ಆರೋಗ್ಯ

ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾದ ಪೋಷಕಾಂಶಗಳಿವೇ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

370

ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾಗ ಪೋಷಕಾಂಶಗಳು ಇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಕಾಳುಗಳನ್ನ ಮೊಳಕೆ ಕಟ್ಟಿ ತಿಂದರೆ ಇನ್ನು ಉತ್ತಮ. ಬನ್ನಿ ಹಾಗಾದರೆ ಮೊಳಕೆ ಕಾಳುಗಳಿಂದ ಏನೆಲ್ಲಾ ಪ್ರಯೋಜನಗಳು ನಮಗೆ ಲಭ್ಯ ಎಂಬುದನ್ನ ತಿಳಿದು ಕೊಳ್ಳೋಣ.

1.ಅಜೀರ್ಣತೆಗೆ:-

 

ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತದೆ.

 2.ರೋಗ ನಿರೋಧಕ ಶಕ್ತಿ:-

ಮೊಳಕೆ ಕಾಳಿನಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಅಂತೆಯೇ ಇದರಲ್ಲಿ ವಿಟಮಿನ್ ಎ ಅಂಶವೂ ಇದೆ.

3.ರಕ್ತ ಪರಿಚಲನೆಗೆ:-

ರಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ. ಇದರಲ್ಲಿ ಕಬ್ಬಿಣ ಮತ್ತು ತವರದ ಅಂಶ ಸಾಕಷ್ಟಿದ್ದು, ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಎಷ್ಟು ಬೇಕೋ ಅಷ್ಟು ಇರುವಂತೆ ನೋಡಿಕೊಳ್ಳುತ್ತದೆ.

4. ತೂಕ ಇಳಿಕೆಗೆ:-

ತೂಕ ಇಳಿಸಲು ಡಯಟ್ ಮಾಡುವವರ ಆಹಾರದಲ್ಲಿ ಮೊಳಕೆ ಕಾಳು ಇರಲೇ ಬೇಕು. ಇದರಲ್ಲಿ ಫೈಬರ್ ಅಂಶ ಸಾಕಷ್ಟಿದ್ದು, ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದಾಗಿ ಆಗಾಗ ತಿನ್ನಬೇಕಾಗುವುದಿಲ್ಲ. ನಾಲಿಗೆ ಮೇಲೂ ಕಡಿವಾಣ ಹಾಕಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ