ಜ್ಯೋತಿಷ್ಯ

ಸೋಮವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

201

ಇಂದು ಸೋಮವಾರ, 12/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಖರ್ಚುವೆಚ್ಚಗಳಿದ್ದರೂ ಧನಾಗಮನ ಉತ್ತಮ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುವುದು. ತುಸು ಅನಾರೋಗ್ಯ ಕಾಡುವ ಸ್ಥಿತಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ .

ವೃಷಭ:-

ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ. ಶತ್ರುಗಳಿಂದ ಭೀತಿಯ ವಾತಾವರಣ ಸೃಷ್ಟಿ. ಹಣವನ್ನು ಒಯ್ಯುವಾಗ ಎಚ್ಚರಿಕೆಯಿಂದ ಇರಿ.ಅಧಿಕಾರಿಗಳ ಕೆಂಗಣ್ಣಿಗೆ ಗುರಿ. ಕೋರ್ಟು ಕಚೇರಿಯ ಕೆಲಸಗಳಲ್ಲಿ ನಿಮ್ಮ ಪರವಾಗಿ ತೀರ್ಪು .

ಮಿಥುನ:

ದೂರ ಸಂಚಾರದಲ್ಲಿ ಜಾಗ್ರತೆ.ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ. ಯೋಗ್ಯ ವಯಸ್ಕರಿಗೆ ಕಂಕಣಬಲ.ಯಂತ್ರೋಪಕರಣಗಳಿಂದ ಆದಾಯ. ಗೆಳೆಯರು ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ. ನ್ಯಾಯಾಲಯದ ಕೆಲಸದಲ್ಲಿ ಮುನ್ನಡೆ.

ಕಟಕ :-

ಆರ್ಥಿಕವಾಗಿ ಲಾಭ ವಿರುವ ಕಾರಣ ಕಾರ್ಯಸಾಧನೆಗೆ ಅನುಕೂಲವಾಗುತ್ತದೆ. ವಿದ್ಯಾಬುದ್ಧಿಯಲ್ಲಿ ಯಶಸ್ಸು. ಕೆಲಸ ಕಾರ್ಯಗಳಲ್ಲಿ ಸಾಫಲ್ಯತೆ. ವ್ಯಾಪಾರದಲ್ಲಿ ಲಾಭ ಹೆಚ್ಚಳ.

 ಸಿಂಹ:

ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಪ್ರಶಂಸೆ. ಆರೋಗ್ಯದಲ್ಲಿ ಜಾಗ್ರತೆ.ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು. ಬರಬೇಕಾದ ಹಣ ಹಿಂತಿರುಗಿ ಬರಲಿದೆ.

ಕನ್ಯಾ :-

ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ. ಬಂಧುಬಳಗದವರ ಆಗಮನ. ದೂರದಿಂದ ಬರುವ ವಾರ್ತೆಯು ನಿಮಗೆ ಸಂತೋಷದಾಯಕವಾಗಿರುತ್ತದೆ. ವ್ಯವಹಾರಗಳಲ್ಲಿನ ಗೊಂದಲ ನಿವಾರಣೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ವೈವಾಹಿಕ ಮತ್ತು ಹಣಕಾಸಿನ ಸ್ಥಿತಿ ಉತ್ತಮ.

ತುಲಾ:

ವಿದ್ಯಾರ್ಥಿಗಳಿಗೆ ವಿದ್ಯಾಲಾಭ. ಹಣಕಾಸಿನ ನೆರವು ದೊರೆಯುವುದು.ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳು ಪೂರ್ಣಗೊಳ್ಳದೆ ಒತ್ತಡ ಉಂಟಾಗಲಿದೆ. ದಾಂಪತ್ಯದಲ್ಲಿ ಸುಖ.

ವೃಶ್ಚಿಕ :-

ಕೌಟುಂಬಿಕ ಜೀವನದಲ್ಲಿ ಸಮಸ್ಯೆ.ಗೃಹಿಣಿಯರಿಗೆ ಕೆಲಸದ ಒತ್ತಡದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ. ನಿರೀಕ್ಷಿತ ಕೆಲಸಕಾರ್ಯಗಳು ಹಂತ ಹಂತವಾಗಿ ನೆರವೇರುತ್ತವೆ.ಚಂಚಲ ಸ್ವಭಾವವು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುವುದು.

ಧನಸ್ಸು:

ಧನಾಗಮನ ಉತ್ತಮವಿದೆ.ಅಧ್ಯಯನದಲ್ಲಿ ಪ್ರಗತಿ. ಮನೆಯ ಸದಸ್ಯರೊಡನೆ ವಿನಾಕಾರಣ ಮನಃಸ್ತಾಪ. ಶತ್ರುಭೀತಿ ದೂರವಾಗಲಿದೆ. ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿಲ್ಲ. ದಾಂಪತ್ಯ ಜೀವನದಲ್ಲಿ ನೆಮ್ಮದಿ.ಆಧಾಯ ಉತ್ತಮವಾಗಿದೆ.

ಮಕರ :-

ವ್ಯಾಪಾರದಲ್ಲಿನ ಲಾಭದಲ್ಲಿ ಹೆಚ್ಚಳ. ಹಣಕಾಸಿನ ಬಗ್ಗೆ ಜಾಗ್ರತೆ. ಸ್ವಂತ ಉದ್ಯಮಿಗಳಿಗೆ ಅನುಕೂಲಕರ ವಾತಾವರಣ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಹಣಕಾಸಿನ ಸ್ಥಿತಿ ಉತ್ತಮ.

ಕುಂಭ:-

ವ್ಯವಹಾರದಲ್ಲಿ ನಷ್ಟದ ಸಾಧ್ಯತೆ. ನವದಂಪತಿಗಳಿಗೆ ಸಂತಾನಭಾಗ್ಯ. ಕೌಟುಂಬಿಕ ಜೀವನದಲ್ಲಿ ಸುಖ. ಸಂಗಾತಿಯ ಪ್ರೀತಿ ನಿಮ್ಮನ್ನು ಕಾಪಾಡಲಿದೆ. ಹಣಕಾಸಿನ ಸ್ಥಿತಿ ಉತ್ತಮ. ಮಕ್ಕಳ ಆರೋಗ್ಯದಲ್ಲಿ ಏರುಪೇರು.

ಮೀನ:-

ಕೆಲಸದಿಂದ ಆಗಾಗ್ಗೆ ಮನಸು ದೂರವಾಗುವ ಸಾಧ್ಯತೆಯಿರುತ್ತದೆ. ಲೇವಾದೇವಿ ವ್ಯವಹಾರದಲ್ಲಿ ಉತ್ತಮ ಲಾಭ. ಸಾಂಸಾರಿಕವಾಗಿ ಭಿನ್ನಾಭಿಪ್ರಾಯ. ಹಣಕಾಸಿನ ತೊಂದರೆ ಸ್ವಲ್ಪಮಟ್ಟಿಗೆ ಕಾಡುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ