ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು” ಅಡಿಗೆ ಮನೇಲಿ ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ ಒಳ್ಳೇದು. ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ ಈ ಸೊಪ್ಪಲ್ಲಿ ಪ್ರೋಟೀನ್, ಐರನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫಾಸ್ಫರಸ್,ಮಗ್ನೀಷಿಯಂ ಅಲ್ಲದೇ ವಿಟಮಿನ್ A ಹಾಗು C ಇರೋದ್ರೀಂದ ಆರೋಗ್ಯಕ್ಕೆ ಬಹಳ ಒಳ್ಳೇದು.
ಆಹಾರ ಜೀರ್ಣ ಆಗೋಕೆ, ವಾಂತಿ ತಡಿಯಕ್ಕೆ, ಕ್ಯಾನ್ಸರ್ ಬರದೇ ಇರೋ ಹಾಗೆ ಕಾಪಾಡೋಕೆ, ಅಸ್ತಮಾ, ನೆಗಡಿ, ತಲೆನೋವು, ಕೆಮ್ಮು ಮತ್ತೆ ಬೇಧಿ ಇದೆಲ್ಲಕ್ಕೂ ರಾಮ ಬಾಣ. ಕಟ್ಟಿದ ಮೂಗಿಗೆ, ಗಂಟಲು ಅಥವಾ ಶ್ವಾಸಾಕೋಶದ ತೊಂದರೆಗೆ ಮತ್ತು ಅಲರ್ಜಿ ಆಗದ ಹಾಗೆ ನೋಡಿಕೊಳ್ಳುತ್ತೆ. ಇನ್ನು ಗರ್ಭಿಣಿಯರಲ್ಲಿ ಬೆಳಗಿನ ಹೊತ್ತು ವಾಂತಿ ಆಗದ ಹಾಗೆ ನೋಡಿಕೊಳ್ಳುತ್ತೆ. ಅಲ್ಸರ್ ನಿವಾರಿಸಿ ಲಿವರ್ ನ ಆರೋಗ್ಯ ಕಾಪಾಡುತ್ತೆ.
ಚರ್ಮದ ಮೇಲೆ ಹಚ್ಚೋಕೆ ಹಸಿದು, ಒಣಗಿದ್ದು, ರುಬ್ಬಿದ್ದು ಅಥವಾ ಎಣ್ಣೆ ರೂಪದಲ್ಲಿ ಬಳಸಿ ಚರ್ಮದ ಕಾಂತಿ ಹೆಚ್ಚಿಸ ಬಹುದು. ಚರ್ಮದ ಸುಕ್ಕು, ಕಪ್ಪು ಕಲೆ, ಕಣ್ಣಿನ ಸುತ್ತ ಕಪ್ಪು ಬಣ್ಣ , ಮೊಡವೆ ಎಲ್ಲಕ್ಕೂ ಬಳಸಬಹುದು. ಹಾಗಾಗೀನೆ ಕ್ಲೆನ್ಸಿಂಗ್ ಲೋಷನ್ಗಳಲ್ಲಿ ಇದನ್ನ ಬಳಸ್ತಾರೆ. ಇದರಿಂದ ಹಲ್ಲುಜ್ಜಿದರೆ ಹಲ್ಲು ಬಿಳಿಯೂ ಆಗುತ್ತೆ, ಬಾಯ್ವಾಸನೆನೂ ದೂರ ಆಗುತ್ತೆ. ಹಲ್ಲು ಹಾಳಾಗದ ಹಾಗೆ ನೋಡಿಕೊಂಡು, ನಾಲಿಗೇನ ಸ್ವಚ್ಚಗೊಳಿಸುತ್ತೆ. ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದ ಹಾಗೆ ನೋಡಿಕೊಳ್ಳುತ್ತೆ. ಅದಕ್ಕೇ ಟೂತ್ ಪೇಸ್ಟ್, ಚ್ಯುಯಿಂಗ್ ಗಮ್ ಗಳಲ್ಲಿ ಇದನ್ನ ಬಳಸ್ತಾರೆ.
ಇದರಲ್ಲಿ ಪುದೀನ ಚಟ್ನಿ, ಪುದೀನ ಮೊಸರು ಬಜ್ಜಿ, ಪುದೀನ ರೈಸ್, ಜಲ್ ಜೀರಾ, ಪುದೀನ ಮಜ್ಜಿಗೆ ಮತ್ತಿನ್ನೂ ಏನೇನೋ ರುಚಿರುಚಿಯಾಗಿ ಮಾಡ್ಕೊಂಡು ತಿನ್ಬೋದು.
ನಮಗೆ ಗೊತ್ತಿಲ್ಲದ ಇನ್ನೂ ಕೆಲುವು ಉಪಯೋಗಗಳು ಎಲ್ಲಿವೆ ನೋಡಿ !
*ಶೀತ ಆಗಿ ಗಂಟಲು ನೋವು ಬಂದಿದ್ದರೆ, ಅದಕ್ಕೆ ಪುದೀನ ರಸದ ಜೊತೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿ.
*ದಿನಕ್ಕೆ ಎರಡರಿಂದ ಮೂರು ಸರ್ತಿ ಪುದೀನ ಟೀ ಕುಡಿದರೆ ಅಜೀರ್ಣ ಮತ್ತು ಶೀತ ಕಡಿಮೆ ಆಗುತ್ತೆ.
*ಪುದೀನ ಜ್ಯೂಸ್ ಜೊತೆ ಅಷ್ಟೇಪ್ರಮಾಣ ಜೇನು ಹಾಕಿ ಕುಡಿಯೋದ್ರಿಂದ ಅಸಿಡಿಟಿ ಹಾಗು ವಾಂತಿ ಗುಣ ಆಗುತ್ತೆ.
*ಊಟಕ್ಕೆಮುಂಚೆ ಮತ್ತು ಊಟ ಆದ್ಮೇಲೆ ಪುದೀನ ಎಲೆ ತಿನ್ನೋದ್ರಿಂದ ಬಾಯಿ ವಾಸನೆ ಬರಲ್ಲ.
*ಪುದೀನ ಪೇಸ್ಟ್ ಗೆ ಅರಿಶಿಣ ಹಾಕಿ ಮುಖಕ್ಕೆ ಹಚ್ಚೋದ್ರಿಂದಮೊಡವೆ ಕಡಿಮೆ ಆಗುತ್ತೆ.
*ಪುದೀನ ಜ್ಯೂಸ್ ಗೆ ಅರ್ಧ ಚಮಚ ಶುಂಠಿ, ಸ್ವಲ್ಪ ನಿಂಬೆರಸ ಮತ್ತುಜೇನು ಸೇರಿಸಿ 3 ದಿನ ಕುಡಿದರೆ, ವಾಂತಿ ಪೂರ್ತಿ ವಾಸಿ ಆಗುತ್ತೆ.
ನೋಡಿದರಲ್ಲ ಮನೆ ಮುಂದೆ ಸಿಗೋ ಪುದೀನಾ ಸೊಪ್ಪಿಂದ ಎಷ್ಟೆಲ್ಲಾ ಉಪಯೋಗ ಇದೆ ಅಂತಾ? ನೀವಿದನ್ನ ಹೆಂಗೆ ಉಪಯೋಗಿಸ್ತೀರ ಅಂತ ಯೋಚ್ನೆ ಮಾಡಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬರಿ ಒಂದು ಮೀನಿಗೆ ಗ್ರಾಹಕರೊಬ್ಬರು 5 ಲಕ್ಷ ರೂ. ನೀಡಲು ಮುಂದಾದ್ರೂ ಮಾಲೀಕ ಮಾತ್ರ ಮಾರಾಟ ಮಾಡಲ್ಲ ಎಂದು ಹೇಳಿದ ಯಾಕೆ ಗೊತ್ತಾ,.! ಈ ವಿಶೇಷ ಮೀನಿನ ಮೇಲೆ ಉರ್ದುವಿನಲ್ಲಿ ‘ಅಲ್ಲಾಹ’ ಎಂದು ಬರೆಯಲಾಗಿದ್ದು, ಕೆಲವರು ಜಲಚರಕ್ಕಾಗಿ ಲಕ್ಷಾಂತರ ರೂಪಾಯಿ ನೀಡಲು ಮುಂದಾಗುತ್ತಿದ್ದಾರೆ. ಇಷ್ಟಕ್ಕೂ ಆ ಮೀನಿನ ವಿಶೇಷತೆಯಾದರೂ ಏನು ಗೊತ್ತಾ ಇಲ್ಲಿದೆ ನೋಡಿ ಅಚ್ಚರಿ ಮುಡಿಸುವ ವಿಷಯ. ಉತ್ತರ ಪ್ರದೇಶದ ಶಾಮಲಿ ಜಿಲ್ಲೆಯ ಕೈರಾನಾದಲ್ಲಿರುವ ಈ ವಿಶೇಷ ಮೀನು ನೋಡಲು ಜನರು ದೂರದಿಂದ ಆಗಮಿಸುತ್ತಿದ್ದಾರೆ. ಶಬಾಬ್…
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದು, ಅವರ ಬೆಂಬಲಕ್ಕೆ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ನಿಂತಿದ್ದಾರೆ. ಅದರಲ್ಲೂ ದರ್ಶನ್ ಹಾಗೂ ಯಶ್ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದು, ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಗೆಲುವಿಗೆ ಇದು ಅಡ್ಡಗಾಲಾಗಬಹುದೆಂಬ ಆತಂಕ…
ಕರ್ನಾಟಕ ವಿಧಾನಸಭೆ ಚುನಾವಣೆ 2018ರ, ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು,72 ಅಭ್ಯರ್ಥಿಗಳ ಮೊದಲ ಪಟ್ಟಿ ಬಹಿರಂಗಗೊಂಡಿದೆ. ಇಲ್ಲಿದೆ ಬಿಜೆಪಿಯ 72 ಅಭ್ಯರ್ಥಿಗಳ ಮೊದಲ ಪಟ್ಟಿ… ರಾಯಚೂರು ಗ್ರಾಮಾಂತರ– ತಿಪ್ಪರಾಜು, ರಾಯಚೂರು– ಡಾ.ಶಿವರಾಜ ಪಾಟೀಲ. ದೇವದುರ್ಗ– ಶಿವನಗೌಡ ನಾಯಕ್, ಲಿಂಗಸುಗೂರು– ಮಾನಪ್ಪ ವಜ್ಜಲ್, ಕುಷ್ಠಗಿ– ದೊಡ್ಡನಗೌಡ ಪಾಟೀಲ, ಧಾರವಾಡ– ಅಮೃತ್ ದೇಸಾಯಿ, ನಿಪ್ಪಾಣಿ– ಶಶಿಕಲಾ ಜೊಲ್ಲೆ, ಅಥಣಿ– ಲಕ್ಷ್ಮಣ ಸವದಿ, ಕಾಗವಾಡ- ಭರಮಗೌಡ ಕಾಗೆ, ಕುಡಚಿ- ಪಿ.ರಾಜೀವ್, ರಾಯಭಾಗ- ದುರ್ಯೋಧನ ಐಹೊಳೆ, ಹುಕ್ಕೇರಿ- ಉಮೇಶ್ ಕತ್ತಿ, ಅರಬಾವಿ- ಬಾಲಚಂದ್ರ ಜಾರಕಿಹೊಳಿ,…
ಮ್ಯಾನ್ಮಾರ್ನಲ್ಲಿ ಹೆಚ್ಚುತ್ತಿರುವ ರೊಹಿಂಗ್ಯಾ ವಿರೋಧಿ ಹಿಂಸಾಚಾರದಿಂದ ಕಂಗೆಟ್ಟಿರುವ ರೊಹಿಂಗ್ಯಾ ಮುಸ್ಲಿಮರು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಸಮುದ್ರ ದಾಟಿ ಬಾಂಗ್ಲಾದೇಶಕ್ಕೆ ಬರುತ್ತಿದ್ದಾರೆ.
ಮತ ಹಾಕದ ಸಿಲಿಕಾನ್ ಸಿಟಿ ಮಂದಿ ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರು. ಅವರು ಬದುಕಿರುವ ಶವಗಳು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ 53.47%…
ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ವಿಧಿವಶರಾಗಿ ಈಗಾಗಲೇ ಹತ್ತು ದಿನಗಳು ಕಳೆದಿದ್ದು, ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಮಾತ್ರ ಈ ವಿಷಯ ಶನಿವಾರ ತಿಳಿದಿದೆ.ಈ ವೇಳೆ ಸೋನು ಪಾಟೀಲ್ ಅಂಬರೀಶ್ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ಹೊರ ಜಗತ್ತಿನ ಯಾವುದೇ ಸಂಪರ್ಕವಿರದ ಕಾರಣ, ನವೆಂಬರ್ 24ರ ಶನಿವಾರದಂದು ಅಂಬರೀಶ್ ಅವರು ಇಹಲೋಕ ತ್ಯಜಿಸಿದ್ದರೂ ವಾರದ ಬಳಿಕ ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿದೆ. ಭಾನುವಾರದ ಸಂಚಿಕೆಯಲ್ಲಿ…