ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಂಬಾ ಸರ್ತಿ ಜೀವನದಲ್ಲಿ ನಮ್ಮನ್ನ ನಾವೇ ಕಡೆಗಾಣಿಸ್ಕೊತೀವಿ. ನಮ್ಮ ಮನೆಯೋರು ಕೂಡ ನಮ್ಮನ್ನ ಎಷ್ಟೋ ಸರ್ತಿ ನೀನು ಸೋಮಾರಿ, ಒಂದು ಕೆಲಸ ಕೂಡ ಗಮನ ಇಟ್ಟು ಮಾಡಲ್ಲಾ ಅಂತೆಲ್ಲಾ ಬೈತಿರ್ತರೆ.
ಆದ್ರೆ ತಮಾಷೆ ಏನಪ್ಪಾ ಅಂದ್ರೆ, ಇಲ್ಲಿರುವ ಕೆಲವು ಗುಣಗಳು ನಮ್ಮಲ್ಲಿದ್ರೆ, ವಿಜ್ಞಾನದ ಪ್ರಕಾರ ನಾವು ನಮಗಿಂತ, ನಾವಂದುಕೊಂಡಿರೋದಕ್ಕಿಂತ ಜಾಸ್ತಿ ಬುದ್ಧಿವಂತ್ರಂತೆ. ಅದು ಹೇಗೆ ಅಂತಿರಾ…..ಮುಂದೆ ಓದಿ
ನಿಮ್ಮಲ್ಲಿ ನೀವೂ ನಕ್ಕು, ನಿಮ್ಮ ಜೊತೆ ಇರೋರನ್ನೂ ನಗಿಸೊ ಸ್ವಭಾವ ಇದ್ದರೆ, ನಿಮ್ಮ ಮೆದುಳು ತುಂಬ ಚನ್ನಾಗಿ ಕೆಲಸ ಮಾಡುತ್ತೆ, ಚುರುಕಾಗಿದೆ ಅಂತ ಅರ್ಥ. 1990 ರಲ್ಲಿ ಮೈಕಲ್ ಎ. ಜಾನ್ ಹೇಳೊ ಪ್ರಕಾರ ನೀವು ಹಾಸ್ಯಭರಿತರಾಗಿದ್ರೆ, ನಿಮ್ಮಲ್ಲಿ ಪ್ರಾಬ್ಲಮ್ ಸಾಲ್ವಿಂಗ್ ಶಕ್ತಿ ಹೆಚ್ಚಂತೆ.
ನಿಮಗೆ ಎಲ್ಲರೂ ಟೆನ್ಷನ್ ಒಳ್ಳೇದಲ್ಲ ಅಂತ ಸುಮಾರ್ ಸರ್ತಿ ಹೇಳಿರ್ತಾರೆ. ಆದರೆ, ಸ್ಟ್ರೆಸ್ನ ಸರಿಯಾಗಿ ನಿಭಾಯಿಸಿದ್ರೆ ಅದರಿಂದ ತುಂಬ ಉಪಯೋಗ ಇದೆಯಂತೆ ಕಣ್ರಿ. ಈ ಸ್ಟ್ರೆಸ್ಸ್ ಲೆವಲ್ ಹಿತ – ಮಿತವಾಗಿದ್ರೆ, ನಮ್ಮ ಎಷ್ಟೋ ದಿನನಿತ್ಯದ ಕೆಲಸಗಳಿಗೆ ಸಹಾಯ ಆಗುತ್ತೆ. ಹಿಂಗೆ ಒಂದು ಸರ್ತಿ, ಇಸ್ರೇಲ್ ಅಲ್ಲಿ ಒಂದ್ಸಲ್ಪ ಜನಕ್ಕೆ ಕಂಪ್ಯೂಟರ್ ಲ್ಯಾಬಲ್ಲಿ ಏನೋ ನೋಡಿ ಅಂತ ಸುಳ್ಳು ಕಂಪ್ಯೂಟರ್ ವೈರಸ್ ಹಬ್ಬಿಸಿಬಿಟ್ರಂತೆ … ಅಲ್ಲಿದವ್ರು ಪಾಪ ಇದನ್ನ ತಾವೇ ಮಾಡಿದ್ದು ಅಂತ ಕಕ್ಕಾಬಿಕ್ಕಿ ಆಗಿ ಅದನ್ನ ಸರಿ ಮಾಡೋ ರೀತಿ ಯೋಚ್ಸಿದ್ರಂತೆ . ಆಗ ಸಂಶೋಧಕರು ಕಂಡು ಹಿಡಿದಿದ್ದೇನಪ್ಪಾ ಅಂದ್ರೆ, ಯಾರು ಟೆನ್ಷನ್ ಮಾಡ್ಕೊಂಡಿದ್ರೋ, ಅವರೇ ಚನ್ನಾಗಿ ಕೆಲಸ ಮುಗಿಸೋದು ಅಂತ. ವಿಚಿತ್ರ ಅಲ್ವಾ?
ನೀವು, ಸ್ಕೂಲು- ಕಾಲೇಜಲ್ಲಿ ನಾನು ಯಾವಾಗ್ಲೂ ಕನಸು ಕಾಣ್ತಾ ಲಾಸ್ಟ್ ಬೆಂಚಲ್ಲೇ ಉಳ್ಕೊಂಡ್ಬಿಟ್ಟೆ… ನನ್ನ ಲೈಫ್ ಏನಾಗತ್ತೋ ಅಂತ ಚಿಂತೆ ಮಾಡಿದ್ರೆ, ಇಲ್ಲಿದೆ ನಿಮ್ಗೊಂದು ಒಳ್ಳೆ ಸುದ್ದಿ. ವಿಜ್ಞಾನಿಗಳ ಪ್ರಕಾರ, ಒಂದು ಕೆಲಸ ಮಾಡೋವಾಗ ನಿಮ್ಮ ಗಮನ ಆ ಕಡೆ ಈ ಕಡೆ ಹೋದ್ರೆ, ಒಂದೇ ಸಲಕ್ಕೆ ನಿಮಗೆ ಒಂದಕ್ಕಿಂತ ಹೆಚ್ಚು ಕೆಲಸ ಮಾಡೊ ಶಕ್ತಿ ಇದೆ ಅಂತಂತೆ. ಹಾಗೇ, ಹಗಲುಗನಸು ಕಾಣೋರಿಗೆ, ನೆನಪಿನ ಶಕ್ತಿ ಜಾಸ್ತಿ .
ನಿಮ್ಮ ಕೈಲಿ ಒಂದು ಪುಸ್ತಕ ಇದ್ದುಬಿಟ್ರೆ, ಲೋಕಾನೇ ಮರೆತುಬಿಡ್ತೀರ…ಇದರ ಜೊತೆಗೆ ಸ್ವಲ್ಪ ಕಾಫಿ ಸಿಕ್ಕಿಬಿಟ್ರಂತೂ, ಸ್ವರ್ಗಕ್ಕೆ ಮೂರೇ ಮೆಟ್ಟಿಲು. ಮತ್ತೇನೂ ಬೇಡ, ಯಾರೂ ಬೇಡ ಅಲ್ವಾ?ನೀವು ನಿಮ್ಮ ಜೊತೇನೆ ಜಾಸ್ತಿ ಸಮಯ ಕಳೆಯಕ್ಕೆ ಇಷ್ಟ ಪಡ್ತೀರ. 90 % ಅಂತರ್ಮುಖಿಗಳಿಗೆ ಓದೋ ಹವ್ಯಾಸ ಉಂಟಂತೆ ಹಾಗೇ,ಯಾರು ಚಿಕ್ಕ ವಯಸ್ಸಿಂದ ಓದೋ ಹವ್ಯಾಸ ಬೆಳೆಸಿಕೊಂಡಿರ್ತಾರೋ ಅಂಥಾವರು, ಮುಂದೆ ಬುದ್ದಿವಂತರಾಗಿರ್ತಾರೆ ಮತ್ತು ತಮ್ಮನ್ನ ಚನ್ನಾಗಿ ವ್ಯಕ್ತಪಡಿಸಿಕೊಳ್ತಾರೆ.
ಎಡಚರಿಗೆ ವಿಭಿನ್ನವಾದ ಯೋಚನಾಶಕ್ತಿ ಇರುತ್ತಂತೆ. 90 ರ ದಶಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ,ಎಡಗೈ ಉಪಯೋಗಿಸೋರ ಆಲೋಚನೆಗಳು ಡಿಫರೆಂಟಾಗಿ ಇರೋದ್ರಿಂದ ಅವರು ಎರಡು ಸಂಬಂಧ ಇಲ್ಲದಿರೊ ವಸ್ತುಗಳಲ್ಲೂ ಲಿಂಕ್ ಹುಡುಕ್ತಾರಂತೆ. ಇವರಲ್ಲಿ ಕ್ರಿಯಾಶೀಲತೆ ಜಾಸ್ತಿ ಮತ್ತು ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಬೇಗ ಒಂದು ಉಪಾಯ ಕಂಡು ಹಿಡೀತಾರೆ.
… ಹಾಗಾದ್ರೆ ಈಗ ಹೇಳಿ ನೀವು ಬುದ್ದಿವಂತರಾ, ಅಲ್ವಾ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾಳೆ. ರಾಖಿ ಸಾವಂತ್ ಫೋಟೋ ಒಂದು ವೈರಲ್ ಆಗಿದೆ. ಅದ್ರಲ್ಲಿ ರಾಖಿ ಸಾವಂತ್, ಪಾಕಿಸ್ತಾನದ ಧ್ವಜ ಹಿಡಿದು ನಿಂತಿದ್ದಾಳೆ. ಸುಂದರ ಸ್ಥಳದಲ್ಲಿ ಪಾಕಿಸ್ತಾನದ ಧ್ವಜ ಹಿಡಿದು ನಿಂತು ಫೋಟೋಕ್ಕೆ ಫೋಸ್ ನೀಡಿದ್ದಾಳೆ. ರಾಖಿ ಸಾವಂತ್ ಫೋಟೋ ನೋಡ್ತಿದ್ದಂತೆ ಕೋಪಗೊಂಡ ಅಭಿಮಾನಿಗಳು ಶೀರ್ಷಿಕೆ ನೋಡಿದ ಮೇಲೆ ತಣ್ಣಗಾಗಿದ್ದಾರೆ. ನನಗೆ ನನ್ನ ದೇಶ ಭಾರತ ತುಂಬಾ ಇಷ್ಟ. ಆದ್ರೆ ಇದು ಬರ್ತಿರುವ ನನ್ನ ಮುಂದಿನ ಚಿತ್ರದ ಒಂದು ದೃಶ್ಯವೆಂದು…
ಗುಜರಾತ್ ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಪ್ರಸಂಗ ನಡೆದಿದೆ.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ 22, 1947 ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ 15, 1947 ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ.
ಆಹಾರವಿಲ್ಲದೆ ಕೆಲ ಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲು ಸಾಧ್ಯವಿಲ್ಲ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದ್ರೆ ಬೆಳಗ್ಗೆ ತಣ್ಣನೆಯ ನೀರು ಕುಡಿಯೋ ಬದಲು ಬಿಸಿ ನೀರನ್ನು ಕುಡಿಯುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದು. * ಬೆಳಗಿನ ಸಮಯ ಬಿಸಿ ನೀರನ್ನು ಕುಡಿಯುವುದರಿಂದ ದೇಹದ ಹೆಚ್ಚುವರಿ ತೂಕ ಕಡಿಮೆಯಾಗುತ್ತದೆ. * ದೇಹದಲ್ಲಿ ಉಷ್ಣಾಂಶವು ಹೆಚ್ಚಾಗಿ ವಿಷಕಾರಿ ಅಂಶಗಳನ್ನು ಹೊರ ಹಾಕಲು ಬಿಸಿ ನೀರು ಸಹಾಯ ಮಾಡುತ್ತದೆ. * ರಕ್ತವನ್ನು ಶುದ್ಧೀಕರಿಸಲು ಬಿಸಿ ನೀರಿನ ಸೇವನೆ ಅತ್ಯುತ್ತಮವಾಗಿದೆ….
ಇತ್ತೀಚಿಗೆ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲು ಅನುಭವಿಸಿತ್ತು.ಆದರೂ ರನ್ನರ್ ಆಪ್ ಸ್ಥಾನವನ್ನು ಉಳಿಸಿಕೊಂಡಿತ್ತು.
ಈಗಂತೂ ಈ ಜಗತ್ತಿನಲ್ಲಿ ಒಬ್ಬರೊನ್ನೊಬ್ಬರು ನಂಬುವುದು ತುಂಬಾ ಕಷ್ಟ. ಯಾರ ಮೇಲೂ ಯಾರಿಗೂ ನಂಬಿಕೆ ಅನ್ನುವುದೇ ಇಲ್ಲ.ಇದಕ್ಕೆ ಕಾರಣಗಳು ಬೇಕಾದಷ್ಟು ಇವೆ. ನಮ್ಮಲ್ಲಿರುವ ಅಥವಾ ಬೇರೆಯವರಲ್ಲಿರುವ ಕೆಲವೊಂದು ನ್ಯೂನತೆಗಳು ಬೇರೆಯವರನ್ನು ನಂಬದಂತೆ ಮಾಡಿರುತ್ತವೆ.