ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪ್ಪು ತುಂಬಾನೇ ಅಗ್ಗದ ವಸ್ತು ಆದ್ರೂ ಉಪ್ಪಿಗಿಂತ ರುಚಿಯಿಲ್ಲ ಅನ್ನೋದು ತುಂಬಾ ಸತ್ಯ . ಈಗ ನಾವು ಇಲ್ಲಿ ಹೇಳೋ ವಿಷಯಗಳನ್ನ ಕೇಳಿದರೆ ನಿಮಗೆ ಉಪ್ಪನ್ನ ಎಷ್ಟು ಹೊಗಳಿದ್ರೂ ಸಾಲ್ದು ಅನ್ನಿಸೋದ್ರಲ್ಲಿ ಆಶ್ಚರ್ಯ ಇಲ್ಲ.
1.ನಿಮ್ಮ ಕರ್ಟನ್ ಮೇಲೆ ಯಾವತ್ತೂ ಫಂಗಸ್ ಕೂರ್ದೆ ಇರಕ್ಕೆ ಕರ್ಟನ್ ತಂದ ತಕ್ಷಣ ಉಪ್ಪು ನೀರಲ್ಲಿ ಒಗೆದು ನಂತರ ಉಪ್ಯೋಗ್ಸಿ.
2.ಸೊಳ್ಳೆ ಕಚ್ಚಿದ ಜಾಗದಲ್ಲಿ ತುರಿಕೆ ಆಗ್ಬಾರ್ದು ಅಂದ್ರೆ, ಒದ್ದೆ ಬೆರಳನ್ನ ಉಪ್ಪಿಗೆ ಹಚ್ಕೊಂಡು, ತುರಿಕೆ ಆಗ್ತಿರೋ ಜಾಗದಲ್ಲಿ ಹಚ್ಚಿ.
3.ತಾಮ್ರದ ಪಾತ್ರೆ ಫಳಫಳ ಹೊಳೆಯೋಹಾಗೆ ಮಾಡೋಕೆ ಸ್ವಲ್ಪ ವಿನೆಗರ್, ಮೈದಾ ಹಿಟ್ಟು ಹಾಗು ನಿಂಬೆರಸದ ಜೊತೆ ಉಪ್ಪು ಮಿಕ್ಸ್ ಮಾಡಿ ಪಾತ್ರೆ ಉಜ್ಜಿ.
4.ಬಾಣಲೀಲಿ ನೀವು ಹುರಿಯೋ ಪದಾರ್ಥದಿಂದ ಎಣ್ಣೆ ಸಿಡಿಯದ ಹಾಗೆ ನೋಡಿಕೊಳ್ಳೋಕೆ ಮೊದಲು ಒಂದೆರಡು ಚಿಟಿಕೆ ಉಪ್ಪು ಹಾಕಿಡಿ.
5.ಕ್ಯಾಂಡಲ್ಲಿಂದ ಮೇಣ ಸೋರ್ಬಾರ್ದು ಅಂದ್ರೆ, ಕ್ಯಾಂಡಲ್ ಹಚ್ಚೋಕೆ ಮುಂಚೆ ಸಾಕಷ್ಟು ಹೊತ್ತು ಉಪ್ಪು ನೀರಲ್ಲಿ ಅದನ್ನ ನೆನೆಸಿಟ್ಟು ಒಣಗಿಸಿ ನಂತರ ಬಳಸಿ.
6.ನಿಮ್ಮ ಶೂ ವಾಸನೆ ಬರ್ತಿದ್ರೆ, ಒಂದು ಸಣ್ಣ ಬಟ್ಟೇಲಿ ಉಪ್ಪು ತುಂಬಿ ವಾಸನೆ ಇರೋ ಶೂನಲ್ಲಿಟ್ಟು ಸ್ವಲ್ಪ ಹೊತ್ತಿನ ನಂತರ ತೆಗೀರಿ, ವಾಸನೆ ಹೋಗಿರುತ್ತೆ!
7.ನಿಮ್ಮ ಮನೆಯಲ್ಲಿ ಇರುವೆ ಕಾಟ ಜಾಸ್ತೀನ? ಹಾಗಿದ್ದರೆ ಒಂದು ಭಾಗ ಉಪ್ಪಿಗೆ ನಾಲ್ಕು ಭಾಗ ನೀರನ್ನ ಹಾಕಿ ಮಿಕ್ಸ್ ಮಾಡಿ ಅದನ್ನ ಇರುವೆ ಇರೋ ಜಾಗದಲ್ಲಿ ಚಿಮುಕಿಸಿ.
8.ನಿಮ್ಮ ಮಕ್ಕಳಿಗೆ ಪೈಂಟಿಂಗ್ ಮಾಡೋವಾಗ ಅದು ಬಾಯಿಗೆ ಹೋಗಿ ಏನಾದ್ರೂ ಆಗ್ಬೋದು ಅನ್ನೋ ಭಯ ಇದ್ರೆ, ಒಂದು ಬಟ್ಟಲಲ್ಲಿ ಮೈದಾ ಮತ್ತು ಉಪ್ಪು ನೀರು ಹಾಕಿ ಅದಕ್ಕೆ ಫುಡ್ ಕಲರ್ ಬೆರೆಸಿ ಕೊಡಿ. ಮನೇಲೇ ಪೈಂಟ್ ರೆಡಿ!
9.ಅಪಲ್ ತರದ ಹಣ್ಣು ಮತ್ತು ತರಕಾರಿ ಕತ್ತರಿಸಿದಾಗ ಕಪ್ಪಾಗದ ಹಾಗೆ ನೋಡಿಕೊಳ್ಳೋಕೆ ಅದನ್ನ ಕತ್ತರಿಸಿದ ನಂತರ ಉಪ್ಪು ನೀರಲ್ಲಿ ನೆನೆಸಿಡಿ.
10.ನಿಮ್ಮ ಕೈಯಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ವಾಸನೆ ಇದ್ರೆ, ಉಪ್ಪಿಂದ ಕೈ ತೊಳ್ಕೊಳಿ. ವಾಸ್ನೆ ಓಡಿ ಹೋಗತ್ತೆ!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
10 ರೂಪಾಯಿ ನಾಣ್ಯವನ್ನು ರದ್ದು ಮಾಡಿರದಿದ್ದರೂ, ಅನೇಕ ಕಡೆಗಳಲ್ಲಿ ವರ್ತಕರು, ಜನ ಸಾಮಾನ್ಯರು ಇವುಗಳನ್ನು ಸ್ವೀಕರಿಸಲು ಹಿಂದೇಟು ಹಾಕ್ತಾರೆ.ಇವೇ ಮೊದಲಾದ ಕಾರಣಗಳಿಂದಾಗಿ ಬ್ಯಾಂಕ್ ಗಳಲ್ಲಿ ನಾಣ್ಯ ಮೇಳ ನಡೆಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ವಾಣಿಜ್ಯ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ಜೀವನದ ಪಾಠವನ್ನು ಹಸಿವು ಅನ್ನೊದ್ದು ಅತಿ ಬೇಗನೆ ಕಲಿಸಿ ಕೊಡುತ್ತದೆ ಅನ್ನಬಹುದು. ಬಡತನದಲ್ಲಿ ಬೆಂದು ನೊಂದು ಹಲವರ ಬಾಯಲ್ಲಿ ಬೋಯಿಸಿಕೊಂಡು ಜೀವನವನ್ನು ಸಾಗಿಸುತ್ತ, ಇವುಗಳ ಮದ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ.
ಹುಡುಗಿಯರ ಎದೆಗೆ ಕನ್ನ ಹಾಕಿದ ಚಾಕ್ಲೇಟ್ ಹೀರೋ. ತನ್ನ ಮುದ್ದು ಮುಖದ ಚೆಲುವಿನಿಂದ ಹುಡುಗಿಯರ ನಿದ್ದೆ ಕದ್ದ ಚೋರನೀತ. ಹುಡುಗ ಅಂದ್ರೆ ಇವನ ತರ ಸುಂದರವಾಗಿರಬೇಕು ಅಂತ ಹುಡುಗಿಯರ ಮನದಲ್ಲಿ ಆಸೆ ಹುಟ್ಟಿಸಿದವ. ಅವನೇ ಸುನಿಲ್. ಬೆಳ್ಳಿಕಾಲುಂಗುರ ಸುನಿಲ್ ಅಂತಾನೆ ಇವತ್ತಿಗೂ ಫೇಮಸ್. ಮಂಗಳೂರು ಮೂಲದವರಾದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ದ್ವಾರಕೀಶ್ ಅವರ ನಿರ್ದೇಶನದ ಶ್ರುತಿ ಚಿತ್ರದ ಮೂಲಕ ಎಂಟ್ರಿ ಕೊಡ್ತಾರೆ. ನಂತರ ಕನಸಿನ ರಾಣಿ ಮಾಲಾಶ್ರಿ ಜೊತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಾರೆ. ತೊಂಬತ್ತರ ದಶಕದಲ್ಲಿ…
ಒಂದು ಕಡೆ ಬಿದ್ದಿರುವ ಕಲ್ಲು ತನ್ನಿಂದ ತಾನೇ ಚಲಿಸುತ್ತದೆ ಎಂದರೆ ಅದು ಕಲ್ಪನೆಯಾಗಿರಬೇಕಷ್ಟೆ. ಆದರೆ ಇಲ್ಲಿರುವ ಕಲ್ಲುಗಳು ಆಶ್ಚರ್ಯ ಎನ್ನುವಂತೆ ಚಲಿಸುತ್ತವೆ.
ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಫೆಬ್ರವರಿ 13ರಂದು ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ…
ಜಗತ್ತಿನಾದ್ಯಂತ ಅನೇಕ ಧರ್ಮಗಳಿಗೆ ಸೇರಿದವರು ತಮ್ಮ ಆಚಾರ ಸಂಪ್ರದಾಯ ಪಾಲಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾವುದೇ ಧರ್ಮವನ್ನು ತೆಗೆದುಕೊಂಡರೂ ಅದರಲ್ಲಿ ತಮ್ಮ ಧರ್ಮದವರು ತೀರಿಕೊಂಡರೆ ಹೂಳುವುದೋ, ಸುಡುವುದನ್ನೋ ಮಾಡುತ್ತಾರೆ.