ಸ್ಪೂರ್ತಿ

ತಿಂಗಳಿಗೆ 35 ಸಾವಿರ ದುಡಿಯುತ್ತಿರುವ 3 ನೇ ತರಗತಿ ಓದಿರುವ ಹುಡುಗ, ಹೇಗೆ ಗೊತ್ತಾ.

89

ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ.

ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು ಹೊಟ್ಟೆ ಪಾಡಿಗಾಗಿ ಏನಾದರು ಮಾಡಲೇಬೇಕಲ್ವಾ ಸರ್ ಎಂದ.. ಈ ಮಾತನ್ನು ಕೇಳಿ ಬೇಸರಗೊಂಡ ಸಾಫ್ಟವೇರ್ ಉದ್ಯಮಿ, ಒಂದು ಸಮೋಸ ಮಾರಿದರೆ ನಿನಗೆ ಎಷ್ಟು ಸಿಗುತ್ತದೆ? ದಿನಕ್ಕೆ ಎಷ್ಟು ಸಮೋಸ ಮಾರ್ತ್ಯಪ್ಪ? ಎಂದು ಕೇಳಿದ. ಇದಕ್ಕೆ ಸಮೋಸ ಮಾರುವವನು, ಸಾರ್ ಒಂದು ಸಮೋಸ ಮಾರಿದರೆ 75 ಪೈಸೆ ಸಿಗುತ್ತದೆ. ಸೀಸನ್ ಸಮಯದಲ್ಲಿ ದಿನಕ್ಕೆ ಮೂರರಿಂದ ಮೂರು ವರೆ ಸಾವಿರ ಮಾರುತ್ತೇನೆ, ಸೀಸನ್ ಇಲ್ಲದಿದ್ದಾಗ ದಿನಕ್ಕೆ ಎರಡು ಸಾವಿರ ಸೇಲ್ ಮಾಡುತ್ತೇನೆ ಎಂದು ಹೇಳಿದ !

ಮನಸಲ್ಲೇ ಯೋಚಿಸದ ಆ ಉಧ್ಯಮಿ ದಿನಕ್ಕೆ ಎರಡು ಸಾವಿರ ಸಮೋಸ ಮಾರಿದರೆ, ಒಂದು ಸಾವಿರದ ಐನೂರು ರೂ ಆದಾಯ, ಅದೇ ತಿಂಗಳಿಗೆ 45 ಸಾವಿರ ! ನನ್ನ ಸಂಬಳ ತಿಂಗಳಿಗೆ ಕೇವಲ 25 ಸಾವಿರ, ನನ್ನ ಕೆಲಸದ ಒತ್ತಡದಲ್ಲಿ ನನ್ನ ನಗುವನ್ನೇ ಮರೆತು ಹೋಗಿದ್ದೇನೆ, ಆದರೆ ಈ ಹುಡುಗ ಹಾಗಲ್ಲ, ಎಂದುಕೊಂಡು ಮತ್ತೇ ಸಮೋಸ ಹುಡುಗನಿಗೆ, ನೀವೆ ಸಮೋಸವನ್ನು ತಯಾರು ಮಾಡುತ್ತೀರ ಎಂದು ಪ್ರಶ್ನಿಸಿದ? ಇದಕ್ಕೆ ಸಮೋಸ ಮಾರುವವನು, ಇಲ್ಲಾ ಸಾರ್ ನಮ್ಮ ಯಜಮಾನ ಬೇರೆಯವರ ಬಳಿ ಕೊಂಡುಕೊಂಡು ನಮಗೆ ಕೊಡುತ್ತಾನೆ ಎಂದು ಹೇಳಿದ.  ಈ ಕೆಲಸ ಬಿಟ್ಟು ಬೇರೆ ಏನು ಮಾಡುತ್ತೀಯಾ? ಎಂದು ಉಧ್ಯಮಿ ಕೇಳಿದ.. ಕಳೆದ ವರ್ಷ ನನ್ನ ಅಕ್ಕನಿಗೆ ಮದುವೆ ಮಾಡಿದೆ, ನಂತರ ನಮ್ಮ ಊರಿನಲ್ಲಿ ಒಂದು ಜಮೀನು ಕೂಡ ಖರೀದಿ ಮಾಡಿದ್ದೇನೆ. ಅದರ ಬೆಲೆ ಈಗ ಸುಮಾರು 15 ಲಕ್ಷವಿದೆ. ಈ ಮಾತನ್ನು ಕೇಳಿ ಆಶ್ಚರ್ಯಚಕಿತನಾದ ಇಂಜಿನಿಯರ್ ನೀನು ಎಲ್ಲಿಯ ತನಕ ವ್ಯಾಸಾಂಗ ಮಾಡಿದ್ದೀಯಾ ಎಂದು ಕೇಳಿದ.

ಇದಕ್ಕೆ ಉತ್ತರಿಸಿದ ಹುಡುಗ, ಸರ್ ನಾನು ಮೂರನೇ ತರಗತಿವರೆಗೂ ಓದಿದ್ದೇನೆ, ಇದಾದ ಮೇಲೆ ಓದಲು ಸಾಧ್ಯವಾಗಲಿಲ್ಲ ಎಂದು ಹೇಳಿದ, ಇದಕ್ಕೆ ಉಧ್ಯಮಿ ಯಾಕೆ ಮುಂದೆ ಓದಬೇಕು ಅನಿಸಲಿಲ್ಲವಾ? ಸಾರ್ ನನ್ನ ವ್ಯಾಪಾರವನ್ನು ನನ್ನ ಮಕ್ಕಳಿಗೆ ಕೊಡಬಹುದು, ಆದರೆ ನಿಮ್ಮ ಉದ್ಯೋಗ ನಿಮ್ಮ ಮಕ್ಕಳಿಗೆ ಕೊಡಲು ಸಾಧ್ಯವಾಗುವುದಿಲ್ಲ ಅಲ್ಲವಾ? ಇದೇ ನನಗೆ ಜನ್ಮ ಕೊಟ್ಟ ತಂದೆ ಕಲಿಸಿದ ನೀತಿ, ಹಣವನ್ನು ಹೇಗೆ ಸಂಪಾದನೆ ಮಾಡಬೇಕು ಎಂಬುದು ನನಗೆ ಗೊತ್ತಾಗಿದೆ, ಹಾಗಾಗಿ ಓದು ನನಗೆ ಅವಶ್ಯಕತೆ ಇಲ್ಲ. ಸರ್ ನನ್ನ ಸ್ಟೇಷನ್ ಬಂತು ನಾನು ಹೊರಡುತ್ತೇನೆ ಎಂದು ಹೇಳಿ ಹೊರಟು ಬಿಟ್ಟ ಸಮೋಸ ಮಾಡುವ ಹುಡುಗ..

ನೋಡಿದ್ರಲ್ಲ ವಿದ್ಯೆ ಎಂಬುದು ಬರೀ ಜ್ಞಾನಾರ್ಜನೆಗೆ ಮತ್ತು ಒಳ್ಳೆಯ ನಾಗರೀಕನಾಗಿ ಬದುಕಲು, ದಯವಿಟ್ಟು ಓದನ್ನು ವ್ಯವಹಾರಕ್ಕೆ ಉಪಯೋಗಿಸಬೇಡಿ. ವಿದ್ಯೆ ಇಲ್ಲದವರನ್ನು ಕೀಳು ಮಟ್ಟದಲ್ಲಿ ನೋಡಬೇಡಿ, ಓದಿದವನಿಗೆ ಒಂದೇ ಕೆಲಸ, ಓದಾದೇ ಇಲ್ಲದವನಿಗೆ ಮಾಡಿದ್ದೆಲ್ಲಾ ಕೆಲಸಾನೇ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 18 ಜನವರಿ, 2019 ಅಧ್ಯಯನಗಳನ್ನು ತಪ್ಪಿಸಿಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ ನಿಮ್ಮ ಪೋಷಕರಿಗೆ ಕೋಪ ಬರಿಸಬಹುದು. ವೃತ್ತಿ…

  • ಉಪಯುಕ್ತ ಮಾಹಿತಿ

    ಬೆಳಗಿನ ತಿಂಡಿ ಸ್ಕಿಪ್ ಮಾಡುತ್ತಿದ್ದೀರಾ; ಹಾಗಾದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ!

    ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ನಮ್ಮ ಜನರಿಗೆ ಇರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುವವರೇ ಹೆಚ್ಚು. ಕೆಲವರು ಹಾಸಿಗೆಯಿಂದ ಏಳುವುದು ತಡ ಮಾಡಿಕೊಂಡು ತಿನ್ನದೆ ಹಾಗೆ ಹೊರಟರೆ, ಇನ್ನು ಕೆಲವರಿಗೆ ಬೆಳಗ್ಗೆ ತಿನ್ನಬೇಕೆಂದರೆ ಅಲರ್ಜಿ. ಆದರೆ ನೀವು ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿ ನೋಡಿ. ಹೃದಯಾಘಾತದ ಸಾಧ್ಯತೆ ಜಾಮಾ…

  • ಸುದ್ದಿ

    ರಾಜ್ಯ ಸರ್ಕಾರದ ಹೊಸ ಟ್ರಾಫಿಕ್​ ರೂಲ್ಸ್ ಕಡಿತ ಬಗ್ಗೆ ಆದೇಶ ನೀಡಿದ ಮುಖ್ಯಮಂತ್ರಿ ಬಿಎಸ್​ವೈ,!ಇಷ್ಟಕ್ಕೂ ಏನು ಆ ಆದೇಶ ತಿಳಿಯಿರಿ,.?

    ಬೆಂಗಳೂರು,  ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಗೆ ಹಲವು ವಾಹನ ಸವಾರರು ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತಿದ್ದರು. ಇದರ ಬೆನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರ ಹೊಸ ಟ್ರಾಫಿಕ್​ ಫೈನ್ ಇಳಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್​ ಮಾದರಿಯಲ್ಲಿ ರಾಜ್ಯದಲ್ಲೂ ಟ್ರಾಫಿಕ್ ಫೈನ್ ಇಳಿಕೆ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂದ ಅವರು, ನಮ್ಮ ಅಧಿಕಾರಿಗಳ ಚರ್ಚೆ ನಡೆಸಿದ…

  • ಸುದ್ದಿ

    ಪಿಂಚಣಿಗಾಗಿ ರೈಲ್ವೆ ಸಿಬ್ಬಂದಿ ಮಗ ಲಿಂಗ ಬದಲಿಸಿಕೊಂಡ…!

    ರೈಲ್ವೆ ಇಲಾಖೆ ಕೇಂದ್ರ ಸರ್ಕಾರಕ್ಕೊಂದು ಪತ್ರ ಬರೆದಿದೆ. ರೈಲ್ವೆ ಇಲಾಖೆಯಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆಯಿದೆ. ಅದಕ್ಕೆ ಕೆಲವೊಂದು ನಿಯಮಗಳಿವೆ. ಆದ್ರೆ ಒಂದು ವರ್ಷದ ಹಿಂದೆ ರೈಲ್ವೆ ಸಿಬ್ಬಂದಿ ಪುತ್ರ ಈಗ ಪುತ್ರಿಯಾಗಿರುವ ವ್ಯಕ್ತಿ ಕುಟುಂಬ ಪಿಂಚಣಿಗಾಗಿ ಪತ್ರ ಬರೆದಿದ್ದಾನೆ. ಇದೇ ವಿಚಾರ ಸದ್ಯ ಕೇಂದ್ರದ ಮೆಟ್ಟಿಲೇರಿದೆ. 2017ರಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅವ್ರ 32 ವರ್ಷದ ಮಗ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಾಸ್ತವವಾಗಿ ಸಿಬ್ಬಂದಿ ಹಣವನ್ನೇ ಕುಟುಂಬ ಆಶ್ರಯಿಸಿಕೊಂಡಿದ್ದರೆ ಮಾತ್ರ ಪಿಂಚಣಿ ನೀಡಲಾಗುತ್ತದೆ. 25 ವರ್ಷದೊಳಗಿನ ಮದುವೆಯಾಗದ…

  • ಸುದ್ದಿ

    ಕಾರ್ನಾಡ್ ಅವರ ಕೊನೆಯ ಇಚ್ಚೆಯಂತೆ ಅಂತ್ಯಸಂಸ್ಕಾರ…….

    ಗಿರೀಶ್ ಕಾರ್ನಾಡ್ ಅವರ ಆಸೆಯಂತೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ. ನನ್ನ ಅಂತ್ಯ ಸಂಸ್ಕಾರಕ್ಕೆ ಯಾವುದೇ ರಾಜಕಾರಣಿ, ಸಾರ್ವಜನಿಕರು ಬರಬಾರದು. ಸರ್ಕಾರಿ ಗೌರವ, ಸರ್ಕಾರಿ ಜಾಗದ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಮಾತ್ರ ಬರಬೇಕು. ಯಾವುದೇ ವಿಧಿವಿಧಾನವನ್ನು ಅನುಸರಿಸಬಾರದು. ಅಂತಿಮ ನಮನವನ್ನು ಸಲ್ಲಿಸಬಾರದು ಎಂದು ಗಿರೀಶ್ ಕಾರ್ನಾಡ್ ತಮ್ಮ ಪತ್ನಿ ಸರಸ್ವತಿ ಜೊತೆ ಹೇಳಿದ್ದರು. ಮನೆ ಬಳಿ ಯಾರೂ ಬಂದು ನಮನ ಸಲ್ಲಿಸಬಾರದು. ಯಾವುದೇ ಸಂಪ್ರದಾಯ, ವಿಧಿ ವಿಧಾನ ಇಲ್ಲದೇ ಸಂಸ್ಕಾರ ಮಾಡಬೇಕು ಎಂದು ಕೊನೆಯ…

  • ಸುದ್ದಿ

    ಆದಿವಾಸಿಗಳ ಪಾಲಿಗೆ ಮರಣ ಶಾಸನವಾದ ನೂತನ ಅರಣ್ಯ ಕಾಯ್ದೆ,.ಇದನ್ನೊಮ್ಮೆ ಓದಿ …!

    ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಫೆಬ್ರವರಿ 13ರಂದು ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ…