ಹಣ ಕಾಸು

ನಿಮ್ಗೆ ಗೊತ್ತಾ, ಎಟಿಎಂ ಮೂಲಕ ಈ 15 ಕೆಲಸಗಳನ್ನು ನೀವು ಸುಲಭವಾಗಿ ಮಾಡಬಹುದು!

877

ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ಹಣ ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ಮಾಡಬಹುದಾಗಿದೆ. ಎಟಿಎಂ ಯಂತ್ರಗಳ ಮೂಲಕ ಕೈಗೊಳ್ಳಬಹುದಾದ 15 ಪ್ರಮುಖ ವ್ಯವಹಾರಗಳ ಪಟ್ಟಿ ಇಲ್ಲಿ ಮಾಡಲಾಗಿದೆ.

1. ನಗದು ವಿತ್ ಡ್ರಾ (ಕ್ಯಾಶ್ ವಿಥ್ ಡ್ರಾ)

ಎಟಿಎಂ ಕೇಂದ್ರಗಳಲ್ಲಿ ಹಣ ವಿತ್ ಡ್ರಾ ಮಾಡಿಕೊಳ್ಳುವ ಸೇವೆ ಜನಜನಿತವಾಗಿದೆ. ಮುಖ್ಯವಾಗಿ ಪ್ರತಿಯೊಬ್ಬರೂ ನಗದು ವಿತ್ ಡ್ರಾ ವ್ಯವಹಾರ ಮಾಡಿರುತ್ತಾರೆ. ನೋಟು ನಿಷೇಧದ ನಂತರ ಒಂದು ದಿನಕ್ಕೆ ಅಥವಾ ಒಂದು ವಾರಕ್ಕೆ 50 ಸಾವಿರ ನಗದು ವಿತ್ ಡ್ರಾ ಮಾಡಬಹುದಾಗಿದೆ.

2. ಬ್ಯಾಲೆನ್ಸ್ ಪರಿಶೀಲನೆ (ಬ್ಯಾಲೆನ್ಸ್ ಚೆಕ್)

ಗ್ರಾಹಕರು ತಮ್ಮ ಖಾತೆಯಲ್ಲಿನ ಮೊತ್ತವನ್ನು, ಪ್ರಸ್ತುತ ಲಭ್ಯವಿರುವ ಒಟ್ಟು ಮೊತ್ತವನ್ನು ಪರಿಶೀಲನೆ ಮಾಡಬಹುದು. ಎಟಿಎಂ ಕಾರ್ಡ್ ಸ್ವೈಪ್ ಮಾಡಿದ ನಂತರ ಪರದೆ ಮೇಲೆ ಬ್ಯಾಲೆನ್ಸ್ ಚೆಕ್ ಆಯ್ಕೆ ಬರುತ್ತದೆ.

3. ಫಂಡ್ ವರ್ಗಾವಣೆ (ಫಂಡ್ ಟ್ರಾನ್ಸ್ಫರ್)

ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಫಂಡ್ಸ್ ವರ್ಗಾವಣೆ ಮಾಡಬಹುದು. ಫಂಡ್ ವರ್ಗಾವಣೆ ಮಾಡುವಾಗ ಕಳಿಸಬೇಕಾಗಿರುವ ವ್ಯಕ್ತಿಯ ಕಾರ್ಡ್ ಮೇಲಿರುವ 16 ಡಿಜಿಟ್ ಸಂಖ್ಯೆಗಳು ಗೊತ್ತಿರಬೇಕಾಗುತ್ತದೆ.

4. ಮಿನಿ ಸ್ಟೇಟ್ಮೆಂಟ್ ತೆಗೆಯಬಹುದು.

ನಿಮ್ಮ ಖಾತೆ ಬಗೆಗಿನ ವ್ಯವಹಾರಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಈ ಮಿನಿ ಸ್ಟೇಟ್ಮೆಂಟ್ ಪಡೆದುಕೊಳ್ಳಬಹುದು. ಈ ಮಿನಿ ಹೇಳಿಕೆಯಲ್ಲಿ ಹಿಂದಿನ ಹತ್ತು ವ್ಯವಹಾರಗಳ ಮಾಹಿತಿ ನೀವು ನೋಡಬಹುದು.

5. ನಿಮ್ಮ ಸಿಕ್ರೆಟ್ ಪಿನ್ ಬದಲಾವಣೆ

ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರು ತಮ್ಮ ಡೆಬಿಟ್ ಕಾರ್ಡಿನ ನಾಲ್ಕು ಅಂಕೆಗಳ ಪಿನ್ ನಂಬರ್ ಬದಲಾವಣೆ ಮಾಡಬಹುದು. ಇದು ಎಲ್ಲ ಎಟಿಎಂ ಕೇಂದ್ರಗಳಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ನಿಯಮಿತವಾಗಿ ಪಿನ್ ನಂಬರ್ ಬದಲಾವಣೆ ಮಾಡುತ್ತಿರಬಹುದು.

6. ಫಿಕ್ಸೆಡ್ ಡಿಪೋಸಿಟ್

ಬ್ಯಾಂಕ್ ಗ್ರಾಹಕರು ಎಟಿಎಂ ಬಳಸಿ ಸ್ಥಿರ ಠೇವಣಿ ಖಾತೆಯನ್ನು ತೆರೆಯಬಹುದು. ಖಾತೆಯ ಅವಧಿಯನ್ನು ಆಯ್ಕೆ ಮಾಡುವ ಅವಕಾಶ ಇದ್ದು, ಕನಿಷ್ಟ ರೂ. 5000 ರಿಂದ ಗರಿಷ್ಠ ರೂ. 49000 ವ್ಯಾಪ್ತಿಯಲ್ಲಿ ಮೊತ್ತ ಡಿಪಾಸಿಟ್ ಮಾಡಬಹುದು.

7. ಇನ್ಸುರೆನ್ಸೆ  ಪ್ರೀಮಿಯಂ ಪೇಮೆಂಟ್

ಎಟಿಎಂ ಮೂಲಕ ಐಸಿಐಸಿಐ, ಎಕ್ಸಿಸ್ ಬ್ಯಾಂಕುಗಳು ಮ್ಯೂಚುವಲ್ ಫಂಡ್ ಮತ್ತು ಎಲ್ಐಸಿ ಪ್ರೀಮಿಯಂ ಪಾವತಿಗೆ ಸೌಲಭ್ಯ ಕಲ್ಪಿಸಿದೆ. ಎಟಿಎಂ ಮೂಲಕ ಪ್ರೀಮಿಯಂ ಪಾವತಿ ಸಂದರ್ಭದಲ್ಲಿ ಪಾಲಿಸಿ ನಂಬರ್ ಮತ್ತು ಖಾತೆ ವಿವರಗಳನ್ನು ಹೊಂದಿರಬೇಕು.

8. ಆದಾಯ ತೆರಿಗೆ ಪಾವತಿಸಿ

ನೇರವಾಗಿ ಆದಾಯ ತೆರಿಗೆ ಪಾವತಿಸುವುದಕ್ಕಾಗಿ ನೋಂದಣಿ ಮಾಡಿಸಬೇಕಾಗುತ್ತದೆ. ತೆರಿಗೆ ಪಾವತಿಯ ಮೊತ್ತ ನಿಮ್ಮ ಖಾತೆಯಿಂದ ಕಡಿತವಾಗುತ್ತದೆ. Special Information Number(SIN) ಆಯ್ಕೆ ಮೂಲಕ ನಿಮಗೆ ರಸೀತಿ ಲಭ್ಯವಾಗುತ್ತದೆ. ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವಾಗ SIN ಸಂಖ್ಯೆ ಒದಗಿಸಬೇಕಾಗುತ್ತದೆ.

9. ಟ್ರಸ್ಟ್ಗಳಿಗೆ ದೇಣಿಗೆ ಮಾಡಿ

ಎಟಿಎಂಗಳ ಮೂಲಕ ದೇಣಿಗೆಯನ್ನು ನೀಡಬಹುದು. ನಿಮಗೆ ಇಷ್ಟವಾದ NGO ಅಥವಾ ದೇವಸ್ಥಾನದ ಟ್ರಸ್ಟ್ ಗಳಿಗೆ ದೇಣಿಗೆ ನೀಡಲು ಎಟಿಎಂ ಯಂತ್ರದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಉದಾ: ರಾಮಕೃಷ್ಣ ಮಿಷನ್, ತಿರುಪತಿ, ಇಸ್ಕಾನ್, ಕಾಶಿ ವಿಶ್ವನಾಥ ಹೀಗೆ ನಿಮಗೆ ಇಷ್ಟವಾದ ಚಾರಿಟಿ ಸಂಸ್ಥೆ/ದೇವಸ್ಥಾನಗಳಿಗೆ ಡೊನೆಟ್ ಮಾಡಬಹುದು. ಒಂದು ಸಲ ದೇಣಿಗೆ ಪಾವತಿಸಿದ ನಂತರ ರಸೀತಿ ಪಡೆಯಬಹುದು. ಇದನ್ನು ತೆರಿಗೆ ಫೈಲಿಂಗ್ ಮಾಡುವ ವೇಳೆ ಬಳಸಬಹುದು

10.ಚೆಕ್ ಬುಕ್ ಗಾಗಿ ಕೋರಿಕೆ

ಗ್ರಾಹಕರು ಚೆಕ್ ಬುಕ್ ಕೋರಿ ಮನವಿಯನ್ನು ನೀಡಲು ಬ್ಯಾಂಕುಗಳಿಗೆ ಹೋಗಬೇಕಾಗಿಲ್ಲ. ಎಟಿಎಂ ಕೇಂದ್ರಗಳಿಗೆ ಭೇಟಿ ಕೊಟ್ಟು ಹೊಸ ಚೆಕ್ ಬುಕ್ ಗಾಗಿ ಮನವಿ ಸಲ್ಲಿಸಬಹುದು. ನಿಮ್ಮ ನೋಂದಾಯಿತ ವಿಳಾಸವನ್ನು ನಮೂದಿಸಲು ಮರೆಯಬೇಡಿ. ಈ ಸೌಲಭ್ಯವನ್ನು ICICI ಮತ್ತು SBI ಬ್ಯಾಂಕುಗಳು ನೀಡಿವೆ.

11. ಖಾತೆ ವರ್ಗಾವಣೆ ಮಾಡಬಹುದು.

ಖಾತೆ ವರ್ಗಾವಣೆಯನ್ನು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಅದೇ ಗ್ರಾಹಕನಿಗೆ ಅಥವಾ ಬೇರೆ ಗ್ರಾಹಕನಿಗೆ ವರ್ಗಾವಣೆ ಮಾಡಬಹುದು.  ಹಲವು ಬ್ಯಾಂಕುಗಳು ಈ ಸೌಲಭ್ಯ ಒದಗಿಸುತ್ತಿವೆ. ಇದಕ್ಕೆ ನಿಮ್ಮ ಡೆಬಿಟ್ ಕಾರ್ಡ್, ಪಿನ್ ನಂಬರ್ ಮತ್ತು ಫಲಾನುಭವಿಯ ಡೆಬಿಟ್ ಕಾರ್ಡ್ ನಂಬರ್ ಬೇಕಾಗುತ್ತದೆ.

12.ಮೊಬೈಲ್ ಬ್ಯಾಂಕಿಂಗ್ ನೋಂದಣಿ

ಗ್ರಾಹಕರು ಮೊಬೈಲ್ ಬ್ಯಾಂಕಿಂಗ್ ಸೇವೆಗಾಗಿ ಎಟಿಎಂ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬಹುದು. ಮೊಬೈಲ್ ಬ್ಯಾಂಕಿಂಗ್ ಅರ್ಜಿಗಳನ್ನು ನೋಂದಣಿ ಮಾಡಿಸಬಹುದು ಇಲ್ಲವೆ ಅಪನೋಂದಣಿ ಮಾಡಬಹುದು.

13. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿ

ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಪಾವತಿ ಮಾಡುವುದೇ ಒಂದು ತಲೆನೋವಿನ ವಿಚಾರ. ಎಟಿಎಂ ಕೇಂದ್ರಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಡೆಬಿಟ್ ಕಾರ್ಡುಗಳ ಮೂಲಕ ಪಾವತಿ ಮಾಡಬಹುದು. ಎಟಿಎಂ ಯಂತ್ರದಲ್ಲಿ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿ ‘Bill Pay’ ಆಪ್ಸನ್ ಆಯ್ಕೆ ಮಾಡಿದ ನಂತರ ಕಾರ್ಡ್ ನಂಬರ್ ನಮೂದಿಸಿ ಬಿಲ್ ಪಾವತಿ ಮಾಡಿ.

14. ರೈಲ್ವೆ  ಟಿಕೆಟ್  ಬುಕಿಂಗ್ ಮಾಡಿ

ಎಟಿಎಂ ಮುಖಾಂತರ ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತಹ ಕೆಲ ಬ್ಯಾಂಕುಗಳು ರೈಲ್ವೆ ಟಿಕೇಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಸಿವೆ.

15. ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್ ಮಾಡಬಹುದು

ಮೊಬೈಲ್ ರಿಚಾರ್ಜ್, ಡಿಟಿಎಚ್ ರೀಚಾರ್ಜ್ ನಂತಹ ಹಲವಾರು ವ್ಯವಹಾರಗಳನ್ನು ಎಟಿಎಂ ಯಂತ್ರದ ಮೂಲಕ ನಿರ್ವಹಿಸಬಹುದು. ಮೊಬೈಲ್ ಚಾರ್ಜ್ ಕಡಿಮೆ ಇದ್ದಾಗ ರಿಟೇಲ್ ಶಾಪ್ ಹುಡುಕುವ ಬದಲು ಎಟಿಎಂ ಕೇಂದ್ರಗಳನ್ನು ರಿಚಾರ್ಜ್ ಮಾಡಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಶಿಕ್ಷಣ

    ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳು ಹಾಗೂ ತಯಾರಿಯ ಬಗ್ಗೆ ಈ ಲೇಖನಿ ಓದಿ…..

    ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು

  • ಸುದ್ದಿ

    ಸೇತುವೆ ಮೇಲಿಂದ ಬಸ್ ಪಲ್ಟಿ…..29 ಪ್ರಯಾಣಿಕರ ಮರಣ…..!

    ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬಸ್ ವೊಂದು ಜಾರಿ ಹದಿನೈದು ಅಡಿ ಆಳದ ದೊಡ್ಡ ಮೋರಿಯಲ್ಲಿ ಬಿದ್ದ ಪರಿಣಾಮ ಇಪ್ಪತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾ ಅರವತ್ತೈದು ಕಿ.ಮೀ. ಉದ್ದ ಎಕ್ಸ್ ಪ್ರೆಸ್ ಹೈವೆ ಉತ್ತರಪ್ರದೇಶದಲ್ಲಿ ನೋಯ್ಡಾ ಹಾಗೂ ಆಗ್ರಾದ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ.ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆಗಿ 50 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 29 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಚಾಲಕ ನಿದ್ದೆ…

  • ಜ್ಯೋತಿಷ್ಯ

    ನಿಮ್ಮ ದಿನ ಭವಿಷ್ಯ ಶುಭವೋ ಅಶುಭವೋ ಹೇಗಿದೆ..?ನೋಡಿ ತಿಳಿಯಿರಿ…

    ಶುಕ್ರವಾರ, 06/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ಇವರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಸೂರ್ಯೋದಯ : 06:16 ಸೂರ್ಯಾಸ್ತ : 18:28 ಪಕ್ಷ : ಕೃಷ್ಣ ಪಕ್ಷ ತಿಥಿ : ಷಷ್ಠೀ ನಕ್ಷತ್ರ : ಜ್ಯೆಷ್ಟ್ಯ ಯೋಗ : ವರಿಯಾನ್ ಪ್ರಥಮ ಕರಣ :…

  • ರಾಜಕೀಯ

    ಮೋದಿಯವರ ಶಾದಿ ಶಗುನ್ಗೂ ಹಾಗೂ ಸಿದ್ದರಾಮಯ್ಯನವರ ಶಾದಿಭಾಗ್ಯಕ್ಕೂ ಏನ್ ಸಂಭಂದ ಗೊತ್ತಾ???

    ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಹೆಣ್ಮಕ್ಕಳಿಗೆ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮಾದರಿಯಲ್ಲೇ ಕೇಂದ್ರ ಸರ್ಕಾರವೂ ಇದೀಗ ಮುಸ್ಲಿಂ ಮಹಿಳೆಯರಿಗೆ “ಶಾದಿ ಶಗುನ್‌’ ಹೆಸರಿನ ಯೋಜನೆ ಘೋಷಿಸಿದೆ.

  • ಆಧ್ಯಾತ್ಮ

    ಇದು ಸೃಷ್ಟಿ ಕರ್ತ ಬ್ರಹ್ಮದೇವರ, ವಿಶ್ವದ ಏಕೈಕ ದೇವಾಲಯ!ಈ ದೇವಾಲಯ ಎಲ್ಲಿದೆ ಗೊತ್ತಾ?

    ಭಾರತದ ಹಿಂದೂ ಧರ್ಮವು ಸನಾತನವಾಗಿದ್ದು, ಈ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ. ಭಾರತದ ಉದ್ದಗಲಕ್ಕೂ ಪ್ರತಿಯೊಂದು ದೇವರುಗಳ ದೇವಸ್ಥಾನಗಳು, ಪೂಜಾ ಮಂದಿರಗಳು ನಮಗೆ ಸಿಗುತ್ತವೆ. ಆದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ ಇವರು ಸೃಷ್ಟಿ, ಸ್ಥಿತಿ, ಲಯ
    ಕರ್ತರಾಗಿದ್ದು, ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ.ಹಾಗಂತ ಇಲ್ಲವೇ ಇಲ್ಲ ಅಂತಲ್ಲ. ಇಡಿ ವಿಶ್ವದಲ್ಲಿರುವುದು ಒಂದೇ ಒಂದು ದೇವಾಲಯ ಮಾತ್ರ.

  • ಸುದ್ದಿ

    ಇಂದು ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿಶ್ಚಿತಾರ್ಥ..ಎಲ್ಲಿ ಗೊತ್ತ ?

    ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ನಿಶ್ಚಿತಾರ್ಥ ಇಂದು (ಸೋಮವಾರ) ನಡೆಯಲಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ…