯವಿದೆ. ಬದುಕಿನ ಭವಿಷ್ಯವನ್ನು ಒಟ್ಟು 12 ರಾಶಿಗಳ ಆಧಾರದ ಮೇಲೆ ಹೇಳಿಕೊಂಡು ಬರಲಾಗುತ್ತಿದೆ…. ಈ ಹಿನ್ನೆಲೆಯಲ್ಲಿ ಇದು ನಿತ್ಯ ಭವಿಷ್ಯ. ನಿಮ್ಮ ನಿಮ್ಮ ರಾಶಿಯ ಫಲಾಫಲವನ್ನು ವಯೋಮಾನಕ್ಕೆ ಅನುಗುಣವಾಗಿಯೂ ಇಲ್ಲಿ ನೀಡಲಾಗಿದೆ. ದಿನ ಆರಂಭಕ್ಕೆ ಉತ್ತಮ ಮಾರ್ಗದರ್ಶಿ ಇದು. ಮೇಷ… ಯುವಜನರಿಗೆ: ಗೆಳತಿಯೊಬ್ಬಳ ಸಹವಾಸದಿಂದ…
ಹಣ್ಣುಗಳು ದೇಹದ ಆರೋಗ್ಯಕ್ಕೆ ಬಹಳಷ್ಟು ಉತ್ತಮ ಎನ್ನುವುದನ್ನು ನಾವೆಲ್ಲರೂ ತಿಳಿದಿದ್ದೇವೆ, ಆದರೆ ಯಾವ ಯಾವ ಹಣ್ಣುಗಳು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತವೆ ಮತ್ತು ಅವು ನಮ್ಮ ಆರೋಗ್ಯವೃದ್ಧಿಗೆ ಹೇಗೆ ಸಹಕರಿಸುತ್ತವೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಈ ಭೂಮಿಯ ಮೇಲೆ ಹಲವು ರೀತಿಯ ಹಣ್ಣುಗಳಿವೆ ಮತ್ತು ಒಂದೊಂದು ಹಣ್ಣು ಕೂಡ ಒಂದೊಂದು ರೀತಿಯ ಗುಣಲಕ್ಷಣಗಳನ್ನ ಹೊಂದಿರುತ್ತದೆ, ಇನ್ನು ಹಣ್ಣುಗಳನ್ನು ತಿನ್ನಲೂ ಕ್ರಮವಿದೆ, ಹಾಗಾದರೆ ಹಣ್ಣುಗಳನ್ನ ತಿನ್ನುವಾಗ ಅನುಸರಿಸಬೇಕಾದ ಕ್ರಮಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ…
ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಆಗುತ್ತೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟ ಎಂದು ಹೇಳುವ ಮಾತನ್ನ ಕೇಳಿರುತ್ತೇವೆ. ಹಾರ್ಟ್ ಅಟ್ಯಾಕ್ ಆಗುವುದೇ ಹಾಗೆ.
ಸುಂದರ್ ಪಿಚೈ ಅವರು ಮೊದಲು ಕಂಪನಿಯ ಇಂಟರ್ ನೆಟ್ ವ್ಯವಹಾರವನ್ನು ಉನ್ನತಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್ ಮತ್ತು ಇಂಜಿನಿಯರಿಂಗ್ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.