ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ, ನಟಿಯರು ಶೂಟಿಂಗ್‌ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್ ಖಾನ್ ಕೂಡಾ ಸೇರ್ಪಡೆಯಾಗಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅವರಿಗೆ ದುಬಾರಿ ವೆಚ್ಛದ ಐಷಾರಾಮಿ ಕಾರುಗಳೆಂದರೆ ಸಖತ್ ಕ್ರೇಜ್. ಐಷಾರಾಮಿ ಕಾರುಗಳನ್ನು ಖರೀದಿಸುವುದು, ಅವುಗಳಲ್ಲಿ ಜಾಲಿ ರೈಡ್ ಹೋಗುವುದೆಂದರೆ ಖುಷಿಯೋ ಖುಷಿ. ಅವರಲ್ಲಿರುವ ದುಬಾರಿ ವಾಹನಗಳ ಸಾಲಿಗೆ ಹೊಸದರ ಸೇರ್ಪಡೆಯಾಗುತ್ತಲೇ ಇರುತ್ತದೆ.

ಶಾರುಖ್ ಇತ್ತೀಚಿಗೆ ವೋಲ್ವೋ ಕಂಪನಿಯ ಬಿ 9 ಆರ್ ವ್ಯಾನ್ ಖರೀದಿಸಿದ್ದು, ಬಳಿಕ ಅದನ್ನು ಭಾರತದ ಖ್ಯಾತ ವಾಹನ ವಿನ್ಯಾಸಕಾರ ದಿಲೀಪ್ ಛಾಬ್ರಿಯಾ ಮರು ವಿನ್ಯಾಸಗೊಳಿಸಿದ್ದಾರೆ. ಸಕಲ ಸೌಲಭ್ಯ ಒಳಗೊಂಡಿರುವ ಈ ವ್ಯಾನ್‌ನ ಬೆಲೆ 4 ಕೋಟಿ ರೂ. ಎನ್ನಲಾಗಿದೆ

ಅಂದ ಹಾಗೇ ಶೂಟಿಂಗ್ ಸ್ಥಳಕ್ಕೆ ಕೊಂಡೊಯ್ಯಲು ಅತ್ಯಾಧುನಿಕ ಸೌಲಭ್ಯವುಳ್ಳ ವ್ಯಾನಿಟಿ ವ್ಯಾನ್ ಒಂದು ಶಾರೂಕ್ ಖಾನ್ ರ ಬಳಿ ಇದೆ. ಕ್ಯಾರಾವಾನ್ ನಲ್ಲಿ ಇರುವ ಸೌಲಭ್ಯಗಳಿಗಿಂತ ಅತಿ ಹೆಚ್ಚು ಸೌಕರ್ಯ ಹಾಗೂ ಅತ್ಯಾಧುನಿಕ ಮಾದರಿಯ ವಿನ್ಯಾಸದ ವಿಶೇಷ ವ್ಯಾನಿಟಿ ವ್ಯಾನ್ ಇದಾಗಿದೆ.

ಶಾರುಕ್ ಗಾಗಿಯೇ ರೆಡಿಯಾಗಿರುವ ಈ ಅತ್ಯಾಧುನಿಕ ವ್ಯಾನ್ ಸಿದ್ಧಪಡಿಸಿದವರು ಪ್ರಖ್ಯಾತ ವಾಹನ ವಿನ್ಯಾಸಕಾರ ದಿಲೀಪ್ ಛಬ್ರಿಯಾ. ಈ ವ್ಯಾನ್ ಅನ್ನು ಶಾರುಕ್ ಅಗತ್ಯಕ್ಕೆ ತಕ್ಕಂತೆ ಮರು ವಿನ್ಯಾಸಗೊಳಿಸಿ ಸಿದ್ಧಪಡಿಸಲು 3 ತಿಂಗಳು ತೆಗೆದುಕೊಂಡಿದ್ದಾರೆ.ಇದಕ್ಕಾಗಿ ಬರೋಬ್ಬರಿ 4 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ಅತ್ಯಾಧುನಿಕ ವಿಶ್ರಾಂತಿ ಕೊಠಡಿ, ವೈಫೈ, ಟಾಯ್ಲೆಟ್, ಕಿಚನ್, ಸೆಟಲೈಟ್ ಟಿವಿ ಸೇರಿದಂತೆ ಸಕಲ ಸೌಲಭ್ಯಗಳಿವೆ. ಅಲ್ಲದೇ ಪ್ರತ್ಯೇಕ ಮೇಕಪ್ ರೂಮ್ ಕೂಡಾ ಇದರಲ್ಲಿದೆ.

ಹೊರನೋಟದಂತೆ ಒಳಗೂ ಅತ್ಯಂತ ಸುಂದರವಾಗಿರುವ ಈ ವ್ಯಾನ್ 280 ಚದರಅಡಿ ವಿಸ್ತೀರ್ಣ ಹೊಂದಿದ್ದು, ಒಳಗಡೆ 4 ಕೋಣೆಯನ್ನು ಹೊಂದಿದೆ. ಈ ಪೈಕಿ ಒಂದು ಮೀಟಿಂಗ್ ರೂಂ, ಮತ್ತೂಂದು ಬೆಡ್‌ರೂಂ ಮತ್ತೂಂದು ಶೌಚಾಲಯ ಇನ್ನೊಂದು ಮೇಕಪ್ ಕಮ್ ಬಟ್ಟೆ ಬದಲಾವಣೆ ಕೋಣೆ.

ಇದರ ಜೊತೆ ವ್ಯಾನ್‌ನಲ್ಲಿ ಹೈಡ್ರಾಲಿಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರ ಮೂಲಕ ಅಗತ್ಯ ಬಿದ್ದರೆ ವಾಹನದಿಂದ ಹೊರಗೆ ಚಾಚಿಕೊಂಡಿರುವಂತೆ ಇನ್ನೊಂದು ಕೋಣೆಯನ್ನೂ ಸೃಷ್ಟಿಸ ಬಹುದಾಗಿದೆ. ಇಡೀ ವ್ಯಾನ್ ವೈಫೈ ವ್ಯವಸ್ಥೆ ಹೊಂದಿದ್ದು, ಎಲ್ಲಾ ನಾಲ್ಕು ಕೋಣೆಗಳಲ್ಲೂ ಆ್ಯಪಲ್ ಟೀವಿ ಅಳವಡಿಸಲಾಗಿದೆ. ಉಪಗ್ರಹ ಸಂಪರ್ಕ ಇರುವ 4ಕೆ ಸೀರೀಸ್‌ನ ಟೀವಿ, ಸಣ್ಣ ಕಿಚನ್ ಕೂಡಾ ಇದೆ. ವ್ಯಾನ್‌ಗೆ ಗ್ಲಾಸ್ ಫ್ಲೋರಿಂಗ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದ ಜನತೆಗೆ ಶುಕ್ರವಾರ ಮುಂಜಾನೆಲೇ ಶಾಕ್ ಎದುರಾಗಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತೈಲ ಕಂಪನಿಗಳು ಏಕಾಏಕಿ ಹೆಚ್ಚಿಸಿದ್ದು, ಕರ್ನಾಟಕದಲ್ಲೂ ಇಂಧನ ದರ ಏರಿಕೆಯ ಬಿಸಿ ಸಾಮಾನ್ಯ ಜನರಿಗೆ ತಟ್ಟಿದೆ. ಮೇ 15ರಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಲೀಟರ್ಗೆ ಸುಮಾರು ₹3ರವರೆಗೆ ಏರಿಕೆ ಮಾಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆ ಕಂಡಿರುವುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಸುಮಾರು ₹3.26…
ಮಾನವನ ದೇಹದೊಳಗೆ ಪ್ರವೇಶಿಸಿದ ಮಾತ್ರೆಯು ಅಲ್ಲಿ ತಾನು ನಡೆಯುವ ಕ್ರಿಯೆಗಳನ್ನು ವೈದ್ಯನಿಗೆ ಕಳುಹಿಸಿಕೊಡುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಅನುಮತಿ ನೀಡಿದೆ.! ವಿಶ್ವದಲ್ಲಿಯೇ ಇಂತಹದೊಂದು ಡಿಜಿಟಲ್ ಮಾತ್ರೆ ಇದೀಗ ಜನ ಬಳಕೆಗೆ ಬಂದಿದ್ದು, ಇದು ಎಲ್ಲರಿಗೂ ಆಶ್ಚರ್ಯವಾಗಿದೆ.!
ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಬೆಲೆ ಬಾಳುವ ಆಭರಣಗಳು ತಮ್ಮದಾಗಬೇಕು ಎಂಬ ಆಸೆ ಇರುತ್ತದೆ. ಆರ್ಥಿಕವಾಗಿ ಚಿನ್ನದ ಆಭರಣ ಖರೀದಿಸಲು ಸಾಧ್ಯವಾಗದಿದ್ದಾಗ ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಆಭರಣಗಳನ್ನು ಖರೀದಿಸುತ್ತಾರೆ. ಅಂತೆಯೇ ಇಂಗ್ಲೆಂಡ್ ನಿವಾಸಿಯ ಮಹಿಳೆ 33 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ 850 ರೂ.ಗೆ ಖರೀದಿಸಿದ್ದ ವಜ್ರದ ಉಂಗುರ ಇಂದು ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ. ವಜ್ರದ ಉಂಗುರ ಧರಿಸಬೇಕೆಂದು ಆಸೆ ಪಟ್ಟಿದ್ದ ಲಂಡನ್ ನಿವಾಸಿ 33 ವರ್ಷಗಳ ಹಿಂದೆ ಡೆಬ್ರಾ ಗಾಂಡರ್ಡ್(55), ರಸ್ತೆ ಬದಿಯ ಅಂಗಡಿಯಲ್ಲಿ 850…
ಟೈಮ್ಸ್ ನೌ ಮತ್ತು ವಿಎಂಆರ್ ನಡೆಸಿದ ಮತದಾರರ ಅಭಿಪ್ರಾಯ ಸಮೀಕ್ಷೆಯಲ್ಲಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸುವ ಮೂಲಕ 6ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿ ದಾಖಲೆ ನಿರ್ಮಿಸಲಿದೆ ಎಂದು ತಿಳಿಸಿದೆ.
ರಾಜ್ಯದ ಮೂಲೆ ಮೂಲೆಗಳಲ್ಲೂ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ ಸಂಗ್ರಾಮದ ಮಾದರಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸಂಘಟನೆ ಚಟುವಟಿಕೆಗಳು ನಡೆಯುತ್ತಿದ್ದು, ಡಿಸಂಬರ್.19 ರಂದು ಕೂಡಲ ಸಂಗಮದಲ್ಲಿ ನಡೆಯುವ ಐತಿಹಾಸಿಕ ಸಮಾವೇಶವು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕ್ರಾಂತಿ ಆಗಲಿದೆಯೆಂದು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಪಾಸಿಟೀವೋ, ನೆಗೆಟಿವೋ.. ಒಟ್ನಲ್ಲಿ ಪ್ರಚಾರ ಸಿಕ್ಕರೆ ಸಾಕು ಅಂತ ಕೆಲ ಸಿನಿಮಾ ತಂಡವರು ಏನೇನೋ ಪ್ಲಾನ್ ಮಾಡ್ತಾರೆ. ನೆಗೆಟಿವ್ ಪಬ್ಲಿಸಿಟಿ ಆದರೂ ಪರ್ವಾಗಿಲ್ಲ, ಒಟ್ನಲ್ಲಿ ಹೆಚ್ಚು ಜನರನ್ನು ತಲುಪಲು ಗಾಂಧಿನಗರದ ಕೆಲ ಮಂದಿ ಸರ್ಕಸ್ ಮಾಡುವುದು ನಿಮಗೆಲ್ಲ ಗೊತ್ತೇ ಇದೆ. ಸೇಮ್ ಟು ಸೇಮ್ ಇದೇ ಸ್ಟ್ರಾಟೆಜಿಯನ್ನ ನಟಿ ಮತ್ತು ಬರಹಗಾರ್ತಿ ಚೈತ್ರ ಕೊಟ್ಟೂರು ‘ಬಿಗ್ ಬಾಸ್’ ಮನೆಯಲ್ಲಿ ಅಪ್ಲೈ ಮಾಡುತ್ತಿರುವ ಹಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಮೂರು ಹೊತ್ತು ಸುಮ್ಮನೆ ಇದ್ದರೆ, ಕ್ಯಾಮರಾಗಳು ಕೂಡ ಝೂಮ್…