ಸಿನಿಮಾ, ಸುದ್ದಿ

ವಿನೋದ್ ರಾಜ್ ರನ್ನು ಕ್ಯಾರೆ ಎನ್ನದ ಟಿವಿ ಶೋಗಳು, ಹುಡುಕಿಕೊಂಡು ಬಂತು ಬಂಪರ್ ಆಫರ್.

546

ಒಂದು ಕಾಲದಲ್ಲಿ ನೃತ್ಯ ಅಂದ್ರೆ ಏನು ಅಂತ ಸ್ಯಾಂಡಲ್ ವುಡ್ ಗೆ ತೋರಿಸಿಕೊಟ್ಟವರು ಅಂದ್ರೆ ನಟ ವಿನೋದ್ ರಾಜ್. ಹೌದು. ತಮ್ಮ ನೃತ್ಯದ ಮೂಲಕ ಇಡೀ ಕರ್ನಾಟಕವನ್ನೇ ಗೆದ್ದಿದ್ದರು. ಇನ್ನು ಅವರು ಕೆಲವು ಸಿನಿಮಾಗಳಲ್ಲಿ ನಟನಾಗಿ ನಟಿಸಿದ್ದು, ಎಲ್ಲರೂ ಅವರ ನಟನೆ ಹಾಗು ನೃತ್ಯಕ್ಕೆ ಫಿದಾ ಆಗಿದ್ದರು. ಆದರೆ ಕಾಲ ಕಳೆದಂತೆ ಅವರಿಗೆ ಚಿತ್ರಗಳ ಅವಕಾಶ ಕಡಿಮೆಯಾಗಿದ್ದರಿಂದ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಇನ್ನು ಅವರ ಕೊನೆ ಸಿನಿಮಾ 2009ರಲ್ಲಿ ತೆರೆ ಕಂಡ ‘ಯಾರದು’ ಆಗಿದ್ದು, ನಂತರ ಅವರು ಬಣ್ಣ ಹಚ್ಚಲೇ ಇಲ್ಲ. ಆದ್ರೆ ಈಗ ಮತ್ತೆ ಅವರು ತೆರೆ ಮೇಲೆ ಕಾಣಿಸಿಕೊಳ್ಳಲು ಬಣ್ಣ ಹಚ್ಚಲಿದ್ದಾರೆ.

ಮತ್ತೆ ತೆರೆ ಮೇಲೆ ಬರಲಿರುವ ವಿನೋದ್ ರಾಜ್

ವಿನೋದ್ ರಾಜ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅವರು ಹಾಗು ಅವರ ನೃತ್ಯವನ್ನು ಇಷ್ಟ ಪಡದವರೇ ಇಲ್ಲ. ಇನ್ನು ಅವರನ್ನು ಕನ್ನಡದ ಮೈಕಲ್ ಜಾಕ್ಸನ್ ಎಂದು ಎಲ್ಲರೂ ಕರೆಯುತ್ತಾರೆ. ಆದರೆ ಅವರು ಸಿನಿಮಾ ಕ್ಷೇತ್ರದಿಂದ ಬಲು ಬೇಗ ದೂರಾಗಿದ್ದು, ಎಲ್ಲರಿಗು ಬೇಸರದ ಸಂಗತಿಯಾಗಿತ್ತು. ಜೊತೆಗೆ ಅವರನ್ನು ಮತ್ತೆ ತೆರೆ ಮೇಲೆ ನೋಡಬೇಕೆಂದುಕೊಂಡರೂ ಅದು ಆಗಿರಲಿಲ್ಲ. ಆದ್ರೆ ಈಗ ಅವರು ,ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಹೌದು. ಮುಖವಾಡ’ ಎಂಬ ಚಿತ್ರತಂಡ ತಮ್ಮ ಸಿನಿಮಾಗೆ ವಿನೋದ್ ರಾಜ್ ರನ್ನು ಕರೆತರುವ ತಯಾರಿ ನಡೆಸಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಸಿದ್ದು, ಅವರ ಅಂತಿಮ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದು ಚಿತ್ರತಂಡ ತಿಳಿಸಿದೆ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುವಂತೆ ಒಪ್ಪಿಗೆ

ಇನ್ನು ‘ಮುಖವಾಡ’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಇನ್ನು ಈ ಸಿನಿಮಾದಲ್ಲಿ ಪವನ್ ತೇಜ್ ನಾಯಕನಾಗಿದ್ದು, ಶಿಲ್ಪಾ ಮಂಜುನಾಥ್ ನಾಯಕಿಯಾಗಿದ್ದಾರೆ. ಶಿಲ್ಪಾ ಈಗಾಗಲೇ ಕನ್ನಡ ಹಾಗೂ ತಮಿಳು ಸಿನಿಮಾ ಮಾಡಿದ್ದಾರೆ. ಇನ್ನು ಈ ಸಿನಿಮಾಗೆ ಸಹದೇವ್ ಆಕ್ಷನ್ ಕಟ್ ಹೇಳುತ್ತಿದ್ದು, ಎಸ್ ಕೆ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಹಾಗಾಗಿ ಈ ಚಿತ್ರದ ಕೆಲವೊಂದು ದೃಶ್ಯಗಳಿಗೆ ವಿನೋದ್ ರಾಜ್ ನಟಿಸಬೇಕೆಂದು ಚಿತ್ರತಂಡದ ಆಸೆಯಾಗಿದೆ. ಹಾಗಾಗಿ ಚಿತ್ರತಂಡ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಅನೇಕ ವರ್ಷಗಳ ಬಳಿಕ ಮತ್ತೆ ಡಾನ್ಸ್ ರಾಜನಾದ ವಿನೋದ್ ರಾಜ್ ಅವರು ತೆರೆ ಮೇಲೆ ಬರುತ್ತಿದ್ದಾರೆ. ಇನ್ನು ಅವರು ಬಣ್ಣ ಹಚ್ಚುತ್ತಿರುವುದು ನಿಜಕ್ಕೂ ಎಲ್ಲರಿಗು ಸಂತಸದ ವಿಷಯವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ನಿಮ್ಮ ಬೆರಳ ತುದಿಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳು ಲಭ್ಯ!ಹೇಗೆ ಅಂತೀರಾ?ಈ ಲೇಖನಿ ಓದಿ….

    ನಮ್ಮ ಗ್ರಾಮೀಣ ಜನರಿಗಾಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ ಸುಮಾರು 100 ಕ್ಕಿಂತ ಹೆಚ್ಚು ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ.

  • ಸುದ್ದಿ

    ಪ್ರವಾಹದಲ್ಲಿ ಕೊಚ್ಚಿ ಹೋದ ಅರ್ಚಕ , ಎರಡು ದಿನ ಸೇತುವೆ ಕೆಳಗೆ ಇದ್ದು ಬದುಕಿ ಬಂದಿದ್ಹೇಗೆ..?

    ಎರಡು ದಿನಗಳ ಹಿಂದೆ ಕಪಿಲಾ ನದಿಗೆ ಜಿಗಿದಿದ್ದ ವೃದ್ಧ, ಎಲ್ಲರಲ್ಲೂ ಭಯ ಹುಟ್ಟಿಸಿದ್ದರು. ಎರಡು ದಿನವಾದರೂ ಮರಳದ ಕಾರಣ, ಅವರ ಪ್ರಾಣಕ್ಕೇನಾದ್ರೂ ಅಪಾಯವಾಗಿತ್ತಾ ಎಂದು ಮನೆಮಂದಿಯಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಎರಡು ದಿನಗಳ ಕಾಲ ಊಟ-ತಿಂಡಿ ಬಿಟ್ಟು ನೀರಿನಲ್ಲಿ ಕುಳಿತು, ಇಂದು ಈಜಿ ಹೊರಬಂದಿದ್ದಾರೆ. ನಂಜನಗೂಡಿನ ರೈಲ್ವೆ ಸೇತುವೆ ಮೇಲಿಂದ ಜಿಗಿದಿದ್ದ ವೆಂಕಟೇಶ್ ಎಂಬ ವೃದ್ದರು, ಎರಡು ದಿನದ ಬಳಿಕ ಈಜಿ ದಡ ಸೇರಿದ್ದಾರೆ. ಟಿವಿ5 ಜೊತೆ ಈ ಬಗ್ಗೆ ಮಾತನಾಡಿದ ವೆಂಕಟೇಶ್, ರೋಚಕ ಕ್ಷಣಗಳನ್ನ…

  • ಸ್ಪೂರ್ತಿ

    ಈ 15 ವರ್ಷದ ಬಾಲಕ ತನ್ನ ತಾಯಿಯ ಕಷ್ಟ ನೋಡಲಾರದೆ ಮಾಡಿದ್ದೇನು ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ತನ್ನ ಮಕ್ಕಳು ಎಂದಿಗೂ ಸುಖವಾಗಿರಲಿ ಎಂಬುದಾಗಿ ಬಯಸುವ ತಾಯಿ. ಎಲ್ಲ ಕಷ್ಟವನ್ನು ತಾನೇ ಹೊತ್ತು ಕೊಳ್ಳುತ್ತಾಳೆ ಅಲ್ಲದೆ. ತನ್ನ ಮಕ್ಕಳಿಗೆ ಒಳ್ಳೇದನ್ನೇ ಬಯಸುತ್ತಾಳೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಕೆಲ ಮಕ್ಕಳು ತನ್ನ ತಾಯಿಯನ್ನು ಉತ್ತಮವಾಗಿ ನೋಡಿ ಕೊಂಡರೆ ಮತ್ತೆ ಕೆಲವರು ತಮ್ಮಿಂದ ದೂರ ಇಟ್ಟಿರುತ್ತಾರೆ. ಸತ್ತ ಮೇಲೆ ತಂದೆ ತಾಯಿಯರಿಗೋಸ್ಕರ ಏನೇನೋ ಮಾಡುವ ಬದಲು ಇದ್ದಾಗ ಅವರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಮಕ್ಕಳು. ತನ್ನ ತಾಯಿಯ ಕಷ್ಟ ನೋಡಲಾರದೆ ಈ ೧೫ ವರ್ಷದ ಪೋರ ಮಾಡಿದ್ದೇನು…

  • ಸಿನಿಮಾ

    ಅಣ್ಣಾವ್ರ ಬಗ್ಗೆ ರಜನಿ ಬಿಚ್ಚಿಟ್ಟರು, ನಮಗ್ಯಾರಿಗೂ ಗೊತ್ತಿಲ್ಲದ ಆ ರಹಸ್ಯ..!

    ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ‘ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಲ್ಲ.

  • ಗ್ಯಾಜೆಟ್

    ಹಣದ ಬದಲು ಎಟಿಎಂನಲ್ಲಿ ಬಂತು ಪೇಪರ್…! ತಿಳಿಯಲು ಈ ಲೇಖನವನ್ನು ಓದಿ …

    ಬಳ್ಳಾರಿ ಜಿಲ್ಲೆಯ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣದ ಬದಲು ಪೇಪರ್ ಬಂದ ಪ್ರಕರಣಕ್ಕೆ ಸಂಭಂದಿಸಿದಂತೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇಲ್ಲಿನ ಟ್ಯಾಂಕ್‌ 1 ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ನೋಟಿನ ಬದಲು ಪೇಪರ್‌ ಬಂದ ಘಟನೆ ನಡೆದಿದೆ. ರಮೇಶ್‌ ಎನ್ನುವವರು 8000 ರೂಪಾಯಿ ಡ್ರಾ ಮಾಡಿದ್ದು 500 ರೂಪಾಯಿ ಮುಖಬೆಲೆಯ 15 ನೋಟುಗಳ ನಡುವೆ ಅದೇ ಗಾತ್ರದ ಚಲನ್‌ ಮಾದರಿಯ ಪೇಪರ್‌ವೊಂದು ಬಂದಿದೆ. ಹಣವನ್ನು ಎಣಿಸಿ ನೋಡುವಾಗ ಪೇಪರ್‌ ಕಂಡಿದ್ದು  ಬ್ಯಾಂಕ್‌ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಒಂದೋ ಹಣದ…

  • ಆಧ್ಯಾತ್ಮ

    ಕುಳ್ಳಿ ಹುಡುಗಿ ಹೆಂಡತಿಯಾಗಿ ಸಿಕ್ಕರೆ ಎಷ್ಟು ಅದೃಷ್ಟ ಗೊತ್ತಾ? ನೋಡಿ!

    ಹುಡುಗಿ ತುಂಬಾ ಕುಳ್ಳಿ ಅನ್ನುವ ಮಾತುಗಳನ್ನ ನಾವು ಪ್ರತಿದಿನ ಕೇಳುತ್ತಲೇ ಇರುತ್ತೇವೆ, ಹುಡುಗಿ ಕುಳ್ಳಗಿರುವುದು ಅವರ ವೀಕ್ನೆಸ್ಸ್ ಅಲ್ಲ ಅವರ ಪ್ಲಸ್ ಪಾಯಿಂಟ್ ಅನ್ನುವುದು ಇನ್ನು ಕೆಲವರಿಗೆ ತಿಳಿದಿಲ್ಲ. ಇನ್ನು ಹೆಚ್ಚಿನ ಹುಡುಗರು ಹುಡುಗಿ ಕುಳ್ಳಿ ಅನ್ನುವ ಕಾರಣಕ್ಕೆ ಅವರನ್ನ ಮದುವೆ ಮಾಡಿಕೊಳ್ಳಲು ನಿರಾಕರಣೆ ಮಾಡುತ್ತಾರೆ, ಆದರೆ ಅದೂ ದೊಡ್ಡ ತಪ್ಪು ಸ್ನೇಹಿತರೆ. ಇನ್ನು ಉದ್ದ ಇರುವ ಹುಡುಗಿಯರಿಗಿಂತ ಕುಳ್ಳಗಿರುವ ಹುಡುಗಿಯರ ತುಂಬಾ ವಾಸಿ ಅನ್ನುವುದು ಪರಿಣಿತರ ಅಭಿಪ್ರಾಯವಾಗಿದೆ.  ಇನ್ನು ಕುಳ್ಳಗಿರುವ ಹುಡುಗಿಯರ ವಯಸ್ಸನ್ನ ಅಂದಾಜು ಮಾಡುವುದು…