ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯ ಸರ್ಕಾರ 3500 ಮಂದಿ ಪರಿಶಿಷ್ಟ ಜಾತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವಾಲ್ಮೀಕಿ, ಬೋವಿ, ದೇವರಾಜ ಅರಸು ಅಭಿವೃದ್ಧಿ ನಿಗಮಗಳ ಮೂಲಕವೂ ಯೋಜನೆ ಜಾರಿಗೆ ತರಲಾಗುತ್ತಿದೆ. ಯೋಜನೆಗೆ ಬೆಂಗಳೂರಿನಲ್ಲಿ ಈಗಾಗಲೇ ಚಾಲನೆ ದೊರೆತಿದ್ದು ಆರಂಭಿಕವಾಗಿ 1000 ಅಭ್ಯರ್ಥಿಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಫಲಾನುಭವಿಯು 6 ರಿಂದ 8 ಲಕ್ಷ ರೂ. ವರೆಗಿನ ಹುಂಡೈ ಕಂಪನಿಯ ಎಸ್ಸೆಂಟ್ ಕಾರು, ಟೊಯೋಟಾ ಇಟಿಯೋಸ್, ಮಾರುತಿ ಸ್ವಿಫ್ಟ್ ಡಿಸೈರ್ ಅಥವಾ ಹೊಂಡಾ ಅಮೇಝಾನ್ ಕಾರುಗಳನ್ನು ಖರೀದಿಸಬೇಕಾಗುತ್ತದೆ.
ಏನಿದು ಯೋಜನೆ?
*ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸುಮಾರು 3500 ಟ್ಯಾಕ್ಸಿ ಕಾರುಗಳ ವಿತರಣೆ.
* ಆಯ್ಕೆಯಾದ ಫಲಾನುಭವಿಗಳಿಗೆ ಒಂದು ಟ್ಯಾಕ್ಸಿಗೆ 3 ಲಕ್ಷ ರೂ.ವರೆಗೆ ಸಬ್ಸಿಡಿ.
* ಬ್ಯಾಂಕ್ಗಳಿಂದ ಸಾಲ ದೊರೆಯುವಂತೆ ಮಾಡುವುದು, ಓಲಾ ಹಾಗೂ ಊಬರ್ ಕಂಪನಿಗಳ ಜತೆ ಟೈಅಪ್ ಮಾಡಿಕೊಂಡು ಬಿಜಿನೆಸ್ ಕೊಡಿಸುವುದು, ಗಳಿಸಿದ ಆದಾಯದಲ್ಲಿ ಬ್ಯಾಂಕ್ಗಳಿಗೆ ಸಾಲ ಮರುಪಾವತಿಯಾಗುವಂತೆ ನೋಡಿಕೊಳ್ಳುವುದು.
ಮಾನದಂಡಗಳೇನು?
1.ಅಭ್ಯರ್ಥಿ ಬಳಿ ಹಳದಿ ಬ್ಯಾಡ್ಜ್ ಇರಬೇಕು.
2.ನಿರುದ್ಯೋಗಿಯಾಗಿರಬೇಕು.
3.ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರಿ ಹೊಂದಿರಬಾರದು.
4.ಬಿಪಿಎಲ್ ಕಾರ್ಡ್ ಹೊಂದಿರಬೇಕು.
5.ವರ್ಷಕ್ಕೆ 12 ಸಾವಿರ ರೂ. ಮೀರಿರಬಾರದು.
ಆಯ್ಕೆ ಪಕ್ರಿಯೆ ಹೇಗೆ?
ಆಯಾ ಜಿಲ್ಲೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅರ್ಜಿಗಳನ್ನು ಪಡೆದು ಸ್ವ ವಿವರಗಳನ್ನು ಭರ್ತಿ ಮಾಡಿ ಕೊಡಬೇಕು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ.
ವಿಶೇಷ ಯೋಜನೆ:-
ಈ ಮೊದಲೂ ನಿಗಮದ ಅಧಿಕಾರಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಿ ಕಾರು ಖರೀದಿಗೆ ಸಬ್ಸಿಡಿ ಮಂಜೂರು ಮಾಡುತ್ತಿದ್ದರು. ಆದರೆ ಸಬ್ಸಿಡಿ ಹಣವಿದ್ದರೂ ಬ್ಯಾಂಕ್ಗಳಲ್ಲಿ ಸಾಲ ಸಿಗದೇ ಕಾರು ಖರೀದಿಸಲು ಆಗುತ್ತಿರಲಿಲ್ಲ.
ಈ ರೀತಿ ಆಗದಂತೆ ನಿಗಮವು ಈಗ ಹೊಸ ಯೋಜನೆ ಜಾರಿಗೆ ತಂದಿದೆ. ವಾಣಿಜ್ಯ, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳ ಅಧಿಕಾರಿಗಳು ಹಾಗೂ ಆಯ್ಕೆಯಾದ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಾಲ ಸಿಗುವಂತೆ ಮಾಡಲಿದೆ.
ರಾಜ್ಯದಲ್ಲಿ ಪ್ರಥಮ ಬಾರಿ ಈ ವಿಶೇಷ ಯೋಜನೆ ಜಾರಿಗೆ ಬರುತ್ತಿದೆ. ಈ ವರ್ಷ 3500 ಕಾರುಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಶಾಸಕರು ಫಲಾನುಭವಿಗಳ ಪಟ್ಟಿಯನ್ನು ತ್ವರಿತವಾಗಿ ಕಳುಹಿಸಿದರೆ ಯೋಜನೆ ಶೀಘ್ರ ಅನುಷ್ಠಾನ ಮಾಡಲಾಗುವುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗ ಎಲ್ಲಾ ಕಡೆ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಾದ್ರೆ ನಮ್ಮ ಸಂವಿಧಾನದಲ್ಲಿ ಪ್ರತ್ಯೇಕ ನಾಡ ಧ್ವಜ ಕುರಿತು ಏನು ಹೇಳಲಾಗಿದೆ? ಭಾರತದ ಯಾವ ರಾಜ್ಯವು ಪ್ರತ್ಯೇಕ ಧ್ವಜವನ್ನು ಹೊಂದಿಲ್ಲವೇ?
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(13 ಡಿಸೆಂಬರ್, 2018) ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಾಗೂ ಮನೆಯ ಉದ್ವಿಗ್ನತೆಗಳನ್ನು ಶಮನ ಕಾಣಿಸುತ್ತದೆ…
ಆಧಾರ್ ನಲ್ಲಾದ ಈ ತಪ್ಪನ್ನು ತಿದ್ದಲು ನಿಮಗೆ ಇನ್ನೊಂದೇ ಅವಕಾಶ ಸಿಗಲಿದೆ. ಆಧಾರ್ ಕಾರ್ಡ್ ಸಿದ್ಧವಾಗಿದ್ದು, ಜನ್ಮ ದಿನಾಂಕ ತಪ್ಪಾಗಿದ್ದರೆ ಪದೇ ಪದೇ ಇದನ್ನು ಬದಲಿಸಲು ಸಾಧ್ಯವಿಲ್ಲ. ಒಮ್ಮೆ ಮಾತ್ರ ನೀವು ಜನ್ಮ ದಿನಾಂಕದಲ್ಲಿ ತಿದ್ದುಪಡಿ ಮಾಡಬಹುದು. ಇದನ್ನು ಯುಐಡಿಎಐ ಅಧಿಕೃತ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದೆ. ವಿಳಾಸ ಬಿಟ್ಟು ಆಧಾರ್ ನಲ್ಲಾಗಿರುವ ಯಾವುದೇ ತಪ್ಪನ್ನು ತಿದ್ದಲು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಜನ್ಮ ದಿನಾಂಕವನ್ನು ಕೂಡ ಆಧಾರ್ ಕೇಂದ್ರಕ್ಕೆ ಹೋಗಿಯೇ ತಿದ್ದಬೇಕು. ಜನ್ಮ ದಿನಾಂಕ ತಿದ್ದುಪಡಿ ಮಾಡುವಾಗ ಸೂಕ್ತ…
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಶರ್ಮಾ ಇನ್ನೆರಡೇ ಸಿಕ್ಸ್ ಬಾರಿಸಿದರೂ ಏಕದಿನದಲ್ಲಿ ಭಾರತ ಪರ ಧೋನಿ ಮಾಡಿರುವ ಅತ್ಯಧಿಕ ಸಿಕ್ಸ್ ದಾಖಲೆ ಬದಿಗೆ ಸರಿಯಲಿದೆ.ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ರೋಹಿತ್ ಗೆ ಧೋನಿ ದಾಖಲೆ ಮುರಿಯಲು ಅವಕಾಶವಿತ್ತು. ಆದರೆ ಶರ್ಮಾ ಕೇವಲ 1 ರನ್ನಿಗೆ ಮುಜೀಬ್ ಉರ್ ರಹ್ಮಾನ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸುವ ಮೂಲಕ ಅವಕಾಶ ಕಳೆದುಕೊಂಡಿದ್ದರು. ಗುರುವಾರ (ಜೂನ್ 27) ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ…
ನಿತ್ಯ ವಾಹನಗಳನ್ನು ಬಳಸುವವರು ಯಾರಾದರೂ ಅದರ ಕೀಗಳನ್ನು ಭದ್ರವಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ಅವನ್ನು ಕಳೆದುಕೊಂಡರೆ ಕಷ್ಟಗಳು ತಪ್ಪಿದ್ದಲ್ಲ.. ಆಗ ಅನುಭವಿಸುವ ಕಿರಿಕಿರಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಇನ್ನು ಮುಖ್ಯವಾಗಿ ಕಾರಿನ ಮಾಲೀಕರು ಒಮ್ಮೊಮ್ಮೆ ಕಾರಿನಲ್ಲೇ ಕೀ ಮರೆತುಬಿಡುತ್ತಾರೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನಡೆಯ ಮೂಲಕ ನಿಜಜೀವನದಲ್ಲಿಯೂ ಹೀರೋ ಆಗಿದ್ದಾರೆ. ಅಂದ ಹಾಗೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದರ ಹಿಂದೆ ಮತ್ತೊಂದು ಕಾರಣ ಕೂಡ ಇದೆ ಎಂದು ಹೇಳಲಾಗಿದೆ. ತಮ್ಮ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂಬುದನ್ನು ದರ್ಶನ್…