ರಾಜಕೀಯ

ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ……

131

ಪರಿಶಿಷ್ಟ  ಜಾತಿ ಮತ್ತು ಪಂಗಡದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಅನುಸೂಚಿತ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ರಾಜ್ಯ ಪರಿಷತ್‌ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.

ಇದಕ್ಕಾಗಿ, ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣದಲ್ಲಿ 105 ಕೋಟಿ ರೂ. ಮೀಸಲಿಡಲು ಸಭೆಯಲ್ಲಿ  ನಿರ್ಧರಿಸಲಾಯಿತು.

ಈ ಮುನ್ನ  ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ ಪಾಸ್‌ ನೀಡಲಾಗುತ್ತಿತ್ತು. ರಾಜ್ಯ ಸರ್ಕಾರ ಶೇ.50 ರಷ್ಟು, ಅಂಬೇಡ್ಕರ್‌ ಹಾಗೂ ವಾಲ್ಮೀಕಿ ನಿಗಮದಿಂದ ಶೇ.25 ಹಾಗೂ ವಿದ್ಯಾರ್ಥಿಗಳು ಶೇ.25 ರಷ್ಟು ಭರಿಸುತ್ತಿದ್ದರು.

ಆದರೆ, ಪ್ರಸಕ್ತ ಸಾಲಿನಿಂದ ಸಂಪೂರ್ಣವಾಗಿ ಉಚಿತವಾಗಿ ಬಸ್‌ ಪಾಸ್‌ ನೀಡಬೇಕು. ಎಸ್‌ಸಿಪಿ, ಟಿಎಸ್‌ಪಿ ಹಣದಲ್ಲಿ ವೆಚ್ಚ ಭರಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.

ವಿಶೇಷ ಘಟಕ ಯೋಜನೆಯಡಿ ಅನುಮೋದನೆಗೊಂಡಿರುವ ಕ್ರಿಯಾ ಯೋಜನೆಗಳನ್ನು ಸಕಾಲದಲ್ಲಿ ಜಾರಿಗೊಳಿಸಿ. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು.

2015-16 ನೇ ಸಾಲಿನ ಉಳಿಕೆ 751 ಕೋಟಿ ರೂ. ಸೇರಿದಂತೆ ಪ್ರಸಕ್ತ ಸಾಲಿನಲ್ಲಿ 27,703 ಕೋಟಿ ರೂ. ಅನುದಾನ ಲಭ್ಯವಿದೆ. ಅದೇ ರೀತಿ 2016-17 ನೇ ಸಾಲಿನಲ್ಲಿ 1,782 ಕೋಟಿ ರೂ. ವೆಚ್ಚವಾಗಿಲ್ಲ.

ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಂಡಿರುವ ಎಲ್ಲ ಯೋಜನೆಗಳನ್ನು ಮುಂದಿನ ವರ್ಷದ ಮಾರ್ಚ್‌ ಒಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಶೇ.100ಕ್ಕೆ 100 ರಷ್ಟು ಸಾಧನೆ ಮಾಡಲೇಬೇಕು ಎಂದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರೆಫ್ರಿಜರೇಟರ್ ಸ್ಫೋಟಗೊಂಡು ಮೂವರ ದುರ್ಮರಣ…..!

    ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಗುರುವಾರ ಬೆಳಗ್ಗೆ ಪಕ್ಕದ…

  • ಸರ್ಕಾರಿ ಯೋಜನೆಗಳು

    ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಇಂದಿರಾ ಸಾರಿಗೆ ನಂತರ ಈಗ ಪಿಂಕ್ ಆಟೋಗಳು..!ತಿಳಿಯಲು ಈ ಲೇಖನ ಓದಿ..

    ಈ ಹಿಂದೆ ಮಹಿಳೆಯರ ಸುರಕ್ಷತೆಗಾಗಿ ಉತ್ತರ ಪ್ರದೇಶದಲ್ಲಿ ಪಿಂಕ್ ಬಸ್ ರೋಡಿಗೆ ಇಳಿದಿವೆ. ಬೆಂಗಳೂರಿನಲ್ಲಿ ಇಂದಿರಾ ಸಾರಿಗೆ ಆಯಿತು ಇದೀಗ ಪಿಂಕ್ ಆಟೋ ಮಹಿಳೆಯಾರ ಸುರಕ್ಷತೆಗಾಗಿ ರಸ್ತೆಗಿಳಿಯಲಿವೆ.

  • ಸುದ್ದಿ

    ವರದಕ್ಷಿಣೆ ಬೇಡವೆಂದ ಹೇಳಿದ ವರನಿಗೆ ಸಿಕ್ಕಿತು 1 ಲಕ್ಷ ಮೌಲ್ಯದ ಸಾವಿರ ಪುಸ್ತಕ…!

    ಕೋಲ್ಕತ್ತಾ: ವರದಕ್ಷಿಣೆಯೇ ಬೇಡ ಎಂದಿದ್ದ ವರನಿಗೆ 1 ಲಕ್ಷ ರೂಪಾಯಿ ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಉಡುಗೊರೆಯಾಗಿ ನೀಡಿ ಮಗಳನ್ನು ಧಾರೆಯೆರೆದು ಕೊಟ್ಟ ವಿಶೇಷ ಮದುವೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ. ಕೋಲ್ಕತ್ತಾದ ಶಿಕ್ಷಕ ಸೂರ್ಯಕಾಂತ್ ಬರಿಕ್ ಅವರ ಮದುವೆಯು ಅದೇ ಊರಿನ ಪ್ರಿಯಾಂಕಾ ಬೇಜ್ ಅವರ ಜೊತೆ ಖೇಜುರಿಯ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಬೇಕಿತ್ತು. ಈ ವೇಳೆ ಕಲ್ಯಾಣಮಂಟಪಕ್ಕೆ ಬಂದ ಅವರಿಗೆ ಬರೋಬ್ಬರಿ 1 ಲಕ್ಷ ರೂ. ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಗಿಫ್ಟ್ ಮಾಡಿದ್ದಾರೆ. ವರದಕ್ಷಿಣೆ…

  • ಮನರಂಜನೆ

    ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಎಲಿಮಿನೇಟ್, ಬಿಗ್ ಟ್ವಿಸ್ಟ್ ನೀಡಿದ ಕಿಚ್ಚ ಸುದೀಪ್.

    ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ 90 ದಿನಗಳನ್ನು ಮುಗಿಸಿದೆ. ಈ ಕಾರ್ಯಕ್ರಮ ಮುಗಿಯಲು ಇನ್ನೂ ಕೆಲವು ದಿನಗಳು ಇರುವಾಗಲೇ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಡಬಲ್ ಎಲಿಮಿನೇಟ್ ಆಗಿದ್ದಾರೆ. ಹೌದು.ಭಾನುವಾರ ನಟ ಸುದೀಪ್ ಅವರು ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಇಬ್ಬರನ್ನು ಎಲಿಮಿನೇಟ್ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹೀಗಾಗಿ ಈ ವಾರ ಎಲಿಮಿನೇಟ್ ಇರಲಿಲ್ಲ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿರಲಿಲ್ಲ….

  • ರಾಜಕೀಯ

    ಮಣ್ಣಿನ ಮಗ ಮಾಜಿ ಪ್ರಧಾನಿ “ಹೆಚ್.ಡಿ.ದೇವೇಗೌಡ”ರಿಗೆ “ರಾಷ್ಟ್ರಪತಿ” ಸ್ಥಾನಕ್ಕೆ ಸ್ಪರ್ಧಿಸುವಂತೆ ಆಹ್ವಾನ

    ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದಾರೆ.

  • India, tourism

    ಇದು ಭಗವಾನ ಶ್ರೀಕೃಷ್ಣನ ನಗರಿ

    ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಜನಪ್ರೀಯಗೊಳ್ಳುತ್ತಿರುವ ಪ್ರವಾಸಿ ತಾಣ. ವಿಶೇಷವೆಂದರೆ ದ್ವಾರಕೆಯಿಂದ ಕೇವಲ ಮೂವತ್ತೇ ಕಿ.ಮೀ ಗಳಷ್ಟು ದೂರದಲ್ಲಿದೆ. ಇದನ್ನು ದ್ವಾರಕಾ ಎಂತಲೂ ಕರೆಯುತ್ತಾರೆ ಹಾಗೂ ಇದು ಗುಜರಾತ್ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಗುಜರಾತ್ ರಾಜ್ಯದ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಎಂಬ ಕರಾವಳಿ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿ ಬೇಟ್ ದ್ವಾರಕಾ…