ಸುದ್ದಿ

ಅಪರಿಚಿತ ವ್ಯಕ್ತಿಗಳಿಂದ ಮೊಬೈಲ್‌ ಚಾರ್ಜರ್‌ ಪಡೆಯುವ ಮುನ್ನ ಎಚ್ಚರ…!

39

ಇಂದಿನ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಮೊಬೈಲ್‌ ಚಾರ್ಜರ್‌ನ್ನು ಇನ್ನೊಬ್ಬರಿಂದ ಪಡೆಯುವುದು ಸಹಜ. ಇನ್ನೇನು ಸ್ವಿಚ್‌ ಆಫ್‌ ಆಗುತ್ತದೆ ಎನ್ನುವ ವೇಳೆ ಇನ್ನೊಬ್ಬರಿಂದ ಚಾರ್ಜರ್‌ ಕೇಳುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಪಡೆಯುವಾಗ ಎಚ್ಚರದಿಂದ ಇರಿ.

ಹೌದು, ಚಾರ್ಜರ್‌ ಪಡೆಯುವುದರಿಂದ ಏನು ಸಮಸ್ಯೆ ಎಂದು ಯೋಚಿಸುತ್ತಿದ್ದರೆ, ಈ ರೀತಿ ಚಾರ್ಜಿಂಗ್‌ ಕೇಬಲ್‌ ಪಡೆಯುವುದರಿಂದಲೂ ಮೊಬೈಲ್‌ ಗೆ ವೈರಸ್‌ ಬರುವ ಸಾಧ್ಯತೆಯಿದೆ ಎನ್ನುವ ಆಘಾತಕಾರಿ ವರದಿ ಹೊರ ಬಿದಿದ್ದೆ. ಐಬಿಎಂ ಸೆಕ್ಯುರಿಟಿಯ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ.

ಇನ್ನೊಬ್ಬರ ಮೊಬೈಲ್‌ ಕೇಬಲ್‌ ಚಾರ್ಜರ್‌ ಪಡೆಯುವ ವೇಳೆ ಮಾಲ್‌ ವೇರ್‌ ಅಥವಾ ವೈರಸ್‌ ನಿಮ್ಮ ಮೊಬೈಲ್‌ಗೆ ಅಟ್ಯಾಕ್‌ ಆಗುವ ಸಾಧ್ಯತೆಯಿದ್ದು, ಇದರಿಂದ ನಿಮ್ಮ ಮೊಬೈಲ್‌ ನಲ್ಲಿರುವ ಎಲ್ಲ ಡೇಟಾ, ಪಾಸ್‌ ವಾರ್ಡ್‌ ಹ್ಯಾಕರ್‌ ಗಳ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಕೆಲ ಚಾರ್ಜಿಂಗ್‌ ಕೇಬಲ್‌ ನಲ್ಲಿ ಸಣ್ಣ ಚಿಪ್‌ ಗಳನ್ನು ಅಳವಡಿಸಲಾಗುತ್ತದೆ. ಈ ಚಿಪ್‌ ಗಳು ಒಮ್ಮೆ ಮೊಬೈಲ್‌ ಚಾರ್ಜಿಂಗ್‌ ಪೋರ್ಟಲ್‌ ನಲ್ಲಿ ಹೋದರೆ, ರಿಮೋಟ್‌ ಕಂಟ್ರೊಲ್‌ ಮೂಲಕ ಡೇಟಾ ಪಡೆಯಬಹುದು ಎಂದು ಸಂಶೋಧನೆ ಹೇಳಿದೆ.

ಈ ಬಗ್ಗೆ ತಂಡದ ನೇತೃತ್ವ ವಹಿಸಿದ್ದ ಹೆಂಡರ್‌ಸನ್‌ ಮಾತನಾಡಿದ್ದು, ಚಿಕ್ಕ ಚಿಪ್‌ ಆಗಿರುವುದರಿಂದ ಯಾರಿಗೂ ತಿಳಿಯುವುದಿಲ್ಲ. ಈ ಮಾಲ್‌ವೇರ್‌ ಕೇವಲ ಕೇಬಲ್‌ ಪಡೆಯುವುದರಿಂದ ಮಾತ್ರವಲ್ಲದೇ, ಏರ್‌ಪೋರ್ಟ್‌ನಲ್ಲಿರುವ ಸಾರ್ವಜನಿಕ ಕೇಬಲ್‌, ಕಾಫಿ ಶಾಪ್‌ನಲ್ಲಿರುವ ಚಾರ್ಜಿಂಗ್‌ನಿಂದಲೂ ಬರಬಹುದು. ಆದ್ದರಿಂದ ನಿಮ್ಮ ಮೊಬೈಲ್‌ ಕೇಬಲ್‌ ಗಳನ್ನು ನೀವೇ ಪ್ರತ್ಯೇಕವಾಗಿಟ್ಟುಕೊಳ್ಳಿ. ಒಂದು ವೇಳೆ ಕೇಬಲ್‌ ಇಲ್ಲದಿದ್ದರೆ, ಹೊಸ ಕೇಬಲ್‌ ಪಡೆಯಿರಿ ಎಂದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ತಂತ್ರಜ್ಞಾನ

    ಕಂಪನಿಗಳಲ್ಲಿ ನಿರುದ್ಯೋಗಿಗಳ ಇಂಟರ್ವ್ಯೂ ಪಡೆಯುತ್ತೆ ಈ ರೋಬೋಟ್..!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ರಷ್ಯಾದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ರೋಬೋಟ್ ಒಂದನ್ನು ತಯಾರಿಸಿದೆ. ಈ ರೋಬೋಟ್ ಉದ್ಯೋಗವರಸಿ ಬರುವ ನಿರುದ್ಯೋಗಿಗಳ ಸಂದರ್ಶನ ಪಡೆಯಲಿದೆ. ಪ್ರಮುಖ ಕಂಪನಿಗಳು ಸೇರಿ ಸುಮಾರು 300 ಕಂಪನಿಗಳು ಈ ರೋಬೋಟ್ ಮೂಲಕ ಇಂಟರ್ವ್ಯೂ ಮಾಡಿಸ್ತಿವೆ. ಪೆಪ್ಸಿ, ಲೋರಿಯಲ್ ಸೇರಿದಂತೆ ಪ್ರಮುಖ ಕಂಪನಿಗಳಿಗೆ ಕೆಲಸಕ್ಕೆ ಸೇರಲು ನೀವು ನಿರ್ಧರಿಸಿದ್ದರೆ ನಿಮಗೆ ರೋಬೋಟ್ ವೇರಾ ಕರೆ ಮಾಡಬಹುದು. ಇಲ್ಲವೆ ವಿಡಿಯೋ ಕಾಲ್ ಮೂಲಕ ನಿಮಗೆ ಪ್ರಶ್ನೆಗಳನ್ನು ಕೇಳಬಹುದು. ಸೇಂಟ್ ಪೀಟರ್ಸ್ಬರ್ಗ್ ನ ಸ್ಟ್ರಾಫೇರಿ ಸಂಸ್ಥೆ ಈ ರೋಬೋಟ್ ಸಿದ್ಧಪಡಿಸಿದೆ….

  • ಸುದ್ದಿ

    ಲಾಲ್‌ಬಾಗ್ ಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ವಿಶೇಷತೆಯೇನು ಗೊತ್ತ?

    ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆಗಸ್ಟ್ 9ರಿಂದ ಆರಂಭವಾಗಲಿದೆ. ದೇಶ ಸ್ವಾತಂತ್ರ್ಯಗೊಂಡ ನಂತರ ರಾಜಸಂಸ್ಕೃತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲಾಗುತ್ತದೆ. ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ , ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅವರು ರಾಜ್ಯಕ್ಕೆ…

  • ಉಪಯುಕ್ತ ಮಾಹಿತಿ

    ಜನಸಂಖ್ಯೆಯನ್ನು ನಿಯಂತ್ರಿಸಲು ಈ ಸಲಹೆ ನೀಡಿದ ಬಾಬಾ ರಾಮ್‌ ದೇವ್…!

    ದೇಶದಲ್ಲಿ ಹೊಸ ಸರ್ಕಾರ ರಚನೆಗೂ ಮುನ್ನ ಯೋಗ‌ ಗುರು ಬಾಬಾ ರಾಮ್‌ ದೇವ್ ದೇಶದ ಜನಸಂಖ್ಯೆ ನಿಯಂತ್ರಣದ ಬಗ್ಗೆ ಸಲಹೆಯೊಂದನ್ನು ನೀಡಿದ್ದಾರೆ. ದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಗೆ ಬರಬೇಕೆಂದಿರುವ ಬಾಬಾ ರಾಮ್‌ ದೇವ್, ಎರಡು ಮಕ್ಕಳ ನಂತ್ರ ಮೂರನೇ ಮಗುವಿಗೆ ಮತದಾನದ ಹಕ್ಕು ನೀಡಬಾರದು. ಜೊತೆಗೆ ಯಾವುದೇ ಸರ್ಕಾರಿ ಸೌಲಭ್ಯವನ್ನು ನೀಡಬಾರದು ಎಂದು ಹೇಳಿದ್ದಾರೆ. ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಭಾರತ ಸಿದ್ಧವಿಲ್ಲ. ಭಾರತದಲ್ಲಿ 150 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರಬಾರದು ಎಂದು ಯೋಗ ಗುರು ಹೇಳಿದ್ದಾರೆ. ಈ…

  • ಜ್ಯೋತಿಷ್ಯ

    ನಿಮ್ಮ ದಿನ ಭವಿಷ್ಯ ಶುಭವೋ ಅಶುಭವೋ ಹೇಗಿದೆ..?ನೋಡಿ ತಿಳಿಯಿರಿ…

    ಶುಕ್ರವಾರ, 06/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ಇವರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಸೂರ್ಯೋದಯ : 06:16 ಸೂರ್ಯಾಸ್ತ : 18:28 ಪಕ್ಷ : ಕೃಷ್ಣ ಪಕ್ಷ ತಿಥಿ : ಷಷ್ಠೀ ನಕ್ಷತ್ರ : ಜ್ಯೆಷ್ಟ್ಯ ಯೋಗ : ವರಿಯಾನ್ ಪ್ರಥಮ ಕರಣ :…