ಜ್ಯೋತಿಷ್ಯ

ಹೇಗಿದೆ ನೋಡಿ ಗುರುವಾರದ ನಿಮ್ಮ ರಾಶಿ ಭವಿಷ್ಯ…ಗುರು ಒಲಿಯುತ್ತಾನೆಯೇ..?

274

ಇಂದು ಗುರುವಾರ,  15/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಕೆಲಸದ ಒತ್ತಡದಿಂದ ಸರಿಯಾಗಿ ಆಹಾರ ಸೇವಿಸದೆ ದೇಹಾಲಸ್ಯ ಉಂಟಾಗಬಹುದು. ನಿಮ್ಮ ಮೇಲಧಿಕಾರಿಗಳು ಸಂತುಷ್ಟರಾಗುವರು. ಯಾರೊಂದಿಗೂ ಈ ವಾರ ಜಗಳ ಬೇಡ. ಇದರಿಂದ ನಿಮಗೆ ಹೆಚ್ಚು ತೊಂದರೆಯಾಗಲಿದೆ. ಹಣದ ಹರಿವು ಹೆಚ್ಚಾಗುತ್ತದೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ಹಣಕಾಸಿನ ಮುಗ್ಗಟ್ಟು ಟೀಕೆ ಮತ್ತು ವಾದಗಳಿಗೆ ಕಾರಣವಾಗಬಹುದು,ನಿಮ್ಮಿಂದ ಬಹಳಷ್ಟು ನಿರೀಕ್ಷಿಸುವವರಿಗೆ ಇಲ್ಲ ಎಂದು ಹೇಳಲು ಸಿದ್ಧರಾಗಿರಿ.ನಿಮಗೆ ಸರ್ಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ಬೇಗನೆ ಬರುವಂತೆ ಒತ್ತಡ ತರುವರು.

ವೃಷಭ:-

ತಂದೆಯಿಂದ ನಿಮಗೆ ನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಒಡಹುಟ್ಟಿದವರು ಹಾಗೂ ಬಂಧುಗಳ ನಡುವೆ ಸ್ವಲ್ಪ ಮುಸುಕಿನ ಗುದ್ದಾಟ. ಪಿತ್ರಾಜಿತ ಆಸ್ತಿಗಳು ಒದಗಿಬರುತ್ತವೆ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಅದರೆ ಹಾಗೆ ಮಾಡಿದಲ್ಲಿ ನೀವು ವಿಷಾದಿಸುತ್ತೀರಿ. ಈ ರಾಶಿಯ ಮಕ್ಕಳ ಅಭಿವೃದ್ಧಿ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ನೀವು ಒಂದು ದೊಡ್ಡ ಖರ್ಚಿನಿಂದಾಗಿ ನಿಮ್ಮ ಸಂಗಾತಿಯ ಮೇಲೆ ಸಿಡುಕಬಹುದು.

ಮಿಥುನ:

ವೃತ್ತಿಯಲ್ಲಿನ ಒಂದು ಸಣ್ಣ ತಪ್ಪು ನಿಮಗೆ ಬೇಸರ ಉಂಟುಮಾಡುವುದು. ಈ ವಾರ ಸಜ್ಜನರ ಸಹವಾಸ ದೊರೆಯುತ್ತದೆ.  ಇದರಿಂದಾಗಿ ನಿಮ್ಮ ಮನೋಕಾಮನೆಗಳು ಪೂರೈಸಿಕೊಳ್ಳಲು ಪುನಃ ಕಾಲಾವಕಾಶ ಬೇಕಾಗುವುದು. ವಾಹನಗಳನ್ನು ಓಡಿಸುವಾಗ ಎಚ್ಚರ ಪಾಲಿಸುವುದು ಒಳ್ಳೆಯದು. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಧನಾತ್ಮಕ ಚಿಂತನೆ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ. ಪ್ರಯಾಣ ಮಾಡುವಾಗ ಮೊಬೈಲ್‌ ಉಪಯೋಗಿಸದೆ ಇರುವುದು ಒಳ್ಳೆಯದು. ಶತ್ರುಗಳು ನಿಮ್ಮನ್ನು ಹೊಗಳಲಿದ್ದಾರೆ. ಎಚ್ಚರಿಕೆವಹಿಸುವುದು ಒಳಿತು.

ಕಟಕ :-

ನೀವು ಎಷ್ಟೇ ಪ್ರಾಮಾಣಿಕವಾಗಿ ವರ್ತಿಸಿದರೂ ಮಡದಿ ಮಕ್ಕಳೇ ನಿಮ್ಮ ಬಗ್ಗೆ ಅಪನಂಬಿಕೆ ತೋರುವರು. ನಿರುದ್ಯೋಗಿಗಳಿಗೆ ನೌಕರಿ ದೊರೆಯಲಿದೆ. ಕೂಡಿಟ್ಟ ಹೊನ್ನು ಕರಗಿ ಹೋಗುವ ಸಾಧ್ಯತೆ ಇರುತ್ತದೆ. ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಸಂಸಾರದಲ್ಲಿ ಸುಖಮಯ ವಾತಾವರಣ ಮೂಡಿ ಬರುತ್ತದೆ. ಇಂದು ಕುಟುಂಬದ ಒಬ್ಬ ಸದಸ್ಯರು ನಿಮಗೆ ಕೋಪ ಬರಿಸಬಹುದು- ಪರಿಸ್ಥಿತಿ ಕೈಮೀರುವ ಮೊದಲು ಮಿತಿಗಳನ್ನು ಅಳವಡಿಸಲು ಮರೆಯಬೇಡಿ.  ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 ಸಿಂಹ:

ಬಾಳಸಂಗಾತಿಯ ವಿಚಾರದಲ್ಲಿ ಸ್ವಲ್ಪ ಹೆಚ್ಚಿನ ಮುತುವರ್ಜಿ ತೋರಬೇಕಾಗುವುದು. ಇದರಿಂದ ಬರಬಹುದಾದ ಬಿಕ್ಕಟ್ಟು ದೂರವಾಗಲಿದೆ.ನೀವು ಇಂದು ನಿಮಗೆ ನೀಡಲಾದ ಹೂಡಿಕೆಯ ಯೋಜನೆಗಳ ಬಗ್ಗೆ ಚೆನ್ನಾಗಿ ಆಲೋಚಿಸಬೇಕು. ಸಂಬಂಧಿಗಳು ನಿಮಗೆ ಸಹಾಯ ಹಸ್ತ ನೀಡಲು ಒಪ್ಪಿಕೊಳ್ಳುತ್ತಾರೆ. ಈ ರಾಶಿಯ ಹಲವರಿಗೆ ನಾಯಕತ್ವದ ಗುಣ ಒಲಿದು ಜನಗಳ ನಡುವೆ ಗುರುತಿಸಲ್ಪಡುತ್ತಾರೆ. ನಿಮ್ಮ ಸಂಗಾತಿಯ ಬಗ್ಗೆ ಇಂದು ನೀವು ಸಾಕಷ್ಟು ತಿಳಿದುಕೊಳ್ಳಬೇಕು. ಕಣ್ಣಲ್ಲಿ ನೋವು ಅಥವಾ ತಲೆನೋವು ಕಾಡಬಹುದು.

ಕನ್ಯಾ :-

ತಾಳ್ಮೆ ರೂಢಿಸಿಕೊಂಡರೆ ಒಳ್ಳೆಯದು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಇಂದು ನಿಮ್ಮ ಮಾತುಗಳ ಬಗ್ಗೆ ಲಕ್ಷ್ಯವಿರಲಿ. ದೂರದ ಊರಿನ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ವಾರ ಚುರುಕಾಗಿ ಕೆಲಸ ಮಾಡುವಿರಿ. ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ಧನದ ಒಳಹರಿವು ಹೆಚ್ಚಲಿದೆ. ಈ ಈ ರಾಶಿಯ ಸ್ತ್ರೀಯರು ತಾಳ್ಮೆಯಿಂದ ಇರುವುದು ಉತ್ತಮ. ಇದರಿಂದ ನಿಮಗೆ ಬರಬೇಕಾಗಿದ್ದ ಆದಾಯ ಬರಲಿದೆ. ಒಡವೆಗಳನ್ನು ಕೊಂಡುಕೊಳ್ಳುವ ಯೋಗವಿದೆ.

ತುಲಾ:

ಸ್ಥಿರಾಸ್ತಿ ಖರೀದಿಸಲು ಯೋಜನೆ ರೂಪಿಸುತ್ತೀರಿ. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಆಗುವರು. ನಿಮ್ಮ ಹಠಮಾರಿ ಸ್ವಭಾವದಿಂದ ಜನರ ಬಳಿ ನಿಷ್ಠುರವಾಗುವ ಸಾಧ್ಯತೆ. ಸಂಗಾತಿಗೆ ಸ್ಥಿರಾಸ್ತಿ ಒದಗಿ ಬರುವ ಸಾಧ್ಯತೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಅವರ ವ್ಯಾಪಾರದಲ್ಲಿ ಸಾಕಷ್ಠು ಪ್ರಗತಿಯಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು. ಹನುಮಾನ್‌ ಚಾಲೀಸ್‌ ಪಠಿಸುವುದು ಒಳ್ಳೆಯದು. ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ತಪ್ಪಿಸಿ ಹಣದ ಪರಿಸ್ಥಿತಿ ದಿನದಲ್ಲಿ ನಂತರ ಸುಧಾರಿಸುತ್ತದೆ.

ವೃಶ್ಚಿಕ :-

ಆರ್ಥಿಕ ಸ್ಥಿತಿ ಭದ್ರಗೊಳಿಸಿಕೊಳ್ಳಲು ಒತ್ತು. ನಿಮ್ಮ ಮಾತಿನಿಂದ ಎಲ್ಲರನ್ನೂ ಗೆಲ್ಲುತ್ತೀರಿ. ಆದರೆ, ಅತಿಮಾತು ಸಮಸ್ಯೆಯನ್ನು ತರಬಹುದು. ನಿಮ್ಮ ಆರೋಗ್ಯ ಇಂದು ಪೂರ್ಣವಾಗಿರುವುದಿಲ್ಲ. ನಿಮ್ಮ ಜೀವನದ ದಿಕ್ಕನ್ನೆ ಧನಾತ್ಮಕವಾಗಿ ಬದಲಿಸುವ ಶಕ್ತಿಯನ್ನು ಹೊಂದಿರುತ್ತದೆ. ನಿಮ್ಮ ಕೆಲಸಗಳಿಗೆ ಬೇರೆಯವರು ಗೌರವ ಪಡೆಯಲು ಬಿಡಬೇಡಿ.  ಸಂತೋಷದ ದಿನವಾಗಿರುತ್ತದೆ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ.

ಧನಸ್ಸು:

ಮಕ್ಕಳು ಮತ್ತು ದಾಯಾದಿಗಳ ನಡುವೆ ಸಂಬಂಧ ವೃದ್ಧಿಯಾಗುತ್ತದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿ ಲಭಿಸಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಮತ್ತೊಂದು ಗಳಿಕೆಯತ್ತ ಆಲೋಚನೆ ಮಾಡುತ್ತಾ ಅಲ್ಪಕಾಲದ ಸಂಪಾದನೆಗೆ ತೊಡಗುವಿರಿ. ನಿಮ್ಮ ಹೆತ್ತವರೆದುರಿಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವುದರಿಂದ ನಿಮ್ಮನ್ನು ಇಂದು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ. ಅಗತ್ಯ ವಸ್ತುಗಳ ಖರೀದಿ. ನೀವೆಂದುಕೊಂಡಂತೆ  ಏನೂ ನಡೆಯುತ್ತಿಲ್ಲ ಎಂದು ನಿಮಗನಿಸಬಹುದು, ಆದರೆ ಇದು ಕೇವಲ ಒಂದು ನಕಾರಾತ್ಮಕ ಚಿಂತನೆ. ಸಾಧ್ಯವಾದಷ್ಟೂ ಸಕಾರಾತ್ಮಕವಾಗಿರಲು ಪ್ರಯತ್ನಪಡಿ.

ಮಕರ :-

ದೇವರ ಕೃಪೆಯಿಂದ ನಿಮ್ಮ ಕಾರ್ಯಗಳು ಸುಗಮವಾಗುತ್ತವೆ. ಈ ವಾರ ಹಣದ ಕೊರತೆ ಅಷ್ಟಾಗಿ ಬಾಧಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ಪ್ರಿಯತಮೆಯ ಜೊತೆ ಇಂದು ಸಭ್ಯತೆಯಿಂದ ವರ್ತಿಸಿ.ವಿರಸ ಮೂಡಿದ್ದ ದಾಂಪತ್ಯದಲ್ಲಿ ತಣ್ಣನೆ ಗಾಳಿ ಬೀಸಲು ಶುರುವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗುತ್ತಿರುವವರು ಶಾಂತವಾಗಿರಬೇಕು. ಪರೀಕ್ಷೆಯ ಭಯ ನೀವು ದೈರ್ಯಗೆಡಿಸುವುದು ಬೇಡ. ಈ ದಿನ ಬರುವ ಉತ್ತಮ ಅವಕಾಶಗಳನ್ನು ನಿರಾಕರಿಸದೆ ಒಪ್ಪಿಕೊಳ್ಳಿ. ಇದರಿಂದ ಒಳಿತಾಗುವುದು. ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ತರುತ್ತವೆ.

ಕುಂಭ:-

ಸಂಪಾದನೆಗಿಂತ ಖರ್ಚು ಹೆಚ್ಚು ಎಂದು ರೋಸಿ ಹೋಗಿದ್ದೀರಿ. ಆದರೆ ಇದಕ್ಕೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವೆಂದು ಹೇಳಬೇಕಾಗಿಲ್ಲ. ಹೆಚ್ಚು ಹಣ ಬಂದಾಗ ಅದರಲ್ಲಿ ಸ್ವಲ್ಪ ಭಾಗವಾದರು ಉಳಿತಾಯ ಮಾಡಿ. ನಿಮಗೆ ಮಾನಸಿಕ ಧೈರ್ಯ-ಸ್ಥೈರ್ಯ ಬರುವುದು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ಸಾಹ ತೋರುವಿರಿ. ವ್ಯಾಪಾರದಲ್ಲಿ ಎಂದಿನಂತೆ ಲಾಭ ಬರುತ್ತವೆ. ಸಾಲ ತೆಗೆದುಕೊಂಡಿದ್ದವರಿಗೆ ಎಲ್ಲವನ್ನೂ ತೀರಿಸುವ ಅವಕಾಶ ಒದಗುತ್ತದೆ.

ಮೀನ:-

ಹೊಸ ವ್ಯವಹಾರಗಳು ನಿಮ್ಮ ವ್ಯಕ್ತಿತ್ವವನ್ನು ಎತ್ತರದ ಶ್ರೇಣಿಗೆ ಒಯ್ಯುತ್ತವೆ. ಮಕ್ಕಳು ಮತ್ತು ಹಿರಿಯರಿಗೆ ಹೆಚ್ಚು ಗಮನ ನೀಡಬೇಕು. ಕಬ್ಬಿಣದ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ ಬರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚಲಿದೆ. ಯಾವ ಕೆಲಸವನ್ನು ಮೊದಲು ಮಾಡಬೇಕು ಎಂದು ಮಾನಸಿಕ ಗೊಂದಲದಲ್ಲಿ ನರಳುವಿರಿ. ಮಾಡಬೇಕಾಗಿರುವ ಕೆಲಸಗಳ ಪಟ್ಟಿ ತಯಾರಿಸಿ. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡುತ್ತಾ ಬನ್ನಿ ಒಳಿತಾಗುವುದು. ಮನೆಯ ಕರ್ತವ್ಯಗಳನ್ನು ತಪ್ಪಿಸುವುದು ಮತ್ತು ಹಣಕ್ಕಾಗಿ ಪರಿತಪಿಸುವುದು ನಿಮ್ಮ ವೈವಾಹಿಕ ಜೀವನಕ್ಕೆ ಹಾನಿ ತರಬಹುದು ಹೊಸ ಪಾಲುದಾರಿಕೆ ಇಂದು ಭರವಸೆಯಿಂದ ಕೂಡಿರುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(21 ಡಿಸೆಂಬರ್, 2018) ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ…

  • ಸಂಬಂಧ

    ಮದುವೆಯಾದ ಹುಡುಗ ನಿಮಗೆ ತಕ್ಕ ವರನೇ ಎಂದು ತಿಳಿದುಕೊಳ್ಳುವುದು ಹೇಗೇ..? ಈ ಗುಣಗಳು ನಿಮ್ಮ ಸಂಗಾತಿಯಲ್ಲಿದ್ದರೆ ಆತ ನಿಮಗೆ ತಕ್ಕ ವ್ಯಕ್ತಿ ಎಂದು ಅರ್ಥ…

    ಮದುವೆ ಎಂಬುದೇ ವಿಚಿತ್ರ ನಂಟು. ಎಲ್ಲಿಯೋ ಇದ್ದ ಹುಡುಗ – ಹುಡುಗಿ ಮದುವೆ ಎಂಬ ಸಂಬಂಧ ದೊಂದಿಗೆ ಬೆಸೆಯುತ್ತದೆ. ಹುಡುಗ ಏನೋ ಸಂತಸದಲ್ಲೇ ಮದುವೆಯಾಗುತ್ತಾನೆ. ಆದರೆ

  • ಸುದ್ದಿ

    ಸೆಕ್ಯೂರಿಟಿ ಕಪಾಳಕ್ಕೆ ಹೊಡೆದ ಸಲ್ಮಾನ್ ಖಾನ್…..!ಕಾರಣ ಏನು…?

      ಮಕ್ಕಳ ಜೊತೆ ಗರಂ ಆಗಿ ವರ್ತಿಸಿದ್ದಕ್ಕೆ ತನ್ನ ಸೆಕ್ಯೂರಿಟಿ ಕಪಾಳಕ್ಕೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಬಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಮಂಗಳವಾರ ರಾತ್ರಿ ಸಲ್ಮಾನ್ ತಾವು ನಟಿಸಿದ ‘ಭಾರತ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‍ಗೆ ಹೋಗಿದ್ದರು. ಹೀಗಾಗಿ ಸಲ್ಮಾನ್‍ಗಾಗಿ ಸೆಕ್ಯೂರಿಟಿ ಗಾರ್ಡ್ ದಾರಿ ಮಾಡಿಕೊಡುತ್ತಿದ್ದರು. ಈ ವೇಳೆ ಮಕ್ಕಳ ಜೊತೆ ಖಾರವಾಗಿ ವರ್ತಿಸಿದ್ದಕ್ಕೆ ಸಲ್ಮಾನ್ ಖಾನ್ ಸೆಕ್ಯೂರಿಟಿಯ ಕಪಾಳಕ್ಕೆ ಹೊಡೆದಿದ್ದಾರೆ. ಸಲ್ಮಾನ್ ಖಾನ್ ಸೆಕ್ಯೂರಿಟಿಗೆ ಹೊಡೆದ ಫೋಟೋ ಮೊದಲು ಪೀಪಿಂಗ್…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(12 ಫೆಬ್ರವರಿ, 2019) ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಹಠಮಾರಿ ಪ್ರಕೃತಿ ನಿಮ್ಮ ಪೋಷಕರ…

  • ಆರೋಗ್ಯ

    ಬೋರಲಾಗಿ ಮಲಗುವುದು ನಿಜಕ್ಕೂ ಕೆಟ್ಟದ್ದೇ..?ತಿಳಿಯಲು ಈ ಲೇಖನ ಓದಿ..

    ಈ ಪ್ರಶ್ನೆಗೆ ಹೌದು ಎಂದು ಉತ್ತರಿಸಬೇಕಾಗುತ್ತದೆ. ಬೋರಲಾಗಿ ಅಂದರೆ ಹೊಟ್ಟೆ ಅಡಿಯಾಗಿ ಮಲಗುವದರಿಂದ ನಿಮ್ಮ ಬೆನ್ನು ಮತ್ತು ಕುತ್ತಿಗೆ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಇದು ನಿದ್ರೆಯನ್ನು ಕೆಡಿಸುವ ಜೊತೆಗೆ ನಿಮ್ಮ ಶರೀರಕ್ಕೂ ಅನಾನುಕೂಲವನ್ನುಂಟು ಮಾಡುತ್ತದೆ.

  • ಸುದ್ದಿ

    ಎಪ್ರಿಲ್ ಮೇ ನಲ್ಲಿ ಮದ್ವೆ ಆಗ್ತಾ ಇದ್ದೀರಾ..?ಹಾಗಾದ್ರೆ ತಪ್ಪದೇ ಈ ಸುದ್ದಿ ನೋಡಿ..

    2019ರ ಲೋಕಸಭೆ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆ ಜಾರಿಯಾದ ಕಾರಣ ದೇಶದಾದ್ಯಂತ ಅನೇಕ ನಿಯಮಾವಳಿಗಳು ಜಾರಿಗೆ ಬರುತ್ತವೆ. ಚುನಾವಣಾ ಆಯೋಗ ಹೊಸ ನಿಯಮಗಳನ್ನು ಕೂಡ ಜಾರಿಗೆ ತಂದಿದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಿನಲ್ಲಿ ಮದುವೆಗಳು ನಡೆಯುವುದು ಹೆಚ್ಚು. ಆದ್ರೆ ಚುನಾವಣೆ ಹಿನ್ನೆಲೆಯಲ್ಲಿ ಮದುವೆ ವಾದ್ಯಗಳು ಈ ಬಾರಿ ಕಡಿಮೆ ಪ್ರಮಾಣದಲ್ಲಿ ಕೇಳಿ ಬರಲಿವೆ. ಮದುವೆ ಸಂದರ್ಭದಲ್ಲಿ ವಾದ್ಯಗಳ ಬಳಕೆಗೆ ಒಪ್ಪಿಗೆ ಪಡೆಯಬೇಕಾಗುತ್ತದೆ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಎಸ್ಡಿಎಂ ಒಪ್ಪಿಗೆ ಪಡೆದು…