ಹಣ ಕಾಸು

ತನ್ನ 6ನೇ ವಯಸ್ಸಿಗೆ ಈ ಬಾಲಕ ಕೋಟಿಗಳ ಸಂಪಾದನೆ ಮಾಡಿದ್ದು ಹೇಗೆ..?ಈ ಪೋರನ ಸಂಪಾದನೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ..!

170

ಜಗತ್ತಿನಲ್ಲಿ ಡಿಜಿಟಲ್ ಕ್ರಾಂತಿ ಏನೆಲ್ಲಾ ಪ್ರಭಾವ ಬೀರಿದೆಯೆಂದರೆ, ಆಟವಾಡುವ ಮಕ್ಕಳು ಕೂಡ ಕೋಟಿಗಳ ಅಧಿಪತಿಗಳಾಗಿದ್ದಾರೆ ಎಂದರೆ ನೀವು ನಂಬಲೇಬೇಕು.ಇದಕ್ಕೆ ವಯಸ್ಸಿನ ಮಿತಿಯಿಲ್ಲ, ವಿಧ್ಯಾಭ್ಯಾಸದ ಅವಶ್ಯಕತೆಯಿಲ್ಲ, ಎಲ್ಲಾ ಅವರವರ ಬುದ್ದಿವಂತಿಕೆಯ ಮೇಲೆ ನಡೆಯುತ್ತದೆ.

ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದು ಸಹಜ. ಆದ್ರೆ ಅಮೇರಿಕಾದ 6 ವರ್ಷದ ಈ ಪೋರ ತಾನು ಆಟವಾದುವುದರ ಮೂಲಕವೇ ಕೋಟಿಗಳ ಸಂಪಾದನೆ ಮಾಡಿದ್ದಾನೆ ಎಂದರೆ ನೀವ್ ನಂಬಲೇಬೇಕು.

ಹೌದು, ಈ ಬಾಲಕನ ಹೆಸರು ರಯಾನ್. ಅವನು ತಾನು ಆಟವಾಡುವ ವಿಡಿಯೋಗಳನ್ನು ಯುಟ್ಯೂಬ್ನಲ್ಲಿ ಹಾಕುತ್ತಲೇ ಸುಮಾರು 70 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.

ರಿಯಾನ್ ಟಾಯ್ಸ್ ರಿವ್ಯೂ’ ಎಂಬ ಯುಟ್ಯೂಬ್ ಚಾನೆಲ್ ಹೊಂದಿದ್ದಾನೆ. 2017ರಲ್ಲಿ ಈ ಯುಟ್ಯೂಬ್ ಚಾನೆಲ್ ನಿಂದ ಸುಮಾರು 11 ಮಿಲಿಯನ್ ಡಾಲರ್ ಹಣ ಗಳಿಸಿದ್ದಾನೆ. ಫೋರ್ಬ್ಸ್ ಪಟ್ಟಿ ಮಾಡಿರೋ ಅತಿ ಹೆಚ್ಚು ಹಣ ಗಳಿಸಿರೋ ಯುಟ್ಯೂಬ್ ಸೆಲೆಬ್ರಿಟಿಗಳಲ್ಲಿ ಇವನೂ ಒಬ್ಬ.

ಫೋರ್ಬ್ಸ್ ನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ರಯಾನ್ 8 ನೇ ಸ್ಥಾನದಲ್ಲಿದ್ದಾನೆ. ಯೂಟ್ಯೂಬ್‍ನಲ್ಲಿ “ರಯಾನ್ ಟಾಯ್ಸ್ ರಿವೀವ್” ಚಾನೆಲ್ ನನ್ನು ಈತನ ಪೋಷಕರು ಆರಂಭಿಸಿದ್ದು, ಹಲವಾರು ಟಾಯ್ಸ್ ಗಳ ವಿಮರ್ಶೆ ಮಾಡಿ ಅದರ ವಿಡಿಯೋಗಳನ್ನು ಯೂಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ.

ಈ ಬಾಲಕನಿಗೆ ಕಾರ್‍ಗಳು, ರೈಲುಗಳು, ಥಾಮಸ್ ಅಂಡ್ ಫ್ರೆಂಡ್ಸ್, ಲೀಗೋ, ಸೂಪರ್‍ಹೀರೋಸ್, ಡಿಸ್ನಿ ಆಟಿಕೆ ಇತ್ಯಾದಿಗಳನ್ನು ತುಂಬಾ ಪ್ರೀತಿಸುತ್ತಾನೆ. ಜೊತೆಗೆ ಕುಟುಂಬದ ಮೋಜು, ಸಾಹಸಗಳನ್ನು ಇಷ್ಟಪಟ್ಟಿದ್ದಾನೆ. ಅಷ್ಟೇ ಅಲ್ಲದೇ ಮಕ್ಕಳಿಗಾಗಿ ಮೋಜು ಮತ್ತು ಸುಲಭವಾದ ವಿಜ್ಞಾನ ಪ್ರಯೋಗಳನ್ನು ಮಾಡುತ್ತಾನೆ.

‘2015ರ ಮಾರ್ಚ್ ನಲ್ಲಿ ಈ ಚಾನೆಲ್ ಆರಂಭಿಸಲಾಗಿತ್ತು. ಆಗ ರಯಾನ್ ಗೆ ಕೇವಲ ನಾಲ್ಕು ವರ್ಷ. ಜುಲೈನಲ್ಲಿ ಈತನ ವಿಡಿಯೋ ಒಂದು ವೈರಲ್ ಆಗಿತ್ತು. ಆಗಿನಿಂದ್ಲೂ ರಯಾನ್ ಯುಟ್ಯೂಬ್ ಸ್ಟಾರ್ ಆಗಿಬಿಟ್ಟಿದ್ದಾನೆ. ಇವನ ಹೆತ್ತವರೇ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಇವನ ಚಾನೆಲ್ ಗೆ 10 ಮಿಲಿಯನ್ ಚಂದಾದಾರರಿದ್ದಾರೆ.ಅವನು ಅಪ್ಲೋಡ್ ಮಾಡಿದ ಡಜನ್ಸ್ ವಿಡಿಯೋಗಳನ್ನು ಸುಮಾರು 1,600 ಕೋಟಿ (16 ಬಿಲಿಯನ್) ಬಾರಿ ವೀಕ್ಷಣೆ ಮಾಡಲಾಗಿದೆ.

ಈಗ ಈ ಕುಟುಂಬ “ರಯಾನ್ ಫ್ಯಾಮಿಲಿ ರಿವೀವ್” ಎಂಬ ಎರಡನೇ ಚಾನೆಲ್ ಪ್ರಾರಂಭಿಸಿದ್ದಾರೆ. ಇದು ಕುಟುಂಬದ ಪ್ರತಿದಿನ ಸಾಹಸ ಮತ್ತು ರಯಾನ್ ಸಹೋದರಿಯರಾದ ಎಮ್ಮಾ ಮತ್ತು ಕೇಟ್ ಅವರ ಮೇಲೆ ಕೇಂದ್ರಿಕರಿಸಲಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಚಾನೆಲ್ ಸಬ್ಸ್ ಸ್ಕ್ರೈಬ್ ಮಾಡಿದ್ದಾರೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ