ಆಯುರ್ವೇದ, ಆರೋಗ್ಯ

ಜೇನುತುಪ್ಪದ ಆರೋಗ್ಯಕರ ಗುಣಗಳು

67

ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಾರ್ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಈ ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ ಹಳೆಯದಾದರೂ ಬಳಸಬಹುದು.ಇದನ್ನು ಫ್ರಿಜ್ ನಲ್ಲಿ ಮತ್ತು ಬಿಸಿಲಿನಲ್ಲಿ ಇರಬಾರದು. ಯಾರಿಗೆ ಜೇನು ತುಪ್ಪ ಇಷ್ಟ ಇಲ್ಲವೋ ಅಥವಾ ಅದರ ಬಗ್ಗೆ ಮಾಹಿತಿ ಇಲ್ಲವೋ, ಅವರು ಈ ಮಾಹಿತಿಯನ್ನು ಒಮ್ಮೆ ಓದಿ.ಇದನ್ನು ಎಲ್ಲಾ ವಯೋಮಾನದವರು ಬಳಸ ಬಹುದು. ಇದನ್ನು ರಕ್ತವರ್ಧಕ ಟಾನಿಕ್ ಮತ್ತು ಸ್ವಾಭಾವಿಕ ಬಲವರ್ಧಕ ಟಾನಿಕ್ ಎನ್ನುವರು.

ಜೇನುತುಪ್ಪದ ಆರೋಗ್ಯಕರ ಗುಣಗಳು

1. ಜೇನುತುಪ್ಪವನ್ನು ಸ್ವಲ್ಪ ಕರಿ ಮೆಣಸಿನ ಪುಡಿಯೊಂದಿಗೆ ಮಿಕ್ಸ್ ಮಾಡಿ ತಿಂದರೆ ಕೆಮ್ಮು ಕಡಿಮೆಯಾಗುವುದು.

2. ತೂಕ ಹೆಚ್ಚಬೇಕೆಂದು ಬಯಸುವವರು ಹಾಲಿನೊಂದಿಗೆ ಜೇನು ತುಪ್ಪ ಹಾಕಿ ಕುಡಿದರೆ ಮೈ ತೂಕ ಹೆಚ್ಚುವುದು.

3. ತೂಕ ಕಮ್ಮಿಯಾಗಬೇಕೆಂದು ಬಯಸುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ, ಜೇನುತುಪ್ಪ ಹಾಕಿ ಕುಡಿಯುವುದರಿಂದ ಬೊಜ್ಜು ಕರಗಿಸಬಹುದು.



4. ವಾಂತಿ ಬಂದಂತೆ ಅನಿಸಿದಾಗ ಸ್ವಲ್ಪ ಶುಂಠಿ ಪುಡಿಗೆ ಜೇನು ತುಪ್ಪ ಮಿಶ್ರಣ ಮಾಡಿ ತಿಂದರೆ ಬಾಯಲ್ಲಿ ನೀರು ಬರುವುದು, ಹೊಟ್ಟೆ ಸಂಕಟ ಕಡಿಮೆಯಾಗುವುದು.

5. ರಕ್ತದೊತ್ತಡ ಸಮಸ್ಯೆಯಿದ್ದರೆ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಸೇವಿಸುವುದು ಒಳ್ಳೆಯದು.

6. ಚಿಕ್ಕಪುಟ್ಟ ಗಾಯಗಳಾದರೆ ಜೇನುತುಪ್ಪ ಹಚ್ಚಿದರೆ ಬೇಗನೆ ಗುಣಮುಖವಾಗುವುದು.

7 ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಜೇನು ತುಪ್ಪವನ್ನು ಬೆರೆಸಿ ಕೊಟ್ಟರೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ 

8    ಸುಟಗಾಯಕ್ಕೆ ತಕ್ಷಣ ಜೇನು ತುಪ್ಪ ಹೆಚ್ಚುವುದರಿಂದ ಉರಿ ಶಮನವಾಗುತ್ತದೆ ಮತ್ತು ಗಾಯ ಶ್ರೀಘ್ರವೇ ಮಾಗಲು ಸಹಾಯ ಮಾಡುತ್ತದೆ.

9    ಧಡೂತಿ ಶರೀರದವರು ನಾಲ್ಕು ಟೀ ಚಮಚದಷ್ಟು ಜೇನು ತುಪ್ಪವನ್ನು ಸೇವಿಸುವುದರಿಂದ ಶಾರೀರಿಕ ತೂಕವು ಕಡಿಮೆಯಾಗಿ ನರಗಳಲ್ಲಿ ಹೊಸ ಉತ್ಸಾಹ ತುಂಬಿಕೊಳ್ಳವುದು.

10    ಜೇನು ತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುವ ಸಂಭವವಿರುವುದಿಲ್ಲ.

11   ವಸಡುಗಳು ಊದಿಕೊಂಡು ಹಲ್ಲುನೋವು ಉಂಟಾದರೆ, ಜೇನು ತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ನಾಲ್ಕಾರು ಬಾರಿ ದಿನವೂ ಇಟ್ಟುಕೊಂಡರೆ ಹಲ್ಲುನೋವು ಮತ್ತು ವಸಡಿನ ಊತವು ನಿವಾರಣೆಯಾಗುವುದು

12 ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನು ತುಪ್ಪವನ್ನು ಸವರುವುದರಿಂದ ಅವು ಗುಣ ಕಂಡು ಬರುವುದು

13   ಜೇನು ತುಪ್ಪವನ್ನು ಪ್ರತಿದಿನವೂ ಬೆಳಿಗ್ಗೆ ಎದ್ದ ತಕ್ಷಣ ಬಾಯಿ ತೊಳೆದುಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಚೆನ್ನಾಗಿ ಜೀರ್ಣವಾಗುವುದು. ದೈಹಿಕ ಶಕ್ತಿ ಹೆಚ್ಚುವುದು. ಆಯಾಸ ಮತ್ತು ಆಲಸಿಕೆ ದೂರವಾಗಿ ಧಾರಣ ಶಕ್ತಿ ಅಧಿಕಗೊಳ್ಳವುದು.

 14 ಮಧುಮೇಹ ರೋಗಿಗಳು ಹಾಗೂ ಕ್ಷಯ ರೋಗಗಳು ಜೇನುತುಪ್ಪವನ್ನು ಸೇವಿಸುವುದರಿಂದ ಶಾರೀರಿಕ ಕ್ರಿಯೆಗಳು ಮಾಮೂಲಿ ಆರೋಗ್ಯವಂತರಂತೆ ನಡೆದು ಆರೋಗ್ಯ ಸುಧಾರಣೆ ಉಂಟಾಗುವುದು.

15  ಎಳೆಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ತೊಟ್ಟು ಜೇನುತುಪ್ಪವನ್ನು ಬೆರೆಸಿ ಕುಡಿಸಬೇಕು. ದಿನದ ಎರಡು ಬಾರಿ ಕುಡಿಸಿದರೆ ಮೂರೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ಉಂಟಾಗಿ ಮಕ್ಕಳು ಗುಣವಾಗುತ್ತರೆ.

16  ಕೀಲುಗಳಲ್ಲಿ ನೋವುಂಟಾಗಿದ್ದರೆ ಆ ಸ್ಥಳಕ್ಕೆ ಸುಣ್ಣ ಮತ್ತು ಜೇನು ತುಪ್ಪವನ್ನು ಮಿಶ್ರಮಾಡಿ ಹಚ್ಚಿದರೆ ಶೀಘ್ರವೇ ಪರಿಣಾಮ ಉಂಟಾಗಿ ನೋವು ಮಾಯವಾಗುತ್ತದೆ.

17  ಶುದ್ಧವಾದ ಜೇನು ತುಪ್ಪವನ್ನು ಊಟವಾದ ನಂತರ ಮಲಗುವುದಕ್ಕೆ ಮುಂಚೆ ಮೂರು ಟೀ ಚಮಚ ಸೇವಿಸುತ್ತಾ ಬಂದರೆ ಬಹುಮೂತ್ರ ರೋಗವೇ ಇಲ್ಲವಾಗುವುದು.

18  ಬಜೆ ಪುಡಿಯೊಂದಿಗೆ ಜೇನು ತುಪ್ಪ ಕೊಡುವುದರಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

19  ಪಪ್ಪಾಯಿ ಹಣ್ಣು, ಜೇನುತುಪ್ಪ ಮತ್ತು ಅರಿಶಿನ ಪುಡಿ ಮುಖಕ್ಕೆ ಲೇಪಿಸುವುದರಿಂದ ಮುಖದ ಮೊಡವೆಗಳು ದೂರವಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ.

20  ಹಸಿ ಕರಬೇವಿನೊಂದಿಗೆ ಜೇನು ತುಪ್ಪ ತಿನ್ನುವುದರಿಂದ ದೃಷ್ಟಿ ದೋಷಗಳು, ಕಣ್ಣಿನ ತೊಂದರೆಗಳು ಇಲ್ಲವಾಗುತ್ತದೆ.

source: whatsapp

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Cinema

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಗಳಿಂದ ಮತ್ತೊಂದು ಬಿರುದು….! ಏನೆಂದು ತಿಳಿಯಲು ಇದನ್ನೊಮ್ಮೆ ಓದಿ.

    ಕುರುಕ್ಷೇತ್ರಸಿನಿಮಾ 100 ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಗಳುಹೊಸ ಬಿರುದು ಕೊಟ್ಟು ಸನ್ಮಾನಿಸಿದ್ದಾರೆ. ಕುರುಕ್ಷೇತ್ರ 100 ಕೋಟಿ ಕ್ಲಬ್ ಸೇರಿದ ಸಂಭ್ರಮವನ್ನು ದರ್ಶನ್ ಈಗಾಗಲೇಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಇದೀಗ ಬಾಕ್ಸ್ ಆಫೀಸ್ ಸುಲ್ತಾನನಿಗೆಅಭಿಮಾನಿಗಳು ಹೊಸ ಬಿರುದು ಕೊಟ್ಟಿದ್ದಾರೆ. ದರ್ಶನ್ ರನ್ನು ‘ಶತಕೋಟಿ ಸರದಾರ’ ಎಂಬ ಹೊಸ ಬಿರುದು ಕೊಟ್ಟುಸನ್ಮಾನಿಸಿದ್ದಾರೆ ಅಭಿಮಾನಿಗಳು. ಈಗಾಗಲೇ ದರ್ಶನ್ ರನ್ನು ಪ್ರೀತಿಯಿಂದ ಅಭಿಮಾನಿಗಳುಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್ ಎಂದೆಲ್ಲಾ ಕರೆಯುತ್ತಾರೆ….

  • ಸುದ್ದಿ

    ಜೋಗ ಜಲಪಾತದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್(ಕೋತಿರಾಜ್) ಸಿಕ್ಕಿದ್ದು ಯಾವ ಸ್ಥಿತಿಯಲ್ಲಿ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಜೋಗ ಜಲಪಾತದ ನೆತ್ತಿ ಪ್ರದೇಶದ ಜಲಪಾತಕ್ಕೆ ಧುಮುಕಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಇದ್ದದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.

  • ರಾಜಕೀಯ

    ಮೋದಿ ರಾಜ್ಯಕ್ಕೆ ಬಂದರೆ ದವಡೆಗೆ ಒಡೆಯಿರಿ ಎಂದು ವಿವಾಧಾತ್ಮಕ ಹೇಳಿಕೆ ಕೊಟ್ಟ ಶಾಸಕ..!

    ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಕೆಲ ನಾಯಕರು ಪಕ್ಷದ ಪರ ಭಾಷಣ ಮಾಡುವ ವೇಳೆ ನಾಲಿಗೆ ಹರಿಬಿಡ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಎತ್ತಿ ದವಡೆಗೆ ಹೊಡೆಯಿರಿ ಅಂತಾ ಜೆಡಿಎಸ್‍ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್‍ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಜನರಿಗೆ ಹಾಗೂ ರೈತರಿಗೆ ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆ ಏನಾಯ್ತು ಅಂತಾ ಪ್ರಶ್ನಿಸಿ, ಎಲ್ಲರೂ ದವಡೆಗೆ ಹೊಡೆಯಿರಿ ಅಂತಾ ಭಾಷಣ…

  • ಸುದ್ದಿ

    ಕಿಚ್ಚನ ನಳಪಾಕ ಸೌಟು ಹಿಡಿದು ಮೊಟ್ಟೆ ದೋಸೆ ಮಾಡಿದ ಸುದೀಪ್…!

    ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಚಿತ್ರೀಕರಣದ ವೇಳೆ ಶೂಟಿಂಗ್ ಸೆಟ್ಟಿನಲ್ಲಿ ಕಿಚ್ಚ ಸುದೀಪ್ ರುಚಿ ರುಚಿ ಮೊಟ್ಟೆ ದೋಸೆ ಮಾಡಿದ್ದ ವಿಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಚಿತ್ರೀಕರಣದ ನೆನಪನ್ನು ಮೆಲುಕು ಹಾಕಿದ್ದಾರೆ. ಹೌದು, ಸೈರಾ ನರಸಿಂಹ ರೆಡ್ಡಿ ಚಿತ್ರ ಕನ್ನಡ ಸೇರಿದಂತೆ ಹಲವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅ. 2 ಅಂದರೆ ನಾಳೆಯೇ ಚಿತ್ರ ತೆರೆಯಮೇಲೆ ಸಖತ್ ಸದ್ದು ಮಾಡಲಿದೆ. ಈ ನಡುವೆ ಸುದೀಪ್ ಚಿತ್ರೀಕರಣ ವೇಳೆ ಚಿತ್ರ ತಂಡದ ಜೊತೆ ಕಳೆದ ಸಿಹಿ ನೆನೆಪಿನ ವಿಡಿಯೋವನ್ನು…

  • ಸಿನಿಮಾ

    ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ವಿಜಯಲಕ್ಷ್ಮಿ ವಿರುದ್ದವೇ ದೂರು ಕೊಟ್ಟ ನಟ..!

    ಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಿದ ನಟ ರವಿ ಪ್ರಕಾಶ್ ಅವರ ವಿರುದ್ಧ ನಟಿ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತಾಗಿ ನಟ ರವಿಪ್ರಕಾಶ್ ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ಕಿರುಕುಳ ನೀಡಿಲ್ಲ. ಅವರಿಗೆ ಹಣಕಾಸು ನೆರವು ನೀಡಿ, ಅವರನ್ನು 2  ಬಾರಿ ಭೇಟಿ ಮಾಡಿದ್ದೇನೆ ಹೊರತು, ಯಾವುದೇ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ರವಿಪ್ರಕಾಶ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟಿ…