ಆಧ್ಯಾತ್ಮ

ಈ 5 ವಸ್ತುಗಳಿಂದ ಭಗವಾನ್ ಶಿವ ಲಿಂಗವನ್ನು ಎಂದಿಗೂ ಪೂಜಿಸಬಾರದು..!

2410

ಭಗವಾನ್ ಶಿವ, ತ್ರಿಮೂರ್ತಿಗಳಾದ  ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು,  ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ.  ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ   ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.

 

ಭಗವಾನ್ ಶಿವನಿಗೆ ದೇವತಗಳಾಗಲಿ, ಮನುಷ್ಯರಾಗಲಿ, ರಾಕ್ಷಸರಾಗಲಿ ಎಲ್ಲರೂ ಒಂದೇ ಎಂಬ ಭಾವವಿದ್ದು,ಯಾರಿಗೂ ಭೇದ ಭಾವ ಮಾಡುವುದಿಲ್ಲ. ಆದ್ದರಿಂದ ಶಿವನು ಅತ್ಯಂತ ಕರುಣಾಮುರ್ತಿಯಾಗಿದ್ದು, ನಿಜವಾದ ಭಕ್ತಿಗೆ ಬೇಗ ಒಲಿಯುತ್ತಾನೆ. ನಾವು ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜಿಸುತ್ತೇವೆ.ಮತ್ತು ಶಿವನನ್ನು ಪೂಜಿಸಲು ಅನೇಕ ವಿಧಾನಗಳಿವೆ. ಆದ್ರೆ ಶಿವನನ್ನು ಪೋಜಿಸುವಾಗ ಜನರು ತಮ್ಮ ಭಕ್ತಿಯ ಪರಾಕಾಷ್ಟೆಯಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ.

ಹಾಗಾದ್ರೆ ಶಿವಲಿಂಗ ಪೂಜೆ ಹೇಗೆ ಮಾಡ್ಬೇಕು ಮತ್ತು ಹೇಗೆ ಮಾಡಬಾರದು?

1. ತುಳಸಿ ಹೂಗಳನ್ನು ಶಿವಪೂಜೆಗೆ ಬಳಸಬಾರದು.    

 ಹಿಂದೂ ಪುರಾಣಗಳ ಪ್ರಕಾರ ದಂಭ ಎಂಬ ರಕ್ಕಸನಿದ್ದು, ಅವನಿಗೆ ಮಕ್ಕಳಿಲ್ಲದ ಕಾರಣ, ಭಗವಾನ್ ನಾರಾಯಣನನ್ನು ಪ್ರಾರ್ಥಿಸಲಾಗಿ, ಅವನಿಗೆ ಜಲಂಧರ್   ಎಂಬ ಪುತ್ರನು ಜನಿಸಿದನು. ಈ ಜಲಂಧರ್’ನು ತ್ರಿಲೋಕಾದಿಪತಿಯಾಗಬೇಕೆಂಬ ಆಸೆಯಿಂದ, ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದನು. ತಪಸ್ಸಿಗೆ ಒಲಿದ ಬ್ರಹ್ಮದೇವರು ಪ್ರತ್ಯಕ್ಷನಾಗಲು, ಯಾವ ದೇವತೆಗಳು ನನ್ನನ್ನು ಸೋಲಿಸಬಾರದೆಂಬ ವರವನ್ನು ಬೇಡಿದನು. ವರವನ್ನು ಕೊಟ್ಟ ಬ್ರಹ್ಮದೇವರು, ಈ ವರವು ಕೃಷ್ಣ ಕವಚವನ್ನು ಭೋದಿಸಿ, ಧರ್ಮಧ್ವಜನ ಮಗಳಾದ ತುಳಸಿಯನ್ನು ಮದುವೆಯಾಗಲು ತಿಳಿಸಿದನು. ನಿನ್ನ ಅಮರತ್ವವು ಶ್ರೀ ಕೃಷ್ಣ ಕವಚ ಮತ್ತು ತುಳಸಿ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದನು.

ಜಲಂಧರ್ ಯಾವುದೇ ದೇವತೆಗಳಿಂದ ಸೋಲಿಸಬಾರದು ಎಂಬ ವರವನ್ನು ಹೊಂದಿದ್ದರಿಂದ, ವಿಷ್ಣು ಜಲಂಧರ್ ಅವರ ಹೆಂಡತಿ ತುಳಸಿಯ ಪವಿತ್ರತೆಯನ್ನು ಉಲ್ಲಂಘಿಸಬೇಕಾಯಿತು. ಆಕೆಯ ಪತಿಯ ಮರಣದ ನಂತರ,ಈ ದ್ರೋಹದಿಂದ ಕೋಪಗೊಂಡ ತುಳಸಿಯು, ತನ್ನ ದೈವಿಕ ಎಲೆಗಳಿಂದ ಶಿವನನ್ನು ಆರಾಧಿಸದಂತೆ ಬಹಿಷ್ಕರಿಸಿದಳು.

2. ಕೇದಗೆ ಹೂಗಳನ್ನು ಶಿವಪೂಜೆಗೆ ಬಳಸಬಾರದು.                                                                          

ಒಮ್ಮೆ ಬ್ರಹ್ಮ ಮತ್ತು ವಿಷ್ಣು ದೇವತೆಗಳ ನಡುವೆ ಯಾರೂ ಸವ್ರೋತ್ತಮರೆಂದು ವಾದ ಏರ್ಪಡುತ್ತದೆ. ಇಬ್ಬರ ನಡುವೆ ಅತಿ ಘೋರವಾದ ವಾದ ಉಂಟಾಗಲು, ಆಗ ಇವರ ಮಧ್ಯ ಆದಿ ಅನ್ತ್ಯಗಳಲ್ಲಿದ ಬೃಹದಾಕಾರವಾದ ಅಗ್ನಿ ಸ್ಥಂಭ ಲಿಂಗವು ಏರ್ಪಡುತ್ತದೆ. ಭಗವಾನ್ ಶಿವನು ಲಿಂಗದ ರೂಪದಲ್ಲಿ ಕಾಣಿಸಿಕೊಂಡು, ಈ ಲಿಂಗದ ಆದಿ, ಅಂತ್ಯ ಕಂಡುಹಿಡಿದವರು ಸವ್ರೋತ್ತಮರೆಂದು ಘೋಷಿಸುತ್ತಾರೆ. ಆಗ ಬ್ರಹ್ಮ ಮತ್ತು ನಾರಾಯಣರು ಲಿಂಗದ ಆದಿ ಮತ್ತು ಅಂತ್ಯ ಹುಡುಕಲು ಹೊರಡುತ್ತಾರೆ. ನಾರಾಯಣನು ಲಿಂಗದ ತುದಿಯ ಕಡೆ, ಮತ್ತು ಬ್ರಹ್ಮನು ಲಿಂಗದ ಶಿರದ ಕಡೆ ಹುಡುಕಲು ಹೊರದುತ್ತಾರೆ. ಆದ್ರೆ ಭಗವಾನ್ ನಾರಾಯಣನಿಗೆ ಅಂತ್ಯ ಸಿಗದೇ, ಈ ಶಿವ ಲಿಂಗಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದು ನಿರ್ಧರಿಸಿ, ವಾಪಸ್ ಆಗುತ್ತಾರೆ.

ಸುಲಭವಾಗಿ ತನ್ನ ಸೋಲನ್ನು ಒಪ್ಪದ ಬ್ರಹ್ಮದೇವರು, ಆದಿಯನ್ನು ಕಂಡುಹಿಡಿಯಲು ಹೋಗುತ್ತಿರುವಾಗ ಲಿಂಗದಿಂದ ಜಾರುತ್ತಿದ್ದ ಕೇದಗೆ ಪುಷ್ಪವನ್ನು ಕಂಡ ಬ್ರಹ್ಮದೇವರು, ಕೆದಗೆಯೊಡನೆ ಸಂಧಾನ ಮಾಡಿಕೊಂಡು, ನಾನು ಲಿಂಗದ ಆಡಿಯನ್ನು ಕಂಡೆ ಎಂಬ ಸುಳ್ಳನ್ನು ಹೇಳಬೇಕೆಂದು, ಕೇದಗೆ ಪುಷ್ಪವನ್ನು ಸಾಕ್ಷಿಯಾಗಿ ಕರೆತಂದನು. ಶಿವನಿಗೆ ನಾನು ಈ ಲಿಂಗದ ಆದಿಯನ್ನು ಕಂಡೆ ಎಂದು, ಸಾಕ್ಷಿಯಾಗಿ ಕೇದಗೆ ಪುಷ್ಪವನ್ನು ಕೇಳಲಾಗಿ, ಕೇದಗೆ ಪುಷ್ಪವು ಕೂಡ ಬ್ರಹ್ಮನ ಮಾತಿಗೆ ಸಹಕರಿಸಿತು. ಆಗ ಬ್ರಹ್ಮದೇವರ ಸುಳ್ಳಿನಿಂದ ಕ್ರುದ್ದನಾದ ಶಿವನು, ಇನ್ನುಮುಂದೆ ಮೂರು ಜಗತ್ತುಗಳಲ್ಲಿ ಯಾರೊಬ್ಬರೂ ನಿನ್ನನ್ನು ಪೂಜಿಸದಂತೆ ಇರಲಿ ಎಂಬ ಶಾಪವನ್ನು ಕೊಟ್ಟನು. ಹೀಗಾಗಿ ಕೇದಗೆಯ ಸುಳ್ಳು ಸಾಕ್ಷಿಯನ್ನು ಹೇಳಿದ್ದರಿಂದ ಕೇದಗೆಯ ಭಗವಾನ್ ಶಿವನ ಪೂಜೆಗೆ ಅರ್ಹವಲ್ಲದ ಹೂವಾಗಿದೆ.

3.ಹರಿಶಿಣವನ್ನು ಶಿವಪೂಜೆಗೆ ಬಳಸಬಾರದು.      

 ಎಲ್ಲಾ ಪೂಜೆಗಳಲ್ಲೂ ಹರಿಶಿಣವನ್ನು ಹೆಚ್ಚಾಗಿ ಬಳಸಲಾಗುತ್ತದೆ.ಶಿವಲಿಂಗಕ್ಕೆ ಎರಡು ಭಾಗಗಳಿವೆ, ಒಂದು ಶಿವನೊಂದಿಗೆ ಸಂಬಂಧ ಹೊಂದಿದ್ದರೆ ಮತ್ತೊಂದು ದೇವಿ ಪಾರ್ವತಿಯೊಂದಿಗೆ ಸಂಭಂದ ಹೊಂದಿದೆ.ಹಾಗೂ  ಸ್ತ್ರೀತ್ವವನ್ನು ಪ್ರತಿನಿಧಿಸುತ್ತದೆ. ಹರಿಶಿಣವನ್ನು ಸೌಂದರ್ಯವರ್ಧಕವಾಗಿ, ಮಹಿಳೆಯರು ಬಳಸುವುದರಿಂದ, ಇದನ್ನು ಶಿವಲಿಂಗದಲ್ಲಿ ಬಳಸಲಾಗುವುದಿಲ್ಲ ಆದರೆ ನೀವು ಜಲಧಾರಿಯ ಮೇಲೆ ಬಳಸಬಹುದು.

4. ಕುಂಕುಮ ಶಿವಪೂಜೆಗೆ ಬಳಸಬಾರದು.     

  ವಿವಾಹಿತ ಮಹಿಳೆಯರಿಗೆ ಕುಂಕುಮ್ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಮಹಿಳೆಯರು ತಮ್ಮ ಪತಿಯ ದೀರ್ಘಾವಧಿಯ ಆಶೀರ್ವಾದವನ್ನು ಪಡೆಯುತ್ತಾರೆ.

ಆದರೆ ಭಗವಾನ್ ಶಿವನು ಲಯಕರ್ತನಾಗಿರುವುದರಿಂದ, ಕುಂಕುಮದೊಂದಿಗೆ ಪೂಜಿಸುವುದು ಮಂಗಳಕರವಲ್ಲ.

5. ತೆಂಗಿನಕಾಯಿ ನೀರನ್ನು ಶಿವಪೂಜೆಗೆ ಬಳಸಬಾರದು.       

ತೆಂಗಿನಕಾಯಿ ಕೂಡ ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಪ್ರತಿ ಹಿಂದೂ ಪೂಜಾದಲ್ಲಿ ತೆಂಗಿನಕಾಯಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ನಾವು ಅನೇಕ ಮಂಗಳಕರ ಕಾರ್ಯಕ್ರಮಗಳಲ್ಲಿ ದೇವರಿಗೆ ತೆಂಗಿನಕಾಯಿಯನ್ನು ಹೊಡೆಯುತ್ತೇವೆ. ಒಬ್ಬನು ಶಿವನಿಗೆ ತೆಂಗಿನಕಾಯಿ ನೀಡಬಹುದು, ಆದರೆ ಶಿವಲಿಂಗವನ್ನು ತೆಂಗಿನ ನೀರಿನೊಂದಿಗೆ ಪೂಜಿಸಬಾರದು.

ಶಿವಲಿಂಗಕ್ಕೆ ನೀಡುವ ಎಲ್ಲವನ್ನೂ ನಿರ್ಮಲಯಾ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ನದಿಗಳು, ಸರೋವರಗಳು ಮತ್ತು ಸಮುದ್ರದಲ್ಲಿ ಹೊರತುಪಡಿಸಿ ಎಲ್ಲಿ ಬೇಕಾದರೂ ಸೇವಿಸದಂತೆ ನಿಷೇಧಿಸಲಾಗಿದೆ. ಮತ್ತು ದೇವತೆಗಳ ಮೇಲೆ ಅರ್ಪಿಸಿದ ನಂತರ ತೆಂಗಿನ ನೀರು ಸೇವಿಸುವುದರಿಂದ ಅದನ್ನು ಕುಡಿಯಲು ಕಡ್ಡಾಯವಾಗಿ ಪರಿಗಣಿಸಲಾಗುತ್ತದೆ, ಹಾಗಾಗಿ ಅದನ್ನು ಶಿವಲಿಂಗ ಪೂಜೆಯಲ್ಲಿ ಬಳಸಲಾಗುವುದಿಲ್ಲ.

 

 

 

      

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬೆಳ್ಳುಳ್ಳಿಯನ್ನು ತಿಂದರೆ ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಈ ಮಾಹಿತಿ ನೋಡಿ.

    ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ. 1….

  • ಸುದ್ದಿ

    ಇರುವೆ ಬಗೆಗಿನ ಈ 15 ವಿಷಯಗಳು ನಮ್ಮನ್ನ ರೋಮಾಂಚನಗೊಳಿಸುತ್ತೆ..!

    ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.

  • ವಿಸ್ಮಯ ಜಗತ್ತು

    ಮಿಲನದಲ್ಲಿದ್ದ 20 ಅಡಿ ಉದ್ದದ ಹೆಬ್ಬಾವುಗಳನ್ನು ಫ್ರೈ ,ಬಿರಿಯಾನಿ ಮಾಡಿ,ಊರಿಗೆಲ್ಲಾ ಹಂಚಿ ತಿಂದು ಹಬ್ಬ ಮಾಡಿದ್ರು..!

    ಇದು ಕಾಡಿನಲ್ಲಿ ಮುರಿದು ಬಿದ್ದಿದ್ದ, ಮರದ ಟೊಂಗೆಯೊಂದರಲ್ಲಿದ್ದ,ಹೆಣ್ಣು ಪೈಥಾನ್ (ಹೆಬ್ಬಾವು)ನ್ನು, ಗ್ರಾಮಸ್ತರು ಹಿಡಿದು ಫ್ರೈ ಮಾಡಿ, ಊರಿಗೆಲ್ಲಾ ಹಂಚಿ ತಿಂದಿರುವ ಘಟನೆಯೊಂದು ನಡೆದಿದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(2 ಜನವರಿ, 2019) ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ…

  • ಆಧ್ಯಾತ್ಮ

    ಹೆಣ್ಣುಮಕ್ಕಳು ತಮ್ಮ ಪತಿಯ ಒಳಿತಗಾಗಿ ಮಾಡುವ ವ್ರತವಿದು!ಈ ವ್ರತದ ಹಿನ್ನಲೆ ಏನು ಗೊತ್ತಾ???

    ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ‘ಭೀಮನ ಅಮವಾಸ್ಯೆ.

  • ಸುದ್ದಿ

    ಜಮೀನಿನಲ್ಲಿ ಕೆಲಸವನ್ನ ಮಾಡುತ್ತಿದ್ದ ಕೂಲಿಗೆ ಜಮೀನಿನಲ್ಲಿ ಸಿಕ್ಕಿದ್ದೇನು ಗೊತ್ತಾ.!

    ಸ್ನೇಹಿತರೆ ಇಂಗ್ಲೆಂಡ್ ದೇಶದಕ್ಕೆ ಸೇರಿದ ಈತನ ಹೆಸರು ಸ್ಟಿವನ್, ಜೀವನದಲ್ಲಿ ತುಂಬಾ ಕಷ್ಟವನ್ನ ಅನುಭವಿಸಿದ ಈತನಿಗೆ 60 ವರ್ಷ ವಯಸ್ಸು, ತನ್ನ 60 ವರ್ಷ ಜೀವನದಲ್ಲಿ ಯಾವತ್ತೂ ಸುಖಕರ ಜೀವನವನ್ನ ಈತ ಅನುಭವಿಸಿರಲಿಲ್ಲ. ಈತ ದಿನದ ಖರ್ಚಿಗಾಗಿ ತುಂಬಾ ಕಷ್ಟಪಡುತ್ತಿದ್ದ ಮತ್ತು ಲಾರಿ ಡ್ರೈವರ್ ಆಗಿ ಕೆಲಸವನ್ನ ಕೂಡ ಮಾಡುತ್ತಿದ್ದ, ಕೆಲವು ಸಮಯದ ನಂತರ ಈತನಿಗೆ ವಯಸ್ಸಾಗಿದೆ ಅನ್ನುವ ಕಾರಣಕ್ಕೆ ಈತನನ್ನ ಡ್ರೈವರ್ ಕೆಲಸದಿಂದ ತಗೆದು ಹಾಕಲಾಯಿತು. ಡ್ರೈವರ್ ಕೆಲಸವನ್ನ ಬಿಟ್ಟ ನಂತರ ಓಕ್ ಮರದ ತೋಟದಲ್ಲಿ…