ಕರ್ನಾಟಕ

ರಾಜ್ಯದ 6000 ಶಿಕ್ಷಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ..!

1529

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸೂಚನೆಯೊಂದು ರಾಜ್ಯದ ಶಿಕ್ಷಕರನ್ನು ಆತಂಕಕ್ಕೀಡು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯಲ್ಲಿರುವ ಶಿಕ್ಷಕರು ಉತ್ತಮ ರೀತಿಯಲ್ಲಿ ವೃತ್ತಿ ತರಬೇತಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಇಲ್ಲದಿದ್ದರೆ ಅವರನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸೂಚನೆ ಏನು ಗೊತ್ತಾ?

ರಾಜ್ಯದಲ್ಲಿರುವ ಸುಮಾರು 6,000 ಶಿಕ್ಷಕರು ತಮ್ಮ ಸೇವೆಯಲ್ಲಿ ಮುಂದುವರಿಯಲು ಡಿಪ್ಲೊಮಾ ಇನ್ ಎಜುಕೇಷನ್ (ಡಿ.ಎಡ್) ಅರ್ಹತೆಯನ್ನು ಪೂರ್ಣಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಶಿಕ್ಷಕರು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‍ಐಒಎಸ್) ಸಂಸ್ಥೆಯಿಂದ ಮುಕ್ತ ಮತ್ತು ದೂರಶಿಕ್ಷಣದ ಮೂಲಕ 31ನೇ ಮಾರ್ಚ್ 2019ರ ಒಳಗೆ ಈ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಬೇಕು ಎಂದು ಸಚಿವಾಲಯ ನಿರ್ದೇಶನ ನೀಡಿದೆ.

ನಿಗದಿತ ಅವಧಿಯೊಳಗೆ ಅಗತ್ಯ ತರಬೇತಿ ಪಡೆಯಲು ವಿಫಲವಾಗುವ ಯಾವುದೇ ಶಿಕ್ಷಕ, ಶಿಕ್ಷಕಿಯರನ್ನು ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅಗತ್ಯ ಕನಿಷ್ಠ ವೃತ್ತಿಪರ ವಿದ್ಯಾರ್ಹತೆ ಪಡೆಯಲು ಇದು ಶಿಕ್ಷಕರಿಗೆ ನೀಡುತ್ತಿರುವ ಕೊನೆಯ ಅವಕಾಶವಾಗಿದೆ ಎಂದು ತಿಳಿಸಲಾಗಿದೆ.


ಸೇವೆಯಲ್ಲಿರುವ ಎಲ್ಲ ಶಿಕ್ಷಕರು ಡಿ.ಎಡ್ ವಿದ್ಯಾರ್ಹತೆ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಗಳು ಶಾಲೆಗಳಿಗೆ ಅಂತಿಮ ಗಡುವಿನ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಶಿಕ್ಷಕರು ಈ ವಿದ್ಯಾರ್ಹತೆ ಹೊಂದುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅನಿತಾ ಕಾರ್ವಾಲ್ ತಿಳಿಸಿದ್ಧಾರೆ.

ನಾವು ಈ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ರಾಜ್ಯಾದ್ಯಂತ ಇರುವ ಎಲ್ಲ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ಧಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಮ್ಮ ನೀನು ಎಲ್ಲಿರುವೆ.?ನಿನ್ನ ಕಂದ ಜೀವಂತವಾಗಿರುವನು..ನನ್ನ ಬಳಿಗೆ ಬಾ..ಮುಂದೆ ಓದಿ ಆ ತಾಯಿಗೆ ತಲಪುವವರೆಗೂ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ನಾವು ಮನುಷ್ಯರು ಇಷ್ಟೊಂದು ಕ್ರೂರಿಗಳಾಗಿ ಬಿಟ್ಟಿದ್ದೇವೆಯೇ.?ಯಾಕಂದ್ರೆ ಇಲ್ಲೊಬ್ಬ ಮಹಾ ತಾಯಿ ತನ್ನ ಹಸುಗೂಸು ಕಂದಮ್ಮನನ್ನು, ಕರುಣೆಯಿಲ್ಲದೆ  ಜೀವಂತವಾಗಿಯೇ ಮಣ್ಣಲ್ಲಿ ಮುಚ್ಚಿ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಮ್ಮಲ್ಲಿ ಎಷ್ಟೋ ಜನಕ್ಕೆ ಮಕ್ಕಳಿಲ್ಲದೆ, ಮಕ್ಕಳಿಗಾಗಿ ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ.ಆದರೆ ಸಂತಾನ ಭಾಗ್ಯ ಇರುವ ಕೆಲವರು ಹೀಗೆ ಮಕ್ಕಳನ್ನು ಮಣ್ಣಲ್ಲಿ ಹುತು ಬಿಡುವುದೋ, ಎಲ್ಲೋ ಬಿಸಾಡಿ ಹೋಗುವುದೋ ಮಾಡುತ್ತಾರೆ. ಅಮ್ಮ ನಿನಗೆ ಕರುಣೆನೇ ಇಲ್ವ..? ಆಗತಾನೆ ಕಣ್ಬಿಟ್ಟ ನನಗೆ ನಿನ್ನ ನೋಡೋ ಆಸೆ…

  • ಆರೋಗ್ಯ

    ಕಂಕುಳ ದುರ್ವಾಸನೆಯಿಂದ ಮುಕ್ತರಾಗಲು ಈ ವಿಧಾನಗಳನ್ನು ಅನುಸರಿಸಿ…….

    ಕಾಲ ಕಾಲಕ್ಕೆ ಬದಲಾಗುವ ವಾತಾವರಣದ ಜೊತೆಗೆ ಆರೋಗ್ಯದ ಹೊಂದಾಣಿಕೆ ಮಾಡಿಕೊಳ್ಳುವುದು ಸಾಹಸವೇ ಸರಿ. ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯಿಂದ ಶರೀರದಿಂದ ಒಸರುವ ಬೆವರು ನೀಡುವ ಬಾಧೆಯಂತು ಹೇಳತೀರದು.

  • ಸುದ್ದಿ

    ದಿನಾ ಒಂದು ಗ್ಲಾಸ್ ಈ ಹಾಲನ್ನು ಕುಡಿದರೆ ಸಾಕು ನಿಮ್ಮೆಲ್ಲಾ ಕಾಯಿಲೆಗಳು ಇನ್ನು ದೂರ,.!

    ಅರಿಶಿನ ಹಾಲು (ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು) ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅದರ ಬಣ್ಣ ನೋಡಿ ಮಾತ್ರವಲ್ಲ, ಪ್ರಯೋಜನಗಳನ್ನು ನೋಡಿ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಇಲ್ಲಿವೆ ನೋಡಿ ರಕ್ತವನ್ನು ಶುದ್ಧೀಕರಿಸುತ್ತದೆ : ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ….

  • ಸುದ್ದಿ

    ರವಿಚಂದ್ರನ್ ಇನ್ನು ಮುಂದೆ ಡಾ.ರವಿಚಂದ್ರನ್ : ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ ನಮ್ಮ ಕನಸುಗಾರ….!

    ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್,ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ನಟ ಗೌರವ ಡಾಕ್ಟರೇಟ್  ಪಡೆಯಲಿದ್ದಾರೆ. ಅವರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ರವಿ ಚಂದ್ರನ್. ಬೆಂಗಳೂರಿನ  ಸಿ ಎಮ್ ಆರ್ ವಿಶ್ವ ವಿದ್ಯಾನಿಲಯ ರವಿ ಚಂದ್ರನ್ ರಿಗೆ ಗೌರವ ಡಾಕ್ಟರೇಟ್  ನೀಡುತ್ತಿದೆ. ಈ ಹಿಂದೆ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಇದೀಗ ಅವರ ಬಯಕೆ ಈಡೇರಿದೆ. ನವೆಂಬರ್ 3 ರಂದು ದೊಡ್ಡ ಕಾರ್ಯಕ್ರಮದ ಮೂಲಕ…

  • ಸರ್ಕಾರದ ಯೋಜನೆಗಳು

    ಮೋದಿ ಸರ್ಕಾರದ ಮತ್ತೊಂದು ಯೋಜನೆ …!ತಿಳಿಯಲು ಈ ಲೇಖನ ಓದಿ..

    ನವದೆಹಲಿ, ನವೆಂಬರ್ 18 : ಮೂಡೀಸ್ ರೇಟಿಂಗ್ ಕೇಂದ್ರಕ್ಕೆ ಹೊಸ ಚೈತನ್ಯ ತುಂಬಿದಂತಿದೆ. ನೋಟ್ ಬ್ಯಾನ್, ಜಿ.ಎಸ್.ಟಿ ಅನ್ನು ವಿಷಯವಾಗಿರಿಸಿಕೊಂಡು ಕೇಂದ್ರವನ್ನು ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದೆ ಮೂಡೀಸ್ ರೇಟಿಂಗ್.

  • ಸುದ್ದಿ

    ಲೈಂಗಿಕ ಕಿರುಕಳ ನೀಡುತಿದ್ದ ಕಾಮುಕ ಮಾವನ ಹಿಡಿಯಲು ಸೊಸೆ ಮಾಡಿದ ಚಾಣಾಕ್ಷ ಪ್ಲ್ಯಾನ್…..!

    ತನ್ನ ಸೊಸೆಗೆ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ 50 ವರ್ಷದ ಆಟೋ ಚಾಲಕನನ್ನು ಮುಂಬೈ ವಿಹಾರ್ ಪೊಲೀಸರು ಬಂಧಿಸಿದ್ದಾರೆ.  ಮಾವನಿಂದಲೇ ಶೋಷಣೆ ಆಗುತ್ತಿರುವ ಬಗ್ಗೆ ಮಹಿಳೆ ತನ್ನ ಗಂಡನ ಬಳಿ ಹೇಳಿಕೊಂಡಿದ್ದಳು. ಆದರೆ ಗಂಡ ಆಕೆಯ ಮಾತನ್ನು ನಂಬಿರಲಿಲ್ಲ. ಹಾಗಾಗಿ ಮಹಿಳೆ ಸಾಕ್ಷಿ ಸಮೇತ ಮಾವನನ್ನು ಹಿಡಿದಕೊಡುವ ನಿರ್ಧಾರಕ್ಕೆ ಬಂದಿದ್ದರು. ಅಡುಗೆ ಕೋಣೆಯಲ್ಲಿ ಮೊಬೈಲ್ ಕ್ಯಾಮರಾ ಫಿಕ್ಸ್ ಮಾಡಿದಳು. ಮಾವ ಆಕೆಯ ಮೇಲೆ ಶೋಷಣೆ ಮಾಡಲು ಆಗಮಿಸಿದ.  ಆಕೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದವ ಸೊಸೆಯ…