ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಗೆ ಗೊತ್ತಾ, ನಮ್ಮಗಳ ಮನೆ ಪಕ್ಕದಲ್ಲಿರುವ ಗ್ರಾಮ ಪಂಚಾಯತಿ ಕೇಂದ್ರದಲ್ಲಿ, ನಮ್ಮ ಗ್ರಾಮೀಣ ಭಾಗದ ಜನರಿಗೆ ಏನೆಲ್ಲಾ ಸವಲತ್ತುಗಳು ಸಿಗುತ್ತವೆ ಅಂತಾ?
ನಮ್ಮ ಗ್ರಾಮೀಣ ಜನರಿಗಾಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ ಸುಮಾರು 100 ಕ್ಕಿಂತ ಹೆಚ್ಚು ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ.
ನಮ್ಮ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಏನೆಲ್ಲಾ ಸೌಲಭ್ಯ ಸಿಗುತ್ತೆ ಅನ್ನೋದರ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ. ಮುಂದೆ ಓದಿ…..
ಜನರು ತಮಗೆ ಬೇಕಿರುವ ಅಗತ್ಯ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿ, ನಾಡಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವುಗಳು ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲೇ ದೊರೆಯುವಂತೆ ಮಾಡಿರುವ ಸೇವೆಗೆ ‘ಪಂಚಾಯಿ- 100 ಬಾಪೂಜಿ ಸೇವಾ ಕೇಂದ್ರ’ ಎಂದು ಹೆಸರಿಡಲಾಗಿದೆ. ಈ ಸೇವೆ ಈಗಾಗಲೇ ಜುಲೈ 1 ರಿಂದ 2 ಸಾವಿರ ಗ್ರಾ.ಪಂ.ಗಳಲ್ಲಿ ಸೇವೆಗೆ ಚಾಲನೆ ನೀಡಲಾಗಿದೆ. ಒಟ್ಟು 100 ಸೇವೆಗಳು ಲಭ್ಯವಾಗಲಿವೆ.
ಸಾರ್ವಜನಿಕ ಕೋರಿಕೆ ಸ್ವೀಕರಿಸುವ ಸೇವಾ ಕೇಂದ್ರಗಳು ಆ ಕೋರಿಕೆಯನ್ನು ನಾಡಕಚೇರಿಯು ದೃಢೀಕರಿಸಿದ ದಾಖಲೆಯನ್ನು ಪಮಚತಂತ್ರ ತಂತ್ರಾಂಶಕ್ಕೆ ವರ್ಗಾವಣೆ ಮಾಡಲಿದ್ದು ಬಳಿಕ ಆ ದಾಖಲೆಗಲನ್ನು ಅಪೇಕ್ಷಿತರಿಗೆ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಕೊಡ ಮಾಡಲಾಗುವುದು.
ಜಾತಿ. ಆದಾಯ, ವಾಸಸ್ಥಳ, ಗೇಣಿ ರಹಿತ, ಜೀವಂತ, ಬೇಸಾಯ ಕುಟುಂಬ ಸದಸ್ಯರ ದೃಢೀಕರಣ, ಜಮೀನು ಇಲ್ಲದಿರುವಿಕೆ, ನಿರುದ್ಯೋಗಿ, ಕೃಷಿ ಕಾರ್ಮಿಕ, ಭೂಹಿಡುವಳಿ ಪ್ರಮಾಣಪತ್ರ, ವಸತಿ, ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ, ವಂಶವೃಕ್ಷ, ಬೆಳೆ, ಅಂಗವೈಕಲ್ಯ, ವಿಧವಾ ವೇತನ, ಸಧ್ಯಾ ಸುರಕ್ಷಾ, ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ, ವೃದ್ಧಪ್ಯ ವೇತನ, ಮೈತ್ರಿ, ಮನಸ್ವಿನಿ ಸೇರಿ ಒಟ್ಟು 40 ಸೇವೆ ಮತ್ತು ಸೌಲಭ್ಯಗಳಿಗೆ ಪ್ರಮಾಣಪತ್ರಗಳು ಈ ಕೇಂದ್ರದಲ್ಲಿ ಸಿಗಲಿವೆ.
ಕಟ್ಟಡ ನಿರ್ಮಾಣ ಪರವಾನಗಿ, ನೀರಿನ ಸಂಪರ್ಕಕ್ಕೆ ಅರ್ಜಿ, ಎಸ್ಕಾಂಗೆ ನಿರಾಕ್ಷೇಪಣೆ ಪತ್ರ, ವಸತಿ ಯೋಜನೆಗೆ ಅರ್ಜಿ, ಉಚಿತ ನಿವೇಶನ ಪಡೆಯಲು ಅರ್ಜಿ, ಆಸ್ತಿ ತೆರಿಗೆ ಪಾವತಿ, ಭೂಪರಿವರ್ತನೆ ಕೋರಿಕೆ ಅರ್ಜಿ, ನೀರಿನ ಶುಲ್ಕ ಪಾವತಿ, ಟ್ರೇಡ್ ಲೈಸನ್ಸ್ ನವೀಕರಣ, ಜಾಹಿರಾತು ಪರವನಾಗಿ, ವಿದ್ಯಾರ್ಥಿಗಳಿಗೆ ದೂರ ಪ್ರಮಾಣಪತ್ರ, ಬೀದಿದೀಪ ನಿರ್ವಹಣೆ ಸೇರಿ ಒಟ್ಟು 40 ಗ್ರಾಮೀಣವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇವೆಗಳು ಈ ಕೇಂದ್ರಗಳಲ್ಲಿ ಸಿಗಲಿವೆ.
ಜೀವ ವಿಮೆ, ವಾಹನ ವಿಮೆ, ವಿದ್ಯುತ್ ಬಿಲ್, ಮೊಬೈಲ್ ಮತ್ತು ಡಿಟಿಎಚ್ ರಿಚಾರ್ಜ್, ಬಸ್ – ರೈಲು- ವಿಮಾನ ಬುಕ್ಕಿಂಗ್, ಪಡಿತರ ಕಾರ್ಡ್ ಅರ್ಜಿ, ಆಧಾರ್ ಕಾರ್ಡ್ ತಿದ್ದುಪಡಿ, ಹಣ ವರ್ಗಾವನಣೆ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸೇರಿ 17 ಸೇವೆಗಳೂ ಇಲ್ಲಿ ಸಿಗಲಿವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಸಂಸ್ಕೃತಿಯಲ್ಲಿ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವಂತಿಲ್ಲ. ಇದಕ್ಕೆ ಸಾಕಷ್ಟು ಬಾರಿ ವಿರೋಧವೂ ವ್ಯಕ್ತವಾಗುತ್ತದೆ. ತಲೆ-ಬುಡವಿಲ್ಲದೆ ಶಾಸ್ತ್ರಗಳನ್ನು ಮಾಡ್ತಾರೆಂದು ಕೆಲವರು ಆರೋಪ ಮಾಡ್ತಾರೆ. ಆದ್ರೆ ಹಿಂದೂ ಸಂಸ್ಕೃತಿಯಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನೂ ಹೇಳಲಾಗಿದೆ. ಮಹಿಳೆಯರು ಮಾಡಬಾರದ ಕೆಲಸಗಳಲ್ಲಿ ತೆಂಗಿನಕಾಯಿ ಒಡೆಯುವುದು ಒಂದು. ಹೌದು, ಹಿಂದೂ ಸಂಸ್ಕೃತಿ ಪ್ರಕಾರ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದು. ಹಿಂದೂ ಧರ್ಮದ ಪ್ರಕಾರ ತೆಂಗಿನ ಕಾಯಿ ಪವಿತ್ರವೆಂದು ಪರಿಗಣಿಸಲಾಗಿದೆ. ಶುಭ ಸಮಾರಂಭಗಳಲ್ಲಿ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಯಾವುದೇ ಹೊಸ ಕೆಲಸ ಆರಂಭಿಸುವಾಗ ತೆಂಗಿನ…
ಮಹಾಭಾರತದ ಒಂದು ಯುದ್ದದ ಸನ್ನಿವೇಶದಲ್ಲಿ ಅರ್ಜುನನು, ನಾನು ಯುದ್ಧ ಮಾಡೋದಿಲ್ಲ ಎಂದಾಗ ಭಗವಾನ್ ಶ್ರೀ ಕೃಷ್ಣನು, ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸುತ್ತಾನೆ.
ದೆವ್ವ -ಭೂತಗಳ ಇರುವಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ದೆವ್ವಗಳ ಬಗ್ಗೆ ಕೆಲವರು ನಂಬಿದ್ರೆ, ಇನ್ನೂ ಕೆಲವರು ನಂಬೋದಿಲ್ಲ.ಆದ್ರೆ ನಾವು ಆಗಾಗ ದೆವ್ವಗಳ ಇರುವಿಕೆ ಬಗ್ಗೆ ಕೇಳುತ್ತಲೇ ಇರುತ್ತೇವೆ.ಆದ್ರೆ ಈ ಗ್ರಾಮದಲ್ಲಿ ಹೆಣ್ಣು ದೆವ್ವ ಇದೆ ಎಂಬ ಕಾರಣಕ್ಕೆ ಇಡೀ ಊರಿನ ಜನ ಭಯಗೊಂಡು ಊರನ್ನೇ ಬಿಟ್ಟಿರುವ ಘಟನೆ ನಡೆದಿದೆ.
ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಕರೆಯಲಾಗಿದ್ದು, ಈ ಸಂದರ್ಭದಲ್ಲಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲಾಗುತ್ತದೆ ಎನ್ನಲಾಗಿದೆ. ಮಹಾರಾಷ್ಟ್ರ ವಿಧಾನಸಭಾ ಅವಧಿ ಮುಂದಿನ ತಿಂಗಳು ಅಂತ್ಯವಾಗಲಿದ್ದು, ಹರಿಯಾಣ ವಿಧಾನಸಭಾ ಅವಧಿ ನವಂಬರ್ 2 ಕ್ಕೆ ಕೊನೆಗೊಳ್ಳಲಿದೆ. ಇನ್ನು ಜಾರ್ಖಂಡ್ ವಿಧಾನಸಭಾ ಅವಧಿ ಡಿಸೆಂಬರ್ 27ಕ್ಕೆ ಅಂತ್ಯವಾಗಲಿದ್ದು, ದೀಪಾವಳಿಗೂ ಮುನ್ನ…
ಹಾಸನಾಂಬೆಯ ದೇವಾಲಯ ಬಾಗಿಲು ಬುಧವಾರ ಮುಚ್ಚಲಾಗಿದ್ದು, 13 ದಿನಗಳ ದರ್ಶನ ನಂತರ ನಿನ್ನೆ ಮಧ್ಯಾಹ್ನ 1.20 ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಇಂದು ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ಹಾಸನಾಂಬೆಗೆ ಭಕ್ತರಿಂದ ವಿಶಿಷ್ಟ ಮನವಿ ಪತ್ರಗಳು ಬಂದಿದ್ದು, ಹಲವು ಬೇಡಿಕೆಗಳನ್ನು ಭಕ್ತರು ಪತ್ರದಲ್ಲಿ ನಮೂದಿಸಿದ್ದಾರೆ, ಹಳೇ ನೋಟುಗಳು ಸಿಕ್ಕಿದೆ. ಅದರಲ್ಲೂ ಬ್ಯಾನ್ ಆಗಿರುವ ಹಳೆಯ ಸಾವಿರ ರೂಪಾಯಿ ಮುಖಬೆಲೆಯುಳ್ಳ ನೋಟುಗಳು ಜಾಸ್ತಿ ಪತ್ತೆಯಾಗಿದೆ. ಅಲ್ಲದೇ, ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಬರೆದು ವೆರೈಟಿ ವೆರೈಟಿ ಪತ್ರಗಳು, ಲವ್…
ಸಾಲಮನ್ನಾ ಸೇರಿದಂತೆ ರೈತರಿಗೆ ಹಲವು ಅನುಕೂಲ ಕಲ್ಪಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಕೊಡುಗೆ ನೀಡಿದ್ದಾರೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ರೈತರು ಎದುರಿಸುತ್ತಿರುವ ತೊಂದರೆಯನ್ನು ನಿವಾರಿಸುವ ಉದ್ದೇಶದಿಂದ ನೀರಾವರಿ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ತಿಳಿಸಲಾಗಿದೆ. ಉಚಿತವಾಗಿ ನೀಡಲಾಗುತ್ತಿರುವ ನೀರಾವರಿ ಪಂಪ್ ಸೆಟ್, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಗ್ರಾಹಕರಿಗೆ 9,250 ಕೋಟಿ…