bank, ಬ್ಯಾಂಕ್

ಎಲ್ಲಾ ಬ್ಯಾಂಕ್​ ಗ್ರಾಹಕರಿಗೆ ಶುಭ ಸುದ್ದಿ !!! ಏನಂತೀರಾ ಈ ಲೇಖನ ನೋಡಿ…

183

ಬ್ಯಾಂಕ್​ ಗ್ರಾಹಕರಿಗೆ ಶುಭ ಸುದ್ದಿ ನೀಡಿರುವ ಆರ್​ಬಿಐ.

ಮೊಬೈಲ್ ನಂಬರ್ ವರ್ಗಾವಣೆಯಂತೆ ಈಗ ನಿಮ್ಮ  ಬ್ಯಾಂಕ್ ಖಾತೆ ವರ್ಗಾವಣೆಗೂ ಮುಂದಾಗಿದೆ. ಅಂದರೆ ತಮಗಿಷ್ಟ ಬಂದ ಬ್ಯಾಂಕ್‌ನಲ್ಲಿ ಖಾತೆ ಹೊಂದಬಹುದಾಗಿದೆ.

 

ಅಂದುಕೊಂಡಂತೆ ನಡೆದರೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಇನ್ನೊಂದು ಬ್ಯಾಂಕ್​ಗೆ ವರ್ಗಾಹಿಸಿಕೊಳ್ಳಬಹುದಾಗಿದೆ. ಯಾವುದೇ ಸಮಯದಲ್ಲಿ ಬ್ಯಾಂಕ್​ ಖಾತೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ತಮ್ಮ ಅನುಕೂಲತೆಗೆ ತಕ್ಕಂತೆ ಬ್ಯಾಂಕ್​ಗಳ ವರ್ಗಾವಣೆಗೆ ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.

ಗ್ರಾಹಕರು ಚಾಲ್ತಿಯಲ್ಲಿರುವ ತಮ್ಮ ಖಾತೆಯನ್ನು ತಮಗೆ ಇಷ್ಟಬಂದ/ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ವರ್ಗಾಹಿಸಿಕೊಳ್ಳಬಹುದಾಗಿದೆ.

ನಿಮ್ಮ ಮೊಬೈಲ್ ಸೇವಾ ಕಂಪನಿಯಂತೆ (ಮೊಬೈಲ್ ಆಪರೇಟರ್) ನಿಮ್ಮ ಬ್ಯಾಂಕ್ ಅನ್ನು ನೀವು ಬದಲಾಯಿಸಿದರೂ ಕೂಡಾ ನಿಮ್ಮ ಹಳೆಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಲು ಸಾಧ್ಯವಾಗುತ್ತದೆ.

ಈ ಬಗ್ಗೆ ಮಾತನಾಡಿರುವ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಎಸ್.ಎಸ್.ಮುಂದ್ರ, ಭಾರತದಲ್ಲಿ ಬ್ಯಾಂಕ್ ಖಾತೆಯ ಪೋರ್ಟಬಿಲಿಟಿ ಪರಿಚಯಿಸಲು ಆರ್​ಬಿಐ ಸಿದ್ದತೆ ನಡೆಸಿದೆ. ಪಾವತಿಯ ವ್ಯವಸ್ಥೆಯಲ್ಲಿನ ತಂತ್ರಜ್ಞಾನದ ಪ್ರಗತಿಗಳೊಂದಿಗೆ ಖಾತೆಯ ವರ್ಗಾವಣೆಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಎಂಪ್ಲಾ ಯೀಸ್  ಫೆಡರೇಷನ್ ಅಧ್ಯಕ್ಷ ವಸಂತ ಪೈ, ಕೇಂದ್ರದ ಈ ನಿರ್ಧಾರ ಉತ್ತಮವಾಗಿದೆ. ಇದರಿಂದ ತಮಗಿಷ್ಟ ಬಂದ ಬ್ಯಾಂಕ್‌ನಲ್ಲಿ ಖಾತೆ ಹೊಂದಬಹುದಾಗಿದೆ. ಇದರ ಜತೆಗೆ ಕಟ್ಟುನಿಟ್ಟಿನ ಷರತ್ತು ಜಾರಿಗೊಳಿಸಬೇಕು.

ಗ್ರಾಹಕರನ್ನು ಸೆಳೆಯೋಕೆ ಬ್ಯಾಂಕ್‌ಗಳು ಆಮಿಷ ಒಡ್ಡಬಹುದು. ಇಲ್ಲವಾದರೆ ಭ್ರಷ್ಟಾಚಾರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಈ ಜಾಗಗಳಲ್ಲಿ ಮೊಬೈಲ್ ಫೋನ್ ಗಳನ್ನು ಇಟ್ಟು ಕೊಳ್ಳಲೇಬೇಡಿ…

    ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ. ನೀವು ಮಲಗುವ ಕೊಠಡಿ : ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ನೆನಪಿಡಿ ಇದು…

  • ಉಪಯುಕ್ತ ಮಾಹಿತಿ

    ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮೊದಲು ಇದನ್ನು ತಿಳಿದುಕೊಳ್ಳಿ.

    ದಿನನಿತ್ಯ ಅಡುಗೆ ಮಾಡುವುದು ಸಾಮಾನ್ಯ. ಅದರಲ್ಲೂ ನಾವು ತಿನ್ನುವ ಪ್ರಮುಖ ಅಡುಗೆ ಪದಾರ್ತವೆಂದರೇ ಅಕ್ಕಿ. ನಮ್ಮ ದೇಹದ ಪೌಷ್ಟಿಕತೆಗೆ ಬೇಕಾದ ಅಕ್ಕಿಯನ್ನು ಅನ್ನ ಮಾಡುವಾಗ ಅದನ್ನು ಚೆನ್ನಾಗಿ ತೊಳೆದು ಬಳಸುತ್ತೇವೆ. ಆ ನೀರನ್ನು ಚೆಲ್ಲುತ್ತೇವೆ. ಆದರೆ ಚೆಲ್ಲುವ ಮುನ್ನ ಈ ಸುದ್ದಿಯತ್ತ ಗಮನಿಸಿ.  ನಮ್ಮ ಸಧೃಡ ಕೂದಲಿಗೆ ವಿಧ-ವಿಧವಾದ ಎಣ್ಣೆ, ಶ್ಯಾಂಪೂ, ಹೇರ್ ಪ್ಯಾಕ್ ಬಳಸುತ್ತೇವೆ. ಅದರಲ್ಲೂ ಕೂದಲು ಉದುರುವ ಸಮಸ್ಯೆ ಇದ್ದರಂತೂ ಎಲ್ಲರ ಸಲಹೆ ಪಡೆದು ದಿನಕ್ಕೊಂದು ಮನೆ ಮದ್ದು ಮಾಡುತ್ತೇವೆ. ಆದರೆ ಇಷ್ಟೆಲ್ಲ ಮಾಡುವ…

  • govt

    ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸದ 32 ಕಂಪನಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್,..!!

    ಮುಂಬೈ ಮೂಲದ 32 ಕಂಪನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದಭೀತಿ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದ ಈ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್  ಜಾಮೀನು ರಹಿತ ವಾರಂಟ್ ಸೂಚಿಸಿದೆ . ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ . ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ಅನ್​ಶುಲ್ ಮೆರ್ಸಾಂಟೈಲ್, ಎವರ್​ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್…

  • ಆರೋಗ್ಯ, ಉಪಯುಕ್ತ ಮಾಹಿತಿ

    ಹಲವಾರು ರೋಗಗಳಿಗೆ ರಾಮಬಾಣ ಭೂಲೋಕದ ಈ ಅಮೃತ..!

    ಬೇಸಿಗೆಯಲ್ಲಿ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚು. ದೇಹಕ್ಕೆ ಆರೋಗ್ಯಕರ ಹಾಗೂ ಚೈತನ್ಯವನ್ನು ತುಂಬುವ ಶಕ್ತಿ ಈ ಪಾನೀಯಕ್ಕಿದೆ. ಮಿನರಲ್, ವಿಟಮಿನ್, ಕಾರ್ಬೋಹೈಡ್ರೇಟ್ ಇನ್ನು ಮುಂತಾದ ಅಂಶಗಳು ಎಳನೀರಿನಲ್ಲಿ ಇರುವುದರಿಂದ ಬೇಸಿಗೆಯಲ್ಲಿ ಈ ಡ್ರಿಂಕ್ ಉತ್ತಮ ಎಂದು ಹೇಳಬಹುದು. * ಎಳನೀರಿನ ಸೇವನೆಯಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯಬಹುದು. * ಬೇಸಿಗೆಯಲ್ಲಿ ಉಂಟಾಗುವ ಡಿಹೈಡ್ರೇಷನ್ ನಿಂದ ಮುಕ್ತಿ ಪಡೆಯಲು ಎಳನೀರನ್ನು ಸೇವಿಸಬೇಕು. * ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿ ಎಳನೀರಿಗಿದೆ. * ಎಳನೀರು ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಫ್ರೀ…

  • ಗ್ಯಾಜೆಟ್

    ಈಗ ಬರುತ್ತಿದೆ jio DTH ಬೇರೆ DTH ಸರ್ವಿಸ್ ಗಳಿಗೆ ಶುರುವಾಗಿದೆ ಭಯ..!ತಿಳಿಯಲು ಈ ಲೇಖನ ಓದಿ…

    ಜಿಯೋ ಸೆಟ್‌ ಟಾಪ್‌ ಬಾಕ್ಸ್‌ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್‌ ಸೇವೆಯು 50ಕ್ಕೂ ಹೆಚ್ಚು ಎಚ್‌ಡಿ ಚ್ಯಾನಲ್‌ಗ‌ಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್‌ಗ‌ಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.