ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಣದ್ರಾಕ್ಷಿ ಎಂದರೆ ಒಣಗಿಸಿದ ದ್ರಾಕ್ಷಿ. ಒಣದ್ರಾಕ್ಷಿಯನ್ನು ವಿಶ್ವದ ಹಲವು ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಅಡುಗೆ, ಬೇಕಿಂಗ್ ಮತ್ತು ಮದ್ಯ ತಯಾರಿಕೆಯಲ್ಲಿ ಬಳಸಬಹುದು.
ಪ್ರಯೋಜನಗಳು:-
ಕೆಮ್ಮು, ಕಫ ನಿವಾರಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ, ಶುಂಠಿ, ಕಾಳುಮೆಣಸಿನ ಕಷಾಯದಲ್ಲಿ 3-4 ಒಣದ್ರಾಕ್ಷಿಯನ್ನು ಜಜ್ಜಿ ಹಾಕಬೇಕು. ಆಗಾಗ ಹುಳಿ ದ್ರಾಕ್ಷಿಯನ್ನು ತಿನ್ನುತ್ತಿದ್ದರೆ ಹೊಟ್ಟೆಯ ಉರಿ, ಆಹಾರ ಪಚನವಾಗದ ಸಮಸ್ಯೆ ದೂರವಾಗುತ್ತದೆ. 2 ಚಮಚ ಒಣದ್ರಾಕ್ಷಿಯನ್ನು 1 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ ಆ ನೀರನ್ನು ತಣಿಸಿ ಕುಡಿದರೆ ಹಸಿವೆ ಇಲ್ಲದಿರುವ ಸಮಸ್ಯೆ ದೂರವಾಗುತ್ತದೆ. ಅಲ್ಸರ್ ನಿಂದ ಬಳಲುವವರು 1 ಬಟ್ಟಲು ದ್ರಾಕ್ಷಾರಸವನ್ನು ದಿನಕ್ಕೆರಡು ಬಾರಿ ಕುಡಿಯುವುದರಿಂದ ಪ್ರಯೋಜನವಾಗುತ್ತದೆ.
ಅರ್ಧ ಬಟ್ಟಲು ನೀರಿನಲ್ಲಿ 2 ಚಮಚೆ ಒಣದ್ರಾಕ್ಷಿಯನ್ನು 1 ಗಂಟೆ ಕಾಲ ನೆನೆಸಿಟ್ಟು ನಂತರ ದ್ರಾಕ್ಷಿಯನ್ನು ಚೆನ್ನಾಗಿ ಅಗಿದು ತಿಂದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಇದನ್ನು ದಿನಕ್ಕೆರಡು ಸಲ ಮಾಡಬೇಕು. ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ಮಿದುಳು ಚುರುಕಾಗಿರುತ್ತದೆ, ಮಾನಸಿಕ ಶಕ್ತಿ ಹೆಚ್ಚುತ್ತದೆ.
ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ಒಣದ್ರಾಕ್ಷಿಯನ್ನು ತಿನ್ನುವುದರಿಂದ ನಿಶ್ಯಕ್ತಿ, ದೈಹಿಕ ದೌರ್ಬಲ್ಯ ದೂರವಾಗುತ್ತದೆ. ಪಿತ್ತಕೋಶದ ಸಮಸ್ಯೆ , ಕಾಮಾಲೆಯಂತಹ ಸಮಸ್ಯೆ ಇದ್ದಾಗ ಪ್ರತಿನಿತ್ಯ ದ್ರಾಕ್ಷಾರಸವನ್ನು ಕುಡಿಯಬೇಕು.
ದೇಹಕ್ಕೆ ಪುಷ್ಠಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಮುಂಜಾನೆ 4-5 ಒಣದ್ರಾಕ್ಷಿ ಮತ್ತು 2-3 ಬಾದಾಮಿಯನ್ನು ಚೆನ್ನಾಗಿ ಅಗಿದು ತಿನ್ನಬೇಕು.
ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನಸಿ ನಂತರ ಅದೇ ಹಾಲಲ್ಲಿ ಅರೆದು ಚಿಕ್ಕಮಕ್ಕಳಿಗೆ ಪ್ರತಿನಿತ್ಯ ತಿನ್ನಿಸಿದರೆ ಮಕ್ಕಳು ದೃಡಕಾಯರಾಗಿ ಬೆಳೆಯುತ್ತಾರೆ.
1 ಲೋಟ ಹಾಲಿನಲ್ಲಿ1 ಚಮಚ ಒಣದ್ರಾಕ್ಷಿಯನ್ನು ಸೆರಿಸಿ ಬೇಯಿಸಿ ದಿನಕ್ಕೆರಡು ಬಾರಿ ತಿನ್ನಬೇಕು ಇದರಿಂದ ಕಣ್ಣಿನ ಸಮಸ್ಯೆ ದೂರವಾಗುವುದಲ್ಲದೆ ದೃಷ್ಠಿ ಶಕ್ತಿ ಚುರುಕಾಗುತ್ತದೆ.
ಹಾಲಲ್ಲಿ ಒಣದ್ರಾಕ್ಷಿಯನ್ನು ಅರೆದು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಮುಖ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
1 ಚಮಚ ಒಣದ್ರಾಕ್ಷಿ 2 ಒಣ ಅಂಜೂರವನ್ನು 1ಲೋಟ ಹಾಲಿನಲ್ಲಿ ಬೇಯಿಸಿ ಹಣ್ಣನ್ನು ತಿಂದು ಆ ಹಾಲನ್ನು ಕುಡಿದರೆ ಕಣ್ಣಿನ ದೃಷ್ಠಿಶಕ್ತಿ ಹೆಚ್ಚುತ್ತದೆ, ಇದನ್ನು ಪ್ರತಿ ನಿತ್ಯ ಮಾಡಿದರೆ ಕಣ್ಣಿನ ಆರೋಗ್ಯ ಹೆಚ್ಚುತ್ತದೆ.
ಒಣ ಕೆಮ್ಮು ಕಾಡುತ್ತಿರುವಾಗ 3 ಚಮಚೆ ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು ರಕ್ತದ ಒತ್ತಡ ಇರುವವರು ಪ್ರತಿನಿತ್ಯ ದ್ರಾಕ್ಷಾರಸ ಕುಡಿಯುವುದರಿಂದ ರಕ್ತದ ಒತ್ತಡದ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು.
ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ರಾತ್ರಿ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನಸಿಟ್ಟು ಬೆಳ್ಳಿಗೆ ಹಾಲಿನೊಂದಿಗೆ ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
2 ಚಮಚೆಯಷ್ಟು ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳ್ಳಿಗೆ ಸೇವಿಸುವುದರಿಂದ ಎದೆ ಉರಿ, ಮಲಬದ್ದತೆ, ರಕ್ತಹೀನತೆ ಪರಿಹಾರವಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು’ ಎಂದು ಹೇಳಲಾಗುತ್ತದೆ. ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತುಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಬಲವರ್ಧಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಆರೋಗ್ಯವಂತರಾಗಿ ಇರಲು ಆಯುರ್ವೇದವು ಹಲವು ಸೂತ್ರಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಈ ಕಾಲದಲ್ಲಿ ನಿರೋಗಿಗಳಾಗಿ ಇರಬಹುದು. ಆಯುರ್ವೇದ ಹೇಳುವಂತೆ ಚಳಿಗಾಲದಲ್ಲಿ…
ಸೌಂದರ್ಯ ಮತ್ತು ಸುಂದರವಾಗಿ ಕಾಣಲು ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಹಾಗೆಯೇ ವಾಷಿಂಗ್ಟನ್ ಅಮೆರಿಕದ ಸೂಪರ್ ಮಾಡೆಲ್ ಆದ ಬೆಲ್ಲಾ ಹದೀದ್ರನ್ನು ವಿಶ್ವದ ಅತೀ ಸುಂದರ ಮಹಿಳೆ ಎಂದು ಘೋಷಣೆ ಮಾಡಲಾಗಿದೆ.ಯಾಕೆಂದರೆ ವೈಜ್ಞಾನಿಕವಾಗಿ ಪರೀಕ್ಷಿಸಿ ಆಕೆಗೆ ಈ ಬಿರುದು ನೀಡಲಾಗಿದೆ ಎಂದು ತಿಳಿಸಲಾಗಿದೆ. ಸೌಂದರ್ಯ ಅಳೆಯುವ ಗ್ರೀಕ್ ಪದ್ಧತಿಯಾದ ‘ಗೋಲ್ಡನ್ ರೇಶ್ಯೋ ಆಫ್ ಬ್ಯೂಟಿ ಫಿ ಮಾನದಂಡದ ಪ್ರಕಾರ ಈ ಸೌಂದರ್ಯ ಪರೀಕ್ಷೆ ನಡೆಸಲಾಗಿದ್ದು, ಬೆಲ್ಲಾ ಹದೀದ್ ಮುಖ ಶೇ.94.35 ರಷ್ಟುಹೋಲಿಕೆಯಾಗಿದೆ. ಹಾಗಾಗಿ ಆಕೆಯನ್ನು ಜಗತ್ತಿನ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(6 ಡಿಸೆಂಬರ್, 2018) ಸ್ನೇಹಿತರು, ವ್ಯಾಪಾರ ಪಾಲುದಾರರು ಹಾಗೂ ಸಂಬಂಧಿಗಳ ಜೊತೆ ವ್ಯವಹರಿಸುವಾಗ ನಿಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಿ – ಅವರು ನಿಮ್ಮ…
ನೀವು ಎಸೆಸೆಲ್ಸಿ ಅಂಕಪಟ್ಟಿ ಕಳೆದುಕೊಂಡಿದ್ದರೆ ಹೊಸತಾಗಿ ಪಡೆಯಲು ಇನ್ನು ಆಧಾರ್ ಕಡ್ಡಾಯ. ಇಷ್ಟು ಮಾತ್ರವಲ್ಲ ಅಂಕಪಟ್ಟಿಯಲ್ಲಿ ಏನಾದರೂ ಲೋಪಗಳು ಇದ್ದರೆ ಅದನ್ನು ಸರಿಪಡಿಸಿ ಹೊಸತನ್ನು ಪಡೆಯಲೂ ಅದು ಬೇಕು. ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ…
ಮಾಡೆಲ್ ಮತ್ತು ನಟಿ ಆಮಿ ಜಾಕ್ಸನ್ ಅವರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿರುವ ‘ದಿ ವಿಲನ್’ ಚಿತ್ರದ ನಾಯಕಿ ಆಮಿ ಜಾಕ್ಸನ್ ಈ ವಿಚಾರ ಬಹಿರಂಗಗೊಳಿಸುತ್ತಿದ್ದಂತೆಯೇ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ. ಆದರೆ, ಮದುವೆಯ ಮೊದಲೇ ಆಕೆ ಗರ್ಭಿಣಿಯಾಗಿರುವುದು ಅಭಿಮಾನಿಗಳ ತಲೆ ಸುತ್ತುವಂತೆ ಮಾಡಿದೆ.ನಟಿ ಆಮಿ ಜಾಕ್ಸನ್ ಅವರು ತಾವು ಮಗುವಿಗಾಗಿ ಕಾಯುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.ತಾಯಂದಿರ…
ಪೈಲಟ್ ಇಲ್ಲದ ವಿಮಾನ ತಯಾರಿಸಲು ಬೋಯಿಂಗ್ ಕಂಪನಿ ಮುಂದೆ ಬಂದಿದೆ. ವಿಮಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಬೋಯಿಂಗ್ ಕಂಪನಿ ಮುಂದಿನ ವರ್ಷದ ವೇಳೆಗೆ ಪೈಲಟ್ ಇಲ್ಲದ ವಿಮಾನ ನಿರ್ಮಾಣದ ಕನಸು ನನಸಾಗಿರುವ ಗುರಿ ಹೊಂದಿದೆ.