ಸುದ್ದಿ

ಆಧಾರ್ ಕಾರ್ಡ್ನಲ್ಲಿ ನಿಮ್ ಫೋಟೊ ಬದಲಾಯಿಸಬೇಕೆ….ತಕ್ಷಣ ಇದನ್ನು ಓಧಿ

82

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಿಸಲು ಅಥವಾ ನವೀಕರಿಸಲು ಬಯಸುತ್ತಿರುವವರಲ್ಲಿ ನೀವು ಒಬ್ಬರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತೋಷದ ವಿಷಯ. ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ..ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ.ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ ಅರ್ಜಿಯನ್ನು ಕೇಳಿ ಪಡೆಯಿರಿ. ಮತ್ತು ಆ ಅರ್ಜಿಯಲ್ಲಿ ನಿಮ್ಮ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿನಂತರ ಅವರು ನಿಮ್ಮ ಬಯೋಮೆಟ್ರಿಕ್(ಬೆರಳಚ್ಚು ಮತ್ತು ಕಣ್ಣಿನ ಪಾಪೆ) ಸ್ಕ್ಯಾನ್ ಮಾಡಿ ಮಾಹಿತಿಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಪುನಃ ಹೊಸದಾಗಿ ಫೋಟೋ ತೆಗೆದುಕೊಳ್ಳುತ್ತಾರೆ. ಅಲ್ಲಿ ತೆಗೆದುಕೊಂಡ ಫೋಟೋವನ್ನು ತೋರಿಸುವಂತೆ ಕ್ಯಾಮರಾಮನ್ ಬಳಿ ಕೇಳಿ, ಚನ್ನಾಗಿಲ್ಲದಿದ್ದರೆ ಮತ್ತೊಮ್ಮೆ ಬೇರೆ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಿ.. ಇದು ಕ್ಯಾಮರಾಮ್ಯಾನ್ ನ ವರ್ತನೆಗೆ ಅವಲಂಭಿತವಾಗಿರುತ್ತದೆ.

ವಿವರಗಳನ್ನು ಪಡೆದನಂತರ ಅವನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಯುಐಡಿಎಐನ ಡೇಟಾ ಸೆಂಟರ್ ಕಳುಹಿಸಲಾಗುವುದು ಮತ್ತು 2 ವಾರಗಳ ನಂತರ ನೀವು ಅದೇ 12-ಅಂಕಿಯ ವಿಶಿಷ್ಟ ಸಂಖ್ಯೆಯೊಂದಿಗೆ ಆದರೆ ಬೇರೆ ಫೋಟೋವಿರುವ ಆಧಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಅಂಚೆಮೂಲಕ ಬರುತ್ತದೆ. ಅಗತ್ಯವಿದ್ದವರು ಅದರ ಅನ್ನು ಆನ್ಲೈನ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು.ಆದರೆ ನೀವು ಈ ಸಂಪೂರ್ಣ ಕಾರ್ಯವಿಧಾನಕ್ಕೆ ರೂ. 15 /-ಅನ್ನು ಪಾವತಿಸಬೇಕು ಏಕೆಂದರೆ ಆಧಾರ್ ಕಾರ್ಡ್ ಗೆ ದಾಖಲಾತಿ ಮಾಡಲು ಕೇವಲ ಮೊದಲ ಬಾರಿ ಮಾತ್ರ ಉಚಿತವಾಗಿರುತ್ತದೆ.. ಒಂದಕ್ಕಿಂತ ಹೆಚ್ಚು ಬಾರಿ ತಿದ್ದುಪಡಿ ಮಾಡಿಸಲು ಮುಂದಾದರೆ ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.

ಸೂಚನೆ:ದುರದೃಷ್ಟವಶಾತ್ ನಿಮ್ಮ ಆಧಾರ್ ಕಾರ್ಡ್ ನ ಫೋಟೋವನ್ನು ಆನ್ ಲೈನ್ ಇಂಟರ್ನೆಟ್ ಮೂಲಕ ಚೇಂಜ್ ಮಾಡುವುದಕ್ಕೆ ಯಾವುದೇ ಅವಾಕಾಶಗಳಿರುವುದಿಲ್ಲ. ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಆಧಾರ್ ಧಾಖಲಾತಿ ಕೇಂದ್ರಕ್ಕೆ ಭೇಟಿ ನೀಡಲೇಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಮದ್ವೆಯಾಗಿ ಮೂರೇ ಮೂರು ವಾರದಲ್ಲಿ ಬಿಟ್ಟು ಹೋದ ಪತಿ ಈಗ ಆಕೆ ಐಎಎಸ್ ಅಧಿಕಾರಿ!

    ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008, ಆಗ ಕೋಮಲ್ ಗಣಾತ್ರ ಅವರಿಗೆ 26 ವರ್ಷ. ಮುಂದೆ ತಾನು ಕೂಡ ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ, ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆ ಕಂಡಿದ್ದ ಆನಿವಾಸಿ ಭಾರತೀಯ ತಾನು ಕೋಮಲ್ ಗಣಾತ್ರ ಅವರನ್ನು ಕೈ ಹಿಡಿಯುವುದಾಗಿ ಮನೆಯವರಿಂದ ಒತ್ತಡ ತಂದು ಕೊನೆಗೆ 2008ರಲ್ಲಿ…

  • ಸುದ್ದಿ

    ಶಾಕಿಂಗ್ ನ್ಯೂಸ್ : 7ರ ಬಾಲಕನ ಬಾಯಲ್ಲಿತ್ತು 526 ಹಲ್ಲುಗಳು…!

    ಚೆನ್ನೈ ನ 7 ವರ್ಷದ ಬಾಲಕನ ಬಾಯಲ್ಲಿ ಸುಮಾರು 526 ಹಲ್ಲುಗಳು ಬೆಳೆದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಸವಿತಾ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ 7 ವರ್ಷದ ಬಾಲಕನ ಬಾಯಿಯಲ್ಲಿದ್ದ 526 ಹಲ್ಲುಗಳನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ.‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್’ ಎಂಬ ಅಪರೂಪದ ಖಾಯಿಲೆಯಿಂದ ಬಾಲಕ ಬಳಲುತ್ತಿದ್ದ. ಸುಮಾರು 526 ಹಲ್ಲುಗಳು ಬೆಳೆದಿದ್ದರಿಂದ ಕೆಳಗಿನ ಬಲ ದವಡೆ ತುಂಬಾ ಊದಿಕೊಂಡಿತ್ತು. ಸರ್ಜರಿ ಮೂಲಕ ಆ ಎಲ್ಲ ಹಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಬಾಲಕ…

  • ಸುದ್ದಿ

    ಬಿಹಾರದ ರಣಬಿಸಿಲಿಗೆ 117 ಜನ ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ……!

    ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಶುಭವೋ ಅಶುಭವೋ ನೋಡಿ ತಿಳಿಯಿರಿ…ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಮಂಗಳವಾರ, 17 ಏಪ್ರಿಲ್ 2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಸೂರ್ಯೋದಯ06:06:03 ಸೂರ್ಯಾಸ್ತ18:47:16 ಹಗಲಿನ ಅವಧಿ12:41:12 ರಾತ್ರಿಯ ಅವಧಿ11:17:56 ಚಂದ್ರೋದಯ07:04:48 ಚಂದ್ರಾಸ್ತ20:10:53 ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ…

  • ವಿಜ್ಞಾನ

    ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆ 15 ನಿಮಿಷ,..!

    ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ…