inspirational

ಗ್ರೀನ್ ಟೀ ಆರೋಗ್ಯಕರ ಪ್ರಯೋಜನಗಳು

30

ಗ್ರೀನ್ ಟೀ ಅನ್ನು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಬದಲಾಗುತ್ತಿರುವ ಜೀವನಶೈಲಿಯ ಪರಿಣಾಮದಿಂದಾಗಿ ಒತ್ತಡ ಹೆಚ್ಚಾಗುತ್ತಿದ್ದು, ಗ್ರೀನ್ ಟೀ ಕುಡಿಯುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಪ್ರತಿದಿನ ನಿಗದಿತ ಪ್ರಮಾಣದ ಗ್ರೀನ್ ಟೀ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. 

ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ಹಲವು ಸಂಶೋಧನೆಗಳು ಪತ್ತೆ ಹಚ್ಚಿವೆ. ಆದರೆ ಎಚ್ಚರ! ಅತಿಯಾದ ಗ್ರೀನ್ ಟೀ ಸೇವನೆ ನಿಮ್ಮ ದೇಹಕ್ಕೆ ಹಾನಿ ಉಂಟುಮಾಡಬಹುದು. ಆದ್ದರಿಂದ ನೀವು ಹೆಚ್ಚು ಟೀ ಸೇವಿಸದಿರುವುದು ಬಹಳ ಮುಖ್ಯ. ಗ್ರೀನ್ ಟೀ ಸೇವನೆಯನ್ನು ಹಿತ-ಮಿತವಾಗಿ ಕುಡಿಯುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. 

ತ್ವಚೆಗೆ ಹೊಳಪು:
ಹಸಿರು ಚಹಾದಲ್ಲಿ Anti-aging ಅಂಶವು ಕಂಡುಬರುತ್ತದೆ. ಇದು ಮುಖದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ನಿಮ್ಮ ಮುಖದಲ್ಲಿ ಯಾವಾಗಲೂ ಹೊಳಪು ಮತ್ತು ತಾಜಾತನ ತರುತ್ತದೆ. ಇದಲ್ಲದೆ, ಇದನ್ನು ಕುಡಿಯುವುದರಿಂದ ನೀವು ಸದೃಢವಾಗಿರುತ್ತೀರಿ.

ಮಾನಸಿಕ ಶಾಂತಿ:
ಸ್ವಲ್ಪ ಕೆಲಸ ಮಾಡಿದ ನಂತರ ನೀವು ಮಾನಸಿಕವಾಗಿ ಸುಸ್ತಾಗುತ್ತಿದ್ದರೆ ಈ ಗ್ರೀನ್ ಟೀ ನಿಮಗೆ ಒಳ್ಳೆಯದು. ಹಸಿರು ಚಹಾದಲ್ಲಿ ಥೈನೈನ್ ಅಂಶವಿದೆ, ಇದರಲ್ಲಿ ಅಮೈನೋ ಆಮ್ಲಗಳಿವೆ. ಅಮೈನೊ ಆಮ್ಲಗಳು ದೇಹದಲ್ಲಿ ತಾಜಾತನವನ್ನು ಕಾಪಾಡಿಕೊಳ್ಳುತ್ತವೆ ಮತ್ತು ನಿಮಗೆ ಆಯಾಸವಾಗುವುದಿಲ್ಲ. ಇದು ಯಾವಾಗಲೂ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ.

ಹಲ್ಲುಗಳಿಗೆ ವರಧಾನ:
ಇತ್ತೀಚಿನ ದಿನಗಳಲ್ಲಿ ಹಲ್ಲುಗಳಲ್ಲಿನ ಪಯೋರಿಯಾ ಮತ್ತು ಕುಹರದ ಸಮಸ್ಯೆ ಯುವಕರು ಮತ್ತು ಹಿರಿಯರಲ್ಲಿ ವೇಗವಾಗಿ ಹೆಚ್ಚುತ್ತಿದೆ. ಹಸಿರು ಚಹಾದಲ್ಲಿ ಕಂಡುಬರುವ ಕೆಫೀನ್ ಹಲ್ಲುಗಳಲ್ಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಕಡಿಮೆ ಬ್ಯಾಕ್ಟೀರಿಯಾದಿಂದಾಗಿ, ನಿಮ್ಮ ಹಲ್ಲುಗಳನ್ನು ದೀರ್ಘಕಾಲದವರೆಗೆ ಇದು ರಕ್ಷಿಸುತ್ತದೆ.

ಸಾಮಾನ್ಯ ರಕ್ತದೊತ್ತಡ:
ಪ್ರಸ್ತುತ ಜೀವನಶೈಲಿಯಲ್ಲಿ ಬಿಡುವಿಲ್ಲದೆ ದುಡಿಯುವ ಜನಸಾಮಾನ್ಯರಿಗೆ ದಿನನಿತ್ಯ ಮನೆ, ಕಚೇರಿ ಕೆಲಸದ ಒತ್ತಡದಿಂದಾಗಿ ಉದ್ವೇಗದ ಸಾಮಾನ್ಯವಾಗಿದೆ. ಇದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ವೇಗವಾಗಿ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡವು ದೇಹದಲ್ಲಿನ ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ನಿಮಗೆ ರಕ್ತದೊತ್ತಡದ ಸಮಸ್ಯೆ ಇದ್ದರೆ ಗ್ರೀನ್ ಟೀ ಕುಡಿಯಿರಿ. ಗ್ರೀನ್ ಟೀ ಕುಡಿಯುವುದರಿಂದ ನಿಮ್ಮ ಮೈಂಡ್ ಕೊಂಚ ರಿಲಾಕ್ಸ್ ಆಗುತ್ತದೆ. ಇದರಿಂದಾಗಿ ರಕ್ತದೊತ್ತಡ ಇದ್ದರೂ ನಿಮಗೆ ಕೋಪ ಬರುವ ಸಾಧ್ಯತೆ ಕಡಿಮೆ ಎಂದು ಹಲವರು ಹೇಳುತ್ತಾರೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು:
ಗ್ರೀನ್‌ ಟೀ ಸೇವನೆಯು ಹೃದಯ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ. ಗ್ರೀನ್ ಟೀ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಎಣ್ಣೆಯುಕ್ತ ಆಹಾರವನ್ನು ಸೇವಿಸಿದರೆ ನೀವು ನಿಯಮಿತವಾಗಿ ಹಸಿರು ಚಹಾವನ್ನು ಸೇವಿಸುವುದು ಒಳ್ಳೆಯದು.

ಮಧುಮೇಹಿಗಳಿಗೆ ಪ್ರಯೋಜನಕಾರಿ:
ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತಿದ್ದರೆ ಹಸಿರು ಚಹಾದ ಸೇವನೆಯು ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದಲ್ಲದೆ, ಮಧುಮೇಹ ಸಮಸ್ಯೆಯಿರುವವರು ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಒಂದು ಕಪ್ ಗ್ರೀನ್ ಟೀ ಕುಡಿಯಬೇಕು. ಇದು ನಿಮ್ಮ ದೇಹದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. 

ತೂಕ ಕಡಿಮೆ ಮಾಡಲು:
ತೂಕವನ್ನು ಕಡಿಮೆ ಮಾಡಲು ಗ್ರೀನ್ ಟೀ ತುಂಬಾ ಸಹಾಯ ಮಾಡುತ್ತದೆ. ಹಸಿರು ಚಹಾವನ್ನು ಕುಡಿಯುವುದರಿಂದ ನಿಮ್ಮ ದೇಹದ ಚಯಾಪಚಯ ಕ್ರಿಯೆಯು ಹೆಚ್ಚಾಗುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಮತೋಲನದಲ್ಲಿರಿಸುತ್ತದೆ. ಇದು ವ್ಯಕ್ತಿಯು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಬಹಳ ಸಹಾಯಕವಾಗಿದೆ.

source internet

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ