Animals

ಆನೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳು

173

ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ  ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ  ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು ಪ್ರಸಿದ್ಧ. ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು. ಅಲ್ಲದೆ ನೆಲದ ಮೇಲಿನ ಪ್ರಾಣಿಗಳಲ್ಲಿ ಆನೆಯ ಗರ್ಭಾವಸ್ಥೆಯ ಕಾಲ (೨೨ ತಿಂಗಳುಗಳು) ಎಲ್ಲಕ್ಕಿಂತ ದೀರ್ಘ. ಹುಟ್ಟಿದಾಗ ಆನೆಯ ಮರಿಯು ೧೨೦ ಕಿ.ಗ್ರಾಂ.ವರೆಗೆ ತೂಗುವುದಿದೆ. ಸುಮಾರು ೭೦ ವರ್ಷಗಳ ಕಾಲ ಆನೆಯು ಜೀವಿಸಬಲ್ಲುದು

ಆಫ್ರಿಕನ್ ಆನೆ

ಅನಾದಿಕಾಲದಿಂದಲೂ ಮಾನವನಿಗೆ ಆನೆಯು ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಅಂದಿನ ಭಾರತದ ಅರಸರ ಪಟ್ಟದಾನೆಯು ಸಮಾಜದಲ್ಲಿ ಅತಿ ಗೌರವಾನ್ವಿತ ಸ್ಥಾನವನ್ನು ಹೊಂದಿತ್ತು. ಸೈನ್ಯದ ಶಕ್ತಿಯು ಗಜಬಲವನ್ನು ಹೆಚ್ಚಾಗಿ ಅವಲಂಬಿಸಿತ್ತು. ಉಳಿದಂತೆ ಆನೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಬಳಸುವ ವಾಡಿಕೆ ಇಂದಿಗೂ ಇದೆ. ದಕ್ಷಿಣ ಭಾರತದ ಬಹಳಷ್ಟು ದೇವಸ್ಥಾನಗಳು  ತಮ್ಮದೇ ಆನೆಯನ್ನು ಸಾಕಿಕೊಂಡಿವೆ. ಕೇರಳದ ತ್ರಿಸ್ಸೂರಿನ  ಪೂರಮ್ ಉತ್ಸವ ಆನೆಗಳೇ ಕೇಂದ್ರವಾಗುಳ್ಳ ಒಂದು ಅತ್ಯಾಕರ್ಷಕವಾದ ಉತ್ಸವ

ಗಜ ಗರ್ಭ ನಾಲ್ಕರಿಂದ ಐದು ವರ್ಷಗಳಿಗೆ ಒಮ್ಮೆ ಆನೆ ಮರಿ ಹಾಕುತ್ತದೆ. ಗಜ ಗರ್ಭ ಎಂದು ಕೇಳಿರ್ತೀರಿ. ಆನೆಯ ಗರ್ಭಾವಸ್ಥೆ ಅವಧಿ 22 ತಿಂಗಳು. ಅವುಗಳ ಬೆಳವಣಿಗೆ ಪೂರ್ಣ ಪ್ರಮಾಣದಲ್ಲಿ ಅಗಲು 17 ವರ್ಷವಾಗುತ್ತದೆ. ಅಂದಹಾಗೆ ಗಂಡಾನೆಗಳಿಗೆ ಮಾತ್ರ ದಂತವಿರುತ್ತದೆ

ಹೆಣ್ಣಾನೆಯೇ ಚೀಫ್ ಹೆಣ್ಣಾನೆಗಳು ಗುಂಪಿನಲ್ಲಿದ್ದರೆ, ಗಂಡಾನೆಗಳು ಒಂಟಿಯಾಗಿರುತ್ತವೆ. ಹಿರಿಯ ಹೆಣ್ಣಾನೆಯೊಂದು ಗುಂಪಿನ ಮುಖಂಡತ್ವ ವಹಿಸಿರುತ್ತದೆ. ಆ ಗುಂಪಿನ ಹಿರಿಯ ಆನೆಗಳು ಹಿಂದೆ ತೋರಿಸಿದ ದಾರಿಯಲ್ಲೇ ಅವು ಮೇವು-ನೀರಿಗಾಗಿ ಹುಡುಕುತ್ತಾ ಸಾಗುತ್ತವೆ. ಅಂತಹ ದಾರಿಯನ್ನೇ ಆನೆ ಪಥ ಅಥವಾ ಎಲಿಫೆಂಟ್ ಕಾರಿಡಾರ್ ಅನ್ನೋದು.

ಏಷ್ಯಾದ  ಆನೆ


ಸೊಂಡಿಲ ವಿಶೇಷ ಆನೆಯ ವಿಶೇಷವೇ ಅದರ ಸೊಂಡಿಲು. ಹೆಚ್ಚಿನ ಚಟುವಟಿಕೆಗಳು ಸೊಂಡಿಲ ಮೂಲಕವೇ ಮಾಡುತ್ತವೆ. ಚಿಕ್ಕದೊಂದು ಗರಿಯನ್ನು ನಾಜೂಕಾಗಿ ಕೀಳುವುದಿರಲಿ, ದೊಡ್ಡದೊಂದು ಮರವನ್ನು ನೆಲಕ್ಕೆ ಉರುಳಿಸುವುದಿರಲಿ ಅದನ್ನು ಸೊಂಡಿಲ ಮೂಲಕವೇ ಮಾಡುತ್ತವೆ.
ನೆನಪು, ವಾಸನಾ ಗ್ರಹಣ ಶಕ್ತಿ ಅದ್ಭುತ ಇನ್ನು ಆನೆಗಳ ವಾಸನಾ ಗ್ರಹಣ ಶಕ್ತಿ ಅದ್ಭುತ. ಹನ್ನೆರಡು ಮೈಲು ದೂರವಿರುವ ನೀರಿನ ಪ್ರದೇಶವಾದರೂ ವಾಸನೆ ಮೂಲಕವೇ ಗ್ರಹಿಸುತ್ತವೆ. ಅದೇ ರೀತಿ ಅವುಗಳ ಸ್ಮರಣ ಶಕ್ತಿಯೂ ಅಮೋಘ. ಆ ಕಾರಣಕ್ಕೆ ಇಂಗ್ಲಿಷ್ ನಲ್ಲಿ ಎಲೆಫೆಂಟ್ ಮೆಮೊರಿ ಎಂಬ ಮಾತೇ ರೂಢಿಯಲ್ಲಿದೆ.

ಶಬ್ದ ಹೊರಡಿಸುವುದರಲ್ಲೂ ಸೂಕ್ಷ್ಮ ಗಾಳಿಯ ಮೂಲಕ ಶಬ್ದ ಹೊರಡಿಸುವುದರಲ್ಲೂ ಅಂಥ ಶಬ್ದವನ್ನು ಗ್ರಹಿಸುವುದರಲ್ಲೂ ಆನೆ ಬಹಳ ವಿಶಿಷ್ಟ ಪ್ರಾಣಿ. ಎಷ್ಟೋ ದೂರದಲ್ಲಿನ ಶಬ್ದವನ್ನೂ ಚೆನ್ನಾಗಿ ಗ್ರಹಿಸಿ, ಉತ್ತರ ಕೂಡ ನೀಡುತ್ತದೆ.

ದಿನಕ್ಕೆ 100- 150 ಕೆ.ಜಿ. ಆಹಾರ ಪಳಗಿದ ಆನೆ ಎಷ್ಟು ಸೌಮ್ಯವೋ ಕಾಡಾನೆ ಅಷ್ಟೇ ಅಪಾಯಕಾರಿ. ದೊಡ್ಡ ಆನೆಯೊಂದು ದಿನಕ್ಕೆ 100- 150 ಕೆ.ಜಿ. ಆಹಾರ ಸೇವಿಸುತ್ತದೆ. ದಿನದಲ್ಲಿ ಒಮ್ಮೆಯಾದರೂ ನೀರು ಕುಡಿಯುತ್ತದೆ. ಹಾಗಾಗಿ ನೀರಿರುವ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತವೆ


About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ