ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಬೀಜಗಳು ಅಧಿಕ ನಾರಿನಂಶವನ್ನು ಹೊಂದಿವೆ. ಈ ಬೀಜಗಳನ್ನು ನೆನೆಸಿದ ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಕರುಳುಗಳಲ್ಲಿ ಜೀರ್ಣಗೊಂಡ ಆಹಾರದ ಚಲನೆ ಸುಲಭಗೊಳ್ಳುತ್ತದೆ. ಈ ನೀರಿನ ಸೇವನೆಯ ಇತರ ಮಹತ್ವಗಳನ್ನು ನೋಡೋಣ.
ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು: ತೂಕ ಇಳಿಕೆಗೆ ಅಪಾರ ನೆರವು ನೀಡುವ ಆರೋಗ್ಯಕರ ವಿಧವೆಂದರೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು. ಇದಕ್ಕೆ ಉತ್ತಮ ಆಯ್ಕೆ ಚಿಯಾ ಬೀಜಗಳು. ಇವುಗಳಲ್ಲಿ ಕರಗದ ನಾರು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕ ಮೊದಲಾದ ಪೋಷಕಾಂಶಗಳು ಸಮೃದ್ಧವಾಗಿವೆ. ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಅಳವಡಿಸಿಕೊಳ್ಳಲು ಹಲವಾರು ಮಾರ್ಗಗಳಿವೆ.
ನೀರಿನಲ್ಲಿ ನೆನೆಸಿಟ್ಟು ಸೇವಿಸಿ
ನಿಮ್ಮ ಆಹಾರದಲ್ಲಿ ಬೆರೆಸಿ ಗರಿಮುರಿಯಾಗಿಸಬಹುದು ಅಥವಾ ನೀವು ಅವುಗಳನ್ನು ನಿಮ್ಮ ಸಲಾಡ್‌ಗಳ ಮೇಲೆ ಸಿಂಪಡಿಸಬಹುದು, ಅಥವಾ ನೀವು ಅವುಗಳನ್ನು ಒಣಬೀಜಗಳ ಮಿಶ್ರಣದ ಭಾಗವಾಗಿ ಹೊಂದಬಹುದು. ಚಿಯಾ ಬೀಜಗಳನ್ನು ಸೇವಿಸುವ ಮತ್ತೊಂದು ಆಸಕ್ತಿದಾಯಕ ವಿಧಾನವೆಂದರೆ ಅವುಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಸೇವಿಸುವುದು.
ನೀವು ಮಾಡಬೇಕಾಗಿರುವುದು ಏನೆಂದರೆ ಚಿಯಾ ಬೀಜಗಳನ್ನು ನೀರಿನಲ್ಲಿ ರಾತ್ರಿ ಮಲಗುವ ಮುನ್ನ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ದಿನದ ಮೊದಲ ಆಹಾರದ ರೂಪದಲ್ಲಿ ಅಥವಾ ದಿನದ ಇತರ ಯಾವುದೇ ಸಮಯದಲ್ಲಿ ನೀರಿನ ಜೊತೆಗೇ ಸೇವಿಸಬೇಕು.
ಈ ಮೂಲಕ ನೀವು ಈ ಬೀಜಗಳ ಹಲವಾರು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು. ನೆನೆಸಿಟ್ಟ ಚಿಯಾ ಬೀಜಗಳ ಸೇವನೆ: ಇದರ ಆರೋಗ್ಯಕರ ಪರಿಣಾಮಗಳು ನಿಮಗೆ ಅಚ್ಚರಿ ಮೂಡಿಸಬಹುದು.
ಕ್ಯಾನ್ಸರ್ ರೋಗಕ್ಕೂ ರಾಮಬಾಣ
ಚಿಯಾ ಬೀಜಗಳು ಆಂಟಿ ಆಕ್ಸಿಡೆಂಟು ಅಥವಾ ಉತ್ಕರ್ಷಣ ನಿರೋಧಕ ಗುಣಗಳ ಸಮೃದ್ಧ ಮೂಲವಾಗಿದೆ. ಈ ಉತ್ಕರ್ಷಣ ನಿರೋಧಕಗಳು ಬೀಜಗಳಲ್ಲಿನ ಸೂಕ್ಷ್ಮ ಕೊಬ್ಬಗಳು ರಾನ್ಸಿಡ್ (rancid-ನಾತದ ಜಿಡ್ಡು) ಆಗಿ ಪರಿವರ್ತನೆಯಾಗದಂತೆ ರಕ್ಷಿಸುತ್ತದೆ.
ಇದಕ್ಕಿಂತಲೂ ಹೆಚ್ಚಾಗಿ, ಈ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಕ್ಯಾನ್ಸರ್ ಆವರಿಸಲು ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ಎದುರಾಗಬಹುದಾದ ಹಾನಿಯಿಂದ ರಕ್ಷಣೆ ನೀಡುತ್ತದೆ. ಬನ್ನಿ, ನಿತ್ಯವೂ ಈ ನೀರಿನ ಸೇವನೆಯಿಂದ ಪಡೆಯುವ ಪ್ರಯೋಜನಗಳ ಬಗ್ಗೆ ಅರಿಯೋಣ.
ಜೀರ್ಣಕ್ರಿಯೆಗೆ ನೆರವು
ಚಿಯಾ ಬೀಜಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರಿನಂಶವಿದೆ. ಚಿಯಾ ಬೀಜಗಳನ್ನು ನೆನೆಸಿಟ್ಟ ನೀರನ್ನು ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತದೆ ಮತ್ತು ಕರುಳಿನಲ್ಲಿ ಆಹಾರದ ಚಲನೆ ಸುಗಮಗೊಳ್ಳುತ್ತದೆ.
ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಆರೋಗ್ಯಕರ ಜೀರ್ಣಕ್ರಿಯೆ ಅತಿ ಮಹತ್ವದ್ದಾಗಿದ್ದು ಚಿಯಾ ಬೀಜಗಳು ಈ ಪ್ರಯತ್ನಕ್ಕೆ ಅತಿ ಹೆಚ್ಚಿನ ಬೆಂಬಲವನ್ನು ಒದಗಿಸುತ್ತವೆ
ತೂಕ ಇಳಿಕೆಗೆ ನೆರವು
ಚಿಯಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಗುವ ನಾರಿನಂಶವೂ ಇದೆ. ಈ ಬೀಜಗಳ ಇನ್ನೊಂದು ಮಹತ್ವವೆಂದರೆ ನೆನೆಸಿಟ್ಟ ಬಳಿಕ ಇವು ತಮ್ಮ ಮೂಲ ಗಾತ್ರಕ್ಕೂ 10-12 ಪಟ್ಟು ನೀರನ್ನು ಹೀರಿಕೊಂಡು ಉಬ್ಬಿಕೊಳ್ಳುತ್ತವೆ. ಹೀಗೆ ನೀರಿನಿಂದ ಉಬ್ಬಿಕೊಂಡ ಬೀಜಗಳು ಸ್ನಿಗ್ಧ ದ್ರವ ಅಥವಾ ಜೆಲ್ ನಂತೆ ಇರುತ್ತದೆ.
ಜೀರ್ಣಕ್ರಿಯೆಯಲ್ಲಿ ಈ ಬೀಜಗಳಿಂದ ನೀರಿನಂಶ ಅತಿ ನಿಧಾನವಾಗಿ ಬಿಡುಗಡೆಯಾಗುತ್ತಾ ತನ್ನೊಂದಿಗೆ ಪೋಷಕಾಂಶ ಮತ್ತು ನಾರಿನಂಶಗಳನ್ನೂ ಜೀರ್ಣಾಂಗಗಳಿಗೆ ಲಭಿಸುವಂತೆ ಮಾಡುತ್ತದೆ.
ಈ ಮೂಲಕ ಹೊಟ್ಟೆ ಸದಾ ತುಂಬಿರುವ ಭಾವನೆ ಮೂಡುತ್ತದೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಈ ಮೂಲಕ ನೀವು ಕಡಿಮೆ ಕ್ಯಾಲೋರಿಗಳನ್ನು ಸೇವಿಸುತ್ತೀರಿ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದು ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ನೆರವು ನೀಡುತ್ತದೆ.
ಪ್ರೋಟೀನ್ ನ ಲಭ್ಯತೆ
ಚಿಯಾ ಬೀಜಗಳು 14% ಪ್ರೋಟೀನ್‌ನಿಂದ ಕೂಡಿದೆ. ಇವುಗಳಲ್ಲಿ ಪ್ರಭಾವಶಾಲಿ ಅಮೈನೋ ಆಮ್ಲಗಳೂ ಇವೆ. ಪ್ರೋಟೀನ್ ತೂಕ ಇಳಿಕೆ ಮತ್ತು ಸ್ನಾಯುಗಳ ಬೆಳವಣಿಗೆ ಎರಡಕ್ಕೂ ಅಗತ್ಯವಾದ ಸೂಕ್ಷ್ಮ ಪೋಷಕಾಂಶ ಅಥವಾ ಮ್ಯಾಕ್ರೋನ್ಯೂಟ್ರಿಯೆಂಟ್ ಆಗಿದೆ. ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ತುಂಬಿರುವ ಭಾವನೆ ಉಂಟಾಗುತ್ತದೆ ಮತ್ತು ಅನಗತ್ಯ ಕ್ಯಾಲೊರಿ ಸೇವನೆಯಿಂದ ತಡೆಯುತ್ತದೆ..
ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ
ಚಿಯಾ ಬೀಜಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳ (alpha-linolenic acid ಅಥವಾ ALA) ಪ್ರಭಾವಶಾಲಿ ಪ್ರಮಾಣವಿದೆ. ಈ ಆಲ್ಫಾ-ಲಿನೋಲೆನಿಕ್ ಆಮ್ಲ ಅತ್ಯಂತ ಹೃದಯಸ್ನೇಹಿ ಪೋಷಕಾಂಶವಾಗಿದೆ.
ತನ್ಮೂಲಕ ಚಿಯಾ ಬೀಜಗಳನ್ನು ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಚಿಯಾ ಬೀಜಗಳನ್ನು ನೆನೆಸಿಟ್ಟ ನೀರನ್ನು ಕುಡಿಯುವುದು ಅಥವಾ ನಿಮ್ಮ ದೈನಂದಿನ ಆಹಾರದಲ್ಲಿ ಚಿಯಾ ಬೀಜಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದ್ರೋಗ ಎದುರಾಗುವ ಅಪಾಯವನ್ನು ಅಪಾರ ಮಟ್ಟಿಗೆ ಕಡಿಮೆ ಮಾಡಬಹುದು.
ಮೂಳೆಗಳ ಆರೋಗ್ಯ ಉತ್ತಮಗೊಳ್ಳುತ್ತದೆ
ಚಿಯಾ ಬೀಜಗಳಲ್ಲಿನ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕಗಳು ಮೂಳೆಯ ಆರೋಗ್ಯವನ್ನು ವೃದ್ದಿಸುತ್ತವೆ. ಚಿಯಾ ಬೀಜಗಳು ದೈನಂದಿನ ಶಿಫಾರಸು ಮಾಡಿದ ಕ್ಯಾಲ್ಸಿಯಂನ 18% ಅನ್ನು ಹೊಂದಿರುತ್ತವೆ. ನೈಸರ್ಗಿಕ ಪ್ರೋಟೀನ್ ಮೂಲದ ಆಹಾರಗಳನ್ನು ಸೇವಿಸದ ವ್ಯಕ್ತಿಗಳು ಅಥವಾ ಸಸ್ಯಾಹಾರಿಗಳಿಗೆ ಚಿಯಾ ಬೀಜಗಳನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಬಹುದು.
ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣ
ಚಿಯಾ ಬೀಜಗಳು ಇನ್ಸುಲಿನ್ ಸಂವೇದನೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ.
ಊಟದ ಬಳಿಕ ರಕ್ತದಲ್ಲಿ ಏರುವ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಚಿಯಾ ಬೀಜಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನಗಳಿಂದ ಈಗಾಗಲೇ ಸಾಬೀತುಗೊಂಡಿದೆ.
ಈ ಗುಣ ಮಧುಮೇಹ ಇರುವ ವ್ಯಕ್ತಿಗಳಿಗೆ ಅತ್ಯುತ್ತಮವಾಗಿದ್ದು ಮಧುಮೇಹಿಗಳು ತಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸಿಕೊಳ್ಳುವ ಸೂಕ್ತ ಮಾರ್ಗಗಳು
ಚಿಯಾ ಬೀಜಗಳನ್ನು ನೇರವಾಗಿ ಸೇವಿಸಲೂಬಹುದು ಅಥವಾ ಚಿಯಾ ಬೀಜವನ್ನು ನೆನೆಸಿಟ್ಟ ನೀರನ್ನು ನಿಯಮಿತವಾಗಿ ಕುಡಿಯಲೂಬಹುದು. ಇವೆರಡೂ ಸುಲಭ ಮತ್ತು ಪರಿಣಾಮಕಾರಿ. ವಿಧಾನಗಳಾಗಿವೆ. ಅವುಗಳನ್ನು ಹಾಗೇ ಜಗಿದು ತಿನ್ನಬಹುದು ಅಥವಾ ಹಣ್ಣುಗಳ ರಸ, ಪುಡಿಂಗ್, ಗಂಜಿ ಮತ್ತು ಸ್ಮೂಥಿಗಳಿಗೆ ಬೆರೆಸಿಕೊಂಡೂ ಸೇವಿಸಬಹುದು.
ವಿವಿಧ ಪಾಕವಿಧಾನಗಳಲ್ಲಿ ಚಿಯಾ ಬೀಜಗಳನ್ನು ಸೇರಿಸುವುದರಿಂದ ಅವುಗಳ ಪೋಷಣೆಯ ಮೌಲ್ಯವನ್ನು ಸ್ವಯಂಚಾಲಿತವಾಗಿ ಹೆಚ್ಚಿಸಬಹುದು.
ಆದರೂ, ಚಿಯಾ ಬೀಜಗಳನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತೀದ್ದೀರೆಂದು ಖಚಿತಪಡಿಸಿಕೊಳ್ಳಿ. ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದೇ ಆಹಾರ ವಸ್ತುಗಳನ್ನು ಮಿತಿಗಿಂತ ಹೆಚ್ಚು ಸೇವಿಸಬಾರದು.
ಅಧ್ಯಯನಗಳ ಬಳಿಕ ತಜ್ಞರು ಸಲಹೆ ಮಾಡುವ ಪ್ರಮಾಣವೆಂದರೆ ಪ್ರತಿ ಬಾರಿ ಇಪ್ಪತ್ತು ಗ್ರಾಂ ನಷ್ಟು (ಸುಮಾರು ಒಂದೂವರೆ ದೊಡ್ಡ ಚಮಚ) ಪ್ರಮಾಣವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಬೇಕಾದಷ್ಟಾಯಿತು. ಇದಕ್ಕೂ ಹೆಚ್ಚಿನ ಪ್ರಮಾಣವನ್ನು ಸೇವಿಸಬಾರದು.
source coorgcitizen / whatsapp
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಕ್ಲಾಸ್ ರೂಂನಲ್ಲಿ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಜಯವಾಡ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ ಸೇವನೆ ಮಾಡಿ ಕುಡಿದಿದ್ದಾರೆ. ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್ ಬೆರೆಸಿಕೊಂಡು ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುವಾಗಲೇ ಸೇವಿಸಿದ್ದಾರೆ. ಮದ್ಯ ಸೇವನೆ ಬಳಿಕ ತರಗತಿಯಲ್ಲಿ ತೂರಾಡುತ್ತಾ ಏನೇನೋ ಮಾತನಾಡಲು…
ಔರಂಗಾಬಾದ್, ಜು.11: ಸುಮಾರು ಮೂರು ದಶಕಗಳ ಹಿಂದೆ, 1985-1989ರ ಅವಧಿಯಲ್ಲಿ ಕೀನ್ಯಾ ಸಂಜಾತ ರಿಚರ್ಡ್ ಟೊಂಗಿ ಅವರು ಔರಂಗಾಬಾದ್ ನಗರದ ಮೌಲಾನ ಆಝಾದ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯದ ವಿದ್ಯಾರ್ಥಿಯಾಗಿದ್ದ ವೇಳೆ ಅವರ ಬಳಿ ಹೆಚ್ಚಿನ ಹಣವಿರಲಿಲ್ಲ. ಆಗ ಅವರಿಗೆ ಸ್ಥಳೀಯ ದಿನಸಿ ಅಂಗಡಿ ಮಾಲಕ ಕಾಶೀನಾಥ್ ಗಾವ್ಲಿ ಎಂಬವರು ಅಲ್ಪಸ್ವಲ್ಪ ಸಹಾಯವನ್ನು ಆಗಾಗ ಮಾಡುತ್ತಿದ್ದರು.ಮುಂದೆ ಶಿಕ್ಷಣ ಪೂರೈಸಿ ರಿಚರ್ಡ್ ಕೀನ್ಯಾಗೆ ಮರಳಿದಾಗ ಕಾಶೀನಾಥ್ ಗೆ ಇನ್ನೂ ರೂ 200 ಕೊಡುವುದು ಬಾಕಿಯಿತ್ತು. ಇದೀಗ ಮೂವತ್ತು ವರ್ಷಗಳ ನಂತರ…
ಸಾಲು ಸಾಲು ಹಬ್ಬಗಳು ಬರುತ್ತಿರುವುದು ಮತ್ತು ಬಿಗ್ ಬಿಲಿಯನ್ ಡೇಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ 50,000 ಕ್ಕೂ ಅಧಿಕ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಫ್ಲಿಪ್‍ಕಾರ್ಟ್‍ನ ಸಪ್ಲೈ ಚೇನ್, ಲಾಜಿಸ್ಟಿಕ್ ಮತ್ತು ಗ್ರಾಹಕ ಬೆಂಬಲ ವಿಭಾಗಗಳಲ್ಲಿ ಈ ಉದ್ಯೋಗಗಳನ್ನು ಸೃಜಿಸಿದೆ. ಇದಲ್ಲದೇ, ಬಿಬಿಡಿ ಅಂದರೆ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಮಾರಾಟ ಜಾಲದಲ್ಲಿ ಶೇ.30 ರಷ್ಟು ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವರ್ಷದ ದೊಡ್ಡ ಕಾರ್ಯಕ್ರಮವಾದ ಬಿಬಿಡಿ ಸೆಪ್ಟಂಬರ್29 ಕ್ಕೆ…
ನೀವು ಒಂದು ವೇಳೆ ಟೆನ್ಶನ್‌ನಿಂದ ತುಂಬಿದ ಜೀವನ ಸಾಗಿಸುತ್ತಿದ್ದೀರಿ ಎಂದಾದರೆ ನಿಮ್ಮ ಎಲ್ಲಾ ಆಲೋಚನೆಗಳ ಬಗ್ಗೆ ನೀವು ಮತ್ತೆ ವಿಚಾರಣೆ ನಡೆಸಬೇಕು. ಯಾಕೆಂದರೆ ನೀವು ವಿಪರೀತ ಟೆನ್ಶನ್‌ನಲ್ಲಿ ಇದ್ದರೆ , ಅದರಿಂದ ನೀವು ಹೊರ ಬರಲು ಇಷ್ಟಪಡದೆ ಇದ್ದರೆ ಮುಂದೆ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತದೆ.
ಬೆಂಗಳೂರಿನ ಜನರಿಗೆ ದಿನದಿಂದ ದಿನಕ್ಕೆ ಆಪ್ತವಾಗುತ್ತಿರುವ ನಮ್ಮ ಮೆಟ್ರೋ ಇನ್ನು ಮುಂದೆ ಇನ್ನಷ್ಟು ಹತ್ತಿರವಾಗಲಿದೆ. ಡಿಸೆಂಬರ್ ವೇಳೆಗೆ ನಮ್ಮ ಮೆಟ್ರೋದಲ್ಲಿ ಮಹಿಳಾ ಬೋಗಿ ಸಹ ಆರಂಭವಾಗಲಿದೆ.
ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿದ್ದಾರೆ. ಮತ್ತೆ ಕೆಲ ಹುಡುಗಿಯರು ದುರಾದೃಷ್ಟಕ್ಕೆ ಕಣ್ಣೀರು ಹಾಕ್ತಾರೆ. ಅದೃಷ್ಟವಂತರಾಗಲು ಅವ್ರ ಜನ್ಮ ದಿನಾಂಕ ಕಾರಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗೂ ಹುಡುಗಿಯರ ಅದೃಷ್ಟ, ದುರಾದೃಷ್ಟದ ಬಗ್ಗೆ ವಿವರಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 5 ನೇ ತಾರೀಕಿನಂದು ಜನಿಸಿದ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ. ಈ ದಿನ ಗ್ರಹದಲ್ಲಿ ಬದಲಾವಣೆಯಾಗುತ್ತದೆ. ಈ ದಿನ ಹುಟ್ಟಿದ ಹುಡುಗಿಯರು ಸುಲಭವಾಗಿ ಯಶಸ್ಸು ಗಳಿಸ್ತಾರೆ. ಸಾಧನೆ ಶಿಖರಕ್ಕೇರುತ್ತಾರೆ. ಸುಖ-ಸಮೃದ್ಧಿ ನೆಲೆಸಿರುತ್ತದೆ. ಎಲ್ಲ ಕೆಲಸ ಯಶಸ್ವಿಯಾಗಿ…