ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್(70) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುರುವಾರ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು , ಅದಕ್ಕೆ ಭಾರತೀಯ ಸಂಗೀತವನ್ನು ಕರಗತ ಮಾಡಿಸಿದವರಲ್ಲಿ ಕದ್ರಿ ಗೋಪಾಲನಾಥರು ಪ್ರಮುಖರು. ಬಾಲ್ಯದಿಂದಲೂ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಅವರಿಗೆ ತಂದೆಯೇ ಗುರುವಾಗಿದ್ದರು.

ಚಿಕ್ಕವಯಸ್ಸಿನಲ್ಲೇ ಮೈಸೂರು ಅರಮನೆಯ ಬ್ಯಾಂಡ್ಸೆಟ್ನಲ್ಲಿ ಸ್ಯಾಕ್ಸೋಫೋನ್ ನುಡಿಸಿ ಎಲ್ಲರ ಹುಬ್ಬೇರಿಸಿದ್ದರು. ಸ್ಯಾಕ್ಸೋಫೋನ್ ಧ್ವನಿಗೆ ಹೆಚ್ಚು ಆಕರ್ಷಿತರಾದ ಕದ್ರಿ ಅವರು ಅದರಲ್ಲೇ ಪದವಿ ಪಡೆಯಲು ನಿರ್ಧರಿಸಿದರು. ಪಾಶ್ಚಿಮಾತ್ಯ ಸಂಗೀತ ಸಾಧನಗಳ ಮೇಲೂ ಹಿಡಿತ ಸಾಧಿಸಲು ಕದ್ರಿ ಅವರು ಸುಮಾರು 20 ವರ್ಷ ಶ್ರಮಪಟ್ಟರು, ಕೊನೆಗೆ “ಸ್ಯಾಕ್ಸೋಫೋನ್ ಚಕ್ರವರ್ತಿ” ಕೀರ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿಬಂದಿವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಂತೂ ರಾಜಕಾರಣಿಗಳು ತಾವು ಗೆಲ್ಲುವುದಕ್ಕಾಗಿ ಏನು ಬೇಕೋ ಮಾಡುತ್ತಾರೆ, ಹೇಗೆಂದರೆ ಹಾಗೆ ಮಾತನಾಡುತ್ತಾರೆ ಕೂಡ. ಕೊನೆಗೂ ರಾಜಕೀಯಕ್ಕೆ ದೇವರನ್ನು ಎಳೆದು ತಂದು ದೇವರಿಗೂ ಜಾತಿಯ ಪಟ್ಟಿಯನ್ನು ಕಟ್ಟಿಬಿಟ್ಟಿದ್ದಾರೆ. ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ. ಆದಿತ್ಯನಾಥ್ ಅವರ ಹೇಳಿಕೆಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದ್ದು, ಯೋಗಿ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಈಗ ಪಕ್ಷ ತೊರೆದಿದ್ದಾರೆ….
ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು.
ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಲಿದೆ ಎಂಬ ಸುದ್ದಿಯೊಂದು ಹರಿದಾಡಿ ಸಂಚಲನ ಮೂಡಿಸಿತ್ತು. ಆದರೆ ಕೇಂದ್ರ ಸರ್ಕಾರ ಈ ಕುರಿತು ಯಾವುದೇ ಚಿಂತನೆ ನಡೆಸಿಲ್ಲವೆಂದು ಹೇಳಲಾಗಿದೆ. ಇದೇ ವೇಳೆ ಸಾಲಮನ್ನಾ ಹೊರತಾಗಿ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನಿ ಮೋದಿ ವಿವಿಧ ಸುತ್ತಿನ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೃಷಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಮೋದಿ, ಕೃಷಿ ಕ್ಷೇತ್ರದಲ್ಲಿ ಜನಪ್ರಿಯ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ. ಫಸಲ್…
ಪ್ರಗತಿಪರ ಚಿಂತಕೆರೆನಿಸಿಕೊಂಡವರು ಐತಿಹಾಸಿಕ ಸ್ಥಳಗಳ ರಕ್ಷಣೆ, ಅವುಗಳ ನವೀಕರಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವುದನ್ನು ನಾವು ನೋಡಿದ್ದೇವೆ. ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ವಿಚಿತ್ರ ಮನವಿ ಸಲ್ಲಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ, ಇಷ್ಟು ದಿನ ಸ್ಯಾಂಡಲ್ವುಡ್ನಲ್ಲಿ ಮಿಂಚಿದವರು. ಈಗ ಅವರು ಮಾಲಿವುಡ್ಗೆ ಕಾಲಿಡುತ್ತಿದ್ದಾರೆ. ಹಾಗಂತ ಅವರು ಯಾವುದೇ ಮಲಯಾಳಂ ಸಿನಿಮಾ ಮಾಡುತ್ತಿದ್ದಾರೆ ಅಂತ ಅಲ್ಲ , ಅವರು ಯಾವ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ . ಅಸಲಿ ವಿಚಾರ ಏನೆಂದರೆ, ‘ಕುರಕ್ಷೇತ್ರ’ ಸಿನಿಮಾ ಮಲಯಾಳಂನಲ್ಲಿ ನಾಳೆ ತೆರೆಕಾಣುತ್ತಿರುವ ಕಾರಣಕ್ಕಾಗಿ ಈ ಸಮಾಚಾರ ಹುಟ್ಟುಹಾಕಿದೆ. ದರ್ಶನ್, ಹಿರಿಯ ನಟ ಅಂಬರೀಶ್, ನಟ ನಿಖಿಲ್ ಕುಮಾರಸ್ವಾಮಿ, ರವಿಚಂದ್ರನ್ ಸೇರಿ ಅನೇಕರು ಈ…
ಸಾರಾಹ್ ಇದು ಒಂದು ಅನಾಮಧೇಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ಕಳೆದ ಒಂದು ವಾರದಿಂದ ಸಾರಾಹ್ ಅಪ್ಲಿಕೇಷನ್ ಅತಿ ವೇಗವಾಗಿ ತನ್ನ ನೆಲೆಯನ್ನು ಪಡೆಯುತ್ತಿದೆ, ಇದು ಕೆಲವೇ ವಾರಗಳಲ್ಲಿ ಇರುತ್ತೋ ಇಲ್ಲ ಹೋಗುತ್ತೋ ಅಂತ ಯಾರೂ ಯೋಚನೆ ಸಹ ಮಾಡಿರಲಿಲ್ಲ. ಆದ್ರೆ ಈಗ ಇದರ ಹವಾ ಹೇಗಿದೆ ಎಂದರೆ ನಿಮ್ಮ ಫೇಸ್ಬುಕ್ ನ್ಯೂಸ್ ಫೀಡ್’ನ್ನು ನೋಡುವುದು ಸಹ ಕಷ್ಟ ವಾಗಿದೆ.